Home / ಪ್ರಶ್ನೋತ್ತರ / ಸಮಾಜ ದ್ರೋಹಿಗಳ ಹಿಂಬಾಲಕರ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಸಮಾಜ ದ್ರೋಹಿಗಳ ಹಿಂಬಾಲಕರ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಪ್ರಶ್ನೆ: ಸಮಾಜ ದ್ರೋಹಿ, ಧರ್ಮ ದ್ರೋಹಿ ನಾಯಕನ ಹಿಂಬಾಲಕರು, ಬೆಂಬಲಿಗರಾಗಿರುವುದರ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಉತ್ತರ: ಸಮಾಜದ್ರೋಹಿ, ಧರ್ಮದ್ರೋಹಿ ನಾಯಕನನ್ನು ಪವಿತ್ರ ಕುರ್‍ಆನ್ ‘ತಾಗೂತ್’ (ಅತಿಕ್ರಮಿ) ಎಂದು ಕರೆಯುತ್ತದೆ. ಇದು ವಿಶಾಲಾರ್ಥದ ಪದವಾಗಿದೆ. ತನ್ನ ನ್ಯಾಯಬದ್ಧ ಮೇರೆಯನ್ನು ವಿೂರುವ ಅಂದರೆ ದಾಸ್ಯ ತನದ ಮೇರೆಯನ್ನು ವಿೂರಿ ಸ್ವತಃ ದೇವತ್ವವನ್ನು ಮೆರೆದು ಅಥವಾ ಒಡೆತನದ ಸೋಗು ತೋರಿಸಿ ದೇವನ ಸೃಷ್ಟಿಗಳಿಂದ ತನ್ನ ದಾಸ್ಯತನವನ್ನು ಮಾಡುವವನಾಗಿದ್ದಾನೆ. ಅಂಥವನನ್ನು ಧಿಕ್ಕರಿಸಬೇಕೆಂದು ಪವಿತ್ರ ಕುರ್‍ಆನ್ ವಿಶ್ವಾಸಿಗಳಿಗೆ ಕರೆ ಕೊಡುತ್ತದೆ. ಏಕೆಂದರೆ ಅವನು ಮನುಷ್ಯರನ್ನು ತಮ್ಮ ದಾಸರಾಗಿ ಮಾಡಲು ಪ್ರಯತ್ನಿಸುತ್ತಾನೆ. ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕರೆದೊಯ್ಯುತ್ತಾನೆ. ಕೊನೆಗೆ ಅದು ಅವರನ್ನು ನರಕಕ್ಕೆ ಕೊಂಡೊಯ್ಯುತ್ತದೆ. ಪವಿತ್ರ ಕುರ್‍ಆನ್ ಹೇಳುತ್ತದೆ: ತಾಗೂತನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿ ಕೊಂಡನು (2:256).

ಅವರು ಇವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಎಳೆದೊಯ್ಯುತ್ತಾರೆ. ಇವರು ನರಕಾಗ್ನಿಯವರಾಗಿದ್ದು ಸದಾ ಅಲ್ಲೇ ಇರುವರು. (2:257)

ಧರ್ಮ ದ್ರೋಹಿಗಳು ಅವರನ್ನು ಅನುಸರಿಸುವವರನ್ನು ಧರ್ಮ ದ್ರೋಹಿಗಳನ್ನಾಗಿ ಮಾಡುತ್ತಾರೆ. ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸಿ ಇತರ ಯಾರ ಆಜ್ಞೆಯನ್ನು ಪಾಲಿಸಬಾರದೆಂದು ವಿಶ್ವಾಸಿಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಪ್ರವಾದಿ(ಸ) ಹೇಳಿದರು- ದೇವನ ಆಜ್ಞೋಲ್ಲಂಘನೆ ಮಾಡಿ, ಯಾರನ್ನೇ ಅನುಸರಿಸುವುದು ಧರ್ಮ ಸಮ್ಮತವಲ್ಲ.

ಪರಲೋಕದಲ್ಲಿ ದೇವಧಿಕ್ಕಾರಿಗಳನ್ನು ಅನುಸರಿಸಿ ನಡೆದವರು ತಮ್ಮ ನಾಯಕರ ಜೊತೆಯಲ್ಲಿ ನರಕದಲ್ಲಿರುವರು. ಅಲ್ಲಿ ಅವರ ಸ್ಥಿತಿಯನ್ನು ಕುರ್‍ಆನ್ ಈ ರೀತಿ ಚಿತ್ರೀಕರಿಸಿದೆ.

“ಅಂದು ಅವರು ಯಾವ ಮಿತ್ರನನ್ನು ಸಹಕಾರಿಯನ್ನು ಪಡೆಯಲಾರರು. ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ಅಯ್ಯೋ! ನಾವು ಅಲ್ಲಾಹ್ ಮತ್ತು ಪ್ರವಾದಿಯವರನ್ನು(ಸ) ಅನುಸರಿಸುತ್ತಿದ್ದರೆ! ಎನ್ನುವರು” ಮತ್ತು ಮುಂದುವರಿದು, “ನಮ್ಮ ಪ್ರಭೂ! ನಾವು ನಮ್ಮ ಸರದಾರರನ್ನು ಹಾಗೂ ಹಿರಿಯರನ್ನು ಅನುಸರಿಸಿದೆವು. ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು. ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಯಾತನೆ ಕೊಡು. ಅವರನ್ನೂ ಅತ್ಯುಗ್ರವಾಗಿ ಶಪಿಸು ಎಂದೂ ಹೇಳುವರು.” (ಅಲ್ ಅಹ್‍ಝಾದ್: 65-68)

ಆದ್ದರಿಂದ ಸಮಾಜ ದ್ರೋಹಿ, ಧರ್ಮ ದ್ರೋಹಿಗಳಾದ ನಾಯಕರನ್ನು ಅವರ ದಬ್ಬಾಳಿಕೆಗೆ, ಬೆದರಿಕೆಗೆ ಹೆದರಿಯೋ, ಅವರ ಆಮಿಷಗಳಿಗೆ ಬಲಿಯಾಗಿಯೇ ಅನುಸರಿಸುವುದು ಮಹಾ ಪಾಪವಾಗಿದೆ. ಅದರ ಅಂತಿಮ ಪರಿಣಾಮ ಬಹಳ ಕೆಟ್ಟದಾಗಿರುವುದೆಂದು ವ್ಯಕ್ತವಾಗುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *