Home / ಪ್ರಶ್ನೋತ್ತರ (page 9)

ಪ್ರಶ್ನೋತ್ತರ

ಕಿಬ್ಲಾ ತಿಳಿದಿಲ್ಲದಾಗ ನಮಾಝ್ ನಿರ್ವಹಿಸುವುದು ಹೇಗೆ?

ಪ್ರಶ್ನೆ: ಕೆಲವೊಮ್ಮೆ ಪ್ರಯಾಣದಲ್ಲಿರುವಾಗ ಕಿಬ್ಲಾದ ದಿಕ್ಕು ಸ್ಪಷ್ಟವಾಗಿರುವುದಿಲ್ಲ ಅಂತಹ ಸ್ಥಿತಿಯಲ್ಲಿ ಅಂದಾಜಿಗೆ ಕಿಬ್ಲಾ ಇದಾಗಿರಬಹುದೆಂದು ನಮಾಝ್ ಮಾಡಬಹುದೆ? ಒಂದು ವೇಳೆ ನಮಾಝ್‍ನಲ್ಲಿರುವಾಗ ಅಥವಾ ನಮಾಝ್ ಮುಗಿದ ನಂತರ ನಮ್ಮ ಮುಖ ಮಾಡಿದ್ದು ಕಿಬ್ಲಾದ ಕಡೆಗಲ್ಲವೆಂದು ತಿಳಿದು ಬಂದರೆ ಆಗ ಏನು ಮಾಡಬೇಕು? ಉತ್ತರ: ಕಿಬ್ಲಾ (ಅಭಿಮುಖ ಕೇಂದ್ರ ಮಸ್ಜಿದುಲ್ ಹರಾಮ್)ದ ಕಡೆಗೆ ಮುಖ ಮಾಡಿ ನಮಾಝ್ ಮಾಡುವುದು ಕಡ್ಡಾಯವಾಗಿದೆ. ಆದರೆ ಪ್ರಯಾಣದಲ್ಲಿರುವಾಗ ಅಥವಾ ಅಂಧಕಾರದಲ್ಲಿ ಕಿಬ್ಲಾ ಸರಿಯಾಗಿ ತಿಳಿದಿಲ್ಲವಾದರೆ ದಿಕ್ಕನ್ನು ಅಂದಾಜಿಸಿ …

Read More »

ಬಲಿ ಮಾಂಸವನ್ನು ಮುಸ್ಲಿಮೇತರರಿಗೆ ನೀಡಬಹುದೇ?

ಪ್ರಶ್ನೆ: ಈದುಲ್ ಅಝ್ಹಾದ ವೇಳೆ ಮಾಡುವ ದಿಬ್ಹ್‍ನ ಮಾಂಸವನ್ನು ಬೇರೆ ಧರ್ಮದವರಿಗೆ ನೀಡಬಹುದೇ? ಇದಕ್ಕೆ ಇಸ್ಲಾಂ ಏನು ಹೇಳುತ್ತದೆ? ಉತ್ತರ: ಈದುಲ್ ಅಝ್ಹಾದ ಭಾಗವಾಗಿ ಮಾಡುವ ಬಲಿ ಕರ್ಮದ ಮಾಂಸವನ್ನು ಮುಸ್ಲಿಮೇತರರಿಗೂ ನೀಡುವುದು ಅನುವದನೀಯವಾಗಿದೆ ಎಂದು ಹೆಚ್ಚಿನ ವಿದ್ವಾಂಸರ  ಅಭಿಪ್ರಾಯವಾಗಿದೆ. ಈ ಅಭಿಪ್ರಾಯ ಪ್ರಬಲವೂ ಆಗಿದೆ. ಮುಸ್ಲಿಮೇತರರಿಗೆ ಬಲಿ ಮಾಂಸವನ್ನು ನೀಡಬಾರದು ಎಂದು ಹೇಳುವ ಕುರ್‍ಆನ್ ವಾಕ್ಯಗಳು ಅಥವಾ ಪ್ರವಾದಿ ವಚನಗಳು ಇಲ್ಲ. ಆಧಾರಗಳು ಸ್ಪಷ್ಟವಾಗಿ ನಿಷೇಧಿಸದ ಒಂದು ಕಾರ್ಯವು …

Read More »

ಹಜ್ಜ್ ಯಾತ್ರಿಗೆ ಹೂಹಾರ?

ಪ್ರಶ್ನೆ: ಹಜ್ಜ್ ಮಾಡುವವರಿಗೆ ಗುಲ್‍ಪೋಶ್ ಮಾಡಬಹುದೇ? ಉತ್ತರ: ಹಜ್ಜ್ ಇಸ್ಲಾಮಿನ ಒಂದು ಪ್ರಮುಖ ಆರಾಧನಾ ಕರ್ಮವಾಗಿದೆ. ಅದಕ್ಕೆ ಹೋಗುವಾಗ ಬಹಳ ಭಕ್ತಿ, ಗೌರವ ಮತ್ತು ಶಿಷ್ಟಾಚಾರದೊಂದಿಗೆ ಹೋಗಬೇಕಾಗಿದೆ.  ಹಜ್ಜ್ ಗೆ ಹೋಗುವವರ ಅತ್ಯುತ್ತಮ ದಾರಿ ವೆಚ್ಚವು ‘ತಕ್ವಾ’ (ದೇವಭಯದಿಂದ ಸಕಲ ಕೆಡುಕುಗಳಿಂದಲೂ ದೂರವಿರುವುದು) ಆಗಿದೆಯೆಂದು ಕುರ್‍ಆನ್ ಹೇಳುತ್ತದೆ. ಹಜ್ಜ್ ಯಾತ್ರೆಯೆಂಬುದು ಯಾವುದೇ ಆಡಂಬರ ಪ್ರದರ್ಶನವಲ್ಲ. ಅದು ತುಂಬಾ ಸರಳವಾಗಿರಬೇಕು. ಆದ್ದರಿಂದ ಎಲ್ಲರ ಹಜ್ಜ್ ನ ಇಹ್ರಾಮನ್ನು ಒಂದೇ ರೀತಿಯಾಗಿ  ಮಾಡಲಾಗಿದೆ. …

Read More »

ಅನ್ಯ ಸ್ತ್ರೀಯಿಂದ ಎದೆಹಾಲುಣಿಸುವುದು?

ಪ್ರಶ್ನೆ: ಅನ್ಯ ಮಹಿಳೆಯರಿಂದ ಎದೆಹಾಲು ಕುಡಿಸುವುದಕ್ಕಾಗಿ ಅವರಿಗೆ ಪ್ರತಿಫಲ ನೀಡುವ ಬಗ್ಗೆ ಇಸ್ಲಾಮಿನ ನಿಲುವೇನು? ಉತ್ತರ: ಅನ್ಯ ಮಹಿಳೆಯರಿಂದೇಕೆ, ಸ್ವಂತ ತಾಯಿಯೂ ಗಂಡನಿಂದ ವಿಚ್ಛೇದನ ಪಡೆದ ಕಾರಣ ತನ್ನ ಮಗುವಿಗೆ ಹಾಲುಣಿಸುವುದಕ್ಕೆ ಪ್ರತಿಫಲ ಕೇಳಿದರೆ ಕೊಡಬೇಕಾದೀತು. ಪವಿತ್ರ ಕುರ್‍ಆನಿನಲ್ಲಿ ಈ ಬಗ್ಗೆ  ಸ್ಪಷ್ಟ ಆದೇಶವಿದೆ. “ತಮ್ಮ ಶಿಶುಗಳು ಪೂರ್ಣ ಸ್ತನಪಾನಾವಧಿಯವರೆಗೆ ಹಾಲು ಕುಡಿಯಬೇಕೆಂದು ಪಿತರು ಬಯಸಿದರೆ, ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಹಾಲುಣಿಸಬೇಕು. ಆಗ ಶಿಶುವಿನ ತಂದೆಯು …

Read More »

ವೈದ್ಯರ ತಪಾಸಣೆ ಫೀಸು?

