Home / ಪ್ರಶ್ನೋತ್ತರ (page 8)

ಪ್ರಶ್ನೋತ್ತರ

ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ?

ಪ್ರಶ್ನೆ: ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ? ಏನಾದರೂ ಹೇಳಿಯೇ ಉಪವಾಸ ಆರಂಭಿಸಬೇಕೇ? ಉಪವಾಸದ ನಿಯ್ಯತ್ ಬಾಯಿಯಿಂದ ಹೇಳುವುದು ಕಡ್ಡಾಯವೇ? ಹಾಗಾದರೆ ಅದರ ಸಮಯ ಯಾವುದು? ಪ್ರತಿಯೊಂದು ದಿನದ ಉಪವಾಸಕ್ಕೂ ಬೇರೆ ಬೇರೆ ನಿಯ್ಯತ್ ಬೇಕೇ? ಉತ್ತರ: ನಿಯ್ಯತ್ ಎಂಬ ಪದದ ಅರ್ಥ ಸಂಕಲ್ಪ ಎಂದಾಗಿದೆ. ಸಂಕಲ್ಪವನ್ನು ಸಾಮಾನ್ಯವಾಗಿ ಮಾಡುವುದು ಹೃದಯ. ಅಂದರೆ ಸಂಕಲ್ಪದ ಸ್ಥಳ ಮನಸ್ಸು ಆಗಿದೆ. ಆದ್ದರಿಂದ ನಾವು ಹೃದಯದಿಂದಲೇ ಸಂಕಲ್ಪ ಮಾಡಬೇಕು. ಬಾಯಿಯಲ್ಲಿ ಕೇವಲ ನಿರ್ಲಕ್ಷ್ಯದಿಂದ ಉಚ್ಚರಿಸಿದರೆ …

Read More »

ಕಅಬಾದ ಕಪ್ಪುಕಲ್ಲು ಮತ್ತು ಶಿಲಾ ಪೂಜೆ?

ವಿಗ್ರಹಾರಾಧನೆಯನ್ನು ಪ್ರಬಲವಾಗಿ ಇಸ್ಲಾಮ್ ಧರ್ಮವು ಖಂಡಿಸುತ್ತದೆ. ಹೀಗಿರುವಾಗ ಕಅಬಾದಲ್ಲಿ ಒಂದು ಕಪ್ಪು ಕಲ್ಲನ್ನು ಪ್ರತಿಷ್ಠಾಪಿಸಲು ಕಾರಣವೇನು? ಎಲ್ಲಾ ವಿಗ್ರಹಗಳನ್ನು ಅಲ್ಲಿಂದ ತೆರವುಗೊಳಿಸಿದಾಗಲೂ ಅದೊಂದನ್ನು ಮಾತ್ರ ಉಳಿಸಲಾಯಿತು. ಇದು ಶಿಲಾ ಪೂಜೆ ಇಸ್ಲಾಮ್‌ನಲ್ಲಿದೆಯೆಂಬುದನ್ನು ಸೂಚಿಸುತ್ತದೆಯಲ್ಲವೇ? ಈ ಪ್ರಶ್ನೆಯು ಸಮಾಜದಲ್ಲಿ ವ್ಯಾಪಕವಾಗಿರುವ ತಪ್ಪುಕಲ್ಪನೆಯ ಕಡೆಗೆ ಬೆರಳು ತೋರಿಸುತ್ತದೆ. ಆದ್ದರಿಂದ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. 1. ಕಅಬಾದ ಕಪ್ಪುಶಿಲೆ (ಹಜರುಲ್ ಅಸ್ವದ್) ಇತಿಹಾಸದಲ್ಲಿ ಒಮ್ಮೆಯೂ ಯಾರಿಂದಲೂ ಆರಾಧಿಸಲ್ಪಟ್ಟಿಲ್ಲ, 360ಕ್ಕಿಂತಲೂ ಹೆಚ್ಚು ವಿಗ್ರಹಗಳು ಪೂಜಿಸಲ್ಪಟ್ಟಾಗಲೂ …

Read More »

ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ?

ಮುಸ್ಲಿಮರು ಭಾವಿಸುವಂತೆ ನಾವು ಬಹುದೇವ ವಿಶ್ವಾಸಿಗಳೋ ಅಥವಾ ಬಹುದೇವಾರಾಧಕರೋ ಅಲ್ಲ, ದೇವನು ಒಬ್ಬನೆಂದು ವಿಶ್ವಾಸವಿರಿಸಿ ಆತನನ್ನು ಆರಾಧಿಸುತ್ತಿದ್ದೇವೆ. ವಿಗ್ರಹಗಳನ್ನು ದೇವರನ್ನು ನೆನಪಿಸಲು ಹಾಗೂ ದೇವರಲ್ಲಿ ಶ್ರದ್ಧೆ ಮೂಡಲು ಪ್ರತಿಷ್ಠಾಪಿಸುತ್ತೇವೆ. ಹಾಗಿದ್ದರೂ ನೀವು ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ.? ಇಸ್ಲಾಮ್ ಏಕದೇವತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಅವನನ್ನು ಮಾತ್ರ ಆರಾಧಿಸಲು, ಪ್ರಾರ್ಥಿಸಲು ತಾಕೀತು ಮಾಡುತ್ತದೆ. ದೇವನ ಗುಣ ವಿಶೇಷಗಳು ಹಾಗೂ ಅಧಿಕಾರದಲ್ಲಿ ಸಾರ್ವಭೌಮತೆಯಲ್ಲಿ ಭಾಗಿಗಳನ್ನು ಮಾಡುವುದು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ. ಆದ್ದರಿಂದಲೇ ವಿವಿಧ ಕಾರಣಗಳಿಂದ ವಿಗ್ರಹಾರಾಧನೆಯನ್ನು …

Read More »

ಸಾಯಿಬಾಬ ಮತ್ತು ಮುಸ್ಲಿಮ್ ಬಾಬಾಗಳು?

ಪ್ರಶ್ನೆ: ದೇವನು ಮಾನವ ರೂಪದಲ್ಲಿ ಅವತರಿಸುವುದಿಲ್ಲವೆಂದು ನೀವು ಹೇಳುತ್ತೀರಿ? ಹಾಗಾದರೆ ಭಗವಾನ್ ಸಾಯಿಬಾಬ ದೇವರ ಅವತಾರವಲ್ಲವೇ? ಬಾಬಾರ ಅದ್ಭುತ ಪವಾಡಕ್ಕೆ ಸಾವಿರಾರು ಮುಸ್ಲಿಮರೂ ಮಾರು ಹೋಗಿದ್ದಾರಲ್ಲಾ? ಅವರ ಕುರಿತು ನೀವೇನು ಹೇಳುವಿರಿ? ದೇವರಿಗೆ ಅವತಾರವಿಲ್ಲವೆಂದು ನಾನು ಮಾತ್ರವಲ್ಲ ಪ್ರಖ್ಯಾತ ಹಿಂದೂ ವಿದ್ವಾಂಸರೂ ಆಧಾರ ಸಹಿತವಾಗಿ ಸಮರ್ಥಿಸಿದ್ದಾರೆ. ಮೊದಲೇ ಈ ಪ್ರಶ್ನೆಗೆ ಬಹಳ ವಿವರವಾಗಿ ವಿವರಿಸಿದ್ದೇನೆ. ಸತ್ಯ ಸಾಯಿಬಾಬ ಕೇವಲ ಓರ್ವ ಮನುಷ್ಯ ಮಾತ್ರ. 1926 ನವೆಂಬರ್ 23ಕ್ಕೆ ಅವರು ಜನಿಸಿದರು. …

Read More »

ನಮಾಝಿಗಳ ಮುಂದಿನಿಂದ ಹಾದು ಹೋಗಬಹುದೇ?

ಪ್ರಶ್ನೆ: ನಮಾಝಿಗಳ ಮುಂದಿನಿಂದ ಹಾದು ಹೋಗುವುದರ ವಿಧಿಯೇನು ತಿಳಿಸಿ.? ಉತ್ತರ: ನಮಾಝ್ ಮಾಡುವವ ತನ್ನ ಮುಂದೆ ಒಂದು ಸುತ್ರಃ ಇಡಬೇಕು. ಸುತ್ರಃ ಅಂದರೆ ಸುಜೂದ್ ಮಾಡುವ ಸ್ಥಳದ ಬಳಿ ಎದುರು ಭಾಗದಲ್ಲಿ ಏನಾದರೂ ಒಂದು ವಸ್ತುವನ್ನು ಇರಿಸುವುದು. ಅದರಾಚೆ ಬದಿಯಿಂದ ಯಾರಾದರೂ ಹಾದು ಹೋದರೆ ಅಡ್ಡಿಯಿಲ್ಲ. ಅದರ ಒಳಗಿನಿಂದ ಹಾದು ಹೋಗುವುದು ದೊಡ್ಡ ಪಾಪವಾಗಿದೆ. ಪ್ರವಾದಿ(ಸ) ಹೇಳಿದರು, “ನಮಾಝ್ ಮಾಡುವವನ ಮುಂದಿನಿಂದ ಹಾದು ಹೋಗುವುದು ಎಷ್ಟು ದೊಡ್ಡ ಪಾಪವೆಂದು ಯಾರಿಗಾದರೂ …

Read More »

ಪಾಪಿಯ ಜನಾಝ ನಮಾಝ್?

ಪ್ರಶ್ನೆ: ಕರ್ಮಭ್ರಷ್ಟರು ಮತ್ತು ಮಹಾಪಾಪಿಗಳು ಸತ್ತರೆ ಅವರ ಜನಾಝಾ ನಮಾಝ್ ಮಾಡಬಾರದೆಂದು ಹೇಳುತ್ತಾರೆ. ಇದು ಸರಿಯೇ?  ದಯವಿಟ್ಟು ಉತ್ತರಿಸಿ. ಉತ್ತರ: ಪ್ರವಾದಿ(ಸ) ಹೇಳಿದ್ದಾರೆ- “ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹ ನಲ್ಲದೆ ಅನ್ಯ ಆರಾಧ್ಯರಿಲ್ಲ) ಎಂದು ಹೇಳುವ ಪ್ರತಿಯೊಬ್ಬನ ಜನಾಝಾ  ನಮಾಝ್ ಮಾಡಿರಿ.” (ದಾರುಕುತ್ನಿ) ಆದ್ದರಿಂದ ಕರ್ಮಭ್ರಷ್ಟರ (ಫಾಸಿಕ್) ಮತ್ತು ಮಹಾಪಾಪಿಗಳ ಜನಾಝ ನಮಾಝ್ ಮಾಡಬಹುದೆಂದು ಬಹುಸಂಖ್ಯಾತರಾದ ವಿದ್ವಾಂಸರು ಹೇಳುತ್ತಾರೆ. ಇದರಲ್ಲಿ ಇಮಾಮ್ ಅಬೂ ಹನೀಫಾ, ಮಾಲಿಕ್, ಶಾಫಿಈ ಮತ್ತು ಇಬ್ನು  …

Read More »

ಗೋರಿ ಶಿಕ್ಷೆ ಎಂದರೇನು?

ಪ್ರಶ್ನೆ: ಯಾಸೀನ್ ಅಧ್ಯಾಯದಲ್ಲಿ ಸತ್ಯ ನಿಷೇಧೀಗಳು ನಿರ್ಣಾಯಕ ದಿನದಂದು ಎಚ್ಚರಗೊಂಡಾಗ, “ನಮ್ಮನ್ನು ನಮ್ಮ ಶಯನ ಗೃಹದಿಂದ ಎಬ್ಬಿಸಿದವರಾರು” ಎಂದು ಕೇಳುವರೆಂದಿದೆ. ಈ ಮಾತಿನಿಂದ ತಿಳಿದು ಬರುವುದೇನೆಂದರೆ  ಮರಣಾನಂತರ ಪುನರಪಿ ಎಬ್ಬಿಸಲ್ಪಡುವ ತನಕ ಅಪ್ರಜ್ಞಾವಸ್ಥೆಯಲ್ಲಿ ನಿದ್ರಿಸಿರುವರೆಂದಾಗುತ್ತದೆ. ಹಾಗಾದರೆ, ಗೋರಿ ಶಿಕ್ಷೆಯ ಕಲ್ಪನೆಯು ತಪ್ಪಾಗುತ್ತದೆ. ಅನ್ಯಥಾ ಸತ್ಯನಿಷೇಧಿಗಳು, ನಮ್ಮನ್ನು ನಮ್ಮ ಶಯನ ಗೃಹಗಳಿಂದ ಎಬ್ಬಿಸಿದವರಾರು ಎಂದು ಕೇಳುತ್ತಿರಲಿಲ್ಲವಷ್ಟೇ? ಸ್ಪಷ್ಟೀಕರಿಸಿ. ಉತ್ತರ: ಮರಣ ಮತ್ತು ಪುನಃ ಎಬ್ಬಿಸಲ್ಪಡುವುದರ ತಾತ್ಪರ್ಯವನ್ನು ಮೊದಲು ಗ್ರಹಿಸಬೇಕು. ಮರಣವೆಂದರೇನು? ದೇಹದಿಂದ …

Read More »

ಮುಸಲ್ಲದಲ್ಲಿ ಚಿತ್ರಗಳು ಎಷ್ಟು ಸರಿ?

ಪ್ರಶ್ನೆ:    ಕೆಲವು ಮಸೀದಿಗಳಲ್ಲಿ ನಮಾಝ್‍ಗಾಗಿ ಬಳಸುವ ಮುಸಲ್ಲದಲ್ಲಿ ಹಲವಾರು ವಿನ್ಯಾಸಗಳು ಚಿತ್ರಗಳು ಇವೆ. ಚಿತ್ರವಿರುವ ಮುಸಲ್ಲಗಳಲ್ಲಿ ನಮಾಝ್ ಮಾಡಬಾರದೆಂದು ಹೇಳುತ್ತಾರೆ. ಇದು ಸರಿಯೇ? ಉತ್ತರ: ಅಚೇತನವಾದ ವಸ್ತುಗಳ ಚಿತ್ರಗಳು ಅನುವದನೀಯವಾಗಿದೆ ಎಂಬ ವಿಷಯದಲ್ಲಿ ವಿದ್ವಾಂಸರ ಮಧ್ಯೆ ತರ್ಕವಿಲ್ಲ. ಮಸೀದಿಯನ್ನು ಅಲಂಕರಿಸುವ ಭಕ್ತಿಪೂರ್ಣವಾದ ಕಲಾಕೃತಿಗಳು ಎಂಬ ನೆಲೆಯಲ್ಲಿ ಅಂತಹ ಮುಸಲ್ಲಗಳಿಗೆ ಪ್ರಚಾರ ದೊರೆತಿರಬಹುದು. ಆದರೆ ನಮಾಝ್  ಮಾಡುವವರ ಗಮನ ತಪ್ಪುವ ರೀತಿಯ ಮುಸಲ್ಲಗಳು ಅಥವಾ ಇತರ ಅಲಂಕಾರಗಳು ನಮಾಝ್ ನಿರ್ವಹಿಸುವ ಸ್ಥಳದಲ್ಲಿದ್ದರೆ ಅಂತಹವುಗಳನ್ನು ತೆರವುಗೊಳಿಸುವುದು …

Read More »

ಮೂಸಾ(ಅ)ರ ನಾಲಗೆಯ ತೊಡಕು ಮತ್ತು ಬೆಂಕಿಯ ಕೆಂಡ ವಾಸ್ತವವೇನು?

