Home / ಪ್ರಶ್ನೋತ್ತರ (page 7)

ಪ್ರಶ್ನೋತ್ತರ

ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೇ?

ಪರಲೋಕದಲ್ಲಿ ಪುರುಷರಿಗೆ ಸ್ವರ್ಗ ಕನ್ಯೆಯರು ಜೋಡಿಯಾಗಿ ಲಭಿಸುವರೆಂದು ಕುರ್‌ಆನ್ ಹೇಳುತ್ತದೆ. ಆದರೆ ಸ್ತ್ರೀಯರಿಗೆ ಇಂತಹ ಜೋಡಿಗಳನ್ನು ನೀಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ, ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೆ? ದೇವ ನಿಯಮದಂತೆ ಭೂಮಿಯಲ್ಲಿ ಬದುಕಿದವರಿಗೆ ವಾಗ್ದಾನ ನೀಡಲಾದ ಸ್ಥಳವೇ ಸ್ವರ್ಗ. ಈ ವಿಷಯದಲ್ಲಿ ಸ್ತ್ರೀ ಪುರುಷರ ನಡುವೆ ಇಸ್ಲಾಮ್‌ನಲ್ಲಿ ವ್ಯತ್ಯಾಸವಿಲ್ಲ, ಕುರ್‌ಆನ್ ಹೇಳುತ್ತದೆ: “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿಂದ …

Read More »

ಪರಲೋಕದಲ್ಲೂ ಮೀಸಲಾತಿಯೇ?

ಇಸ್ಲಾಮ್ ಮುಸ್ಲಿಮರಿಗೆ ಮಾತ್ರ ಸ್ವರ್ಗಪ್ರವೇಶ ಎಂದು ಹೇಳುತ್ತದೆ. ಇದು ಬಹಳ ಸಂಕುಚಿತ ದೃಷ್ಟಿಕೋನವಲ್ಲವೆ? ಪರಲೋಕದಲ್ಲೂ ಮೀಸಲಾತಿಯೇ? ಓರ್ವ ವ್ಯಕ್ತಿಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕೆಂಬ ಬಯಕೆ ಇರುವುದಿಲ್ಲ, ಆದ್ದರಿಂದ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ, ಏನೇನೆಲ್ಲಾ ಬರೆದಿಟ್ಟರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ, ಅಲ್ಲದೆ ಅವನಿಗೆ ತಾನು ಉತ್ತೀರ್ಣರಾಗುತ್ತೇನೆಂಬ ನಿರೀಕ್ಷೆಯೂ ಇರುವುದಿಲ್ಲ. ಅದೇ ರೀತಿ ಓರ್ವ ರೋಗಿಗೆ ರೋಗ ಗುಣವಾಗಬೇಕಾಗಿಲ್ಲ. ರೋಗ ಶಮನಕ್ಕೆ ನೀಡಿದ ಔಷಧಿಯನ್ನು ಸೇವಿಸುವುದಿಲ್ಲ, ಆದ್ದರಿಂದ ಆತನ ರೋಗ ಗುಣವಾಗಬೇಕೆಂದು …

Read More »

ಪರಲೋಕವು ಯಥಾರ್ಥವೇ?

ಮನುಷ್ಯ ಮರಣ ಹೊಂದಿದರೆ ಕೆಲವರು ಮಣ್ಣಿನಲ್ಲಿ ದಫನ ಮಾಡುತ್ತಾರೆ. ಹೆಚ್ಚಿನ ಕಾಲಾವಕಾಶವಿಲ್ಲದೆ ಮೃತ ಶರೀರ ಮಣ್ಣಿನೊಂದಿಗೆ ಲೀನವಾಗುತ್ತದೆ. ಇನ್ನು ಕೆಲವರು ಚಿತೆಯಲ್ಲಿ ಉರಿಸುತ್ತಾರೆ. ಅದರೊಂದಿಗೆ ದೇಹ ಬೂದಿಯಾಗುತ್ತದೆ. ನೀರು ಪಾಲಾದ ಜಡದೇಹಗಳನ್ನು ಮೀನುಗಳು ತಿಂದು ಮುಗಿಸುತ್ತವೆ. ಹೀಗೆ ಸಂಪೂರ್ಣ ನಾಶವಾದ ವ್ಯಕ್ತಿಗಳು ಪುನಃ ಎದ್ದೇಳಿಸಲ್ಪಡುತ್ತಾರೆ ಎಂಬುದು ಇಸ್ಲಾಮಿನ ವಾದ. ಇದರಲ್ಲಿ ವಿಶ್ವಾಸವಿರಿಸಬಹುದೆ? ಇದನ್ನು ಮನುಷ್ಯ ಬುದ್ದಿ ಒಪ್ಪುತ್ತದೆಯೇ? ಈ ಎಲ್ಲ ಕಾಲಗಳಲ್ಲೂ ಬಹು ಸಂಖ್ಯಾತ ಜನರು ದೇವವಿಶ್ವಾಸಿಗಳಾಗಿದ್ದರು. ಇತಿಹಾಸದ ಪುಟಗಳನ್ನು …

