“ಹೆಣ್ಣು ಮಕ್ಕಳ ಮೂಲಕ ಪರೀಕ್ಷೆಗೊಳಗಾಗಿ, ತರುವಾಯ ಅವರೊಂದಿಗೆ ಸದ್ವರ್ತನೆ ತೋರುವ ವ್ಯಕ್ತಿಯ ಪಾಲಿಗೆ ಆತನ ಹೆಣ್ಣು ಮಕ್ಕಳು ಆತನನ್ನು ನರಕದಿಂದ ರಕ್ಷಿಸುವ ಗುರಾಣಿಗಳಾಗುವರು.” (ಹ. ಆಯಿಶಾ(ರ)-ಮುಸ್ಲಿಮ್)
Read More »ಸೇವಕರು
“ಸೇವಕರು, ಅಲ್ಲಾಹನು ನಿಮ್ಮ ಅಧೀನಗೊಳಿಸಿರುವ ನಿಮ್ಮ ಸಹೋದರರಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಧೀನವಿರುವ ಸಹೋದರನಿಗೆ ತಾನು ತಿನ್ನುವುದನ್ನೇ ತಿನ್ನಿಸಬೇಕು. ತಾನು ತೊಡುವುದನ್ನೇ ತೊಡಿಸಬೇಕು. ಮತ್ತು (ನೆನಪಿರಲಿ) ಆತನಿಗೆ ಶಕ್ತಿ ಮೀರಿದ ಕೆಲಸವನ್ನು ಕೊಡಬಾರದು; ಒಂದು ವೇಳೆ ಕೊಟ್ಟರೆ ನೀವು ಆತನಿಗೆ ಸಹಾಯ ಮಾಡಲೇಬೇಕು.” (ಅಬೂದರ್ರ್(ರ)-ಬುಖಾರಿ, ಮುಸ್ಲಿಮ್) (ಇಬ್ನು ಉಮರ್(ರ)-ಬುಖಾರಿ)
Read More »ಸ್ವರ್ಗದ ಗಂಧ
“ಸಂರಕ್ಷಣೆಯ ವಾಗ್ದಾನ ನೀಡಲಾಗಿರುವ ಒರ್ವ ಮುಸ್ಲಿಮೇತರನನ್ನು ಕೊಂದವನು, ಸ್ವರ್ಗದ ಗಂಧವನ್ನೂ ಅನುಭವಿಸಲಾರನು. ವಸುತಃ ಅದು 40 ವರ್ಷಗಳಷ್ಟು ದೂರ ತಲುಪುತ್ತದೆ.” (ಇಬ್ನು ಉಮರ್(ರ)-ಬುಖಾರಿ)
Read More »ಅಕ್ರಮ
“ಒಬ್ಬನು ಯಾರದಾದರೂ ಗೇಣಗಲದಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡರೆ, ಕಿಯಾಮತ್‌ನಂದು ಏಳು ಭೂಮಿಗಳ ಉರುಳನ್ನು ಅವನ ಕೊರಳಿಗೆ ಹಾಕಲಾಗುವುದು.(ಸಈದ್ ಬಿನ್ ಝೈದ್(ರ)-ಬುಖಾರಿ,ಮುಸ್ಲಿಮ್)
Read More »ಸಹೋದರರು
ಪ್ರವಾದಿವರ್ಯರು(ಸ)ರು, “ಎಲ್ಲ ಮಾನವರೂ ಪರಸ್ಪರ ಸಹೋದರರೆಂದು ಸಾಕ್ಷ್ಯ ನುಡಿದಿದ್ದಾರೆ, ಕೇವಲ ಮುಸ್ಲಿಮರಲ್ಲ.” (ಅಬೂ ದಾವೂದ್)
Read More »ಬಡ್ಡಿ
