Home / ಪ್ರಶ್ನೋತ್ತರ (page 6)

ಪ್ರಶ್ನೋತ್ತರ

ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?

ಕುರ್‌ಆನ್‌ನ ಸೂಕ್ತಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ. 2ನೇ ಅಧ್ಯಾಯದ 190-191ನೇ ಸೂಕ್ತಗಳು ಹೀಗಿವೆ: ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ …

Read More »

ಸ್ತ್ರೀಯರ ವಸ್ತ್ರಧಾರಣೆ: ಇಸ್ಲಾಮ್ ಏನು ಹೇಳುತ್ತದೆ?

 ಇಲ್ಯಾಸ್ ಮೌಲವಿ  ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಇತರರ ಮುಂದೆ ಪರಿಚಯಿಸುವ ಪ್ರಥಮ ಉಪಾಧಿ ವಸ್ತ್ರಧಾರಣೆಯಾಗಿದೆ. ಓರ್ವರು ಧರಿಸಿದ ವಸ್ತ್ರವನ್ನು ನೋಡಿ, ಆ ವ್ಯಕ್ತಿ ಎಂತಹವನೆಂದು ಅಂದಾಜಿಸಲು ಸಾಧ್ಯವಾಗುತ್ತದೆ. ರಾಜ, ನವಾಬರ ವಸ್ತ್ರ, ಧಾರ್ಮಿಕ ವಿದ್ವಾಂಸರುಗಳ ವಸ್ತ್ರ, ಅಹಂಕಾರಿಗಳ, ಆತ್ಮಪ್ರಶಂಸಕರ ವಸ್ತ್ರ, ಆಡಂಬರದ ವಸ್ತ್ರ, ಮೂರ್ಖರ ವಸ್ತ್ರ, ಅನಾಗರಿಕರ ವಸ್ತ್ರ… ಇವೆಲ್ಲವೂ ಅವರವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಸತ್ಯ ವಿಶ್ವಾಸಿಗಳ ಹಾಗೂ ವಿಶ್ವಾಸಿನಿಯರ ವಸ್ತ್ರಧಾರಣೆಯಲ್ಲಿ ಇವೆಲ್ಲವುಗಳಿಗಿಂತ ಸಹಜವಾಗಿಯೇ ವ್ಯತ್ಯಾಸವಿರುತ್ತದೆ. ಆದ್ದರಿಂದಲೇ …

Read More »

ಹಿಜಾಬ್ ಎಂದರೇನು? ಹಿಜಾಬ್ ಏನು? ಏನಲ್ಲ?

 ಬಿ. ಆಯಿಶ, ಮಂಗಳೂರು  ಹಿಜಾಬ್ ಎಂದರೇನು? ಪ್ರಶ್ನೆ ಬಹಳ ಪ್ರಸಕ್ತವಾಗಿದೆ. ಏಕೆಂದರೆ ಹಿಜಾಬ್ ಇದು ಬಿಸಿ ಚರ್ಚೆಯ ವಿಷಯವಾಗಿದೆ. `ಹಿಜಾಬ್’ ಎಂಬ ಪದವು ಅರಬಿ ಭಾಷೆಯ `ಹಜಬ’ ಎಂಬ ಮೂಲ ಪದದಿಂದ ಬಂದಿದೆ. ಇದರ ಅರ್ಥ ಮರೆ ಮಾಡು ಅಥವಾ ಹೊದಿಸು. ಇಸ್ಲಾಮಿನಲ್ಲಿ ಪ್ರಾಯ ಪ್ರಬುದ್ಧರಾದ ಹೆಣ್ಣು ಮಕ್ಕಳು ಕಡ್ಡಾಯವಾಗಿ ಧರಿಸಬೇಕಾದ ವಸ್ತ್ರಸಂಹಿತೆಯನ್ನು ಹಿಜಾಬ್ ಎನ್ನಲಾಗುತ್ತದೆ. ಮುಖ ಮತ್ತು ಮುಂಗೈಗಳನ್ನು ಹೊರತುಪಡಿಸಿ ದೇಹದ ಎಲ್ಲ ಭಾಗಗಳನ್ನು ವಸ್ತ್ರದಿಂದ …

Read More »

ಕುರ್‌ಆನ್ ಬೈಬಲ್‌ನ ಪ್ರತಿರೂಪವೇ?

