Home / editor (page 61)

editor

ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಮುಹಮ್ಮದ್(ಸ) – ಮೈಕಲ್ ಹೆಚ್.ಹಾರ್ಟ್

  ನಾನು ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಮಾಡುವಾಗ ಅದರಲ್ಲಿ ಮುಹಮ್ಮದ್ (ಸ)ರನ್ನು ಅಗ್ರಸ್ಥಾನದಲ್ಲಿ ಇರಿಸಿದ್ದೇನೆ. ಇದು ಹಲವಾರು ಓದುಗರಿಗೆ ಅಚ್ಚರಿಯ ಸಂಗಾತಿಯಾಗಿರಬಹುದು ಮತ್ತು ಇನ್ನು ಕೆಲವರು ನನ್ನ ಈ ಆಯ್ಕೆಯ ಬಗ್ಗೆ ಪ್ರಶ್ನೆ ಕೂಡಾ ಎತ್ತಬಹುದು. ಆದರೆ ಲೌಕಿಕ ಮತ್ತು ಧಾರ್ಮಿಕ ಮಟ್ಟಗಳಲ್ಲಿ ಸಮವಾಗಿ ಪ್ರಭಾವ ಬೀರಿ, ಯಶಸ್ಸು ಸಾಧಿಸಿದ ಇನ್ನೊಬ್ಬ ವ್ಯಕ್ತಿ ಇತಿಹಾಸದಲಿಲ್ಲ. ಇಸ್ಲಾಮಿನ ಮೇಲೆ ಮುಹಮ್ಮದ್ (ಸ) ರ ಪ್ರಭಾವವನ್ನು ತುಲನಾತ್ಮಕವಾಗಿ ನೋಡುವುದಾದರೆ ಅದು …

Read More »

ಥಾಮಸ್ ಕಾರ್ಲೈಲ್, ಹೀರೋಸ್ ಏಂಡ್ ಹೀರೋ ವರ್ಶಿಪ್ ಎಂಬ ಗ್ರಂಥದಲ್ಲಿ ಪ್ರವಾದಿ ಮುಹಮ್ಮದ್

ಒಬ್ಬ ವ್ಯಕ್ತಿ ಒಮ್ಮೆಗೆ ಅಂದರೆ ಎರಡು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ಪರಸ್ಪರ ಕಾದಾಡುತ್ತಿದ್ದ ಗೋತ್ರಗಳನ್ನು ಮತ್ತು ಗ್ರಾಮೀಣ ಅರಬರನ್ನು ಅತ್ಯಂತ ಬಲಾಢ್ಯರು, ಸುಧಾರಿತ ಜನ ವಿಭಾಗವನ್ನಾಗಿ ಪರಿವರ್ತಿಸಿರುವುದು ಅದ್ಭುತವಾಗಿದೆ.  

Read More »

ಇಸ್ಲಾಮ್ ಪಸರಿಸಿದ್ದು ಖಡ್ಗದಿಂದಲ್ಲ, ಅದ್ಭುತವಾದ ನಾಯಕತ್ವದಿಂದ – ಮಹಾತ್ಮಾ ಗಾಂಧೀಜಿ

ಖಡ್ಗವಲ್ಲ ಅದ್ಭುತವಾದ ನಾಯಕತ್ವ ಇಂದಿಗೂ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಹೃದಯಗಳಲ್ಲಿ ತನ್ನ ನಿರ್ವಿವಾದ ಪ್ರಭಾವವನ್ನು ಅಚ್ಚೋತ್ತಿದ್ದ ಆ ವ್ಯಕ್ತಿಯ ಜೀವನಗಾಥೆಯನ್ನು ತಿಳಿಯಬಯಸಿದ್ದೆ… ಇಸ್ಲಾಮ್ ಧರ್ಮಕ್ಕೆ ಅಂದು ಅರ್ಹವಾದ ಸ್ಥಾನ ಲಭ್ಯವಾದದ್ದು ಖಡ್ಗದಿಂದಾಗಿರಲಿಲ್ಲ ಎಂಬ ಸತ್ಯವು ನನಗಾಗ ಮನವರಿಕೆಯಾಯಿತು. ಮುಸ್ಲಿಮರು ಅಂದು ಎದುರಿಸಿದ ಪ್ರತಿಯೊಂದು ಅಡಚಣೆಯನ್ನು ಅತಿಜಯಿಸಿ ಮುಂದೆ ಸಾಗಿಸಿದ್ದು ಆ ಪ್ರವಾದಿಯ ಅಚಲವಾದ ಸರಳತೆ, ಪ್ರಸಿದ್ಧಿಯನ್ನು ಬಯಸದ ಅವರ ವಿನಮ್ರತೆ, ಪ್ರತಿಜ್ಞೆಗಳ ಕುರಿತು ಅವರಿಗಿದ್ದ ಸೂಕ್ಷ್ಮ ಪ್ರಜ್ಞೆ, ತಮ್ಮ ಸ್ನೇಹಿತರು …

Read More »