ಪ್ರವಾದಿ(ಸ)ರು ಬಡ್ಡಿ ತಿನ್ನುವವನನ್ನೂ, ಬಡ್ಡಿ ತಿನ್ನಿಸುವವನನ್ನೂ, ಬಡ್ಡಿಗೆ ಸಾಕ್ಷಿ ನಿಲ್ಲುವ ಇಬ್ಬರನ್ನೂ ಮತ್ತು ಬಡ್ಡಿಯ ದಾಖಲೆ ಪತ್ರ ಬರೆಯುವವನನ್ನೂ ಶಪಿಸಿದ್ದಾರೆ. (ಅಬ್ದುಲ್ಲಾ ಬಿನ್ ಮಸ್‌ವೂದ್(ರ)- ಬುಖಾರಿ, ಮುಸ್ಲಿಮ್)
Read More »ಕೋಮು ಪಕ್ಷಪಾತ
“ಕೋಮು ಪಕ್ಷಪಾತದ ಕಡೆಗೆ ಕರೆ ನೀಡುವವನು ನಮ್ಮವನಲ್ಲ. ಕೋಮು ಭಾವನೆಯೊಂದಿಗೆ ಯುದ್ಧ ಮಾಡುವವನೂ ನಮ್ಮವನಲ್ಲ. ಕೋಮು ಪಕ್ಷಪಾತದೊಂದಿಗೆ ಸಾಯುವವನೂ ನಮ್ಮವನಲ್ಲ.” (ಜುಬೈರ್ ಬಿನ್ ಮುತ್‌ಇಮ್(ರ)-ಅಬೂ ದಾವೂದ್) ನಾನು ಪ್ರವಾದಿ(ಸ)ರವರಲ್ಲಿ ಕೇಳಿದೆ, ನನ್ನವರನ್ನು ಪ್ರೀತಿಸುವುದು ಕೋಮು ಪಕ್ಷಪಾತವೇ? ಪ್ರವಾದಿ(ಸ) ಹೇಳಿದರು- “ಅಲ್ಲ, ಅದು ಪಕ್ಷಪಾತವಲ್ಲ. ಒಬ್ಬನು ತನ್ನವರಿಗೆ ಅವರ ಅಕ್ರಮ ಕಾರ್ಯಗಳಲ್ಲೂ ನೆರವಾಗುವುದು ಕೋಮು ಪಕ್ಷಪಾತವಾಗಿದೆ.” (ಅಬೂ ಫಸೀಲ(ರ)-ಮಿಶ್ಕಾತ್) “ಮಿಥ್ಯ ಮತ್ತು ನಿಷಿದ್ಧ ಕಾರ್ಯಗಳಲ್ಲಿ ತಮ್ಮ ಗೋತ್ರ (ಕುಲ, ಕುಟುಂಬ, ಜನಾಂಗ)ವನ್ನು …
Read More »ಅಕ್ರಮಿ
“ಅಕ್ರಮಿಯನ್ನು ನೋಡಿಯೂ ಜನರು ಅವನನ್ನು ತಡೆಯದಿದ್ದರೆ, ಅಲ್ಲಾಹನು ಅವರನ್ನು ಒಟ್ಟಿಗೆ ಶಿಕ್ಷಿಸುವನು.” (ಅಬೂ ದಾವೂದ್)
Read More »ಮರ್ದಿತನ ಪ್ರಾರ್ಥನೆ
“ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರಿಕೆ ವಹಿಸಿರಿ, ಅವನ ಮತ್ತು ಅಲ್ಲಾಹನ ಮಧ್ಯೆ ಯಾವುದೇ ತಡೆಯಿಲ.” (ಇಬ್ನು ಅಬ್ಬಾಸ್(ರ)-ಬುಖಾರಿ, ಮುಸ್ಲಿಮ್)
Read More »ಶ್ರೀಮಂತಿಕೆ
“ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ.” (ಹ. ಅಬೂಹುರೈರಾ(ರ)-ಬುಖಾರಿ, ಮುಸ್ಲಿಂ.)
Read More »
IslamKannada News Portal