ಪ್ರವಾದಿ ಮುಹಮ್ಮದ್‌ರು(ಸ) ತಮ್ಮ ಕಾಲದ ಯಹೂದಿ-ಕ್ರೈಸ್ತ ಪಂಡಿತರೊಂದಿಗೆ ಕಲಿತ ವಿಚಾರಗಳನ್ನು ತನ್ನ ಸ್ವಂತ ಭಾಷೆಯಲ್ಲಿ ತನ್ನದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಗತಸಮುದಾಯಕ್ಕೆ ಸಂಬಂಧಿಸಿ ಕುರ್‌ಆನ್ ಮತ್ತು ಬೈಬಲ್‌ನ ವಿವರಣೆಗಳು ಒಂದೇ ರೀತಿಯಾಗಲು ಇದೇ ಕಾರಣ. ಒಂದಕ್ಕಿಂತ ಹೆಚ್ಚು ಇಂಗ್ಲಿಷ್ ಪುಸ್ತಕಗಳಲ್ಲಿ ಇಂತಹ ವಿಮರ್ಶೆಗಳು ಕಂಡು ಬಂತು. ಇದಕ್ಕೇನು ಕಾರಣ ಹೇಳುವಿರಿ.? ಇಸ್ಲಾಮನ್ನು ಶತ್ರುವಿನಂತೆ ದ್ವೇಷಿಸುವ ಪಾಶ್ಚಾತ್ಯ ಬರಹಗಾರರು ಹುಟ್ಟು ಹಾಕಿದ ಸುಳ್ಳಾರೋಪವಿದು. ಈ ಆರೋಪದಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲವೆಂದು ಬೈಬಲ್ ಮತ್ತು ಕುರ್‌ಆನ್ …

Read More »

ವೇದ ಮತ್ತು ಗೀತೆ ದೈವಿಕವೇ?

ಭಾರತದ ಹಿಂದೂ ವೇದಗ್ರಂಥಗಳು ದೇವನಿಂದ ಅವತೀರ್ಣವಾದದ್ದೆಂದು ಅಂಗೀಕರಿಸುವಿರಾ? ವಿದ್ಯೆ, ಜ್ಞಾನ ಎಂಬುದು ವೇದ ಎಂಬ ಪದದ ಅರ್ಥ ಆಧ್ಯಾತ್ಮಿಕ ಜ್ಞಾನವೆಂದಾಗಿದೆ. ಅದು ದೇವದತ್ತವೆಂದು ಕೆಲವು ವೇದ ಪಂಡಿತರು ಹೇಳುತ್ತಾರೆ. ಆದರೆ ವೇದಗಳು ಸ್ವತಃ ಅದನ್ನು ಘೋಷಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ಎಲ್ಲಾ ಜನಾಂಗಗಳಿಗೆ ದೇವಸಂದೇಶವಾಹಕರು ಬಂದಿದ್ದಾರೆಂದೂ ಅವರಿಗೆ ದೇವಸಂದೇಶಗಳು ಲಭಿಸಿದೆಯೆಂದೂ ಇಸ್ಲಾಮ್ ವಾದಿಸುತ್ತದೆ. ಆದ್ದರಿಂದ ವೇದಗಳು ಆರ್ಯರಿಗೆ ಅವತೀರ್ಣವಾದ ದಿವ್ಯ ಸಂದೇಶದ ಭಾಗವಾಗಿರುವ ಸಾಧ್ಯತೆಯನ್ನು ನಿರಾಕರಿಸುವುದು ಸರಿಯಲ್ಲ. ಅಂತಹ ಒಂದು ಸಾಧ್ಯತೆ ಖಂಡಿತವಾಗಿಯೂ …

Read More »

ಪ್ರವಾದಿ ಮುಹಮ್ಮದ್ (ಸ) ವಿಗ್ರಹ ದ್ವಂಸ ಮಾಡಿದ್ದರೇ?

