Home / ಪ್ರಶ್ನೋತ್ತರ (page 3)

ಪ್ರಶ್ನೋತ್ತರ

ಹಜ್ಜ್ ವೇಳೆಯಲ್ಲಿ ಹಾಗೂ ಹಬ್ಬದ ಸಂದರ್ಭಗಳಲ್ಲಿ ನಡೆಸುವ ಪ್ರಾಣಿ ಹತ್ಯೆ ಸರಿಯೇ ಅಸಂಖ್ಯಾತ ಪ್ರಾಣಿಗಳನ್ನು ಕೊಲ್ಲುವುದೇ?

ಇತಿಹಾಸದ ಅಂಧಕಾರದ ಕರಿನೆರಳಿನಲ್ಲಿ ನಡೆಸಲಾಗುತ್ತಿದ್ದ ನರಬಲಿಯೆಂಬ ಕ್ರೂರ ಕೃತ್ಯಕ್ಕೆ ತಡೆ ಹಾಕಿದ ಸಂಭ್ರಮದ ಸ್ಮರಣೆಯೇ ಇಸ್ಲಾಮಿನ ಬಲಿ ಕರ್ಮ. ಅದರೊಂದಿಗೆ ಅಸಾಮಾನ್ಯ ತ್ಯಾಗದ ಸಂಕೇತ ಮತ್ತು ಸಮರ್ಪಣಾ ಭಾವವನ್ನು ಇದು ಎತ್ತಿ ತೋರಿಸುತ್ತದೆ. ಪ್ರಾಯ ಮೀರಿದರೂ ಪ್ರವಾದಿ ಇಬ್ರಾಹೀಮ್ (ಅ)ರಿಗೆ ಸಂತಾನ ಭಾಗ್ಯವಿರಲಿಲ್ಲ. ಅತ್ಯಂತ ದುಃಖಿತರಾದ ಅವರು ದೇವನೊಂದಿಗೆ ಸಂತಾನಕ್ಕಾಗಿ ಪ್ರಾರ್ಥಿಸಿದರು. ನಿರಂತರ ಪ್ರಾರ್ಥನೆಯ ಬಳಿಕ ಸೃಷ್ಟಿಕರ್ತನು ಅವರಿಗೆ ಓರ್ವ ಮಗನನ್ನು ದಯಪಾಲಿಸಿದನು. ಇಸ್ಮಾಯೀಲ್ ಎಂಬ ಹೆಸರಿನ ಆ ಪ್ರಿಯ …

Read More »

ದಯೆಯ ಕುರಿತು ಬಹಳವಾಗಿ ಮಾತನಾಡುವ ಇಸ್ಲಾಮ್ ಪ್ರಾಣಿ ಹಾಗೂ ಇತರ ಜೀವಿಗಳೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆಯಲ್ಲಾ? ಅವುಗಳನ್ನು ಕೊಲ್ಲವುದು ಎಷ್ಟು ಸರಿ.?

ಭೂಮಿಯಲ್ಲಿರುವ ಎಲ್ಲ ಜೀವಜಾಲಗಳ ಮೇಲೆ ದಯೆ ತೋರಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಪ್ರವಾದಿ(ಸ)ರು ಹೇಳಿದರು: ‘ಭೂಮಿಯಲ್ಲಿರುವವರಿಗೆ ಕರುಣೆ ತೋರಿಸಿರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.’ (ತಬ್ರಾನಿ) ‘ಕರುಣೆಯಿಲ್ಲದವನಿಗೆ ಕಾರುಣ್ಯ ಲಭಿಸುವುದಿಲ್ಲ’ (ಬುಖಾರಿ, ಮುಸ್ಲಿಮ್) ‘ದೌರ್ಭಾಗ್ಯ ಶಾಲಿಯ ಹೊರತು ಯಾರೂ ಕರುಣೆಯಿಲ್ಲದವರಾಗಲಾರರು.’ (ಅಬೂದಾವೂದ್) ಇಸ್ಲಾಮ್ ಭೂಮಿಯಲ್ಲಿರುವ ಜೀವಜಾಲಗಳನ್ನೆಲ್ಲಾ ಮನುಷ್ಯರಂತಹ ಸಮೂಹವೆಂದು ಪರಿಗಣಿಸುತ್ತದೆ. ಅಲ್ಲಾಹನು ಹೇಳುತ್ತಾನೆ: ‘ಭೂಮಿಯ ಮೇಲೆ ಚಲಿಸುವ ಪ್ರಾಣಿಗಳನ್ನು ರೆಕ್ಕೆಗಳಿಂದ ಹಾರಾಡುವ ಪಕ್ಷಿಗಳನ್ನು ನೋಡಿಕೊಳ್ಳಿರಿ. ಇವೆಲ್ಲವೂ ನಿಮ್ಮಂತೆಯೇ ವಾಯುವಿನಲ್ಲಿ ಇರುವ …