ಪ್ರವಾದಿ ಮುಹಮ್ಮದ್(ಸ) ಅತ್ಯಂತ ಶ್ರೇಷ್ಠ ವ್ಯಕ್ತಿ – ಅಲ್ಫೋನ್ಸ್ ಡಿ ಲಾ ಮಾರ್ಟಿನ್

ಅಲ್ಫೋನ್ಸ್ ಡಿ ಲಾ ಮಾರ್ಟಿನ್ ಫ್ರೆಂಚ್ ಬರಹಗಾರ, ಕವಿ ಮತ್ತು ರಾಜನೀತಿ ತಜ್ಞ ಉದ್ದೇಶದ ಶ್ರೇಷ್ಠತೆ, ಅತ್ಯಲ್ಪ ಅನುಕೂಲತೆಗಳು ಮತ್ತು ಆಶ್ಚರ್ಯಕರವಾದ ಫಲಿತಾಂಶ ಈ ಮೂರು ವಿಷಯಗಳು ಒಂದು ವೇಳೆ ಒಬ್ಬ ಮನುಷ್ಯನ ಮೇಧಾವಿತನದ ಮಾನದಂಡವಾಗಿದ್ದರೆ, ಈ ನಿಟ್ಟಿನಲ್ಲಿ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಮುಹಮ್ಮದ್ (ಸ) ರೊಂದಿಗೆ ತುಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸಿದ್ಧ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರಗಳು, ಕಾನೂನುಗಳು ಮತ್ತು ಸಾಮ್ರಾಜ್ಯಗಳನ್ನು ಮಾತ್ರ ರಚಿಸಲು ಸಾಧ್ಯವಾಯಿತು. ಅವರ ಕಣ್ಣ …

Read More »

ಪ್ರವಾದಿ ಮುಹಮ್ಮದ್ ಮನುಕುಲದ ನೈಜ ಉದ್ಧಾರಕ- ಸರ್ ಜಾರ್ಜ್ ಬರ್ನಾಡ್ ಷಾ

ಪ್ರಸಕ್ತ ಜಗತ್ತಿಗೆ ಮುಹಮ್ಮದ್ (ಸ) ರಂತಹ ಮನಸ್ಸಿರುವ ವ್ಯಕ್ತಿಯ ಅಗತ್ಯ ಬಹಳಷ್ಟಿದೆ. ಮಧ್ಯಯುಗದ ಜನರು ಅವರನ್ನು ಕ್ರೈಸ್ತ ಧರ್ಮದ ಶತ್ರು ಎಂದು ತಿಳಿದು, ತಮ್ಮ ಅಜ್ಞಾನ ಮತ್ತು ಪೂರ್ವಾಗ್ರಹದಿಂದಾಗಿ ಅವರ ಅತಿ ನಿಕೃಷ್ಟ ಚಿತ್ರಣವನ್ನು ಲೋಕಕ್ಕೆ ನೀಡಿದ್ದಾರೆ. ಆದರೆ ಈ ವ್ಯಕ್ತಿಯ ಜೀವನವನ್ನು ನೋಡಿದಾಗ ನನಗದು ಅತ್ಯಂತ ಅದ್ಭುತವಾದ ಪವಾಡ ಸದೃಶ್ಯ ಜೀವನವಾಗಿ ತೋರಿತು. ಅವರು ಕ್ರೈಸ್ತ ಧರ್ಮದ ಶತ್ರುವಲ್ಲ ಬದಲಾಗಿ ಮನುಕುಲದ ವಿಮೋಚಕರಾಗಿದ್ದಾರೆ ಎಂದು ನಾನಾಗ ತೀರ್ಮಾನಿಸಿ ಬಿಟ್ಟೆ. …

Read More »

ಇಸ್ಲಾಮ್ ಮಾನವ ಸಮಾನತೆಯ ಪ್ರತಿಪಾದಕ- ಸರೋಜಿನಿ ನಾಯ್ಡು

ಪ್ರಜಾ ಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಕರೆ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ; ಅಲ್ಲಾಹ್ ಅತಿ ಶ್ರೇಷ್ಠನು; ಎಂದು ಘೋಷಿಸುತ್ತಾ ಸಾಷ್ಟಾಂಗವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮ್‍ನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರ ಮುಗ್ಧಗೊಳಿಸಿದೆ. ಈಜಿಪ್ಟ್, …

Read More »

ಕೊರೋನಾ ಕಲಿಸಿದ ಪಾಠ

@ ಮೌ| ವಲಿಯುಲ್ಲಾಹ್ ಸಈದಿ ಫಲಾಹಿ ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವ ಹಾನಿ ಮತ್ತು ಉತ್ಪನ್ನಗಳ ನಾಶಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸಂದರ್ಭಗಳಲ್ಲಿ ತಾಳ್ಮೆ ವಹಿಸಿ ದವರಿಗೆ ಸುವಾರ್ತೆ ನೀಡಿರಿ. (ಪವಿತ್ರ ಕುರ್‍ಆನ್: 2-155) ಕೋವಿಡ್- 19 ಎಂಬ ಮಹಾ ಪಿಡುಗು ಪವಿತ್ರ ಕುರ್‍ಆನಿನ ಮೇಲಿನ ಸೂಕ್ತದಲ್ಲಿ ತಿಳಿಸಿರುವ ಎಲ್ಲಾ ಪರೀಕ್ಷೆಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ. ನಾನು ಇವತ್ತು ಭಯ ಮತ್ತು ಹಸಿವು ಈ ಎರಡು …

Read More »

ನಾಲ್ಕು ವಿಷಯ

“ನಾಲ್ಕು ವಿಷಯಗಳ ಬಗ್ಗೆ ವಿಚಾರಣೆಗೊಳಪಡುವ ತನಕ ಯಾವ ಮನುಷ್ಯನೂ ಪುನರುತ್ಥಾನದ ದಿವಸದಂದು ಮುಂದೆ ಸಾಗಲಾರ ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು. ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು. ಮತ್ತು ಅವನ ಶರೀರದ ಕುರಿತು – ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.” (ಅಬೂ ಬರ್ದಾ(ರ)-ತಿರ್ಮಿದಿ)  

Read More »