Read More »

ಪರಲೋಕಕ್ಕೆ ಆಧಾರವಿದೆಯೇ?

ಮರಣದ ಬಳಿಕ ನಮ್ಮನ್ನು ಪುನಃ ಎಬ್ಬಿಸಲಾಗುವಂತಹ ಪರಲೋಕವಿದೆಯೆಂಬುದಕ್ಕೆ ಆಧಾರವಿದೆಯೇ? ಪರಲೋಕವಿದೆಯೆಂಬ ವಿಶ್ವಾಸ ಸರಿಯೇ? ಜ್ಞಾನವನ್ನು ಅರಿಯಲು ನಮಗೆ ಐದು ಇಂದ್ರಿಯಗಳಿವೆ. ಇಲ್ಲಿ ಲೌಕಿಕ ವಿದ್ಯೆಗೆ ಹಲವು ವಿಧಗಳಿವೆ. ಅವುಗಳ ಪ್ರತಿಯೊಂದು ಬಾಗಿಲು ತೆರೆಯಲು ಬೇರೆ ಬೇರೆ ಕೀಲಿಕೈ ಬೇಕು. ಒಂದೊಂದಕ್ಕೂ ವಿಶೇಷವಾದ ಮಾನದಂಡಗಳಿವೆ. ಗಣಿತ ಶಾಸ್ತ್ರವನ್ನು ಕಲಿಯಲು ಉಪಯೋಗಿಸುವ ವಿಧಾನದಿಂದ ಜೀವಶಾಸ್ತ್ರ ಕಲಿಯಲು ಸಾಧ್ಯವಿಲ್ಲ, ಗಣಿತದ ವಿವಿಧ ಮಗ್ಗಲುಗಳಿಗೆ ವಿವಿಧ ವಿಧಾನಗಳು ಬೇಕು. ವೃತ್ತಕ್ಕೆ 360 ಡಿಗ್ರಿ, ತ್ರಿಭುಜಕ್ಕೆ 180 …

Read More »

ಅದ್ವೈತವನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲವೇಕೆ?

ಅದ್ವೈತ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲವೆಂದಾದರೆ ಏಕೆ? ಶ್ರೀ ಶಂಕರಾಚಾರ್ಯರು ಒಂದು ಸಿದ್ಧಾಂತದ ರೂಪದಲ್ಲಿ ಅದ್ವೈತವನ್ನು ಪರಿಚಯಸಿದವರು. ಅವರು ಏಳನೇ ಶತಮಾನದ ಅಂತ್ಯ ಹಾಗೂ 8ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದರೆಂದು ಸಾಮಾನ್ಯ ನಂಬಿಕೆ. 8ನೇ ಶತಮಾನದ ಅಂತ್ಯದಲ್ಲೆಂದೂ, ಒಂಬತ್ತನೇ ಶತಮಾನದ ಆದಿಯಲ್ಲೆಂದೂ ಬದುಕಿದ್ದರೆಂದು ಹೇಳುವವರೂ ಇದ್ದಾರೆ. ಅವರ ಜನ್ಮಸ್ಥಳ ಕೇರಳದ ಕಾಲದಿಯಲ್ಲೆಂದು ಊಹಿಸಲಾಗಿದೆ. ಶಂಕರಾಚಾರ್ಯರು ತನ್ನ ಗುರು ಗೋವಿಂದ ಎಂಬವರ ಆಚಾರ್ಯರಾದ ಗೌಡಪಾದರಿಂದ ಅದ್ವೈತ ಸಿದ್ಧಾಂತವನ್ನು ಸ್ವೀಕರಿಸಿದರು. ಆದರೂ ಬಾದರಾಯಣನ …

Read More »

ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಉತ್ತರ: ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ …

Read More »

ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ?