Read More »

ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರಿಂದ ಜಿಝಿಯಾ ಎಂಬ ತೆರಿಗೆಯನ್ನು ಪಡೆಯುತ್ತಿದೆಯಲ್ಲವೇ? ಇದು ದೊಡ್ಡ ಅನ್ಯಾಯವಲ್ಲವೇ?

ಜೀಝಿಯಾ ಧಾರ್ಮೀಕ ತೆರಿಗೆಯಲ್ಲ. ಅದು ಸ್ಪಷ್ಟ ತಪ್ಪು ಧಾರಣೆಯಾಗಿದೆ. ಇದು ಅತ್ಯಂತ ಹೆಚ್ಚು ತಪ್ಪುಕಲ್ಪನೆಗೊಳಗಾದ ವಿಷಯವಾದುದರಿಂದ ಸ್ವಲ್ಪ ವಿವರಿಸಿದರೆ ಉತ್ತಮವೆಂದು ಭಾವಿಸಿದ್ದೇನೆ. ಮುಸ್ಲಿಮರು ತಮ್ಮ ಕೃಷಿ ಉತ್ಪನ್ನದ ವರಮಾನದ ಹತ್ತು ಶೇಕಡಾ ಮತ್ತು ಇತರ ಆರ್ಥಿಕ ವರಮಾನಗಳ ಎರಡೂವರೆ ಶೇಕಡಾವನ್ನು ಸರಕಾರಿ ಬೊಕ್ಕಸಕ್ಕೆ, ಒಪ್ಪಿಸಲೇಬೇಕು. ಇದು ಧಾರ್ಮಿಕ ಆರಾಧನಾ ಕರ್ಮವೂ ಆಗಿರುವುದರಿಂದ ಇತರ ಧರ್ಮೀಯರ ಮೇಲೆ ಹೇರುವುದು ಸಮಂಜಸವಲ್ಲ. ಏಕೆಂದರೆ ಅದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುತ್ತದೆ. ಆದ್ದರಿಂದ ಸಮಾಜದಲ್ಲಿ …

Read More »

ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಕ್ಷೇತ್ರಗಳನ್ನು ನಿರ್ಮಿಸುವ ಅನುಮತಿಯಿಲ್ಲವೆಂದು ಕೇಳಿದ್ದೇನೆ. ಅದಕ್ಕೆ ಕಾರಣವೇನು?

ಗಲ್ಫ್ ದೇಶಗಳಲ್ಲಿ ಹಿಂದೂ ಪ್ರಜೆಗಳು ಇಲ್ಲ. ಅಲ್ಲಿ ವಾಸ್ತವ್ಯವಿರುವ ಹಿಂದುಗಳು ಉದ್ಯೋಗಕ್ಕಾಗಿ ಹೋದ ವಿದೇಶಿಯರು. ಮುಸ್ಲಿಮರೂ ಸೇರಿದಂತೆ ವಿದೇಶಿಗಳಿಗೆ ಅಲ್ಲಿ ಸ್ಥಳ ಖರೀದಿಸುವ, ಆರಾಧನಾಲಯಗಳನ್ನು ನಿರ್ಮಿಸುವ ಅನುಮತಿ ಇಲ್ಲ ವಿದೇಶಿ ಮುಸ್ಲಿಮರಿಗೂ ಮಸೀದಿಯನ್ನು ನಿರ್ಮಿಸುವ ಅನುಮತಿ ಇಲ್ಲ. ವಿದೇಶಿಗಳಿಗೆ ಭಾರತದಲ್ಲೂ ಇತರ ಜಾತ್ಯತೀತ ರಾಷ್ಟ್ರಗಳಲ್ಲೂ ಸ್ವಂತ ಆರಾಧನಾಲಯ ಕಟ್ಟುವ ಅನುಮತಿ ಇಲ್ಲ ಎಂಬುದು ಗಮನಾರ್ಹ. ಹಾಗಿದ್ದರೂ ದೀರ್ಘಕಾಲದಿಂದ ಗಲ್ಫ್ ದೇಶಗಳಲ್ಲಿ ಬದುಕುತ್ತಿರುವ ಸಿಂಧಿ ಹಿಂದುಗಳಿಗೆ ದೇವಾಲಯ ನಿರ್ಮಿಸುವ ವಿಶೇಷ ಪರವಾನಿಗೆಯನ್ನು …

