Home / ಪ್ರಶ್ನೋತ್ತರ (page 4)

ಪ್ರಶ್ನೋತ್ತರ

ಹೆಣ್ಣಿನ ಅನುಮತಿ ಅಥವಾ ಸಮತಿಯಿಲ್ಲದೆ ಅವಳನ್ನು ವಿವಾಹ ಮಾಡಿಕೊಡಲು ಪೋಷಕರಿಗೆ ಇಸ್ಲಾಮ್ ಅನುಮತಿ ನೀಡುತ್ತದೆ ಎಂಬ ವಿಷಯ ನಿಜವೇ?

ನಿಜವಲ್ಲ. ಸ್ತ್ರೀಯ ಒಪ್ಪಿಗೆಯಿಲ್ಲದೆ ವಿವಾಹ ಮಾಡಿಕೊಡಲು ಇಸ್ಲಾಮ್ ಅನುಮತಿ ನೀಡುವುದಿಲ್ಲ: ಅಥವಾ ಅಂತಹ ವಿವಾಹ ನಡೆದರೆ ಅದನ್ನು ಒಪ್ಪಿಕೊಳ್ಳದೇ ನಿರಾಕರಿಸುವ ಹಕ್ಕು ಆಕೆಗೆ ಇದೆ. ಪ್ರವಾದಿವರ್ಯರು ಹೇಳುತ್ತಾರೆ: ‘ಕನ್ಯೆಯಲ್ಲದ ಸ್ತ್ರೀಗೆ ತನ್ನ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು, ಪೋಷಕರಿಗಿಂತ ಹೆಚ್ಚಿನ ಹಕ್ಕು ಇದೆ. ಕನ್ಯೆಯನ್ನು ವಿವಾಹ ಮಾಡಿ ಕೊಡಲು ಅವಳ ಅನುಮತಿಯನ್ನು ಕೇಳಬೇಕು. ಅವಳು ಮೌನಿಯಾಗಿದ್ದರೆ ಅದನ್ನು ಒಪ್ಪಿಗೆಯೆಂದು ಪರಿಗಣಿಸಬೇಕು.’ (ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ) ಒಮ್ಮೆ ಓರ್ವ ಹುಡುಗಿ ಪ್ರವಾದಿಯವರ …

Read More »

ಮಹಿಳೆಯರಿಗೆ ವಾರೀಸು ಹಕ್ಕಿನಲ್ಲಿ ಪುರುಷರಿಗಿಂತ ಅರ್ಧಪಾಲು ದೊರೆಯುತ್ತದೆ. ಇದು ಅನ್ಯಾಯವೂ ಅಸಮಾನತೆಯೂ ಅಲ್ಲವೇ?

ಇಸ್ಲಾಮೀ ಕಾನೂನಿನಂತೆ ಮಹಿಳೆಗೆ ಯಾವುದೇ ಸಂದರ್ಭದಲ್ಲಿ ಆರ್ಥಿಕ ಹೊಣೆಗಾರಿಕೆಯಿಲ್ಲ, ಹಕ್ಕುಗಳು ಮಾತ್ರ ಇದೆ. ಎಲ್ಲಾ ಹೊಣೆಗಾರಿಕೆಗಳು ಯಾವುದೇ ಪರಿಸ್ಥಿತಿಯಲ್ಲೂ ಪುರುಷರಿಗೆ ಮಾತ್ರ ಇದೆ. ವಿವಾಹದ ವೇಳೆಯಲ್ಲಿ ವರ ಮತ್ತು ವಧುವಿನ ವಸ್ತ್ರಗಳೂ ಸೇರಿದಂತೆ ಎಲ್ಲವುಗಳ ಖರ್ಚುನ್ನು ಪುರುಷನೇ ಭರಿಸಬೇಕು. ಅದರೊಂದಿಗೆ ವಧುವಿಗೆ ಕಡ್ಡಾಯವಾಗಿ ವಧು ದಕ್ಷಿಣೆ(ಮಹ್ರ್) ನೀಡಬೇಕು. ಬಳಿಕ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಸಂಪೂರ್ಣವಾಗಿ ಪುರುಷನಿಗಿದೆ. ಪತಿ-ಪತ್ನಿಯರೀರ್ವರೂ ಒಂದೇ ವರಮಾನವಿರುವ ವೈದ್ಯರೋ, ಶಿಕ್ಷಕರೋ ಆಗಿದ್ದರೂ ಪರವಾಗಿಲ್ಲ, ಮಹಿಳೆ …

