Home / ಲೇಖನಗಳು / ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು

ನನ್ನ ಪ್ರವಾದಿ(ಸ ) ಹೀಗೆ ಹೇಳಿದ್ದರು

1. ಹೆತ್ತವರಿಗೆ ಛೆ ಎಂದೂ ಹೇಳಬಾರದು. ಹೆತ್ತವರ ದುಃಖಕ್ಕೆ ಕಾರಣವಾಗುವ ಮಕ್ಕಳು ಸ್ವರ್ಗ ಪ್ರವೇಶಿಸುವುದಿಲ್ಲ.

2. ಯಾವ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಲಾಲಿಸಿ ಪೋಷಿಸಿ ಸದಾಚಾರದಿಂದ ಬೆಳೆಸುತ್ತಾರೋ ಅವರಿಗೆ ಸ್ವರ್ಗವಿದೆ.

3. ಪತ್ನಿ ಗಾಜಿನಂತೆ. ಆಕೆಯೊಂದಿಗೆ ಒರಟಾಗಿ ನಡೆದುಕೊಳ್ಳಬೇಡಿ.

4. ಅನಾಥ ಮಗುವಿನ ಮುಂದೆ ನಿಮ್ಮ ಮಕ್ಕಳನ್ನ ಮುದ್ದಿಸಬೇಡಿ.

5. ಮಧ್ಯಪಾನ ಸಹಿತ ಎಲ್ಲ ಅಮಲು ಪದಾರ್ಥಗಳೂ ನಿಷಿದ್ಧವಾಗಿದೆ.

6. ಬಡ್ಡಿ ವ್ಯವಹಾರ ಮಾಡಬೇಡಿ. ಅದಕ್ಕೆ ಸಾಕ್ಷಿ ನಿಲ್ಲಬೇಡಿ. ಅದನ್ನು ಬರೆದಿಡಲು ಸಹಕರಿಸಬೇಡಿ.

7. ನೀವು ಬೆಳೆದ ಬೆಳೆಯಿಂದ ಪ್ರಾಣಿಗಳು ತಿಂದರೆ ಆತಂಕ ಪಡಬೇಡಿ. ನಿಮಗೆ ದಾನದ ಪ್ರತಿಫಲವಿದೆ.

8. ಏನೇ ಇದ್ದರೂ ನೆರೆಯವರೊಂದಿಗೆ ಹಂಚಿ ತಿನ್ನಿ.

9. ಧರ್ಮದಲ್ಲಿ ಬಲವಂತವಿಲ್ಲ.

10. ಎಲ್ಲರೂ ಆದಮ್ ಮತ್ತು ಹವ್ವಾರ ಮಕ್ಕಳು. ಆದ್ದರಿಂದ ಎಲ್ಲ ಮಾನವರೂ ಪರಸ್ಪರ ಸಹೋದರರು ಮತ್ತು ಸಮಾನರು.

11. ಯಾರು ಮೌಲ್ಯಕ್ಕೆ ಅತಿ ಹೆಚ್ಚು ನಿಷ್ಠರೋ ಅವರೇ ದೇವನಿಗೆ ಅತೀ ಹೆಚ್ಚು ಪ್ರಿಯರು.

12. ಶಿಕ್ಷಣ ಕಲಿಯುವುದಕ್ಕಾಗಿ ಚೀನಾಕ್ಕೆ ಹೋಗಬೇಕಾಗಿ ಬಂದರೂ ಹಿಂಜರಿಯಬೇಡಿ.

13. ವಧು ಧನವನ್ನು ಪಾವತಿಸಿಯೇ ವಿವಾಹವಾಗಿ.

14. ವಿವಾಹ ವಿಚ್ಛೇದನಕ್ಕೆ ಗಂಡು ಕನಿಷ್ಠ ಮೂರು ತಿಂಗಳಾದರೂ ಕಾಯಬೇಕು. ಆದರೆ ಹೆಣ್ಣು ಖುಲಾ ಅಥವಾ ಫಸ್ಕ್ ಮೂಲಕ ಸುಲಭವಾಗಿ ವಿಚ್ಛೇದನ ಪಡೆದುಕೊಳ್ಳಬಹುದು.

15. ಹೆಣ್ಣು ಶಿಶುವನ್ನು ಹತ್ಯೆ ಮಾಡಬೇಡಿ, ಹಾಗೇನಾದರೂ ಮಾಡಿದರೆ ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಆ ಮಗುವಿನಲ್ಲೇ ನಾಳೆ ದೇವನು ಕೇಳುವನು ಮತ್ತು ಅಪರಾಧಿ ಹೆತ್ತವರನ್ನು ಶಿಕ್ಷಿಸುವನು.

