ನ್ಯಾಯಾಲಯ ತುಂಬಿ ತುಳುಕುತ್ತಿತ್ತು , ಜನರು ಕುತೂಹಲದಿಂದ ಕಲಾಪವನ್ನು ವೀಕ್ಷಿಸುತ್ತಿದ್ದರು. ಇಬ್ಬರು ಯುವಕರು ಅವರ ತಂದೆಯ ಹತ್ಯೆಯ ಆರೋಪದಲ್ಲಿ ಓರ್ವನನ್ನು ಹಿಡಿದು ತಂದಿದ್ದರು. ಖಲೀಫ ಹ.ಉಮರ್ (ರ) ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತಿದ್ದರು. ಖಲೀಫ: ( ಇಬ್ಬರು ಯುವಕರಲ್ಲಿ ) ಏನು ನಿಮ್ಮ ದೂರು, ಯಾಕೆ ನೀವು ಈ ವ್ಯಕ್ತಿಯನ್ನು ಇಲ್ಲಿಗೆ ಕರೆ ತಂದಿದ್ದೀರಿ. ಯುವಕರು : ಈ ವ್ಯಕ್ತಿ ನಮ್ಮ ತಂದೆಯನ್ನು ಅಮಾನುಷಕವಾಗಿ ಕೊಂದಿದ್ದಾರೆ. ಖಲೀಫ: (ಆರೋಪಿಯನ್ನು ನೋಡುತ್ತಾ) ಇವರ …
Read More »ವಿದಾಯ ಭಾಷಣವು ತೆರೆಯಿತು ಹೃದಯದ ಕದವ.
ಯೋಗೇಶ್ ಮಾಸ್ಟರ್ ನಿನ್ನೆ ಸುರಿಯುವ ಮಳೆಯಲ್ಲಿ ಆತ ಕತ್ತಲಲ್ಲಿ ನಮ್ಮ ಮನೆಯ ರಸ್ತೆಯಲ್ಲಿ ನಿಂತಿದ್ದ. ನಮ್ಮ ಕಟ್ಟಡದ ಆಶ್ರಯಕ್ಕೆ ಬಂದು ತನ್ನನ್ನು ಮಳೆಯ ದಾಳಿಯಿಂದ ಕಾಪಾಡಿಕೊಳ್ಳಲು ಕರೆದೆ. ಆತ ಬಂದ. ಇಬ್ಬರೂ ಒಬ್ಬರನ್ನೊಬ್ಬರು ಗುರುತು ಹಿಡಿದೆವು. ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನ ಜೊತೆ ಜಗಳ ಮಾಡಿಕೊಂಡು ಹೋಗಿದ್ದ ವ್ಯಕ್ತಿ. ಚಾಮರಾಜಪೇಟೆಯ ನಿವಾಸಿ. ತೀರಾ ಆತ್ಮೀಯನಲ್ಲದಿದ್ದರೂ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗೆಳೆಯನೇ. ಮುಸಲ್ಮಾನರ ಕಡು ದ್ವೇಷಿ. “ನೀವು ಹಿಂದೂ ಧರ್ಮದ ನ್ಯೂನತೆಗಳನ್ನು …
Read More »ರಮಝಾನ್ ಅಂದರೇನೆಂದು ತಿಳಿಯ ಬಯಸುತ್ತೀರಾ?