Read More »

ಮುಸ್ಲಿಮ್ ರಾಷ್ಟ್ರದಲ್ಲಿ ದೇವಾಲಯಗಳಿಗೆ ಅನುಮತಿಯಿದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಸ್ಲಾಮೀ ರಾಷ್ಟ್ರಗಳಲ್ಲಿ ಜಾತ್ಯತೀತ ರಾಷ್ಟ್ರಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚಾದ ಧಾರ್ಮಿಕ ಸ್ವಾತಂತ್ರವಿದೆಯೆಂದು ನೀವು ಹೇಳಿದ್ದೀರಿ? ಆದರೆ ವಿಶ್ವದ ಯಾವುದಾದರೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಹಿಂದುಗಳ ದೇವಾಲಯ ನಿರ್ಮಾಣಕ್ಕೆ ಅನುಮತಿಯಿದೆಯೇ? ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನಾಶಗೊಳಿಸಲಾಗುತ್ತಿದೆಯಲ್ಲವೇ?

ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ ತಡೆಯೊಡ್ಡುವುದಿಲ್ಲ, ಮಾತ್ರವಲ್ಲ ಅಗತ್ಯವಿರುವ ಸಹಕಾರವನ್ನು ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಕಟವಾದ ಪತ್ರಿಕಾ ವರದಿಯನ್ನು ನೋಡಬಹುದು: ‘ಬಾಂಗ್ಲಾದೇಶದ ಹಿಂದೂ ಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನಕ್ಕಾಗಿ ಸರಕಾರವು ಸುಮಾರು ಆರು ಲಕ್ಷ ರೂಪಾಯಿಯನ್ನು ಬಿಡುಗಡೆಗೊಳಿಸಿತು. ಈ ತೀರ್ಮಾನ ಕೈಗೊಂಡ ಮಂತ್ರಿ ನೂರುಲ್ ಇಸ್ಲಾಮ್, …

Read More »

ಮುಹಮ್ಮದರು ಹಲವಾರು ಯುದ್ಧವನ್ನು ನಡೆಸಿಲ್ಲವೇ? ಇಸ್ಲಾಮಿನ ಧರ್ಮ ಪ್ರಚಾರದಲ್ಲಿ ಶಸ್ತ್ರಾಸ್ತ್ರ ಹೋರಾಟವು ಪ್ರಮುಖ ಪಾತ್ರ ವಹಿಸಿದೆಯಲ್ಲವೇ ?

ಪ್ರವಾದಿ ಮುಹಮ್ಮದ್(ಸ)ರು ಪ್ರವಾದಿತ್ವದ ಬಳಿಕ ಸುದೀರ್ಘವಾದ 13 ವರ್ಷ ಮಕ್ಕಾದಲ್ಲಿ ಇಸ್ಲಾಮೀ ಪ್ರಚಾರ ನಡೆಸಿದರು. ಆ ಕಾಲದಲ್ಲಿ ವಿರೋಧಿಗಳು ಪ್ರವಾದಿಯವರನ್ನು ಹಾಗೂ ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿದರು. ಅಸಹನೀಯವಾದ ಬೈಗುಳ, ಊರಿನಿಂದ ಬಹಿಷ್ಕಾರ ನಡೆಯಿತು. ಆಗಲೂ ಪ್ರವಾದಿಯವರು ಅವರ ವಿರುದ್ಧ ಪ್ರತೀಕಾರಕ್ಕೆ ಪ್ರಯತ್ನಿಸಲಿಲ್ಲ, ಅನುಯಾಯಿಗಳು ಪ್ರತೀಕಾರವೆಸಗಲು ಅನುಮತಿ ಕೇಳಿದರೂ ಪ್ರವಾದಿವರ್ಯರು ಒಪ್ಪಲಿಲ್ಲ. ‘ಕೈಗಳನ್ನು ತಡೆದಿರಿಸಿ, ನಮಾಝ್ ನಿಷ್ಠೆಯಿಂದ ಪಾಲಿಸಿ, ಝಕಾತ್ ನೀಡಿ’ ಎಂಬುದು ಆಗ ದೇವಾಜ್ಞೆಯಾಗಿತ್ತು. ಮಕ್ಕಾದಲ್ಲಿ ಬದುಕು ಅಸಹನೀಯವಾದಾಗ …