ಪ್ರಶ್ನೆ: ವೈದ್ಯರ ಬಳಿ ಹೋದಾಗ, ಅವರು ಹೆಚ್ಚಾಗಿ ಔಷಧಿ ಕೊಡುವುದಿಲ್ಲ. ಕೇವಲ ಪರೀಕ್ಷಿಸಿ ಜೌಷಧಿಗೆ ಚೀಟಿ ಬರೆದು ಕೊಡುತ್ತಾರೆ. ಹೀಗೆ ಮದ್ದು ಕೊಡದೆ ಕೇವಲ ಫೀಸು ಪಡೆಯುತ್ತಾರೆ.  ಹೀಗೆ ಮಾಡುವುದು ಧರ್ಮಸಮ್ಮತವೇ? ಉತ್ತರ: ವೈದ್ಯರು ಮತ್ತು ವಕೀಲರು ಸಂದರ್ಶನದ ಫೀಸು ಪಡೆಯುವುದರಲ್ಲಿ ತಪ್ಪಿಲ್ಲ. ಯಾವುದೇ ಸೇವೆಯು ಹರಾಮ್‍ನ ಮೇರೆಯನ್ನು ಮೀರಿರದಿದ್ದರೆ ಅದು ಶರೀಅತ್ ಪ್ರಕಾರ ಸಮ್ಮತವೇ ಆಗುತ್ತದೆ. ಸಲಹೆ  ನೀಡುವುದು, ನಿರ್ದೇಶನಗಳನ್ನು ಅದಕ್ಕಾಗಿ ತಮ್ಮ ಬುದ್ಧಿಶಕ್ತಿ ಮತ್ತು ಕಲಿತ ವಿದ್ಯೆಯನ್ನು …

Read More »

ದೇವರ ಅವತಾರ ಸತ್ಯವೊ ಮಿಥ್ಯವೋ?

ಪ್ರಶ್ನೆ: ದೇವರ ಅವತಾರ ಎಂಬುದನ್ನು ನೀವು ಒಪ್ಪವುದಿಲ್ಲವೇ? ದೇವರು ವಿವಿಧ ರೂಪಗಳಲ್ಲಿ ಅವತಾರ ತಾಳುತ್ತಾನೆಂಬ ವಿಶ್ವಾಸ ಇಸ್ಲಾಮಿನಲ್ಲಿಲ್ಲವೇ..? ಉತ್ತರ: ಇಸ್ಲಾಮೀ ದೃಷ್ಟಿಕೋನದಂತೆ ದೇವರು ಒಬ್ಬನೇ. ಅವನಿಗೆ ಆದಿಯೂ, ಅಂತ್ಯವೂ ಇಲ್ಲ ಅವನು ಅದೃಶ್ಯನಾಗಿದ್ದಾನೆ. ನಿರಾಕಾರನೂ, ಸರ್ವಶಕ್ತನೂ, ಸರಿಸಾಟಿಯಿಲ್ಲದವನೂ ಜನನ ಹಾಗೂ ಮರಣಗಳು ಇಲ್ಲದವನೂ ಆಗಿದ್ದಾನೆ. ಆದರೆ ನೀವು ‘ಅವತಾರ’ ಎಂದು ವಾದಿಸುವ ಎಲ್ಲವುಗಳಿಗೂ ಜನನ, ಮರಣಗಳಿವೆ. ರೂಪವೂ ಇದೆ. ಸ್ಥಳ ಹಾಗೂ ಕಾಲದೊಂದಿಗೆ ಸಂಬಂಧವಿದೆ. ಮಿತಿ ಮೇರೆಗಳೂ ಇವೆ. ಆದರೆ …

Read More »

ಇಸ್ಲಾಮ್ ಮತ್ತು ಪರೋಕ್ಷ ಜ್ಞಾನ?

ಪ್ರಶ್ನೆ: ಲೋಕದಲ್ಲಿ ಯಾರಿಗೂ ತಮ್ಮ ಭಾವೀ ಜೀವನದ ಕುರಿತು ಜ್ಞಾನವಿಲ್ಲವೆಂದು ಪೀಠಿಕೆಯಲ್ಲಿ ತಿಳಿಸಿದ್ದೀರಿ. ಆದರೆ ಜನನ ವೇಳೆಯ ನಕ್ಷತ್ರಗಳ ಆಧಾರದಲ್ಲಿ ಜಾತಕ ಫಲಗಳು ಹೇಳಲಾಗುತ್ತದೆ. ಪ್ರಮುಖ ಜ್ಯೋತಿಷಿಗಳ ಜಾತಕಗಳು ಹಲವೊಮ್ಮೆ ಸತ್ಯವಾಗುತ್ತದೆ. ಇದರ ಕುರಿತು ನೀವೇನು ಹೇಳುವಿರಿ? ಉತ್ತರ: ನಮ್ಮ ಜನ್ಮ ದಿನಾಂಕ, ವೇಳೆ, ರಾಶಿ ಹಾಗೂ ನಕ್ಷತ್ರಗಳ ಆಧಾರದಲ್ಲಿ ಭವಿಷ್ಯದ ವಿವರಗಳನ್ನು ತಿಳಿಯಬಹುದೆಂಬ ಭಾವನೆ ನಮ್ಮ ಸಮಾಜದಲ್ಲಿದೆ. ನಮ್ಮಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಗಳಲ್ಲಿ ಮಾರಾಟವಾಗುವ ಹಲವು ಪತ್ರಿಕೆಗಳು ಈ …

Read More »

ದೇವನನ್ನು ಸೃಷ್ಟಿಸಿದವರು ಯಾರು?

