Home / ಪ್ರಶ್ನೋತ್ತರ (page 11)

ಪ್ರಶ್ನೋತ್ತರ

ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೇ?

ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕರೆಂಬುದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಒಂದು ತಪ್ಪುಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ ಏಸುಕ್ರಿಸ್ತ ಎನ್ನಲಾಗುವಂತೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧರಾಗಿರುವಂತೆ, ಝರತುಷ್ಟ್ರ ಧರ್ಮದ ಸ್ಥಾಪಕ ಝರತುಷ್ಟ್ರರಾಗಿರುವಂತೆ, ಇಸ್ಲಾಮ್ ಧರ್ಮವು ಮುಹಮ್ಮದರಿಂದ(ಸ) ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್‍ರವರು(ಸ) ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಹೊಸ ಪಂಥವಾಗಲೀ ಅಲ್ಲ. ಅಂತೆಯೇ ಯಹೂದಿ ಜನಾಂಗದ …

Read More »

786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?

ಕೆಲವರು ‘786’ ಎಂಬ ಸಂಖ್ಯೆಯನ್ನು ಮತ್ತು ಬಾಲಚಂದ್ರ ಮತ್ತು ನಕ್ಷತ್ರವನ್ನೊಳಗೊಂಡ ಆಕೃತಿಯನ್ನು ಅಲ್ಲಾಹನ ಸಂಕೇತ ಎಂದು ಭಾವಿಸುವುದಿದೆ. ಆದರೆ ಅಲ್ಲಾಹನಿಗೆ ಅಥವಾ ಇಸ್ಲಾಮ್ ಧರ್ಮಕ್ಕೆ ಅಂತಹ ಯಾವ ಸಂಕೇತವೂ ಇಲ್ಲ. ಪವಿತ್ರ ಕುರ್‍ಆನಿನ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಬರುವ “ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ” ಎಂಬರ್ಥದ ವಾಕ್ಯವನ್ನು ಸಂಕೇತಿಸಲು ಕೆಲವು ಮುಸ್ಲಿಮರು 786 ಎಂಬ ಸಂಖ್ಯೆಯನ್ನು ಬಳಸುತ್ತಾರೆ. ‘ಅಬ್‍ಜದ್’ಎಂಬ ಅರಬೀ ಸಂಖ್ಯಾಶಾಸ್ತ್ರದ ಗಣನೆಯ ಪ್ರಕಾರ ಪ್ರಸ್ತುತ ವಾಕ್ಯದ …

Read More »

ಗೋರಿ ಪೂಜೆ’ ಮತ್ತು ಇಸ್ಲಾಮ್?

‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, ಪರಲೋಕ ಜೀವನದ ಬಗ್ಗೆ ಪ್ರಜ್ಞಾವಂತನಾಗುವುದು ಮತ್ತು ತನ್ನ ಮೃತ ಬಂಧುಗಳ ಮೋಕ್ಷಕ್ಕಾಗಿ ಪ್ರಾರ್ಥಿಸುವುದು ಸಮಾಧಿ ಸಂದರ್ಶನದ ಉದ್ದೇಶ. ಇದು ಪ್ರವಾದಿ ಚರ್ಯೆಯಾಗಿದ್ದು ಪುಣ್ಯ ಕಾರ್ಯವಾಗಿದೆ. ಆದರೆ ಗೋರಿಗಳನ್ನು ಎತ್ತರಿಸಿ ಕಟ್ಟುವ, ಅವುಗಳನ್ನು ಅಲಂಕರಿಸುವ, ಅವುಗಳ ಮೇಲೆ ಬಟ್ಟೆ ಹೊದಿಸುವ, ದೀಪ ಬೆಳಗಿಸುವ ಹಾಗೂ ಅಗರಬತ್ತಿಗಳನ್ನು ಹೊತ್ತಿಸುವ ಸಂಪ್ರದಾಯಗಳು ಪ್ರವಾದಿಚರ್ಯೆಗೆ ವಿರುದ್ಧವಾಗಿವೆ. …

Read More »

ಇಸ್ಲಾಮಿನ ಮೂಲವಚನ ಯಾವುದು? ವಿವರಿಸಿ?

‘ಲಾ ಇಲಾಹ ಇಲ್ಲಲ್ಲಾಹು, ಮುಹಮ್ಮದರ್ರಸೂಲುಲ್ಲಾಹ್’ ಅರ್ಥಾತ್ “ಅಲ್ಲಾಹನ ಹೊರತು ದಾಸ್ಯ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದು ಇಸ್ಲಾಮಿನ ಮೂಲ ವಚನ. ಈ ಪವಿತ್ರ ವಚನವೇ ಪವಿತ್ರ ಕುರ್‍ಆನಿನ ಶಿಕ್ಷಣಗಳ ತಿರುಳು. ಮನುಷ್ಯನ ಎಲ್ಲ ರೀತಿಯ ಆರಾಧನೆ, ದಾಸ್ಯ ಮತ್ತು ಅನುಸರಣೆಗೆ ಅರ್ಹನಾದವನು ಅಲ್ಲಾಹನು ಮಾತ್ರ. ಆತನ ದೇವತ್ವದಲ್ಲಿ ಯಾರೂ ಭಾಗೀದಾರರಿಲ್ಲ. ಅವನು ಏಕೈಕನು, ಚಿರಂತನನು, ನಿರಾಕಾರನು, ಸ್ವಯಂ ಜೀವಂತನು, ಅನಾದಿ, ಅನಂತನು, ಎಲ್ಲ …

Read More »

ಅಲ್ಲಾಹ್ ‘ಮುಸ್ಲಿಮರ ದೇವರೇ?

ನಿಜವಾಗಿ ‘ಅಲ್ಲಾಹ್ ‘ ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀ ಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಎಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ‘ ಅಲ್ಲಾಹ್ ‘ ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ. ” ಸರ್ವಸ್ತುತಿಯು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.”(1 . 1 ) ಪವಿತ್ರ ಕುರ್ಆನಿನ …

Read More »

ಏಕದೇವ ವಿಶ್ವಾಸದ ಇಸ್ಲಾಮಿ ಕಲ್ಪನೆ ?

  ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮುಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧ ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ. ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ಅವನೇ ಸಮಸ್ತ ವಿಶ್ವವನ್ನೂ ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೆ ಸೇರಿದೆ. …

Read More »

ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದೇಕೆ?

ಸಾಲ ಕೊಟ್ಟವನು ಸಾಲ ಪಡೆದವನಿಂದ ಒಂದು ನಿಶ್ಚಿತ ದರದಲ್ಲಿ ವಸೂಲು ಮಾಡುವ ಹೆಚ್ಚಿನ ಹಣಕ್ಕೆ ಬಡ್ಡಿ ಎನ್ನುತ್ತಾರೆ. ಇಸ್ಲಾಮ್ ಬಡ್ಡಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪ್ರವಾದಿ ಮುಹಮ್ಮದ್‍ರವರ(ಸ) ಕಾಲದಲ್ಲಿ ಬಡ್ಡಿಯ ವ್ಯವಹಾರಗಳು ಈ ಕೆಳಗಿನ ರೂಪದಲ್ಲಿ ಜಾರಿಯಲ್ಲಿದ್ದವು. ಅರ್ಥ ವ್ಯಾಪ್ತಿ 1. ಒಂದು ವಸ್ತುವನ್ನು ಒಬ್ಬನು ಇನ್ನೊಬ್ಬನಿಗೆ ಸಾಲ ಕೊಡುತ್ತಿದ್ದ. ಸಾಲ ಮರುಪಾವತಿಗೆ ಒಂದು ಕಾಲಾವಧಿಯನ್ನು ನಿರ್ಣಯಿಸಲಾಗುತ್ತಿತ್ತು. ಆ ಕಾಲಾವಧಿಯಲ್ಲಿ ಸಾಲ ಮರುಪಾವತಿಯಾಗದಿದ್ದಾಗ ಅವನಿಗೆ ಮತ್ತಷ್ಟು ಅವಧಿಯನ್ನು ಕೊಟ್ಟು ಆ ವಸ್ತುವಿನ …

Read More »