ಡಾ| ಮುಹಮ್ಮದ್ ರಝಿಯುಲ್ ಇಸ್ಲಾಮ್ ಉತ್ತರಿಸುತ್ತಾರೆ ಪ್ರಶ್ನೆ: ಪ್ರವಾದಿಗಳು ತಂತಮ್ಮ ಕಾಲದ ಅತ್ಯುತ್ತಮ ವ್ಯಕ್ತಿಗಳಾಗಿರುತ್ತಿದ್ದರು. ಅವರಲ್ಲಿ ಯಾವುದೇ ಮಾನಸಿಕ ಮತ್ತು ಶಾರೀರಿಕ ನ್ಯೂನತೆಗಳಿರುವುದಿಲ್ಲವೆಂದು ನಮಗೆ ತಿಳಿದಿದೆ. ಪವಿತ್ರ ಕುರ್‍ಆನಿನಲ್ಲಿ ಮೂಸಾ(ಅ) ಅವರ ಒಂದು ಪ್ರಾರ್ಥನೆ ಇದೆ- “ಜನರು ನನ್ನ ಮಾತನ್ನು ಗ್ರಹಿಸುವಂತಾಗಲು ನನ್ನ ನಾಲಗೆಯ ತೊಡಕನ್ನು ನೀಗಿಸು.” (ತಾಹಾ: 27-28) ಇದರ ಬಗ್ಗೆ ಕೆಲವರು ಹೇಳುತ್ತಾರೆ- “ಮೂಸಾರ ನಾಲಗೆಯಲ್ಲಿ ತೊಡಕಿತ್ತು. ಅವರು ತೊದಲಲು ಕಾರಣ, ಅವರು ಮಗುವಾಗಿದ್ದಾಗ ಬೆಂಕಿಯ ಕೆಂಡವನ್ನು ಬಾಯಲ್ಲಿಟ್ಟಿದ್ದರು.” ಆದರೆ  …

Read More »

ವಾರೀಸಿನಲ್ಲಿ ಸ್ತ್ರೀಗೆ ಪುರುಷರಿಗಿಂತ ಅಧಿಕ ಪಾಲು ಸಿಗುವ ಸಂದರ್ಭಗಳಿವೆಯೇ?

ಪ್ರಶ್ನೆ: ವಾರಸುಸೊತ್ತು ವಿತರಣೆಯಲ್ಲಿ ಮಹಿಳೆಯು ತನ್ನದೇ ಸ್ಥಾನಮಾನದ ಪುರುಷನಿಗಿಂತ ಅಧಿಕ ಪಾಲು ಪಡೆಯುವಂತಹ ಸನ್ನಿವೇಶವಿರಬಹುದೇ? ತಿಳಿಸಿ. ಉತ್ತರ: ಇಸ್ಲಾಮೀ ವಾರೀಸು ನಿಯಮದಲ್ಲಿ ಎಲ್ಲ ಅವಸ್ಥೆಯಲ್ಲೂ ಸ್ತ್ರೀಗೆ ಪುರುಷನಿಗಿಂತ ಕಡಿಮೆ ಪಾಲು ಸಿಗುತ್ತದೆ ಎಂಬ ಆರೋಪವಿದೆ.  ಆದರೆ ಅದು ಸರಿಯಲ್ಲ. ಕೆಲವೊಮ್ಮೆ ಅವರಿಬ್ಬರಿಗೂ ಸಮಪಾಲು ದೊರೆಯುತ್ತದೆ. ಇನ್ನು ಕೆಲವೊಮ್ಮೆ ಸ್ತ್ರೀಗೆ ಪುರುಷನಿಗಿಂತಲೂ ಅಧಿಕ ಪಾಲು ದೊರೆಯುತ್ತದೆ. ಹಂಚುವಿಕೆಯ ಈ ಕ್ರಮವು ಯುಕ್ತಿ ಆಧಾರಿತವಾಗಿದೆ. ಸ್ತ್ರೀ ಮತ್ತು ಪುರುಷನಿಗೆ ಸಮಪಾಲು ದೊರೆಯುವ ಕೆಲವು ರೂಪಗಳು: …

Read More »