16. ಅಳತೆ ತೂಕದಲ್ಲಿ ಮೋಸ ಮಾಡಬೇಡಿ.

17. ಶ್ರೀಮಂತರು ತಮ್ಮ ಸಂಪತ್ತಿನಿಂದ ಕಡ್ಡಾಯವಾಗಿ ಬಡವರ ಅಭಿವೃದ್ಧಿಗಾಗಿ ನಿರ್ದಿಷ್ಟ ಮೊತ್ತವನ್ನು ದಾನ ಮಾಡಬೇಕು. ಮಾಡದಿರುವುದು ಶಿಕ್ಷಾರ್ಹ ಅಪರಾಧ.

18. ನಮಾಜ್ ಗಿಂತ ಮೊದಲು ಅಂಗ ಸ್ನಾನ ಮಾಡಿ ಶುಚಿಗೊಳ್ಳುವುದು ಕಡ್ಡಾಯ.

19. ನ್ಯಾಯ ನಿಮ್ಮ ಹೆತ್ತವರ ವಿರುದ್ಧವಿದ್ದರೂ ನೀವು ನ್ಯಾಯದ ಪರವೇ ನಿಲ್ಲಬೇಕು. ಹೆತ್ತವರ ಪರ ಅಲ್ಲ.

20. ಕೋಮುವಾದಿ ನನ್ನವನಲ್ಲ.

21. ಇತರರ ಆರಾಧ್ಯರನ್ನು ನಿಂದಿಸಬೇಡಿ.

22. ಹೊಟ್ಟೆಯನ್ನು ಮೂರು ಭಾಗ ಮಾಡಿ. ಒಂದು ಭಾಗದಲ್ಲಿ ಆಹಾರ, ಇನ್ನೊಂದು ಭಾಗದಲ್ಲಿ ನೀರು ಮತ್ತು ಇನ್ನೊಂದು ಭಾಗವನ್ನು ಖಾಲಿ ಇಡಿ.

23. ಸುಳ್ಳು ಹೇಳಲೇ ಬೇಡಿ, ಅದು ಕಾಪಟ್ಯತನದ ಲಕ್ಷಣ.

24. ಆಸ್ತಿಯಲ್ಲಿ ಗಂಡಿನಂತೆ ಹೆಣ್ಣಿಗೂ ಪಾಲಿದೆ.

25. ಬೇಡುವ ಕೈಗಿಂತ ಕೊಡುವ ಕೈ ಶ್ರೇಷ್ಠ.

26. ಬೆವರು ಆರುವುದಕ್ಕಿಂತ ಮೊದಲು ಕಾರ್ಮಿಕನ ವೇತನವನ್ನು ಕೊಟ್ಟುಬಿಡಿ.

27. ಮರ್ದಿತರು ಮತ್ತು ದೇವನ ನಡುವೆ ಪರದೆ ಇರುವುದಿಲ್ಲ.

28. ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಅಸೂಯೆಗಾರರನ್ನೇ ನುಂಗುತ್ತದೆ.

29. ನೀವು ಸಮುದ್ರದಲ್ಲೇ ಅಂಗ ಸ್ನಾನ ಮಾಡುವುದಿದ್ದರೂ ನೀರು ಪೋಲು ಮಾಡಬೇಡಿ.

30. ನಾಳೆ ಪ್ರಳಯ ಸಂಭವಿಸುವುದು ಖಾತರಿ ಇದ್ದರೂ ಇವತ್ತು ಸಸಿಯನ್ನು ನೆಡಿ.

31. ನಿಮ್ಮ ಜೊತೆ ಗೋರಿಗೆ ನಿಮ್ಮ ಸಂಪತ್ತಾಗಲಿ ಪತ್ನಿ ಮಕ್ಕಳಾಗಲಿ ಸಂಬಂಧಿಕರಾಗಲಿ ಯಾರೂ ಬರುವುದಿಲ್ಲ. ನೀವು ಮಾಡಿದ ಒಳಿತುಗಳಷ್ಟೇ ನಿಮ್ಮ ಜೊತೆ ಇರುತ್ತದೆ.

ಸಲ್ಲಲ್ಲಾಹು ಅಲೈಹಿ ವ ಸಲ್ಲಮ್

ಏ ಕೆ ಕುಕ್ಕಿಲ

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *