Home / ಲೇಖನಗಳು (page 48)

ಲೇಖನಗಳು

‘ಧರ್ಮ ಗ್ರಂಥ’ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಎಂ. ಅಶೀರುದ್ದೀನ್ ಆಲಿಯ, ಮಂಜನಾಡಿ “ಓ ಪೈಗಂಬರರೇ, ಅವನು ನಿಮ್ಮ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಇದು ಸತ್ಯವನ್ನು ತಂದಿದೆ. ಇದು ಈ ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ. ಇದಕ್ಕಿಂತ ಮುಂಚೆ ಅವನು ಮಾನವನ ಸನ್ಮಾರ್ಗದರ್ಶನಕ್ಕಾಗಿ ತೌರಾತ್  ಮತ್ತು ಇಂಜೀಲನ್ನು ಅವತೀರ್ಣಗೊಳಿಸಿದ್ದನು ಮತ್ತು ಅವನು `ಸತ್ಯಾಸತ್ಯತೆಗಳ ತಾರತಮ್ಯ ತೋರಿಸುವ’ ಒರೆಗಲ್ಲನ್ನೂ ಅವತೀರ್ಣಗೊಳಿಸಿರುತ್ತಾನೆ.” (ಆಲಿ ಇಮ್ರಾನ್: 3) ಕಾಲ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಪ್ರವಾದಿಗಳ ಆಗಮಿಸಿದ್ದಾರೆ. ಜನರನ್ನು ಅನೈತಿಕ, ಅಕ್ರಮ, …

Read More »

ವುಝೂ: ನಮಾಝ್‍ನ ಒಂದು ಭಾಗ

@ ಖಾಲಿದ್ ಮೂಸಾ ನದ್ವಿ ಮನಸ್ಸಿನ ಶುದ್ಧಿಗೆ ಪ್ರಾಮುಖ್ಯತೆ ನೀಡುವ ಇಸ್ಲಾಂ ಶರೀರದ ಶುಚಿತ್ವದ ಕಡೆಗೂ ಹೆಚ್ಚಿನ ಗಮನ ನೀಡುತ್ತದೆ. ದೇಹ, ವಸ್ತ್ರ, ವಾಸಿಸುವ ಸ್ಥಳ, ಪ್ರಯಾಣಿಸುವ ವಾಹನ, ಚಪ್ಪಲಿ ಎಲ್ಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಇಸ್ಲಾಮ್ ಸ್ಪಷ್ಟವಾಗಿ ಆದೇಶಿಸುತ್ತದೆ. ಬಾಹ್ಯ ಶುದ್ಧಿಯ ಪ್ರಾಧಾನ್ಯತೆಯ ಕುರಿತು ಪ್ರವಾದಿಯವರ(ಸ) ಮಾತುಗಳು ಬಹಳ ಪ್ರಸಿದ್ಧವಾಗಿವೆ. ಶುಚಿತ್ವವು ಈಮಾನ್‍ನ ಅರ್ಧಾಂಶವಾಗಿದೆ ಎಂಬುದೇ ಆ ವಚನದ ಸಾರ. ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಲಿನ್ಯವನ್ನು ಸರಿಯಾಗಿ ಸಂಸ್ಕರಿಸುವುದು, …

Read More »

