Home / ಪ್ರಶ್ನೋತ್ತರ (page 2)

ಪ್ರಶ್ನೋತ್ತರ

ಮೃತರಿಗೆ ಪುಣ್ಯ ತಲುಪುವುದೆ?

ಪ್ರಶ್ನೆ: ನನ್ನ ಈ ಪ್ರಶ್ನೆಗೆ ಕುರ್‌ಆನ್-ಹದೀಸ್‌ನ ಬೆಳಕಿನಲ್ಲಿ ಉತ್ತರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಕುರ್‌ಆನ್  ಓದಿ, ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಬಹುದೇ? ಹಾಗೆ ಪ್ರಾರ್ಥಿಸಿದರೆ ಅದರ ಪುಣ್ಯ ಅವರಿಗೆ ಸಿಗುವುದೇ? ಬಡವರಿಗೆ ಅಥವಾ ಕುಟುಂಬ ಮಿತ್ರಾದಿಗಳಿಗೆ ಊಟಕೊಟ್ಟು ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅದು ಅವರಿಗೆ ಸಿಗುವುದೇ? ಹಣ ಅಥವಾ ಬಟ್ಟೆ ದಾನ ನೀಡಿ ಅದರ ಪುಣ್ಯವನ್ನು ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅವರಿಗೆ ಅದರ ಪುಣ್ಯ ಸಿಗುವುದೇ? ಉತ್ತರ: ಈ …

Read More »

ಪಾಪ ಮತ್ತು ತೌಬಾ?

ಪ್ರಶ್ನೆ: ನನ್ನಿಂದ ತಪ್ಪುಗಳು ಸಂಭವಿಸುತ್ತವೆ. ನಾನು ಅಲ್ಲಾಹನಲ್ಲಿ ಕ್ಷಮೆ ಯಾಚಿಸಿ ಮುಂದೆ ತಪ್ಪುಗಳಾಗಬಾರದೆಂದು ದೃಢ ನಿಶ್ಚಯ ಮಾಡುತ್ತೇನೆ. ಆದರೆ ಅದು ಕೆಲವೇ ದಿನಗಳ ಮಟ್ಟಿಗೆ ಇರುತ್ತದೆ. ಪುನಃ ಪಾಪಗಳನ್ನು ಮಾಡಿ ಬಿಡುತ್ತೇನೆ. ಪಾಪ ಮಾಡಿದ ನಂತರ ಪುನಃ ತೌಬಾ ಮಾಡುತ್ತೇನೆ. ಆದರೆ ಅನಂತರವೂ ಪದೇ ಪದೇ ಈ ರೀತಿ ಸಂಭವಿಸುತ್ತಿರುತ್ತದೆ. ಪಾಪಗಳನ್ನು ಮಾಡದೆ ತಕ್ವಾದಲ್ಲಿ ಸ್ಥಿರವಾಗಿರಲು ನಾನೇನು ಮಾಡಬೇಕು? ಒಮ್ಮೆ ತೌಬಾ ಮಾಡಿದ ನಂತರ ಪುನಃ ತಪ್ಪು ಮಾಡಿದರೆ ಹಿಂದಿನ …

Read More »

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಇದು ಸರಿಯೇ?

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಈ ಕುರಿತು ವಿವರಿಸಬಹುದೇ? ಉತ್ತರ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಹೇಳುವವರಿಗೆ, ವಿಜ್ಞಾನ ಅಂದರೆ ವಿಶೇಷ ಜ್ಞಾನ ಎಂದಾಗಿದೆ. ಈ ಜ್ಞಾನದ ಬೆಳಕಿನಲ್ಲಿ ಶೋಧನೆ ಮಾಡುವುದಕ್ಕೆ ವೈಜ್ಞಾನಿಕ ಶೋಧನೆ ಎನ್ನಲಾಗುತ್ತದೆ. ಕೆಲವರಿಗೆ ಇದು ಮಹಾ ಜ್ಞಾನ ಆಗಿ ಕಂಡರೂ ವಾಸ್ತವದಲ್ಲಿ ಇದು ಅಲ್ಪ ಜ್ಞಾನ ಆಗಿದೆ ಎಂದು ಕೆಲವರಿಗೆ ತಿಳಿಯಲು ಸಾಧ್ಯವಾಗಿಲ್ಲ. ಕಾರಣ ವಿಜ್ಞಾನಕ್ಕಿಂತ ಮಿಗಿಲಾದ …

Read More »

ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ?

