Home / ಲೇಖನಗಳು / “ನನ್ನನ್ನು ಶಪಿಸಲಿಕ್ಕಾಗಿ ಕಳಿಸಿದ್ದಲ್ಲ” ಪ್ರವಾದಿ ಮುಹಮ್ಮದ್ (ಸ)

“ನನ್ನನ್ನು ಶಪಿಸಲಿಕ್ಕಾಗಿ ಕಳಿಸಿದ್ದಲ್ಲ” ಪ್ರವಾದಿ ಮುಹಮ್ಮದ್ (ಸ)

✍️ ಶಹನಾಝ್ ಎಂ.

“ನನ್ನನ್ನು ಶಪಿಸಲಿಕ್ಕಾಗಿ ಕಳಿಸಿದ್ದಲ್ಲ,” ಈ ವಚನ ನನ್ನನ್ನು ಅಲುಗಾಡಿಸಿತು.

ಪ್ರವಾದಿವರ್ಯರು ಯಾರಿಗಾದರೂ ಶಪಿಸಿದರೆ ಖಂಡಿತವಾಗಿಯೂ ದೇವರು ಅದನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಮುಸ್ಲಿಮರಲ್ಲಿ ಇತ್ತು. ಈ ಮಹಾನುಭಾವರಿಗೆ ಶಪಿಸಲೂ ಆಗದು. ಮುಸ್ಲಿಮರಾದ ನಾವು ಅಂತಹ ನಾಯಕನನ್ನು ಅನುಸರಿಸುವ ಬದಲು ಜನರನ್ನು ದ್ವೇಷಿಸುವ, ಶಾಪ ಹಾಕುವ, ಬೈಗುಳವನ್ನೂ ಅಶ್ಲೀಲ ಪದಗಳನ್ನು ಬಳಸಿ ಸೋಶಿಯಲ್ ಮೀಡಿಯದಲ್ಲಿ, ಭಾಷಣದಲ್ಲಿ ಅಥವಾ ಲೇಖನದಲ್ಲಿ ನಿಂದಿಸುವ ಜನರಿಗೆ ಪ್ರವಾದಿಯವರ ಹೆಸರನ್ನು ಉಚ್ಚರಿಸುವ ಅರ್ಹತೆ ಇದೆಯೇ?

ಇತರರನ್ನು ಮತ್ತು ಅವರ ಧರ್ಮ ದೇವರನ್ನು ನಿಂದಿಸಲು ಹೋಗದಿರಿ. ಬೇರೆ ಧರ್ಮಕ್ಕೆ ಅಪಮಾನ ಆಗುವ ರೀತಿ ವರ್ತಿಸದಿರಿ. ನೀವು ಹಾಗೆ ಮಾಡಿದರೆ ನಿಮ್ಮನ್ನು ನಿಂದಿಸಲು ಅವರಿಗೆ ನೀವೇ ಅವಕಾಶ ಮಾಡಿಕೊಟ್ಟಂತೆ ಎಂದು ಉಪದೇಶ ನೀಡಿದ ಪ್ರವಾದಿಯವರ ಚಿಂತನೆ ಎಷ್ಟು ಉನ್ನತವಾದದ್ದು.

ಇಂದು ಪರಸ್ಪರರನ್ನು ಟೀಕಿಸುವ, ಬೈದಾಡುವ ಸ್ಪರ್ಧೆಯೇ ನಡೆಯುತ್ತಿದೆ. ರಾಹುಲ್ ಗಾಂಧಿ ಹೇಳಿದಂತೆ “ದ್ವೇಷದ ಅಂಗಡಿಯನ್ನು ಮುಚ್ಚಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತೇನೆ” ಎಂಬ ಮಾತು ಇಲ್ಲಿ ಪ್ರಸಕ್ತ. ನಾವು ಪ್ರೀತಿಯನ್ನೇ ಹಂಚಬೇಕಾಗಿದೆ. ಬುದ್ಧಿವಂತ ನಾಗರಿಕರಿಗೆ ಇಂದು ಅರಿವಾಗುತ್ತಿದೆ. ದ್ವೇಷದ ರಾಜಕೀಯ ಇಂದು ದೇಶವನ್ನು ಛಿದ್ರ ಮಾಡುತ್ತಿದೆ. ರಕ್ತ ಹರಿಸುವ, ಸಾಯುವ ಜನರು ಭಾರತೀಯರೇ ಹೊರತು ಅನ್ಯ ದೇಶದವರಲ್ಲ.

(ಹೃದಯದ ಮಾತು ಅಂಕಣದಿಂದ, ಅನುಪಮ ಮಹಿಳಾ ಮಾಸಿಕ)

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *