ಕರುಣೆಯು ಮಾನವೀಯ ಸಂಬಂಧಗಳನ್ನು ಜೋಡಿಸುವ ಪ್ರಬಲ ಕೊಂಡಿಯಾಗಿದೆ. ಅದರ ಶಕ್ತಿಯು ಅಪಾರ ಮತ್ತು ಅಜೇಯವಾಗಿದೆ. ಕಠೋರ ಹೃದಯಿಗಳನ್ನೂ ಕರುಣೆಯಿಂದ ಮಣಿಸಲು ಸಾಧ್ಯವಿದೆ. ಮಾನವನ ಮುಚ್ಚಿದ ಬಾಗಿಲುಗಳನ್ನು ಅದು ದೂಡಿ ತೆರೆಯುತ್ತದೆ. ಅಗಲಿದವರನ್ನು ಪರಸ್ಪರ ಆಪ್ತರಾಗಿ, ವೈರಿಗಳನ್ನು ಪರಸ್ಪರ ಮಿತ್ರರಾಗಿ ಮಾಡುತ್ತದೆ. ಸಹಾನುಭೂತಿಯ ಮನಸ್ಸುಗಳೇ ನಿಸ್ವಾರ್ಥ ಕರ್ಮಗಳಿಗೆ ಪ್ರೇರಕವಾಗುತ್ತದೆ. ಅಂತರಿಕ ಪ್ರೇರಣೆಯಿಂದಲೇ ನಿಸ್ವಾರ್ಥ ಸೇವೆಗಳು ಚಿಗುರುತ್ತವೆ. ಅದು ಕರುಣೆಯಿಂದ ಹುಟ್ಟುತ್ತದೆ. ಆದ್ದರಿಂದಲೇ ಮನಸ್ಸನ್ನು ಕಾರುಣ್ಯಮಯಗೊಳಿಸಬೇಕೆಂದು ಧರ್ಮವು ಆಜ್ಞಾಪಿಸಿದೆ. ಅಲ್ಲಾಹನು ದಯಾಮಯನು, ಆತನ …
Read More »ಸಂದೇಶ ಪ್ರಚಾರ ಮತ್ತು ಬಲಾತ್ಕಾರದ ಮತಾಂತರ
ಇಸ್ಲಾಮ್, ಮಾನವರ ಹಸ್ತಕ್ಷೇಪಗಳಿಂದ ವಿರೂಪಗೊಳ್ಳದ ಏಕೈಕ ದೇವದತ್ತ ಜೀವನ ಪದ್ಧತಿಯಾಗಿದೆ. ಅದು ಮಾನವನ ಉಭಯ ಲೋಕ ವಿಜಯವನ್ನು ಖಚಿತ ಪಡಿಸುತ್ತದೆ. ಪರಲೋಕ ಮೋಕ್ಷದ ವಾಗ್ದಾನ ನೀಡುವುದರೊಂದಿಗೆ ಭೂಮಿಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನವನ್ನೂ ನೀಡುತ್ತದೆ. ಗಾಳಿ, ನೀರು, ಸೂರ್ಯ, ಚಂದ್ರ ಎಲ್ಲವೂ ದೇವನದ್ದಾಗಿದೆ. ಸೃಷ್ಟಿಗಳು ಅವುಗಳ ಸಮಾನ ಹಕ್ಕುದಾರರಾಗಿದ್ದಾರೆ. ಇಸ್ಲಾಮ್ ಕೂಡಾ ಹಾಗೆಯೇ. ಅದು ಕೇವಲ ಮುಸ್ಲಿಮರದ್ದಲ್ಲ, ಎಲ್ಲ ಮಾನವರಿಗಾಗಿ ದೇವನು ಅವತೀರ್ಣಗೊಳಿಸಿದ್ದಾಗಿದೆ. ಪ್ರವಾದಿ ಮುಹಮ್ಮದ್(ಸ) ರನ್ನು ಇಡೀ …
Read More »ಸಮಾನತೆಯ ಕೂಗು: ಮಹಿಳೆಯನ್ನು ಸಬಲೀಕರಣಗೊಳಿಸುವುದೇ ಅಥವಾ ಅಪಾಯಕ್ಕೆ ಸಿಲುಕಿಸುವುದೇ?
ರಹ್ಮತುನ್ನಿಸಾ ರಾಷ್ಟ್ರೀಯ ಕಾರ್ಯದರ್ಶಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್ ಮತ್ತೊಮ್ಮೆ ಮಹಿಳಾ ದಿನಾಚರಣೆಯ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಚರ್ಚೆಗಳು, ಘೋಷಣೆಗಳು, ಭರವಸೆಗಳು… ಇತ್ಯಾದಿಗಳು ಸಾಮಾನ್ಯ. ವಿಶ್ವಸಂಸ್ಥೆಯು ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲು ನಿಗದಿಪಡಿಸಿದೆ. ಪ್ರತೀ ವರ್ಷದಂತೆ 2021ರಲ್ಲಿ ‘ವಿಮೆನ್ ಇನ್ ಲೀಡರ್ ಶಿಪ್: ಎಚೀವಿಂಗ್ ಆ್ಯನ್ ಈಕ್ವಲ್ ಫ್ಯೂಚರ್ ಇನ್ ಎ ಕೋವಿಡ್- 19′ ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷ “ಸುಸ್ಥಿರ ನಾಳೆಗಾಗಿ …
Read More »ಸ್ತ್ರೀಯರ ವಸ್ತ್ರಧಾರಣೆ: ಇಸ್ಲಾಮ್ ಏನು ಹೇಳುತ್ತದೆ?
ಇಲ್ಯಾಸ್ ಮೌಲವಿ ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಇತರರ ಮುಂದೆ ಪರಿಚಯಿಸುವ ಪ್ರಥಮ ಉಪಾಧಿ ವಸ್ತ್ರಧಾರಣೆಯಾಗಿದೆ. ಓರ್ವರು ಧರಿಸಿದ ವಸ್ತ್ರವನ್ನು ನೋಡಿ, ಆ ವ್ಯಕ್ತಿ ಎಂತಹವನೆಂದು ಅಂದಾಜಿಸಲು ಸಾಧ್ಯವಾಗುತ್ತದೆ. ರಾಜ, ನವಾಬರ ವಸ್ತ್ರ, ಧಾರ್ಮಿಕ ವಿದ್ವಾಂಸರುಗಳ ವಸ್ತ್ರ, ಅಹಂಕಾರಿಗಳ, ಆತ್ಮಪ್ರಶಂಸಕರ ವಸ್ತ್ರ, ಆಡಂಬರದ ವಸ್ತ್ರ, ಮೂರ್ಖರ ವಸ್ತ್ರ, ಅನಾಗರಿಕರ ವಸ್ತ್ರ… ಇವೆಲ್ಲವೂ ಅವರವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಸತ್ಯ ವಿಶ್ವಾಸಿಗಳ ಹಾಗೂ ವಿಶ್ವಾಸಿನಿಯರ ವಸ್ತ್ರಧಾರಣೆಯಲ್ಲಿ ಇವೆಲ್ಲವುಗಳಿಗಿಂತ ಸಹಜವಾಗಿಯೇ ವ್ಯತ್ಯಾಸವಿರುತ್ತದೆ. ಆದ್ದರಿಂದಲೇ …
Read More »ಕುರ್ಆನ್ ಬೈಬಲ್ನ ಪ್ರತಿರೂಪವೇ?
ಪ್ರವಾದಿ ಮುಹಮ್ಮದ್ರು(ಸ) ತಮ್ಮ ಕಾಲದ ಯಹೂದಿ-ಕ್ರೈಸ್ತ ಪಂಡಿತರೊಂದಿಗೆ ಕಲಿತ ವಿಚಾರಗಳನ್ನು ತನ್ನ ಸ್ವಂತ ಭಾಷೆಯಲ್ಲಿ ತನ್ನದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಗತಸಮುದಾಯಕ್ಕೆ ಸಂಬಂಧಿಸಿ ಕುರ್ಆನ್ ಮತ್ತು ಬೈಬಲ್ನ ವಿವರಣೆಗಳು ಒಂದೇ ರೀತಿಯಾಗಲು ಇದೇ ಕಾರಣ. ಒಂದಕ್ಕಿಂತ ಹೆಚ್ಚು ಇಂಗ್ಲಿಷ್ ಪುಸ್ತಕಗಳಲ್ಲಿ ಇಂತಹ ವಿಮರ್ಶೆಗಳು ಕಂಡು ಬಂತು. ಇದಕ್ಕೇನು ಕಾರಣ ಹೇಳುವಿರಿ.? ಇಸ್ಲಾಮನ್ನು ಶತ್ರುವಿನಂತೆ ದ್ವೇಷಿಸುವ ಪಾಶ್ಚಾತ್ಯ ಬರಹಗಾರರು ಹುಟ್ಟು ಹಾಕಿದ ಸುಳ್ಳಾರೋಪವಿದು. ಈ ಆರೋಪದಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲವೆಂದು ಬೈಬಲ್ ಮತ್ತು ಕುರ್ಆನ್ …
Read More »ವೇದ ಮತ್ತು ಗೀತೆ ದೈವಿಕವೇ?
ಭಾರತದ ಹಿಂದೂ ವೇದಗ್ರಂಥಗಳು ದೇವನಿಂದ ಅವತೀರ್ಣವಾದದ್ದೆಂದು ಅಂಗೀಕರಿಸುವಿರಾ? ವಿದ್ಯೆ, ಜ್ಞಾನ ಎಂಬುದು ವೇದ ಎಂಬ ಪದದ ಅರ್ಥ ಆಧ್ಯಾತ್ಮಿಕ ಜ್ಞಾನವೆಂದಾಗಿದೆ. ಅದು ದೇವದತ್ತವೆಂದು ಕೆಲವು ವೇದ ಪಂಡಿತರು ಹೇಳುತ್ತಾರೆ. ಆದರೆ ವೇದಗಳು ಸ್ವತಃ ಅದನ್ನು ಘೋಷಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ಎಲ್ಲಾ ಜನಾಂಗಗಳಿಗೆ ದೇವಸಂದೇಶವಾಹಕರು ಬಂದಿದ್ದಾರೆಂದೂ ಅವರಿಗೆ ದೇವಸಂದೇಶಗಳು ಲಭಿಸಿದೆಯೆಂದೂ ಇಸ್ಲಾಮ್ ವಾದಿಸುತ್ತದೆ. ಆದ್ದರಿಂದ ವೇದಗಳು ಆರ್ಯರಿಗೆ ಅವತೀರ್ಣವಾದ ದಿವ್ಯ ಸಂದೇಶದ ಭಾಗವಾಗಿರುವ ಸಾಧ್ಯತೆಯನ್ನು ನಿರಾಕರಿಸುವುದು ಸರಿಯಲ್ಲ. ಅಂತಹ ಒಂದು ಸಾಧ್ಯತೆ ಖಂಡಿತವಾಗಿಯೂ …
Read More »ನಾವಿನ್ನೂ ಬಿಂದಿ, ಕುಂಕುಮ, ಹಿಜಾಬ್ ನಲ್ಲಿದ್ದೇವೆ..
ನಾವಿನ್ನೂ ಬಿಂದಿ, ಕುಂಕುಮ, ಹಿಜಾಬ್ ನಲ್ಲಿದ್ದೇವೆ.. ಹಸಿವು ಸೂಚ್ಯಂಕ ದಲ್ಲಿ ಭಾರತ ನೆರೆಯ ಪಾಕಿಸ್ತಾನ,ನೇಪಾಳ ,ಬಾಂಗ್ಲಾದೇಶಕ್ಕಿಂತಲೂ ಕೆಳಸ್ಥಾನದಲ್ಲಿದೆ. ಬನ್ನಿ ಇತಿಹಾಸ ಅರಿಯೋಣ… ಅವರು ಹೀಗೆ ಸುತ್ತಾಡುತ್ತಿರುವಾಗ ಒಂದು ಗುಡಿಸಲಲ್ಲಿ ಸಣ್ಣ ಮಕ್ಕಳು ಅಳುವುದು ಕೇಳಿಸುತ್ತದೆ. ಮಕ್ಕಳು ಯಾಕೆ ಅಳುತ್ತಿದ್ದಾರೆಂದು ಅವರು ಅಲ್ಲಿಗೆ ಹೋಗುತ್ತಾರೆ. ಮಕ್ಕಳ ಅಮ್ಮ ಒಲೆಯಲ್ಲಿ ಏನೋ ಬೇಯಿಸುತ್ತಿದ್ದಾಳೆ. ಮಕ್ಕಳು ಅಳುತ್ತಿದ್ದಾರೆ. ದಾರಿ ಹೋಕ ಅಮ್ಮನಲ್ಲಿ ಕೇಳುತ್ತಾರೆ.”ಮಕ್ಕಳು ಯಾಕೆ ಈ ರೀತಿ ಒಂದೇ ಸವನೆ ಅಳುತ್ತಿದ್ದಾರೆ.? “ಅವರಿಗೆ ಹಸಿವು …
Read More »ಹಿಜಾಬ್: ಈ ವಿರೋಧ ಬಾಹ್ಯಕ್ಕೆ ಕಂಡಷ್ಟು ಸರಳವಲ್ಲ
ಏ.ಕೆ. ಕುಕ್ಕಿಲ ಸಮವಸ್ತ್ರ ಒಂದು ನೆಪ. ನಿಜವಾದ ಕಾರಣ ಮತ್ಸರ ಮತ್ತು ದ್ವೇಷ. ಮುಸ್ಲಿಮ್ ಸಮುದಾಯದ ಬೆಳವಣಿಗೆಯನ್ನು ಸಹಿಸಲಾಗದ ಗುಂಪೊಂದು ವ್ಯವಸ್ಥಿತವಾಗಿ ಮತ್ತು ಸಂದರ್ಭಾನುಸಾರವಾಗಿ ವಿವಿಧ ನೆಪಗಳನ್ನು ಹುಟ್ಟು ಹಾಕುತ್ತಲೇ ಬಂದಿದೆ. ಆ ನೆಪಗಳ ಸುತ್ತ ಹಲವು ಸುಳ್ಳು ನರೇಟಿವ್ಗಳನ್ನು ಸೃಷ್ಟಿಸುತ್ತಲೂ ಬಂದಿದೆ. ಅಲ್ಲಾಹು ಅಕ್ಬರ್, ಮದ್ರಸ, ಕುರ್ಆನ್, ಬುರ್ಖಾ, ಗಡ್ಡ, ಪೈಜಾಮ, ಕುರ್ತಾ, ನಮಾಝ್, ಹಲಾಲ್ ಮುಂತಾದುವುಗಳೆಲ್ಲ ಈ ದೇಶಕ್ಕೆ 1400 ವರ್ಷಗಳಿಂದಲೂ ಚಿರಪರಿಚಿತ ಆಚರಣೆಗಳು ಮತ್ತು ಆರಾಧನೆಗಳು. …
Read More »ಏನಿದು ಹಿಜಾಬ್
ಸಮವಸ್ತ್ರದ ಬಟ್ಟೆಯನ್ನು ಹೆಚ್ಚುವರಿಯಾಗಿ ತಲೆಗೆ ಹಾಕಲು ಅನುಮತಿ ಕೇಳುವುದನ್ನು ಅರ್ಥವಿಲ್ಲದ ಹಿಜಾಬ್ (ತಲೆವಸ್ತ್ರ) ವಿವಾದ ಎಂದು ಹೇಳುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದವನ್ನೇ ಸೃಷ್ಟಿಸಲಾಗಿದೆ. ಮಾಧ್ಯಮಗಳು ಚರ್ಚಿಸುತ್ತಿರುವ ಹಿಜಾಬ್ / ಬುರ್ಖ ಎಂಬ ಪದ ಕುರ್ ಆನ್ ನಲ್ಲಿ ಹೆಣ್ಣಿನ ಉಡುಗೆಯ ಬಗ್ಗೆಯಾಗಲಿ, ತಲೆವಸ್ತ್ರದ ಬಗ್ಗೆಯಾಗಲಿ ಹೇಳುವಾಗ ಬಳಸಲಾಗಿಲ್ಲ. ಹೆಣ್ಣಿನ ಉಡುಗೆಯ ಬಗ್ಗೆ ಹೇಳುವಾಗ ಬಿಕುಮುರಿಹಿನ್ನ ಅಲಾ ಜುಯೂಬಿಹಿನ್ನ (ಅನ್ನೂರ್ ಅಧ್ಯಾಯ) ಅರ್ಥಾತ್ ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ …
Read More »ವೈಯಕ್ತಿಕ ಕಾನೂನುಗಳ ಸಂರಕ್ಷಣೆ
ಜಗತ್ತಿನ ಎಲ್ಲ ಪ್ರಸಿದ್ಧ ಧರ್ಮಗಳಲ್ಲಿಯೂ ವೈಯಕ್ತಿಕ ಕಾನೂನುಗಳು (Personal Laws) ಧರ್ಮದ ಅವಿಭಾಜ್ಯ ಅಂಗವಾಗಿವೆ. ವಿವಾಹ, ವಿವಾಹ ವಿಚ್ಛೇದನ, ವಾರೀಸು ಹಕ್ಕು, ಶವ ಸಂಸ್ಕಾರದಂತಹ ಎಲ್ಲ ಕಾರ್ಯಗಳನ್ನೂ ತಂತಮ್ಮ ಧರ್ಮಾಚಾರಗಳಂತೆ ನಡೆಸಬೇಕೆಂದು ಹೆಚ್ಚಿನೆಲ್ಲ ಸಮುದಾಯದವರೂ ಬಯಸುತ್ತಾರೆ. ಹಾಗಿದ್ದರೂ ಆಧುನಿಕ ಜಗತ್ತಿನ ಕೆಲವು ಜಾತ್ಯತೀತ ಲೌಕಿಕ ರಾಷ್ಟ್ರಗಳು ಅದಕ್ಕೆ ಅನುಮತಿ ನೀಡುವುದಿಲ್ಲ. ಅವರು ರಾಷ್ಟ್ರದ ಅಖಂಡತೆ ಮತ್ತು ಸಾಂಸ್ಕೃತಿಕ ಐಕ್ಯದ ಹೆಸರಲ್ಲಿ ರಾಷ್ಟ್ರದ ಎಲ್ಲ ಜನರಿಗೂ ಅನ್ವಯವಾಗುವ ಸಮಾನ ಕಾನೂನುಗಳನ್ನು ರಚಿಸಿ …
Read More »
IslamKannada News Portal