ಪ್ರಶ್ನೆ: ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆ ಸಿಗುತ್ತದೆಯೇ? ಉತ್ತರ: ಅಧ್ಯಾಯ 26: ಅಶ್ಶುಅರಾ ಸೂಕ್ತ : 61 فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ ಎರಡು ಸಮೂಹಗಳು ಎದುರಾದಾಗ ಮೂಸಾರ ಸಂಗಾತಿಗಳು, “ನಾವು ಸಿಕ್ಕಿ ಬಿದ್ದೆವು” ಎಂದು ಕೂಗಿದರು. ಸೂಕ್ತ : 62 قَالَ كَلَّا ۖ إِنَّ مَعِيَ رَبِّي سَيَهْدِينِ ಆಗ ಮೂಸಾ, “ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು …

Read More »

ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ?

ಪ್ರಶ್ನೆ: ಗುಲಾಮ ಎಂದರೆ ಯಾರು? ಅಲ್ಲಾಹನು ಗುಲಾಮರನ್ನು ಏಕೆ ಸೃಷ್ಟಿ ಮಾಡಿದ? ಉತ್ತರ: ಗುಲಾಮನನ್ನು ಅಲ್ಲಾಹನು ಸೃಷ್ಠಿಸಲಿಲ್ಲ, ಬದಲಾಗಿ ಮಾನವ ಮಾನವನನ್ನು ಗುಲಾಮನನ್ನಾಗಿ ಮಾಡಿದ. ಗುಲಾಮ ಅಂದರೆ ಅರೇಬಿಯಾದಲ್ಲಿ ಅಂದಿನ ಅನಾಗರಿಕ ಕಾಲದಲ್ಲಿ ಇದ್ದಂತಹ ಪದ್ಧತಿ. ದುರ್ಬಲ ವರ್ಗದ, ಯಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು, ಗೋತ್ರ ಗೋತ್ರಗಳ ಮದ್ಯೆ ನಡೆಯುತ್ತಿದ್ದ ಯುದ್ಧಗಳಲ್ಲಿ ಸಿಕ್ಕಿದ ಜನರನ್ನು ತಮ್ಮ ಅಧೀನದಲ್ಲಿ ಇಟ್ಟು ಅವರಿಗೆ ಆಹಾರ ಬಟ್ಟೆ ಕೊಟ್ಟು ತಮ್ಮ ಕೆಲಸವನ್ನು ಮಾಡಿಸುತ್ತಿದ್ದರು. …

Read More »

ಮಂತ್ರ: ಸರಿ-ತಪ್ಪು ?

ಪ್ರಶ್ನೆ: ಇತ್ತೀಚೆಗೆ ನಾನು ಒಂದು ಪುಸ್ತಕದಲ್ಲಿ ಈ ರೀತಿ ಬರೆದದ್ದನ್ನು ನೋಡಿದ್ದೇನೆ, “ರೋಗಗಳಿಗೆ ಮದ್ದು ಎರಡು ರೂ ಪಗಳಲ್ಲಿವೆ. ಒಂದು ಔಷಧ ಹಾಗೂ ಇನ್ನೊಂದು ಮಂತ್ರ. ಪ್ರವಾದಿ(ಸ) ಇವೆರಡನ್ನೂ ಉಪಯೋಗಿಸಿದ್ದಾರೆ ಮತ್ತು ನಮಗೂ ಅದನ್ನು ಮಾಡಲು ಹೇಳಿದ್ದಾರೆ.” ಇದು ಸರಿಯೇ? ರೋಗ ಶಮನಕ್ಕೆ ಮಂತ್ರ ಉಪಯೋಗಿಸಲು ಕಲಿಸಿರುವ ಹದೀಸ್‌ಗಳಿವೆಯೇ? ಉತ್ತರ: ಮಂತ್ರಗಳು ಹಲವು ವಿಧಗಳಲ್ಲಿವೆ. ಕೆಲವರು ಮಂತ್ರದ ಹೆಸರಿನಲ್ಲಿ ದೇವನ ಶಕ್ತಿಯ ಸೇವೆಯನ್ನು ಸ್ವತಃ ಕಲ್ಪಿಸುತ್ತಾ ಕೆಲವು ಕರ್ಮಗಳನ್ನು ಮಾಡುತ್ತಾರೆ. …

Read More »

ಕಮ್ಯೂನಿಸ್ಟ್ ಒಕ್ಕೂಟದ ಪತನಕ್ಕೆ ಅದರ ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಪ್ರಚುರಪಡಿಸುವವರು ಇಸ್ಲಾಮಿನ ವಿಷಯದಲ್ಲಿ ಬೇರೆಯೇ ನಿಲುವನ್ನು ಸ್ವೀಕರಿಸುವುದು ವಿರೋಧಾಭಾಸವಲ್ಲವೇ?

ಸೋಶಲಿಝಂನ ಪತನ ಹಾಗೂ ಇಸ್ಲಾಮೀ ಆಡಳಿತ ವ್ಯವಸ್ಥೆಗೆ ಉಂಟಾದ ಆಘಾತವು ಪ್ರತ್ಯಕ್ಷವಾಗಿ ಒಂದೇ ರೀತಿ ಗೋಚರಿಸಬಹುದು. ಆದರೆ ಅವೆರಡರ ಮಧ್ಯೆ ಬಹಳ ಅಂತರವಿದೆ. ವಿಶ್ವಾಸ ರೀತಿಗಳು, ಹಕ್ಕು ಬಾಧ್ಯತೆಗಳು, ಇತಿಹಾಸ ಪಾಠಗಳು, ಪ್ರಾಯೋಗಿಕ ಅನುಭವಗಳನ್ನು ಗಮನಿಸಿದರೆ ಎಲ್ಲರಿಗೂ ಇದು ಸುಲಭವಾಗಿ ಅರ್ಥವಾಗುತ್ತದೆ. ಕಮ್ಯುನಿಸ್ಟ್ ವ್ಯವಸ್ಥೆಯ ಗುರಿಯು ಅದರ ಗೋಷಣಾ ಪತ್ರ ಸ್ಪಷ್ಟಪಡಿಸುವಂತೆ ಜಾತಿ, ವರ್ಗ ರಹಿತವಾದ ಒಂದು ಸಮಾಜದ ಸ್ಥಾಪನೆಯಾಗಿದೆ. ಲೆನಿನ್ ವಿವರಿಸುವಂತೆ ಆಡಳಿತಗಾರ-ಪ್ರಜೆ, ನಾಯಕ-ಅನುಯಾಯಿ, ಪೋಲಿಸ್, ಸೈನ್ಯ, ನ್ಯಾಯಾಲಯವಿಲ್ಲದ …

Read More »

ಇಸ್ಲಾಮ್ ಧರ್ಮವು ಅತ್ಯುತ್ತಮ ಹಾಗೂ ಫಲಪ್ರದವೆಂದಾದರೆ ವಿಶ್ವದಲ್ಲಿ ನೂರು ಕೋಟಿ ಮುಸ್ಲಿಮರೂ, ಐವತ್ತಕ್ಕಿಂತ ಹೆಚ್ಚು ಮುಸ್ಲಿಮ್ ರಾಷ್ಟ್ರಗಳಿದ್ದೂ ಅದೇಕೆ ಫಲಪ್ರದವಾಗುತ್ತಿಲ್ಲ? ಅದರ ಸತ್ಪಲಗಳು ಗೋಚರಿಸದಿರಲು ಕಾರಣವೇನು.?

ಇಸ್ಲಾಮ್ ವೈಯಕ್ತಿಕ, ಸಾಮಾಜಿಕ, ರಾಜಕೀಯ ಯಶಸ್ಸಿನೊಂದಿಗೆ ಮರಣಾನಂತರದ ವಿಜಯವನ್ನು ಖಾತ್ರಿಗೊಳಿಸುವ ಜೀವನ ವ್ಯವಸ್ಥೆಯಾಗಿದೆ. ಅದು ವ್ಯಕ್ತಿ ಜೀವನದ ತೀವ್ರ ಶಾಖಕ್ಕೆ ನೆರಳು ನೀಡುವ ಕೊಡೆಯಾಗಿ, ಕಗ್ಗತ್ತಲೆಯಲ್ಲಿ ಬೆಳಕನ್ನು ನೀಡುವ ನಂದಾದೀಪವಾಗಿ, ವಿಜಯದ ಸಂದರ್ಭದಲ್ಲಿ ನಿಯಂತ್ರಿಸುವ ಕಡಿವಾಣವಾಗಿ, ದುಃಖದ ಸಂದರ್ಭದಲ್ಲಿ ಸಾಂತ್ವನದ ಸಂದೇಶವಾಗಿ, ನೋವಿನಲ್ಲಿ ಸ್ನೇಹ ಸ್ಪರ್ಶವಾಗಿ, ತಪ್ಪು ಹಾದಿಯಿಂದ ತಡೆಯುವ ಗುರಾಣಿಯಾಗಿ ಸಹಕರಿಸುತ್ತದೆ. ಬದುಕಿಗೆ ಸ್ಪಷ್ಟ ಮಾರ್ಗದರ್ಶನವನ್ನು ನೀಡುತ್ತದೆ. ಹೀಗೆ ನಮ್ಮ ಉದಾಸೀನತೆಯನ್ನು ಕೊನೆಗೊಳಿಸುತ್ತದೆ. ಅಸ್ವಸ್ಥತೆಗೆ ವಿರಾಮ ಹಾಕುತ್ತದೆ. ಕೌಟುಂಬಿಕ …