Read More »

ಪರ್ದಾವನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯರನ್ನು ಶೋಷಣೆಗೊಳಪಡಿಸಿದೆಯಲ್ಲವೇ? ಮುಸ್ಲಿಮ್ ಮಹಿಳೆಯರ ಹಿಂದುಳಿಯುವಿಕೆಗೆ ಪರ್ದಾವೂ ಕಾರಣವಲ್ಲವೇ?

ಮಹಿಳೆಯು ಮುಖ ಮತ್ತು ಮುಂಗೈಯ ಹೊರತುಪಡಿಸಿ ದೇಹದ ಉಳಿದ ಭಾಗಗಳನ್ನು ಮರೆಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇದು ಮಹಿಳೆಯರ ಏಳಿಗೆಗೆ ಅಡ್ಡಿಯಲ್ಲ. ಸಹಾಯಕವಾಗಿದೆ. ಮಹಿಳೆಗೆ ಪರ್ದಾ ಹಿಂಸೆಯಲ್ಲ, ಆಕೆಯ ರಕ್ಷಾ ಕವಚವಾಗಿದೆ. ಇಂದು ವಿಶ್ವದ ಹಲವು ಭಾಗಗಳಲ್ಲಿ ಪರ್ದಾಧಾರಿಣಿ ಮಹಿಳೆಯರು ವೈಜ್ಞಾನಿಕ, ವೈಮಾನಿಕ, ಸಾಹಿತ್ಯ, ಮಾಧ್ಯಮ ರಂಗಗಳು ಹಾಗೂ ಪಾರ್ಲಿಮೆಂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇರಾನಿನ ಐದು ಉಪಾಧ್ಯಕ್ಷರುಗಳಲ್ಲಿ ಓರ್ವರಾದ ಮ‍ಅಸೂಮಾ ಇಬ್ತಿಕಾರ್ ಪರ್ದಾಧಾರಣಿಯಾಗಿದ್ದಾರೆ. ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ನಡೆಸಿ, ಮ‍ಅಸೂಮಾ ತೆಹ್ರಾನ್ …

Read More »

ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ?

ಮನುಷ್ಯರು ಹಲವು ರೀತಿಯಲ್ಲಿದ್ದಾರೆ. ಮಾನವನ ಗತಿಗನುಗುಣವಾಗಿ ಅವರ ಸ್ಥಾನಮಾನಗಳಲ್ಲೂ, ಹಕ್ಕುಬಾಧ್ಯತೆಯಲ್ಲೂ ವ್ಯತ್ಯಾಸವಿರಿಸುವುದು ಸ್ವಾಭಾವಿಕ ಮಾತ್ರವಲ್ಲ ಅನಿವಾರ್ಯವೂ ಹೌದು. ಅದೇ ರೀತಿ ಸ್ತ್ರೀ-ಪುರುಷರ ನಡುವೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಅಂತರವಿದೆ. ಪುರುಷರು ಎಷ್ಟೇ ಶ್ರಮಿಸಿದರೂ ಗರ್ಭಧರಿಸಲು, ಹೆರಲು, ಎದೆ ಹಾಲುಣಿಸಲು ಸಾಧ್ಯವಿಲ್ಲವಲ್ಲಾ? ಮಹಿಳೆ ಪುರುಷರಿಗಿಂತ ಭಿನ್ನವಾಗಿ ತಿಂಗಳ ನಿಶ್ಚಿತ ದಿನಗಳಲ್ಲಿ ಆರ್ತವ ಹಾಗೂ ಅದರ ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಪುರುಷನು ಸ್ತ್ರೀಗಿಂತ ಬಲಶಾಲಿಯೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದು ಕಷ್ಟಕರ ಕೆಲಸಗಳನ್ನು …

Read More »

ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ?

ಭಾರತದಲ್ಲಿ ಮುಸ್ಲಿಮರು ಜಿಹಾದ್ ನಡೆಸುತ್ತಿಲ್ಲವೆಂಬ ಭಾವನೆ ಸರಿಯಲ್ಲ ಏಕೆಂದರೆ ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಜಿಹಾದ್ ಕಡ್ಡಾಯವಾಗಿದೆ. ಆದರಿಂದ ದೂರ ಸರಿಯಲು ಯಾರಿಗೂ ಅನುಮತಿಯಿಲ್ಲ. ನರಕದಿಂದ ಮುಕ್ತಿಗೆ ಮತ್ತು ಸ್ವರ್ಗ ಪ್ರವೇಶಕ್ಕೆ ಅದು ಅನಿವಾರ್ಯವಾಗಿದೆ. ಪವಿತ್ರ ಕುರ್ ಆನ್ ಹೇಳುತ್ತದೆ: ‘ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾವು ನಿಮಗೆ ತೋರಿಸಿ ಕೊಡಲೇ? ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ ಮತ್ತು ನಿಮ್ಮ ಸಂಪತ್ತುಗಳಿಂದಲೂ, ಜೀವನಗಳಿಂದಲೂ ಅಲ್ಲಾಹನ …

Read More »

‘ದೇವನನ್ನು ನ್ಯಾಯಪಾಲಕನೆಂದು ಹೇಳಲಾಗುತ್ತದೆ. ಆದರೆ, ಮನುಷ್ಯರಲ್ಲಿ ಕೆಲವರು ಅಂಗವಿಕಲರೂ ಹಾಗೂ ಇನ್ನು ಕೆಲವರು ಮಂದ ಬುದ್ದಿಯವರೂ ಇದ್ದಾರೆ. ಇದು ದೇವನು ತನ್ನ ಸೃಷ್ಟಿಯೊಂದಿಗೆ ಮಾಡಿದ ದೊಡ್ಡ ಅನ್ಯಾಯವಲ್ಲವೇ?

ಇದು ಬಹಳ ಪ್ರಸಕ್ತವೂ ನ್ಯಾಯಪೂರ್ಣವಾದ ಪ್ರಶ್ನೆಯಾಗಿದೆ. ಆದರೆ ಸ್ವಲ್ಪ ಆಳವಾಗಿ ಚಿಂತಿಸಿದರೆ ಇದು ಅಪ್ರಸ್ತುತವೆಂಬ ಅರಿವಾಗುತ್ತದೆ. ಈ ಪ್ರಶ್ನೆಯನ್ನೇ ಸ್ವಲ್ಪ ದೀರ್ಘಗೊಳಿಸುವುದಾದರೆ ನಮ್ಮಲ್ಲಿ ಹಲವಾರು ಸಂಶಯಗಳಿವೆ. ನನ್ನನ್ನು ಆರು ಅಡಿ ಉದ್ದದ ವ್ಯಕ್ತಿಯನ್ನಾಗಿ ಏಕ ಮಾಡಲಿಲ್ಲವೆಂದು ಗಿಡ್ಡ ವ್ಯಕ್ತಿಯು ಕೇಳಬಹುದು. ಕಪ್ಪು ಮೈಬಣ್ಣದವನು ನಾನು ಯಾಕೆ ಬಿಳಿಯವನಾಗಿಲ್ಲವೆಂದು ಪ್ರಶ್ನಿಸಬಹುದು. ತನ್ನನ್ನು ಸುಂದರಗೊಳಿಸಿಲ್ಲವೇಕೆಂದು ಕುರೂಪಿಯೂ, ಪ್ರತಿಭಾವಂತನಾಗಿ ಮಾಡಲಿಲ್ಲವೆಂದು ಸಾಮಾನ್ಯ ಬುದ್ದಿಯುಳ್ಳವನೂ ಕೇಳಬಹುದು. ಉತ್ತಮ ಹವಾಮಾನ ಇರುವ ಸ್ಥಳದಲ್ಲಿ ಹುಟ್ಟಿಸಲಿಲ್ಲವೇಕೆಂದು ಮರುಭೂಮಿಯ ನಿವಾಸಿಯೂ, …

Read More »

ಭಾರತದಲ್ಲಿ ಸರ್ವಧರ್ಮಿಯರಿಗೂ ಸಮಾನ ಅವಕಾಶವಿರಲು ಇಲ್ಲಿ ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿರುವುದು ಕಾರಣವಲ್ಲವೇ.? ಇಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿದ್ದರೆ ಇದೊಂದು ಇಸ್ಲಾಮೀ ರಾಷ್ಟ್ರವಾಗಿ ಮಾರ್ಪಟ್ಟು ಇತರ ಧರ್ಮೀಯರು ಎರಡನೇ ದರ್ಜೆಯ ಪೌರರಾಗುತ್ತಿರಲಿಲ್ಲವೇ ಅಥವಾ ಇಸ್ಲಾಮ್‌ ಗೆ ಬಲವಂತವಾಗಿ ಮತಾಂತರಕ್ಕೊಳ ಪಡುತ್ತಿರಲಿಲ್ಲವೇ?

ಸಮಾಜದಲ್ಲಿ ಗಾಢವಾಗಿ ಬೇರೂರಿರುವ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ, ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳು ಧರ್ಮಾಧಾರಿತ ಇಸ್ಲಾಮೀ ರಾಷ್ಟ್ರಗಳೆಂಬ ಭಾವನೆ ಸರಿಯಲ್ಲ, ಇಸ್ಲಾಮೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ರಾಷ್ಟ್ರಗಳು ಮಾತ್ರ ಇಸ್ಲಾಮೀ ರಾಷ್ಟ್ರ ಎಂಬ ಹೆಸರಿಗೆ ಅರ್ಹವಾಗುತ್ತದೆ. ಈಗ ಮುಸ್ಲಿಮ್ ರಾಷ್ಟ್ರಗಳೆಂದು ಹೇಳಿಕೊಳ್ಳುವ ಯಾವುದೇ ರಾಷ್ಟ್ರವೂ ವಿಶ್ವದಲ್ಲಿ ಕಂಡು ಬರುತ್ತಿಲ್ಲ. ಭಾಗಶಃ ಇಸ್ಲಾಮೀ ವ್ಯವಸ್ಥೆಗಳನ್ನು ಪಾಲಿಸುವ ರಾಷ್ಟ್ರಗಳಿವೆ. ಆದರೆ ಅವೆಲ್ಲಾ ಅಷ್ಟರ ಮಟ್ಟಿಗೆ ಇಸ್ಲಾಮೀ ರಾಷ್ಟ್ರವಾಗುತ್ತವೆ. ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ …

Read More »

ಕುರ್‌ಆನ್ ಮುಸ್ಲಿಮರಿಗೆ ಮಾತ್ರವೇ?