ಉಪವಾಸ ಅಂದರೆ ತನ್ನ ಸಂಬಂಧವನ್ನು ತನ್ನ ಕುಟುಂಬ, ತನ್ನ ಸಮುದಾಯ ಮತ್ತು ದೇವರೊಂದಿಗೆ ಸುದೃಡಗೊಳಿಸುವುದು ಮತ್ತು ಬಳಪಡಿಸುವುದು. ಪ್ರತಿಬಿಂಬಿಸುವ ತಿಂಗಳು ರಮಝಾನ್ ತಿಂಗಳು ಮುಸ್ಲಿಮರಿಗೆ ಬಹಳ ಪವಿತ್ರವಾದ ತಿಂಗಳು. ಈ ತಿಂಗಳಿನಲ್ಲಿ ದೇವದೂತರಾದ ಜಿಬ್ರೀಲ್ ಪ್ರವಾದಿ ಮುಹಮ್ಮದ್ (ಸ ) ರನ್ನು ಭೇಟಿಯಾಗಿ ಅಂತಿಮ ಗ್ರಂಥವಾದ ಪವಿತ್ರ ಕುರ್ಆನ್ ಅವತೀರ್ಣಗೊಳಿಸಲು ಆರಂಭಿಸಿದ ತಿಂಗಳು. ಸತ್ಯವಿಶ್ವಾಸಿಗಳು ಪ್ರಾರ್ಥನೆ, ದಾನ, ಮತ್ತು ದೇವರೊಂದಿಗೆ ತಮ್ಮ ಸಂಬಂಧವನ್ನು ಬಲ ಪಡಿಸುವ ಮೂಲಕ ಇದನ್ನು ತೋರ್ಪಡಿಸುತ್ತಾರೆ. …
Read More »ರಮಝಾನ್ ‘ಮಹಾನ್ ಮತ್ತು ಸಮೃದ್ಧ ತಿಂಗಳು’
ಖರ್ರಮ್ ಮುರಾದ್ ರಮಝಾನಿನ ಸಮೃದ್ಧ (ಬರಕತ್) ತಿಂಗಳು ನಮ್ಮನ್ನು ಆವರಿಸಿದೆ. ಅದರ ಅನುಗ್ರಹಗಳು ನಮ್ಮ ಜೀವನವನ್ನು ಫಲವತ್ತಾಗಿಸಲು ವರ್ಷಿಸಲಿವೆ. ಸ್ವತಃ ಪ್ರವಾದಿವರ್ಯರಿಂದಲೇ(ಸ) ‘ಮಹಾನ್ ತಿಂಗಳು ಮತ್ತು ಸಮೃದ್ಧ ತಿಂಗಳು’ ಎಂದು ವರ್ಣಿಸಲ್ಪಟ್ಟ ಈ ತಿಂಗಳ ಶ್ರೇಷ್ಠತೆ ಹಾಗೂ ಸಮೃದ್ಧಿಗೆ ಎಲ್ಲೆಯಿದ್ದೀತೇ? ಏಕೆಂದರೆ ಈ ತಿಂಗಳ ಶ್ರೇಷ್ಠತೆಯ ಉನ್ನತಿಯು ನಮ್ಮ ಕಲ್ಪನೆಗೂ ಮೀರಿದುದಾಗಿದೆ. ಅಂತಹ ಶ್ರೇಷ್ಠತೆ ಏಕೆ? ಈ ತಿಂಗಳಲ್ಲಿ ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ರಾತ್ರಿಯೊಂದಿದೆ. ಆ ರಾತ್ರಿಯಲ್ಲಿ ಒಳಿತು ಮತ್ತು …
Read More »ಶಾಂತಿಗಾಗಿ ಸಂಘರ್ಷ : ಪವಿತ್ರ ಕುರ್ ಆನ್ ಧೋರಣೆ (ಪವಿತ್ರ ಕುರ್ ಆನ್ ನ ಯುದ್ಧ ಸಂಬಂಧಿ ವಚನಗಳ ಹಿನ್ನೆಲೆಯಲ್ಲಿ)
– ಅಬ್ದುಸ್ಸಲಾಮ್ ಪುತ್ತಿಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಕ್ರೀನ್ ಶಾಟ್ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಗೌರವಿಸುವ ಗ್ರಂಥಗಳ ಬಗ್ಗೆ ಅನೇಕರಿಗೆ ಆಕ್ಷೇಪಗಳಿರುತ್ತವೆ. ಗ್ರಂಥ ಯಾವುದೇ ಇರಲಿ. ಗಂಭೀರವಾಗಿ ಅಧ್ಯಯನ ಮಾಡಿ ಪ್ರಾಮಾಣಿಕವಾಗಿ ಆಕ್ಷೇಪಗಳನ್ನು ದಾಖಲಿಸುವುದು ಮತ್ತು ಆ ಕುರಿತು ಚರ್ಚೆ, ಸಂವಾದಗಳನ್ನು ದಾಖಲಿಸುವುದು ಸ್ವಾಗತಾರ್ಹ. ಏಕೆಂದರೆ ಇಂತಹ ಚಟುವಟಿಕೆಗಳು ಗೌರವಾನ್ವಿತ ಗ್ರಂಥಗಳನ್ನು ನಿಗೂಢತೆಯ ಲೋಕದಿಂದ ಹೊರಗೆಳೆದು ತರುತ್ತವೆ. ಆ ವರೆಗೆ ಅವುಗಳನ್ನು ಓದಿಲ್ಲದವರು ಓದುವುದಕ್ಕೆ ಮತ್ತು ಅರಿತಿಲ್ಲದವರು ಅರಿಯುವುದಕ್ಕೆ …
Read More »‘ಹಲಾಲ್’ ಕೆಲವು ಮಾಹಿತಿಗಳು.