ಭಾರತದ ಹಿಂದೂಗಳಂತೆ ಮಕ್ಕಾದ ಅರಬರು ವಿಗ್ರಹ ಆರಾಧಕರಾಗಿದ್ದರು. ಕಅಬಾದಲ್ಲಿ ನೂರಾರು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮುಹಮ್ಮದ್(ಸ)ರಿಗೆ ಅಧಿಕಾರ ದೊರೆತಾಗ ಬಲಪ್ರಯೋಗದಿಂದ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಇದರ ಕುರಿತು ಏನೆನ್ನುತ್ತೀರಿ ? ವಿಶ್ವದಲ್ಲಿ ಯಾವುದೇ ಧರ್ಮ ಬಹುದೇವಾರಾಧನೆಯನ್ನು ಅಂಗೀಕರಿಸಿಲ್ಲ. ವಿಗ್ರಹಾರಾಧನೆಯನ್ನು ಆದೇಶಿಸಲೂ ಇಲ್ಲ. ಹಿಂದೂ ಧರ್ಮದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಿಂದುಗಳು ಮೊದಲು ವಿಗ್ರಹಗಳನ್ನು ಆರಾಧಿಸುತ್ತಿರಲಿಲ್ಲ. ಕಾಲ ಕ್ರಮೇಣ ಅದು ಅವರಲ್ಲಿ ಸೇರಿಕೊಂಡ ಅನಾಚಾರವಾಗಿದೆ. ಪ್ರಮುಖ ಪಂಡಿತರು, ಹಿಂದೂ ಪುನರುತ್ಥಾನವಾದಿಗಳು ಇದನ್ನು ಬಹಳ ಸ್ಪಷ್ಟವಾಗಿ …

Read More »

‘ಅಲ್ಲಾಹ್’ ಎಂದು ಕರೆಯಲು ಕಾರಣವೇನು?

ಮುಸ್ಲಿಮರು ಸೃಷ್ಟಿಕರ್ತನನ್ನು ಅನ್ಯಭಾಷೆಯಾದ ಅರಬಿಯಲ್ಲಿ ‘ಅಲ್ಲಾಹ್’ ಎಂದು ಸಂಬೋಧಿಸುವುದು ಏಕೆ? ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸೂಕ್ತ ಹೆಸರು ನೀಡಿದರೆ ಸಾಲದೆ ? (ಉದಾಹರಣೆಗೆ ನಾವು ದೇವರು, ಈಶ್ವರ ಎಂದು ಹೇಳುತ್ತೇವೆ.) ಇಡೀ ಪ್ರಪಂಚವನ್ನೂ ಅದರಲ್ಲಿರುವ ಸಕಲವನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಶಕ್ತಿಯ ಹೆಸರು ‘ಅಲ್ಲಾಹ್’ ಎಂದಾಗಿದೆ. ದೇವರು, ಈಶ್ವರ, ಗಾಡ್, ಸೃಷ್ಟಿಕರ್ತ, ಖುದಾ ಮೊದಲಾದ ಹೆಸರುಗಳನ್ನು ಸೃಷ್ಟಿಕರ್ತನನ್ನು ಪರಿಚಯಿಸಲು ಉಪಯೋಗಿಸಬಹುದು. ಆದರೆ ಏಕನೂ ನಿರಾಕಾರನೂ ಆದ ಶಕ್ತಿಯನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತವಾದ …

Read More »

ಆತ್ಮಸಾಕ್ಷಿ ಮತ್ತು ದೇವಸಂದೇಶ?

ಮಾನವನ ಮಾರ್ಗದರ್ಶನಕ್ಕೆ ದಿವ್ಯ ಸಂದೇಶ ಅನಿವಾರ್ಯವೆಂಬ ವಾದ ಸರಿಯೇ? ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯಂತೆ ಬಾಳಿದರೆ ಸಾಕಾಗದೇ? ಮನಸ್ಸಿನ ಇಚ್ಛೆ ಎಂಬುದು ಒಂದು ಮಹತ್ತರವಾದ ಸಿದ್ಧಿಯಾಗಿದೆ. ಹಾಗಾದರೆ ಈ ಆತ್ಮಸಾಕ್ಷಿ ಎಂದರೇನು? ಎಲ್ಲರ ಆತ್ಮಸಾಕ್ಷಿ ಒಂದೇ ರೀತಿ ಇರುವುದೇ? ಅದು ದೋಷಮುಕ್ತವೆಂದು ಎಲ್ಲರಿಗೂ ನಂಬಿಕೆಯಿದೆಯೇ? ಇವೆಲ್ಲಾ ಗಮನಿಸಬೇಕಾದ ಪ್ರಶ್ನೆಗಳಾಗಿವೆ. ನಾವು ಹುಟ್ಟಿದ ಕುಟುಂಬ ಹಾಗೂ ಬೆಳೆಯುವ ವಾತಾವರಣವು ನಮ್ಮ ಆತ್ಮಸಾಕ್ಷಿಯನ್ನು ಗಾಢವಾಗಿ ಸ್ವಾಧೀನಪಡಿಸುತ್ತದೆ. ದೇಶ, ವಂಶ, ಕಾಲ, ಜಾತಿ ಹಾಗೂ ಸಾಮಾಜಿಕ …

Read More »

ಸ್ವರ್ಗ-ನರಕ ವಿಶ್ವಾಸ ಮತ್ತು ವಂಚಕ ವ್ಯವಸ್ಥೆ?

