ಎ.ಕೆ. ಕುಕ್ಕಿಲ ಮನುಷ್ಯನಿಗೆ ಸಂಬಂಧಿಸಿ ಅತಿ ಹೆಚ್ಚು ಅಮಾನವೀಯವಾಗಿ ನಡೆದುಕೊಂಡಿರುವುದು ಯಾರು ಅನ್ನುವ ಬಹುಮುಖ್ಯವಾದ ಪ್ರಶ್ನೆಗೆ ಕೊರೋನಾ ಮತ್ತೊಮ್ಮೆ ಜೀವವನ್ನು ಕೊಟ್ಟಿದೆ. ಮನುಷ್ಯರ ಪ್ರಾಣಗಳಿಗೆ ಎರಡು ವಿಧದಲ್ಲಿ ಅಪಾಯಗಳು ಎದುರಾಗುತ್ತವೆ. ಒಂದು- ನಿಸರ್ಗದತ್ತವಾದುದು. ಎರಡು- ಮಾನವ ಜನ್ಯವಾದುದು. ಸಾಂಕ್ರಾಮಿಕ ರೋಗಗಳು, ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿಗಳು ಮಾನವ ನಿಯಂತ್ರಣವನ್ನು ಮೀರಿದ್ದಾಗಿದೆ. ಇವುಗಳಲ್ಲಿ ಮನುಷ್ಯನ ನೇರಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಮನುಷ್ಯ ನೇರವಾಗಿ ಸುನಾಮಿಯನ್ನು ಉತ್ಪಾದಿಸುವುದಿಲ್ಲ. ಭೂಕಂಪನವನ್ನು ಹುಟ್ಟುಹಾಕಿ ಸಂಭ್ರಮಿಸುವುದಿಲ್ಲ. ಕೊರೋನಾವಾಗಲಿ, …
Read More »ಶುಚಿತ್ವವೇ ಕೊರೋನಾಕ್ಕಿರುವ ಪ್ರತಿರೋಧ!
@ ಸಲೀಮ್ ಬೋಳಂಗಡಿ ಕೊರೋನಾ ಪಿಡುಗಿಗೆ ಬಲಿಯಾದವರ ಸಂಖ್ಯೆ ನಿರಂತರ ಏರುತ್ತಿದೆ. ವಿಶ್ವವೇ ಕೊರೋನಾ ಮಹಾಮಾರಿಗೆ ತಲ್ಲಣಗೊಂಡಿದೆ. ಸಾರಿಗೆ ವ್ಯವಸ್ಥೆ ಕೂಡಾ ಅಸ್ತವ್ಯಸ್ಥಗೊಂಡು ಸ್ಥಬ್ದವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸೇರುವುದರ ವಿರುದ್ಧ ನಿಯಂತ್ರಣ ಹೇರಲಾಗುತ್ತಿದೆ. ಪ್ರಾರ್ಥನಾ ಸ್ಥಳಗಳಲ್ಲಿಯೂ ನಿರ್ಬಂಧ ಹೇರಲಾಗಿದೆ. ಎಲ್ಲೆಡೆ ಜನರು ಬೇಕಾಬಿಟ್ಟಿಯಾಗಿ ಸೇರದಂತೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಒಂದು ರೀತಿಯ ನಿಗೂಢ ಭಯ ಕಾಣಿಸತೊಡಗಿದೆ. ಜನರು ದೇವನ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದಾರೆ. ಮನುಷ್ಯ ಮಾನವೀಯತೆಯನ್ನು ಮರೆತು ಬಿಟ್ಟಿರುವಾಗ …
Read More »ನಿದ್ದೆಯಲ್ಲಿಯೂ ಮಾಸ್ಕ್ ಧರಿಸುವ ಸ್ಥಿತಿ – ಡಾ. ಪಿ.ಎನ್. ಸುರೇಶ್ ಕುಮಾರ್