Read More »

ಇಸ್ಲಾಮ್ ಮಹಿಳೆಯನ್ನು ಸಾರ್ವಜನಿಕ ರಂಗಗಳಿಂದ ದೂರವಿರಿಸಿ, ಅಡುಗೆ ಮನೆಯಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆಯಲ್ಲವೇ?

ಪ್ರಕೃತಿ ದತ್ತವಾದ ವಿಶೇಷತೆಗಳನ್ನು ಗಮನಿಸುವಾಗ ಮಹಿಳೆಯ ಮುಖ್ಯ ಕಾರ್ಯಕ್ಷೇತ್ರ ಮನೆಯಾಗಿದೆ. ಆಕೆಯ ಮಹತ್ವದ ಹೊಣೆಗಾರಿಕೆ ತಾಯ್ತನವಾಗಿದೆ. ಆದರೆ ಮಹಿಳೆ ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳವುದನ್ನು ಇಸ್ಲಾಮ್ ನಿಷೇಧಿಸಿಲ್ಲ, ಮಾತ್ರವಲ್ಲ, ಅದಕ್ಕೆ ಅನುಮತಿ ನೀಡಿದೆಯಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪ್ರೋತ್ಸಾಹವನ್ನೂ ನೀಡಿದೆ. ಶಿಕ್ಷಣ ಪಡೆಯುವುದರಲ್ಲಿ ಹಾಗೂ ನೀಡುವುದರಲ್ಲಿ ಪ್ರವಾದಿಯವರ ಕಾಲದಲ್ಲಿಯೇ ಪುರುಷರಂತೆ ಸ್ತ್ರೀಯರು ಕ್ರಿಯಾಶೀಲರಾಗಿದ್ದರು. ಪ್ರವಾದಿಯವರ ಬಳಿ ಬಂದು ವಿಷಯಗಳನ್ನು ಕಲಿತು. ಅದನ್ನು ಇತರರಿಗೆ ಕಲಿಸಕೊಡುವುದರಲ್ಲೂ ಹಿಂದೆ ಇರಲಿಲ್ಲ. ಪ್ರವಾದಿ ವಚನಗಳ ವರದಿಗಾರರಲ್ಲಿ ಮಹಿಳೆಯರ …

Read More »

ಮಹಿಳೆಯರು ಪ್ರವಾದಿಯಾಗಿ ನೇಮಕವಾಗದಿರಲು ಕಾರಣವೇನು?

ದೇವನು ಲಿಂಗ ಪಕ್ಷಪಾತಿಯಲ್ಲದಿದ್ದರೆ ಮಹಿಳಾ ಪ್ರವಾದಿಗಳನ್ನು ಏಕೆ ನಿಯೋಗಿಸಲಿಲ್ಲ? ದೇವದತ್ತ ಜೀವನ ವ್ಯವಸ್ಥೆಯನ್ನು ಸಮಾಜಕ್ಕೆ ಅರ್ಪಿಸಿ, ಕಾರ್ಯಗತಗೊಳಿಸುವುದು ಮತ್ತು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಪ್ರವಾದಿಗಳ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ಕರ್ಮಗಳು, ಸಾಮಾಜಿಕ, ಆರ್ಥಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದಗಳಂತಹ ವಿಷಯಗಳಲ್ಲೂ ಅವರು ಸಮಾಜಕ್ಕೆ ಮಾದರಿಯಾಗಿರಬೇಕು. ತಿಂಗಳ ನಿರ್ದಿಷ್ಟ ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸಲು, ಗರ್ಭಧಾರಣೆ, ಹೆರಿಗೆಯಂತಹ ಸಂದರ್ಭಗಳಲ್ಲಿ ನಾಯಕತ್ವ ವಹಿಸಲು ಮಹಿಳೆಗೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಸಮೂಹಕ್ಕೆ ಸದಾ ಸಮಯವೂ, …

Read More »

ಇಸ್ಲಾಮ್ ಪುರುಷ ಪ್ರಧಾನ ಧರ್ಮವಲ್ಲವೇ? ಕುರ್‌ಆನ್ ನ 4ನೇ ಅಧ್ಯಾಯದ 34ನೇ ಸೂಕ್ತವು ಇದಕ್ಕೆ ಆಧಾರವಲ್ಲವೇ?

ಪವಿತ್ರ ಕುರ್‌ಆನ್ ನ ನಾಲ್ಕನೇ ಅಧ್ಯಾಯದ 34ನೇ ವಾಕ್ಯವು ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ ದೇವಾದೇಶವಾಗಿದೆ. ಅದು ಹೀಗಿದೆ: ‘ಪುರುಷರು ಸ್ತ್ರೀಯರ ಮೇಲೆ ‘ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ ಆಗಿದೆ.’ ಇಲ್ಲಿ ಪುರುಷರಿಗೆ ಕುರ್‌ಆನ್ ‘ಕವ್ವಾಮ್’ ಎಂಬ ಪದವನ್ನು ಪ್ರಯೋಗಿಸಿದೆ. ‘ಒಂದು ಸಂಸ್ಥೆ ಅಥವಾ ವ್ಯವಸ್ಥೆಯ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ಅದರ ಮೇಲ್ನೋಟ …

Read More »

ಸಾಕ್ಷಿಗೆ ಒಬ್ಬಪುರುಷನ ಬದಲು ಇಬ್ಬರು ಸ್ತ್ರೀಯರಿರಬೇಕೆಂಬುದು ಇಸ್ಲಾಮಿನ ನಿಯಮ, ಇದು ಸ್ತ್ರೀಯೊಂದಿಗಿನ ಅನ್ಯಾಯ ಹಾಗೂ ಪುರುಷ ಪ್ರಧಾನವಾದ ದೃಷ್ಟಿಕೋನವಲ್ಲವೇ?

ಓರ್ವ ಪುರುಷನ ಬದಲಿಗೆ ಇಬ್ಬರು ಸ್ತ್ರೀಯರು ಸಾಕ್ಷಿಗಳಾಗಬೇಕೆಂಬುದು ಇಸ್ಲಾಮಿನ ಸಾಮಾನ್ಯ ನಿಯಮವಲ್ಲ. ಇದು ಆರ್ಥಿಕ ವ್ಯವಹಾರಗಳಿಗೆ ಮಾತ್ರ ಅನ್ವಯವಾಗುತ್ತದೆ. ಮಹಿಳೆಯರು ಸಾಮಾನ್ಯವಾಗಿ ಆರ್ಥಿಕ ವ್ಯವಹಾರ ಹಾಗೂ ಕೊಡುಕೊಳ್ಳುವಿಕೆಯಂತಹ ಕೆಲಸಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದಿರುವುದರಿಂದ, ಸಾಕ್ಷ್ಯದಲ್ಲಿ ಏನಾದರೂ ಗೊಂದಲ ಉಂಟಾಗದಿರಲು ಹಾಗೂ ಸೂಕ್ಷ್ಮತೆಯನ್ನು ಪಾಲಿಸಲು ನಿಶ್ಚಯಿಸಲಾದ ನಿಬಂಧನೆಯಾಗಿದೆ. ಸ್ತ್ರೀಯ ಮೇಲೆ ಸದಾಚಾರ ಉಲ್ಲಂಘನೆಯ ಆರೋಪ ಹೊರಿಸಲ್ಪಟ್ಟರೆ ಆಗ ಮಾಡಬೇಕಾದ ವಿಧಿ ನಿಯಮಗಳಂತೆ, ಸಾಕ್ಷ್ಯ ಹೇಳಲು ಮತ್ತು ಆಣೆ ಹಾಕಲು ಸ್ತ್ರೀ-ಪುರುಷರ ನಡುವೆ ವ್ಯತ್ಯಾಸವಿಲ್ಲವೆಂದು …

Read More »