ಧರ್ಮಗಳು ದರಿದ್ರ ಹಾಗು ಶೋಷಿತ ವರ್ಗಗಳಿಗೆ ಸ್ವರ್ಗ ಲಭಿಸುತ್ತದೆಂಬ ಆಸೆ ಹುಟ್ಟಿಸಿ, ಅವರ ಹೋರಾಟದ ಆವೇಶವನ್ನು ತಣಿಸುವಂತಹ ಕೆಲಸ ಮಾಡುತ್ತಿದೆಯಲ್ಲವೇ? ಸ್ವರ್ಗ-ನರಕದ ಕುರಿತು ಮಾತುಗಳಲ್ಲಿ ಶ್ರೀಮಂತ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದೆಯಲ್ಲವೇ? ಧರ್ಮದ ಕುರಿತು ವ್ಯಾಪಕವಾಗಿರುವ ತಪ್ಪು ಕಲ್ಪನೆಗಳು ಇಂತಹ ಸಂಶಯಗಳಿಗೆ ಮೂಲ ಕಾರಣ. ಮರ್ದಿತರ -ಶೋಷಿತರ ಕಾವಲುಗಾರನಿಂದ ಧರ್ಮಗಳ ಕುರಿತು ಇಂತಹ ಗಂಭೀರ ಆರೋಪಗಳು ಬೆಳೆದು ಬರಲು ವಿಶ್ವಾಸಿಗಳು ಹಾಗೂ ಅಲ್ಲದವರೂ ಸಮಾನ ಕಾರಣಕರ್ತರಾಗಿದ್ದಾರೆ. ಸ್ವರ್ಗ-ನರಕ ವಿಶ್ವಾಸವು ಎಲ್ಲಾ …

Read More »

ಪರಲೋಕ ವಿಶ್ವಾಸ ಮತ್ತು ಪುನರ್ಜನ್ಮವಾದ?

ಇಸ್ಲಾಮ್ ನ ಪರಲೋಕ ವಿಶ್ವಾಸಕ್ಕೂ, ಹಿಂದೂಗಳ ಪುನರ್ಜನ್ಮವಾದಕ್ಕೂ ನಡುವೆ ವ್ಯತ್ಯಾಸವಿದೆಯೇ? ಇದೆಯೆಂದಾದರೆ ವ್ಯತ್ಯಾಸ ಯಾವುದು? ಪುನರ್ಜನ್ಮ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲದಿದ್ದರೆ ಯಾಕೆ? ಮರಣದೊಂದಿಗೆ ಮನುಷ್ಯ ಜೀವನ ಕೊನೆಗೊಳ್ಳುವುದಿಲ್ಲ ಎಂಬ ವಿಷಯದಲ್ಲಿ ಮಾತ್ರ ಪರಲೋಕ ವಿಶ್ವಾಸಕ್ಕೂ ಪುನರ್ಜನ್ಮಕ್ಕೂ ಸಾಮ್ಯತೆಯಿದೆ. ಇಸ್ಲಾಮೀ ವಿಶ್ವಾಸದಂತೆ ಭೂಮಿಯು ಕರ್ಮಭೂಮಿಯಾಗಿದೆ. ವಿಚಾರಣೆ ಮತ್ತು ವಿಧಿಯು ಮರಣದ ಬಳಿಕ ಪರಲೋಕದಲ್ಲಿ ಲಭಿಸುತ್ತದೆ. ಭೂಮಿಯಲ್ಲಿ ಮಾಡಿದ ಕರ್ಮಗಳ ಆಧಾರದಲ್ಲಿ ಪರಲೋಕದಲ್ಲಿ ರಕ್ಷೆ ಹಾಗೂ ಶಿಕ್ಷೆ ದೊರೆಯುತ್ತದೆ. ಪ್ರಪಂಚದ ವ್ಯವಸ್ಥೆ …

Read More »