ರಾತ್ರಿ ನಮಾಝ್ ರೂಢಿಸಿಕೊಳ್ಳಿ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬೀ ಉಮಾಮತ್ ಅಲ್‍ಬಾಹಿಲೀ(ರ) ಖಾಲ: ಖಾಲ ರಸೂಲುಲ್ಲಾಹಿ ಸಲ್ಲಲ್ಲಾಹುವಲೈಹಿ ವಸಲ್ಲಮ ಅಲೈಕುಂ ಬಿಕಿಯಾಮಿಲ್ಲೈಲಿ ಫಿಇನ್ನಹು ದಅïಬು ಸ್ಸಾಲಿಹೀನ ಕಬ್‍ಲಕುಂ ವಇನ್ನ ಕಿಯಾಮುಲ್ಲೈಲಿ ಕುರ್‍ಬತ್ಗುಂ ಇಲಲ್ಲಾಹಿ ವಮನ್‍ಹಾತು  ಲಿನಿಲ್ ಇಸ್ಮಿ ವತಕ್‍ಫೀರುಲ್ಲಿ ಸಯ್ಯಿಅತಿ ವಮತ್‍ರದತುಲ್ಲಿದ್ದಾಇ ಅನಿಲ್ ಜಸದಿ. (ತಿರ್ಮಿದಿ) ಅಬೂ ಉಮಾಮ(ರ) ರಿಂದ ವರದಿಯಾಗಿದೆ. ಅಲ್ಲಾಹನ ಪ್ರವಾದಿ ಹೇಳಿದರು: “ನೀವು ರಾತ್ರಿ ನಮಾಝ್ ನಿರ್ವಹಿಸುತ್ತಲಿರಿ. ಅದು ಪೂರ್ವಿಕರಾದ ಸಜ್ಜನರ ರೀತಿಯಾಗಿದೆ. ಅದು ಅಲ್ಲಾಹನ ಸಾಮಿಪ್ಯವನ್ನು ಗಳಿಸಿಕೊಡುತ್ತದೆ. …

Read More »

ಅನಗತ್ಯ ಚಿಂತೆ ಮಾಡಬಾರದು

@ ಎಮ್ಮೆಸ್ಕೆ ಮಾನವರಲ್ಲಿ ಹೆಚ್ಚಿನವರಿಗೆ ಒಂದಲ್ಲೊಂದು ರೀತಿಯ ಚಿಂತೆ ಕಾಡುತ್ತಿರುತ್ತದೆ. ಪರಿಸ್ಥಿತಿ ಹದಗೆಡುತ್ತಿದೆಯೆಂದು ಅವರು ಭಾವಿಸುತ್ತಾರೆ. ಅದೊಂದು ಮಾನಸಿಕ ತೊಳಲಾಟವಾಗಿದೆ. ಇಂದಿನ ಕಾಲದಲ್ಲಿ ಜನಸಾಮಾನ್ಯರು ಈ ಅಸ್ವಸ್ಥತೆಗೆ ಸಿಲುಕಿರುವುದು ಕಂಡು ಬರುತ್ತದೆ. ಈ ಚಿಂತೆಯು ಮನುಷ್ಯನಲ್ಲಿ ಅನೇಕ ರೀತಿಯ ಮಾನಸಿಕ ಮತ್ತು ಶಾರೀರಿಕ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ. ಇದರಿಂದ ಮನಸ್ಸಿನಲ್ಲಿ ಒಂದು ರೀತಿಯ ಭಯವೂ ಉಂಟಾಗುತ್ತದೆ. ಇದು ತೀವ್ರ ಕಳವಳಕ್ಕೆ ಕಾರಣವಾಗುತ್ತದೆ. ಮನುಷ್ಯನ ಕೆಟ್ಟ ಅಭ್ಯಾಸವೇನೆಂದರೆ ತನ್ನಲ್ಲೇಳುವ ಭಾವನೆಗಳನ್ನು ಸ್ವಯಂ ದಮನಿಸ …

Read More »

ಕುರ್‍ಆನ್ ಓದುವಾಗ ಗಮನಿಸಬೇಕಾದದ್ದು

@ ಕೆ.ಸಿ. ಜಲೀಲ್ ಪಿ. ಪವಿತ್ರ ಕುರ್‍ಆನನ್ನು ಅರ್ಥ ಸಹಿತ ಓದಬೇಕೆಂಬ ವಿಚಾರ ಈಗ ಹೆಚ್ಚಿನ ಮುಸ್ಲಿಮರಿಗೆ ಮನವರಿಕೆಯಾಗಿದೆ. ಕುರ್‍ಆನ್ ಅನ್ನು ಅನುವಾದಿಸುವುದು ತಪ್ಪು ಎಂಬ ವಾದ ಈಗ ಕೇಳಿ ಬರುವುದಿಲ್ಲ. ಮಾತ್ರವಲ್ಲ, ಅಂತಹ ವಾದಗಳನ್ನು ಮಾಡುತ್ತಿದ್ದವರು ಕೂಡಾ ಇಂದು ಕುರ್‍ಆನ್ ಅನುವಾದಿಸುತ್ತಿದ್ದಾರೆ. ಕುರ್‍ಆನ್ ಕಲಿಕಾ ತರಗತಿಗಳನ್ನು ಕೂಡಾ ಬಹಳ ಮುತುರ್ವರ್ಜಿಯಿಂದ ನಡೆಸಲಾಗುತ್ತಿದೆ. ಆದರೆ ಸಂಘಟನೆಗಳು ಅದು ಅವರ ಸಂಘಟನೆಯ ಕಾರ್ಯಕ್ರಮಗಳು ಎಂಬ ರೀತಿಯಲ್ಲಿ ಕುರ್‍ಆನ್ ಕಲಿಕೆಯನ್ನು ಮಾಡುವಾಗ ಉಂಟಾಗುವ …

Read More »

ಮಹಿಳಾ ದಿನಾಚಾರಣೆ ಮತ್ತು ಮಹಿಳೆ

@ ನಝೀರ್ ಅಹ್ಮದ್ ಕಾಜಿ, ವಿಜಯಪುರ ಮಾರ್ಚ್ 8 ಬಂದರೆ ಸಾಕು ಮಹಿಳೆಯರಿಗೆ ಸನ್ಮಾನ, ಪುರಸ್ಕಾರದಂತಹ ಸಮಾರಂಭಗಳು ಜೋರಾಗಿಯೇ ನಡೆಯುತ್ತವೆ. ಇವತ್ತು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಮಹಿಳಾ ದಿನಾಚರಣೆ ಬಹಳ ಹೆಮ್ಮೆಯಿಂದ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಆ ದಿನದ ಬಳಿಕ ಮತ್ತೆ ಯಥಾ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ವಿಕೃತ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ನಾವು ಇವತ್ತು ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. …

Read More »

ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹತ್ತು ಸೂತ್ರಗಳು

@ ಜಾಸಿಮುಲ್ ಮುತವ್ವ. ದಾಂಪತ್ಯ ಮತ್ತು ಕುಟುಂಬ ಸಂಬಂಧದ ಸಮಸ್ಯೆಗಳ ಪರಿಹಾರದ ಸಂದರ್ಭದಲ್ಲಿ ಅನೇಕ ಬಾರಿ ಸಮಸ್ಯೆಗಳು  ಜಟಿಲವಾಗುತ್ತಾ ಹೋಗುವ ಸಂಭವ ಉಂಟಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರೀತಿ ಅವಲಂಭಿಸದ ಕಾರಣ  ಇದು ಸಂಭವಿಸುತ್ತದೆ. ಹೆಚ್ಚಿನ ಕುಟುಂಬಗಳು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ನಾನು ಹತ್ತು ವಿಚಾರಗಳನ್ನು  ಉಪದೇಶಿಸುತ್ತೇನೆ. 1. ತಕ್ಷಣದ ಪ್ರತಿಕ್ರಿಯೆ, ಹತೋಟಿ ಮೀರಿದ ಮಾತು ಮತ್ತು ಉದ್ರೇಕಕಾರೀ ಮನೋಭಾವ ಸಮಸ್ಯೆಯನ್ನು ಹೆಚ್ಚು  ಜಟಿಲಗೊಳಿಸುತ್ತದೆ. ಆದ್ದರಿಂದ ಸಮಸ್ಯೆಗಳು ಉಂಟಾದಾಗ ಮನಸ್ಸು …

Read More »

ಪ್ರತ್ಯೇಕಿಸುವ ತಲಾಕ್‍ನ ಬಗ್ಗೆ ಗೊತ್ತಿರುವ ಎಷ್ಟು ಮಂದಿಗೆ ಜೋಡಿಸುವ ಝಕಾತ್‍ನ ಬಗ್ಗೆ ಗೊತ್ತಿದೆ?

@ ಏ.ಕೆ. ಕುಕ್ಕಿಲ ಪವಿತ್ರ ಕುರ್‍ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್‍ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ  ಅಧ್ಯಾಯವಾದ ಅಲ್ ಮೂಮಿನೂನ್‍ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್ ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್‍ನ 7ನೇ ಸೂಕ್ತಗಳೆಲ್ಲ ನಮಾಝ್ ಮತ್ತು ಝಕಾತನ್ನು ಜೊತೆ ಜೊತೆಯಾಗಿಯೇ ಉಲ್ಲೇಖಿಸಿವೆ. …

Read More »

ಅಲ್ಲಾಹನೇ ವಾಗ್ವಾದಕ್ಕಿಳಿಯುವ 3 ವಿಭಾಗಗಳು

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬೀ ಹುರೈರತ(ರ) ಅನ್ಹು- ಅನಿನ್ನಬೀ(ಸ) ಕಾಲ: ಕಾಲಲ್ಲಾಹು ಅಝ್ಝವಜಲ್ಲ: ಸಲಾಸತುನ್ ಅನ ಖ್ವಸ್‍ಮುಹುಮ್ ಯೌಮಲ್ ಕಿಯಾಮತಿ, ರಜುಲುನ್ ಅಅïತ್ವಯೀಬೀ ಸುಮ್ಮ ಘ್ವದರ, ವರಜುಲುನ್ ಬಾಅ ಹುರ್ರನ್ ಫಕಲ ಸಮನಹು,  ವರಜುಲುನ್‍ಸ್‍ತಅïಜರ ಅಜೀರನ್ ಫಸ್ವವುಫ ಮಿನ್‍ಹು, ವಲಮ್ ಯುಅïತಿ ಅಜ್‍ರಹು (ರವಾಹುಲ್ ಬುಖಾರಿ). ಅಬೂ ಹುರೈರ(ರ)ರಿಂದ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಹೀಗೆ ಹೇಳಿದ್ದಾನೆ, “ಅಂತ್ಯ ದಿನದಲ್ಲಿ ನಾನು ಮೂರು ವ್ಯಕ್ತಿಗಳೊಂದಿಗೆ ವಾಗ್ವಾದಕ್ಕಿಳಿಯುತ್ತೇನೆ. ನನ್ನ ಹೆಸರಿನಲ್ಲಿ ಮಾತು …

Read More »

ಅತ್ತ್ಯುತ್ತಮವಾದುದನ್ನೇ ಬಯಸಬೇಕು

@ ಎಮ್ಮೆಸ್ಕೆ ನಾವು ಯಾವಾಗಲೂ ಅತ್ತ್ಯುತ್ತಮವಾದ ವಸ್ತುಗಳನ್ನೇ ಇಷ್ಟಪಡುತ್ತೇವೆ. ಅದು ಸುಂದರವಾಗಿರಬೇಕು. ಅದರಿಂದ ನಮಗೆ ಆನಂದವಾಗಬೇಕು. ಅದು ನಮಗೆ ಸಂತೃಪ್ತಿ ನೀಡಬೇಕು. ಅದನ್ನು ಉಪಯೋಗಿಸುವುದರಿಂದ ನಮಗೇನೂ ಹಾನಿಯುಂಟಾಗಬಾರದೆಂದು ಬಯಸುತ್ತೇವೆ. ಉದಾ: ನಾವು ಒಂದು ಹಣ್ಣನ್ನು ತಿನ್ನಬಯಸುವಾಗ ಅದು ಸಿಹಿಯಾಗಿರಬೇಕು. ಸುವಾಸನೆಯಿಂದ ಕೂಡಿರಬೇಕು. ನೋಡಲೂ ಅದು ಚಂದವಾಗಿರಬೇಕೆಂದು ಬಯಸುತ್ತೇವೆ. ಮಾವಿನ ಹಣ್ಣನ್ನು ತಿನ್ನ ಬಯಸುವುದಾದರೆ, ರಸಭರಿತ, ಸ್ವಾದಿಷ್ಟ ಮತ್ತು ಜೀರ್ಣಕ್ಕೆ ತೊಂದರೆಯಾಗದಂತಹ ಹಣ್ಣನ್ನು ಆಯ್ಕೆ ಮಾಡುತ್ತೇವೆ. ಅದು ನಮ್ಮ ಮನಸ್ಸಿಗೆ ತೃಪ್ತಿ …

Read More »