ಡಾ. ಪಿ.ಎನ್. ಸುರೇಶ್ ಕುಮಾರ್ ವಿಶ್ವವೇ ಇಂದು ಒಂದು ವೈರಸ್ನ ಬೆನ್ನ ಹಿಂದಿದೆ. ಜಾಗತಿಕವಾಗಿ ಆತಂಕ ಹುಟ್ಟುಹಾಕಿ ನಿಲ್ಲದೆ ಮುಂದುವರಿಯುತ್ತಲೇ ಇರುವ ಕೊರೊನಾ ಯಾನೆ ಕೋವಿಡ್ 19 ಈಗ ನಮ್ಮ ಜೀವನ ಚರ್ಯೆಯನ್ನೇ ಬದಲಾಯಿಸುವ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕ್ವಾರಂಟೀನ್, ಐಸೊಲೇಶನ್, ಸೋಶಿಯಲ್ ಡಿಸ್ಟ್ಯಾನ್ಸಿಂಗ್, ಮಾಸ್ಕ್, ಸಾನಿಸೈಟರ್ ಮುಂತಾದುವುಗಳ ಉಪಯೋಗ, ಹ್ಯಾಂಡ್ ವಾಷ್ ಜಾಗೃತಿ ಇತ್ಯಾದಿ ಹಲವು ಉಪಾಯಗಳಿಂದ ವೈರಸ್ ವಿರುದ್ಧ ಪ್ರತಿರೋಧಕ್ಕೆ ಎಲ್ಲರೂ ಸಿದ್ಧವಾಗಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚು …
Read More »ಸಾಂಕ್ರಾಮಿಕ ರೋಗ ಮತ್ತು ಇಸ್ಲಾಮಿ ದೃಷ್ಟಿಕೋನ
ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಿಯ ಬಳಿ ಹೋಗುವುದು ಮತ್ತು ರೋಗಿ ಇತರರ ಬಳಿ ಹೋಗುವುದನ್ನು ಪ್ರವಾದಿ ಮುಹಮ್ಮದ್ (ಸ) ತಡೆದಿದ್ದರು. ಅಂದರೆ ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದು ಕೊಳ್ಳಬೇಕು. ಎಲ್ಲಿಯವರೆಗೆಂದರೆ ಹುಲಿಯಿಂದ ದೂರ ಹೋಗುವಂತೆ ಭಯ ಪಟ್ಟು ದೂರ ಹೋಗಲು ಪ್ರವಾದಿ (ಸ) ಆದೇಶಿಸಿದ್ದು ನಮಗೆ ಹದೀಸಿನಲ್ಲಿ ಕಾಣ ಸಿಗುತ್ತದೆ. ಎಲ್ಲಿಯವರೆಗೆಂದರೆ ರೋಗ ಪೀಡಿತ ಪ್ರಾಣಿಯನ್ನು ಆರೋಗ್ಯವಂತ ಪ್ರಾಣಿಯ ಹತ್ತಿರ ಕೊಂಡು ಹೋಗಬಾರದು. ಯಾಕೆಂದರೆ ಅದರಿಂದ ವೈರಸ್ ಹರಡುವುದು …
Read More »ಪ್ರವಾದಿ ಮುಹಮ್ಮದ್ (ಸ) ಕಲಿಸಿದ ಶುಚಿತ್ವ ಮತ್ತು ಆಧುನಿಕ ವೈರಸ್
ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ ವಿಷಯಗಳಿವು. ಈ ವಿಷಯಗಳು ಮನುಷ್ಯನ ಪ್ರಕೃತಿಯಲ್ಲಿ ಇರಬೇಕು ಎಂದು ಅವರು ತಾಕೀತು ಮಾಡಿದ್ದರು. ಎಲ್ಲಾ ಪೂರ್ವ ಪ್ರವಾದಿಗಳೂ ಇದನ್ನು ಜನರಿಗೆ ಬೋಧಿಸಿದ್ದರು. ಆದ್ದರಿಂದ ಎಲ್ಲಾ ಧರ್ಮದಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಈ ಬೋಧನೆಗಳು ಕೋರೋನಾ ಮಾತ್ರವಲ್ಲ, ಎಲ್ಲಾ ಬಗೆಯ ವೈರಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಈ ಜೀವನದ ಶಿಷ್ಟಾಚಾರವನ್ನು ಪಾಲಿಸುವುದೇ ಧರ್ಮ ಆಗಿದೆ. 1. ಕಸ್ಸುಶ್ಶಾರಿಕ್ ಅಂದರೆ ನೇತಾಡುತ್ತಿರುವ ಮೀಸೆಗಳನ್ನು …
Read More »ಧಾರ್ಮಿಕ ಸೌಹಾರ್ದ ಮತ್ತು ಇಸ್ಲಾಂ ಧರ್ಮ ಭಾಗ – 8
ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ ಸ ರವರು ಹೇಳಿದ್ದಾರೆ. ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ. ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ …
Read More »ಇಸ್ಲಾಮೋಫೋಬಿಯಾ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಅನಸಿಬ್ನಿ ಮಾಲಿಕಿನ್ ರದಿಯಲ್ಲಾಹು ಅನ್ಹು ಕಾಲ; ಕಾಲ ರಸೂಲುಲ್ಲಾಹಿ(ಸ) ಯಅïತೀ ಅಲನ್ನಾಸಿ ಝಮಾನುನ್ ಅಸ್ಸಾಬಿರು ಫೀಹಿಮ್ ಅಲಾ ದೀನಿಹಿ ಕಲ್ಕಾಬಿದಿ ಅಲಲ್ ಜಮ್ರಿ. (ರವಾಹು ತಿರ್ಮಿದಿ) ಪ್ರವಾದಿಯವರು(ಸ) ಹೇಳಿದರು: ಜನರಿಗೆ ಒಂದು ಕಾಲ ಬರಲಿದೆ. ತನ್ನ ಧರ್ಮದಲ್ಲಿ ಓರ್ವರು ಸ್ಥಿರವಾಗಿ ನಿಲ್ಲುವುದು ಬೆಂಕಿಯ ಕೆಂಡವನ್ನು ಕೈಯಲ್ಲಿ ಹಿಡಿಯುವುದಕ್ಕೆ ಸಮಾನವಾಗಿರುತ್ತದೆ. ಈ ಹದೀಸ್ ಇಸ್ಲಾಮ್ ಧರ್ಮವನ್ನು ಅನುಸರಿಸಿ, ಅದರ ಮೌಲ್ಯಗಳನ್ನು ರೂಢಿಸಿ ಬದುಕಬೇಕೆಂದು ಬಯಸುವವರಿಗೆ ಈ …
Read More »ಭಯ ಆತಂಕ ಹೆಚ್ಚಾದಾಗ…
@ ಮುಹಮ್ಮದ್ ಯೂಸುಫ್ ಇಸ್ಲಾಹಿ ಮಾನವೀಯ ವಿರೋಧಿಗಳು ಕೊಲೆ, ಅತಿಕ್ರಮ ನಡೆಸಿ ಬೆದರಿಸುವಾಗ ಅಥವಾ ಪ್ರಕೃತಿ ದುರಂತಗಳು ನಮ್ಮನ್ನು ಭಯವಿಹ್ವಲಗೊಳಿಸುವಾಗ ನಮ್ಮ ವಿಶ್ವಾಸದ ಆಂತರಿಕ ದೃಷ್ಟಿಕೋನದೊಂದಿಗೆ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಬೇಕು. ಬಳಿಕ ಕೆಲವು ಔಪಚಾರಿಕ ಯೋಜನೆಗಳಿಗಾಗಿ ಸಮಯ ವ್ಯಯಿಸುವ ಬದಲು ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯು ನೀಡುವ ಮಾರ್ಗದರ್ಶನದೆಡೆಗೆ ನಮ್ಮ ಗಮನ ಕೇಂದ್ರೀಕರಿಸಬೇಕು. ಕುರ್ಆನ್ ಹೇಳುತ್ತದೆ: “ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ …
Read More »ನಿಂದ್ಯನಾದ ಫರೋವ
@ ಎಸ್ಸೆಮ್ಕೆ ಅನುವಾದ: ಸಲ್ಪಿತ ಪುರಾತನ ಕಾಲದಲ್ಲಿ ಈಜಿಪ್ಟ್ ಭಾರೀ ಪ್ರಸಿದ್ಧಿ ಪಡೆದ ದೇಶವಾಗಿತ್ತು. ಆ ದೇಶವನ್ನು ಆಳುತ್ತಿದ್ದ ರಾಜರನ್ನು`ಫರೋವ’ ಎಂದು ಕರೆಯುತ್ತಿದ್ದರು. ಈ ಫರೋವಗಳು ಸೂರ್ಯನ ಅವತಾರವೆಂದೂ, ಪ್ರತಿರೂಪವೆಂದೂ ಜನರು ನಂಬಿದ್ದರು. ಹಾಗೆಯೇ ವಿಶ್ವಾಸ ತಾಳುವಂತೆ ಈ ದೊರೆಗಳು ಮಾಡಿದ್ದರು. ಒತ್ತಾಯಿಸಿದ್ದರು. ಇಂತಹ ಓರ್ವ ಫರೋವನ ಕತೆ ಪವಿತ್ರ ಕುರ್ಆನ್ ವಿವರಿಸಿದೆ. ತೀವ್ರವಾದ ಕೋಮು, ಮತಾಂಧತೆ ಹೊಂದಿದ್ದ ಕೋಪ್ಟ್ ವಂಶಸ್ತರು ಈಜಿಪ್ಟ್ ನಲ್ಲಿ ಮೇಧಾವಿತ್ವ ಹೊಂದಿದ್ದರು. ಈ ದೇಶದ …
Read More »ಇಸ್ಲಾಮ್ ಮತ್ತು ಪ್ರಜಾತಂತ್ರ
ಮುಹಮ್ಮದ್ ಇಸ್ಲಾಮ್ ಇಸ್ಲಾಮ್ ಧರ್ಮದ ವಿರುದ್ಧ ಹಲವಾರು ವರ್ಷಗಳಿಂದ ತಪ್ಪುಕಲ್ಪನೆಗಳ ಪ್ರಚಾರ ನಡೆಯುತ್ತಾ ಬಂದಿದೆ. ಇಂದಿಗೂ ಕೆಲವು ವರ್ತುಲಗಳಲ್ಲಿ ಇಸ್ಲಾಮ್ ಧರ್ಮವು ನಿರಂಕುಶ ಸಿದ್ಧಾಂತದ ವಾಹಕವೆಂದು ಭಾವಿಸಲಾಗುತ್ತಿದೆ. ಕೆಲವು ನಾಮಧಾರಿ ಮುಸ್ಲಿಮರ ದುಷ್ಕ್ರತ್ಯಗಳನ್ನು ಎತ್ತಿ ಹಿಡಿದು ಈ ಸತ್ಯ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬರಹ. ಯಾವ ಧರ್ಮವು ಭೂಲೋಕಕ್ಕೆ ಮೊತ್ತ ಮೊದಲು ಪ್ರಜಾ ಪ್ರಭುತ್ವದ ಸಿದ್ಧಾಂತಗಳನ್ನು ಪರಿಚಯಿಸಿತೋ, ಇಂದು ಅದೇ ಧರ್ಮವನ್ನು ನಿರಂಕುಶ ಪ್ರಭುತ್ವದ ಪ್ರತಿಪಾದಕ …
Read More »
IslamKannada News Portal