ಖದೀಜಾ ನುಸ್ರತ್ ಮಾನವಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನು ಅವತೀರ್ಣಗೊಳಿಸಿದಂತಹ ಗ್ರಂಥವಾಗಿದೆ ಪವಿತ್ರ ಕುರ್‌ಆನ್. ಸೃಷ್ಟಿಕರ್ತನು ಮಾನವರಿಗೆ ಮಾರ್ಗದರ್ಶನ ನೀಡಬೇಕೆಂಬುದು ಅವನ ದೇವತ್ವದ, ಕರುಣೆಯ ಬೇಡಿಕೆಯಾಗಿದೆ. ತನ್ನ ಸೃಷ್ಟಿಯ ಭೂತ, ವರ್ತಮಾನ ಮತ್ತು ಭವಿಷ್ಯಗಳೆಲ್ಲವೂ ಪರಿಪೂರ್ಣವಾಗಿ ಸೃಷ್ಟಿಕರ್ತನಿಗೆ ಮಾತ್ರ ತಿಳಿದಿದೆ. ಈ ಕಾರಣದಿಂದಾಗಿಯೇ ಎಲ್ಲಾ ಕಾಲದಲ್ಲೂ ನಿರಂತರವಾಗಿ ಎಲ್ಲಾ ಜನಾಂಗಗಳಿಗೂ ಸಂದೇಶವಾಹಕರನ್ನು ಕಳುಹಿಸುತ್ತಿದ್ದನು. ಪ್ರಥಮ ಮನುಷ್ಯರಾದ ಆದಮ್(ಅ) ಪ್ರವಾದಿಯಾಗಿದ್ದರು. ಅಲ್ಲಾಹನ ಕಡೆಯಿಂದ ವಿವಿಧ ಕಾಲಗಳಲ್ಲಿ ನಾನಾ ಪ್ರದೇಶಗಳ ಮತ್ತು ಜನಾಂಗಗಳ ಮಾರ್ಗದರ್ಶನಕ್ಕಾಗಿ ಬೇರೆ …

Read More »

ಕುರ್‌ಆನ್‌ನಲ್ಲಿ ಉಲ್ಲೇಖವಾಗಿರುವ ಈ ಸಮಾನಾಂಶಗಳು ನಿಮಗೆ ಗೊತ್ತೇ?

ಅಬೂ ಕುತುಬ್ ಡಾ. ತಾರಿಖ್ ಅಲ್ ಸ್ವಿಡಾನ್‌ರವರು ಪವಿತ್ರ ಕುರ್‌ಆನ್‌ನಲ್ಲಿರುವ ಕೆಲವು ಅದ್ಭುತವಾದ ವಿಷಯವನ್ನು ತಮ್ಮ ಅಧ್ಯಯನದ ಮೂಲಕ ಕಂಡು ಕೊಂಡಿದ್ದಾರೆ. ಆರನೇ ಶತಮಾನದ ಅರೇಬಿಯಾದ ಮರುಭೂಮಿಯಲ್ಲಿ ದೇವಗ್ರಂಥ ಎಂದು ಸಾರುವ ಈ ಗ್ರಂಥದಲ್ಲಿ ಬಂದ ಸಮಾನವಾದ ಸಂಖ್ಯೆಗಳನ್ನು ಅವರು ತೋರಿಸಿದ್ದಾರೆ. ಉದಾಹರಣೆಗೆ ಒಂದು ವಿಷಯವು 11 ಬಾರಿ ಉಲ್ಲೇಖ ಆಗಿದ್ದರೆ ಅದರ ವಿರುದ್ಧ ಪದವೂ ಅಷ್ಟೇ ಬಾರಿ ಉಲ್ಲೇಖವಾಗಿದೆ. ಕುರ್‌ಆನ್‌ನಲ್ಲಿ ಪುರುಷ ಎಂಬ ಪದವು 24 ಬಾರಿ ಇದ್ದರೆ, …

Read More »

ದೇಶ ಮತ್ತು ಧರ್ಮ: ಪ್ರವಾದಿ(ಸ) ಪರಿಕಲ್ಪನೆ: “ದೇಶ ಮೊದಲೋ ಧರ್ಮ ಮೊದಲೋ?”

ದೇಶ ಧರ್ಮ ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ. ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸುವುದೂ ಇದೆ. ದೇಶ ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು ಬಳಸಿಕೊಳ್ಳುವುದೂ ಇದೆ. ಒಂದು ಅಂಕಿ-ಅಂಶ ಕೊಡುತ್ತೇನೆ. 2021ರಲ್ಲಿ ಒಂದು ಲಕ್ಷದ 63 ಸಾವಿರ …

Read More »