ಪ್ರಶ್ನೆ: ಪ್ರಪಂಚದ ಸೃಷ್ಟಿಕರ್ತನು ಓರ್ವನೆಂದೂ, ಅವನೇ ಅದನ್ನು ಸೃಷ್ಟಿಸಿದನೆಂದೂ ಧರ್ಮ ವಿಶ್ವಾಸಿಗಳಾದ ನೀವು ಹೇಳುತ್ತೀರಿ. ಹಾಗಾದರೆ ನಿಮ್ಮ ದೇವನನ್ನು ಸೃಷ್ಟಿಸಿದವರು ಯಾರು? ದೇವ ಹಾಗೂ ಧರ್ಮವು ವಿಶ್ವಾಸ ಕಾರ್ಯವೆಂದೂ, ಅದರ ಹೊರತು ಬುದ್ದಿಗೆ ಇದರಲ್ಲಿ ಪ್ರಾಮುಖ್ಯತೆ ಇಲ್ಲವೆಂಬ ವಾಡಿಕೆಯ ಉತ್ತರಕ್ಕಿಂತ ಬೇರೇನಾದರೂ ಹೇಳಲಿಕ್ಕಿದೆಯೇ? ಉತ್ತರ: ವಿಶ್ವದ ಕುರಿತು ಎರಡು ರೀತಿಯ ದೃಷ್ಟಿಕೋನವಿರುವವರು ಇದ್ದಾರೆ. ಒಂದನೇಯದಾಗಿ ಧರ್ಮದಲ್ಲಿ ನಂಬಿಕೆ ಇರಿಸುವವರು. ಅವರು ನಂಬಿಕೆಯಂತೆ ಪ್ರಪಂಚವನ್ನು ಸೃಷ್ಟಿಸಲಾಗಿದೆ. ದೇವನು ಅದರ ಸೃಷ್ಟಿಕರ್ತ. ಎರಡನೇಯ …

Read More »

ದೇವನು ನ್ಯಾಯವಂತನೇ?

ಪ್ರಶ್ನೆ: ‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ? ಉತ್ತರ: ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು …

Read More »

ಮುಸ್ಲಿಮೇತರರಿಗೆ ಸಲಾಮ್ ಹೇಳಬಹುದೇ?

ಪ್ರಶ್ನೆ: ನನ್ನ ಮುಸ್ಲಿಮೇತರ ಸ್ನೇಹಿತನೋರ್ವನು ನನ್ನೊಂದಿಗೆ ಕೇಳಿದನು- “ನೀವು ಮುಸ್ಲಿಮರಿಗೆ ಮಾತ್ರ ಸಲಾಮ್ ಹೇಳುವುದು ಯಾಕೆ? ಅದು ಶಾಂತಿಯ ಪ್ರಾರ್ಥನೆಯಾಗಿದ್ದರೆ ಅದನ್ನು ಎಲ್ಲರಲ್ಲೂ ಹೇಳಬಹುದಲ್ಲವೇ? ಈ ಅಭಿಪ್ರಾಯವು ಸರಿಯಲ್ಲವೇ? ಉತ್ತರ: ‘ಅಸ್ಸಲಾಮು ಅಲೈಕುಂ’ ಎಂಬುವುದು ಮುಸ್ಲಿಮ್-ಮುಸ್ಲಿಮೇತರ ಎಂಬ ಬೇಧ ಭಾವವಿಲ್ಲದೆ ಪ್ರಯೋಗಿಸಬಹುದಾದ ವಾಕ್ಯವಾಗಿದೆ. ಇಮಾಮ್ ಬುಖಾರಿ ಹಾಗೂ ಮುಸ್ಲಿಮ್ ವರದಿ ಮಾಡಿರುವ ಹದೀಸಿನಲ್ಲಿ ಹೀಗೆ ಕಾಣಬಹುದು. “ಅಲ್ಲಾಹನು ಆದಮರನ್ನು(ಅ) ಸೃಷ್ಟಿಸಿದ ಬಳಿಕ ಹೀಗೆ ಹೇಳಿದನು- ತಾವು ಆ ಗುಂಪಿನ ಬಳಿಗೆ ಹೋಗಿರಿ. …

Read More »