Read More »

ಜಾಗತಿಕ ಮಟ್ಟದಲ್ಲಿ ನೋಡುವಾಗ ಹಲವು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮರು ಬಹಳ ಹಿಂದುಳಿದಿದ್ದಾರೆ. ಭಾರತದ ಮುಸ್ಲಿಮರೂ ಇತರ ಧರ್ಮೀಯರಿಗಿಂತ ಬಹಳ ಹಿಂದುಳಿದ ಅವಸ್ಥೆಯಲ್ಲಿದ್ದಾರೆ. ಇಸ್ಲಾಮ್ ಪ್ರಗತಿಗೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವೆಂಬುದನ್ನು ಸೂಚಿಸುತ್ತದೆಯಲ್ಲವೇ.?

ಮಾನವ ಜಗತ್ತಿನ ಪ್ರಗತಿ ಹಾಗೂ ಅಭಿವೃದ್ಧಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಪಾತ್ರ ಹೇಳಬೇಕಾದ ಅಗತ್ಯವಿಲ್ಲದಷ್ಟು ಸ್ಪಷ್ಟವೂ, ವಿವಾದಾತೀತವೂ ಆಗಿದೆ. ಗಾಢ ನಿದ್ರೆಯಲ್ಲಿದ್ದ ಅರೇಬಿಯನ್ ಜನತೆಯನ್ನು ಇಸ್ಲಾಮ್ ಬಡಿದೆಬ್ಬಿಸಿತು. ಅವರ ಅಜ್ಞಾನ, ಅಂಧ ವಿಶ್ವಾಸವನ್ನು ಹೋಗಲಾಡಿಸಿತು. ಜೀವನದ ಎಲ್ಲಾ ರಂಗಗಳಲ್ಲೂ ಅವರ ಉನ್ನತಿಗೆ ಹಾಗೂ ಮುನ್ನಡೆಗೆ ಕಾರಣವಾಯಿತು. ಹೀಗೆ ಅವರು ವಿಶ್ವದ ನಾಯಕತ್ವ ಸ್ಥಾನಕ್ಕೆ ತಲುಪಿಸಿದರು. ಸತ್ಯ, ನ್ಯಾಯ, ಸಮಾನತೆ, ಸಹೋದರತೆ, ಸಹಿಷ್ಣುತೆ ಹಾಗೂ ಧಾರ್ಮಿಕ ಮೌಲ್ಯಗಳಲ್ಲಿ ಮಾತ್ರವಲ್ಲ ಕಲೆ, ಸಾಹಿತ್ಯ, …

Read More »

ವಿಶ್ವದಲ್ಲಿರುವ ಮುಸ್ಲಿಮರು ಭಯೋತ್ಪಾದಕರೂ, ಉಗ್ರಗಾಮಿಗಳು ಆಗಲು ಇಸ್ಲಾಮ್ ಕಾರಣವಲ್ಲವೇ?

ಇದು ಸ್ವಲ್ಪ ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. ಕ್ರಿ.ಶ. 1492 ಮಾನವ ಇತಿಹಾಸದ ಭಯಾನಕರವಾದ ಮಹಾ ದುರಂತ ನಡೆದ ವರ್ಷವಾಗಿತ್ತು. ಸುದೀರ್ಘ ಕಾಲದ ತನಕ ವೈಜ್ಞಾನಿಕ-ತಂತ್ವಜ್ಞಾನ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ನಾಗರಿಕತೆಯ ಎಲ್ಲಾ ರಂಗಗಳಲ್ಲಿಯೂ ವಿಶ್ವದ ನೇತೃತ್ವವನ್ನು ವಹಿಸಿದ್ದ ಮುಸ್ಲಿಮ್ ಸ್ಪೇಯಿನ್ ನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಗ್ರಾನಡೆ ನಗರವು ಮಾತ್ರ ಆತನ ಅಧೀನದಲ್ಲಿತ್ತು. 1492 ಜನವರಿ ಕೊನೆಯಲ್ಲಿ ಅವರನ್ನು ಪದಚ್ಯುತಿಗೊಳಿಸಿ ಸ್ಪೇಯಿನಿಗರು ಆಧಿಪತ್ಯ ಸ್ಥಾಪಿಸಿದರು. ಸ್ಟೇಯಿನ್‌ನ …

Read More »