1. ಹಲಾಲ್ ಎಂದರೆ ಶುದ್ಧ, ಉಪಯೋಗಿಸಲು ಯೋಗ್ಯವಾದದ್ದು ಎಂದು ಅರ್ಥ. 2. ಹಲಾಲ್ ಎಂದರೆ ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವ ಒಂದು ಕ್ರಮ ಎಂಬ ನಂಬಿಕೆಯಿದೆ. ಅದು ಪೂರ್ತಿ ನಿಜ ಅಲ್ಲ. ಹಲಾಲ್ ಮಾಂಸ ಎಂದರೆ ತಿನ್ನಲು ಯೋಗ್ಯವಾದ ಮಾಂಸ ಎಂದು ಅರ್ಥ. ಕೋಳಿ ಅಂಗಡಿಯ ಮಾಲಕರು ಇದನ್ನು ಹಲಾಲ್ ಕಟ್ ಎಂದು ಸೀಮಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ಅಷ್ಟೇ. ಮೀನನ್ನು ಯಾರೂ ಹಲಾಲ್ ಕಟ್ ಮಾಡಿ ತಿನ್ನುವುದಿಲ್ಲ. 3. ಹಲಾಲ್ ಮಾಂಸ ಎಂದರೆ, …
Read More »ಹಲಾಲ್- ಹರಾಮ್
ಅವರು ಪ್ರತಿದಿನ ಪ್ರಭಾತ ನಮಾಝ್ ಮಾಡಿದ ಕೂಡಲೇ ಮಸೀದಿಯಿಂದ ಗಡಿಬಿಡಿಯಲ್ಲಿ ಓಡಿ ಹೋಗುತ್ತಿದ್ದರು.ಇದನ್ನು ಗಮನಿಸುತ್ತಿದ್ದ ಪ್ರವಾದಿ(ಸ)ಯವರು ಒಂದು ದಿನ ಕೇಳಿದ್ರು. ನೀವು ನಮಾಝ್ ಆದ ಕೂಡಲೇ ಇಷ್ಟು ಅರ್ಜಂಟ್ ನಲ್ಲಿ ಯಾಕೆ ಹೋಗುವುದು. ಅದಕ್ಕವರು ಪ್ರವಾದಿವರ್ಯರೇ ಈಗ ಪ್ರಕೃತಿ ಫಲ ಕೊಡುವ ಸಮಯ. ನನ್ನ ಮನೆ ಪಕ್ಕದ ಮನೆಯವರ ಹಣ್ಣಿನ ಮರದಿಂದ ಹಣ್ಣು ನನ್ನ ಮನೆಯ ಅಂಗಳಕ್ಕೆ ಬಿದ್ದಿರುತ್ತವೆ. ಅದನ್ನು ನನ್ನ ಮಕ್ಕಳು ತಿನ್ನುತ್ತಾರೋ ಎಂಬ ಹೆದರಿಕೆಯಿದೆ. ಅದು ಹಲಾಲ್ …
Read More »ಅಮ್ಮ ಎಂಬ ಕರುಣೆಯ ಸಾಗರ
@ ಶೈಖ್ ಮುಹಮ್ಮದ್ ಕಾರಕುನ್ನು ಮರೆಯಲಾಗದ ಮಾತೆಯ ಅಸಾಮಾನ್ಯವಾದ ತ್ಯಾಗದ ಕುರಿತು ಸುಪ್ರಸಿದ್ಧವಾದ ಕತೆಯೊಂದಿದೆ. ಒಂದು ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸವಾಗಿದ್ದರು. ದೇಹ ಎರಡಾದರೂ ಒಂದೇ ಜೀವ ಎಂಬಷ್ಟು ಪ್ರೀತಿ ಅನ್ಯೋನ್ಯತೆ ಅವರಲ್ಲಿತ್ತು. ಅಂತಹ ಒಂದು ಪ್ರೀತಿ ವಾತ್ಸಲ್ಯದ ಬದುಕು ಅವರದ್ದಾಗಿತ್ತು. ಮಗನ ಮನದಲ್ಲಿ ಮಾತೆಯ ಚಿತ್ರ ಮಾತ್ರವಿತ್ತು. ಆ ತಾಯಿಯ ಮನದಲ್ಲಿಯೂ ಆ ಏಕಮಾತ್ರ ಪುತ್ರನೇ ತುಂಬಿದ್ದನು. ಅವರು ಜೊತೆಯಾಗಿಯೇ ಆಹಾರ ಸೇವಿಸುತ್ತಿದ್ದರು. ಜೊತೆಯಾಗಿಯೇ ನಿದ್ದೆ …
Read More »ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?
ಕುರ್ಆನ್ನ ಸೂಕ್ತಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ. 2ನೇ ಅಧ್ಯಾಯದ 190-191ನೇ ಸೂಕ್ತಗಳು ಹೀಗಿವೆ: ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ …
Read More »ಹಾಗಾದರೆ ವರ್ಷದ ಬಳಿಕ ಬರುವ ಉಪವಾಸವನ್ನು ಹೇಗೆ ಕಾಣಬೇಕು?
ಸಿ.ಎಸ್. ಶಾಹಿನ್ ರಮಝಾನ್ ಒಂದು ಅದ್ಭುತವಾಗಿದೆ. ಹೀಗೆ ಆಲಂಕಾರಿಕವಾಗಿ ಹೇಳಿದ್ದಲ್ಲ. ನಿಜವಾಗಿಯೂ ಅದೊಂದು ಅದ್ಭುತವೇ ಆಗಿದೆ. ಅದಕ್ಕೆ ಹಲವು ಕಾರಣಗಳಿವೆ. ಒಂದು ಉದಾಹರಣೆ ಹೇಳುತ್ತೇನೆ, ಓರ್ವರು ಜೀವನವನ್ನು ಸಂಪೂರ್ಣ ಬದಲಾಯಿಸಲು ತೀರ್ಮಾನಿಸುತ್ತಾರೆ. ಹೊಸ ವ್ಯಕ್ತಿಯಾಗಲು ಬಯಸುತ್ತಾರೆ. ಇದು ಒಂದು ತಿಂಗಳಲ್ಲಿ ಸಾಧಿಸಲು ಸಾಧ್ಯವೇ? ಸಾಮಾನ್ಯವಾಗಿ ಯೋಚಿಸುವಾಗ ಅದರ ಸಾಧ್ಯತೆ ತೀರಾ ಕಡಿಮೆ. ಆ ವ್ಯಕ್ತಿ ಬದುಕಿರುವ ವಾತಾವರಣವು ಅದಕ್ಕೆ ಒಪ್ಪುವುದಿಲ್ಲ. ಮನಸ್ಸು ಕೂಡ ಅದಕ್ಕೆ ಬೇಗನೆ ಒಗ್ಗಬೇಕೆಂದಿಲ್ಲ. ಕೆಲವರು ಹೇಳುವುದನ್ನು …
Read More »
IslamKannada News Portal