ಪ್ರಶ್ನೆ: ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ? ಉತ್ತರ: ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್‍ಆನ್ ಹಿಡಿದುಕೊಂಡು ಒಂದೋ ಕುರ್‍ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು …

Read More »

ಇಸ್ಲಾಮಿನಲ್ಲಿ ಪೌರೋಹಿತ್ಯವಿದೆಯೇ?

ಉತ್ತರ: ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ. ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಯಾವುದೇ ವಿಶಿಷ್ಟ ವರ್ಗದ ಅಗತ್ಯವಿಲ್ಲ. ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಧರ್ಮದ ಜ್ಞಾನ, ಕುರ್‍ಆನಿನ ವಿದ್ಯೆ, ದೇವಭಕ್ತಿ ಮತ್ತು ಧರ್ಮನಿಷ್ಠೆ ಇವುಗಳೇ ಇಮಾಮತ್‍ಗೆ(ನೇತೃತ್ವ) ಬೇಕಾದ ಗುಣಗಳು. ಈ ಗುಣಗಳಿರುವ ಯಾವ ವ್ಯಕ್ತಿಯೂ ಇಮಾಮತ್(ನೇತೃತ್ವ) ಮಾಡಬಹುದು. ಅವನ ಕುಲಗೋತ್ರಗಳಿಗಾಗಲೀ ವರ್ಣ, ವರ್ಗಗಳಿಗಾಗಲೀ ಯಾವುದೇ ಮಹತ್ವವಿಲ್ಲ. ಇಮಾಮತ್‍ಗೆ ನೇಮಿಸಲ್ಪಟ್ಟ ವ್ಯಕ್ತಿ ಕಾರಣಾಂತರದಿಂದ ಯಾವುದಾದರೂ ನಮಾಝ್‍ಗೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರ ಸ್ಥಾನದಲ್ಲಿ ನಮಾಝ್‍ಗೆ ಸೇರಿದವರ ಪೈಕಿ ಕುರ್‍ಆನ್ …

Read More »

ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ? ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ ಹೊರತಳ್ಳಿ …

Read More »

ಜೊಲ್ಲುರಸ ನುಂಗಿದರೆ ಉಪವಾಸ ಮುರಿಯುವುದೇ?

ಪ್ರಶ್ನೆ: ಜೊಲ್ಲುರಸ ನುಂಗಿದರೆ ಉಪವಾಸ ಮುರಿಯುವುದೇ? ಉತ್ತರ: ಶರೀಅತ್‌ನ ವಿಧಿಗಳು ಜನರಿಗೆ ಸಂಕಷ್ಟವನ್ನುಂಟು ಮಾಡಲು ಬಯಸಿಲ್ಲ. ಬದಲಾಗಿ ಅದನ್ನು ಸುಲಭಗೊಳಿಸುವುದೂ, ಇಕ್ಕಟ್ಟನ್ನು ಇಲ್ಲವಾಗಿಸುವುದೂ ಅದರ ಮೌಲ್ಯಗಳಲ್ಲಿ ಸೇರಿದೆ. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನು ನಿಮಗೆ ಸೌಲಭ್ಯ ವನ್ನು ನೀಡಬಯಸುತ್ತಾನೆ. ಸಂಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ.” (ಅಲ್‌ಬಕರ: 185) ಇನ್ನೊಂದೆಡೆ ಹೇಳಲಾಗಿದೆ: ಅಲ್ಲಾಹನು ನಿಮ್ಮ ಮೇಲಿನ ಬಾಧ್ಯತೆಗಳನ್ನು ಹಗುರಗೊಳಿಸಬೇಕೆಂದು ಇಚ್ಛಿಸುತ್ತಾನೆ. ಏಕೆಂದರೆ ಮನುಷ್ಯನನ್ನು ದುರ್ಬಲನಾಗಿ  ಸೃಷ್ಟಿಸಲಾಗಿದೆ. (ಅನ್ನಿಸಾ: 26-28) ಇನ್ನೊಂದೆಡೆ ಹೀಗೆ ಹೇಳಲಾಗಿದೆ, “ಧರ್ಮದಲ್ಲಿ …

Read More »