ಅಶೀರುದ್ದೀನ್ ಆಲಿಯಾ, ಮಂಜನಾಡಿ “ನೀವು ಪ್ರಯಾಣದಲ್ಲಿದ್ದು ಕರಾರು ಪತ್ರವನ್ನು ಬರೆಯಿಸಲು ಬರವಣಿಗೆಗಾರರೂ ಸಿಗದಿದ್ದರೆ, ಅಡವು ಪಡೆದು ವ್ಯವಹಾರ ನಡೆಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವಿರಿಸಿಕೊಂಡು ವ್ಯವಹಾರವನ್ನೇನಾದರೂ ನಡೆಸಿಕೊಂಡರೆ, ವಿಶ್ವಾಸವಿರಿಸಲ್ಪಟ್ಟಾತನು `ಅಮಾನತನ್ನು’ ಹಿಂದಿರುಗಿಸಬೇಕು ಮತ್ತು ತನ್ನ ಪಾಲಕ ಪ್ರಭುವಾದ ಅಲ್ಲಾಹನನ್ನು ಭಯಪಡಬೇಕು. ನೀವು ಸಾಕ್ಷ್ಯವನ್ನು ಅಡಗಿಸಬೇಡಿರಿ. ಸಾಕ್ಷ್ಯವನ್ನಡಗಿಸುವಾತನ ಹೃದಯವು ಪಾಪ ಕಲುಷಿತವಾಗಿದೆ ಮತ್ತು ಅಲ್ಲಾಹ್ ನಿಮ್ಮ ಕರ್ಮಗಳಿಂದ ಅಜ್ಞನಾಗಿಲ್ಲ.” (ಅಲ್ಬಕರ: 283) ಮಾನವರ ನಡುವೆಯಿರುವ ವ್ಯವಹಾರದಲ್ಲಿ `ಅಮಾನತ್’ ಅಥವಾ ವಿಶ್ವಾಸ, ನಂಬಿಕೆ, ಭರವಸೆ, …
Read More »‘ಸಾಲವೂ ಒಂದು ದಾನ’ ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ, ಮಂಜನಾಡಿ “ನಿಮ್ಮ ಸಾಲಗಾರರು ಕಾಸಿಲ್ಲದವರಾದರೆ ಅವರಿಗೆ ಸುಸ್ಥಿತಿಯುಂಟಾಗುವ ತನಕ ಸಮಯಾವಕಾಶ ಕೊಡಿರಿ ಮತ್ತು ನೀವು ದಾನ ರೂಪದಲ್ಲಿ ಸಾಲವನ್ನೇ ಬಿಟ್ಟುಕೊಟ್ಟರೆ ಅದು ನಿಮ್ಮ ಮಟ್ಟಿಗೆ ಇನ್ನಷ್ಟು ಉತ್ತಮವಾಗಿರುವುದು ನೀವು ಅರಿತವರೇ ಆಗಿದ್ದರೆ.” (ಅಲ್ಬಕರ 280) ಅರ್ಥ ವ್ಯವಸ್ಥೆಯಲ್ಲಿ ಸಾಲವೂ ಒಂದು ಘಟಕವಾಗಿದೆ. ಸಾಲ ಎಂದರೆ ಕಡ, ಋಣ, ಕ್ರೆಡಿಟ್. ಅರಬಿಕ್ನಲ್ಲಿ `ಕರ್ಝ್’ ಎಂದು ಕರೆಯುತ್ತೇವೆ. ಎರವಲು ಒಂದು ಬಗೆಯ ಸಾಲವಾಗಿದೆ. ಹಣದ ರೂಪದಲ್ಲಿ ವಸ್ತ್ರಗಳ ರೂಪದಲ್ಲಿ, …
Read More »ಒಮ್ಮೆ ಅತ್ತು ಬಿಡೋಣ, ನಾವು ಅಳುವುದು ಯಾವಾಗ?
@ ಪಿ.ಎಂ.ಎ. ಗಫೂರ್ ಮನದಲ್ಲಿ ಕೆಲವು ನೆನಪುಗಳು ಮರುಕಳಿಸಿದಾಗ, ನೆನಪಿನ ಬಾಣಗಳು ಹೃದಯವನ್ನು ಚುಚ್ಚಿದಾಗ, ಗತ ಕಾಲದ ದುಃಖದ ನೆನಪಿನ ಪುಟಗಳನ್ನು ಮತ್ತೊಮ್ಮೆ ತೆರೆದು ನೋಡಿದಾಗ, ನಮ್ಮಿಂದ ಅಗಲಿದವರ ನೆನಪು ಮರುಕಳಿಸಿದಾಗ ಬದುಕಿನ ಅತ್ಯಂತ ನೊಂದ ಘಟನೆಗಳನ್ನು ಸ್ಮರಿಸುವಾಗ ಕಣ್ಣುಗಳು ನೀರಿನಿಂದ ತುಂಬುತ್ತವೆ. ಹಠಾತ್ತನೆ ಕಣ್ಣು ನೀರಿಂದ ತುಂಬಿ ತುಳುಕುವ ಕೆಲವರಿದ್ದಾರೆ. ಜೀವನದ ಗತ ನೆನಪುಗಳು ಮರುಕಳಿಸಿದಾಗ ಅವರ ಕೆನ್ನೆಯ ಮೇಲೆ ನೀರು ಹರಿದಾಡುತ್ತದೆ. ಅಂತಹವರು ಶುದ್ಧ ಮನಸ್ಕರು. ಇನ್ನು …
Read More »ಖದೀಜ(ರ) ಅವರ ಬದುಕು-ಭಾವ
@ ಶೇಖ್ ಮುಹಮ್ಮದ್ ಕಾರಕ್ಕುನ್ನು ಪ್ರಿಯತಮಾ, ಅಲ್ಲಾಹನಾಣೆ, ಅಲ್ಲಾಹನು ನಿಮ್ಮನ್ನು ಎಂದಿಗೂ ದುಃಖಕ್ಕೀಡು ಮಾಡಲಾರ. ನೀವು ಬಂಧು ಬಳಗದವರೊಂದಿಗೆ ಸದ್ವರ್ತನೆ ತೋರುವವರು, ದೀನದಲಿತರ ಮತ್ತು ಬಡಬಗ್ಗರ ಭಾರ ಹೊರುವವರು. ದರಿದ್ರರಿಗೆ ನೆರವಾಗುವವರು. ಅತಿಥಿಗಳನ್ನು ಗೌರವಿಸುವವರು. ಸಂಕಷ್ಟಗಳ ವೇಳೆಯೂ ಸತ್ಯ ಮತ್ತು ನ್ಯಾಯದ ಪರ ವಹಿಸುವವರು. ಸತ್ಯ ಸಂಧರು” ಎನ್ನುತ್ತಾ ಪ್ರೀತಿಯ ಪತ್ನಿ ಖದೀಜಾ(ರ) ತನ್ನ ಪ್ರಿಯತಮನನ್ನು ಸಾಂತ್ವನಗೊಳಿಸಿದರು. ಮುಹಮ್ಮದರು(ಸ)ರ ಹಿರಾಗುಹೆಯಿಂದ ಬಂದ ಬಳಿಕ ತೀವ್ರ ಕಳವಳಗೊಂಡಿದ್ದರು. ಖದೀಜಾರವರು ಅವರಿಗೆ ಆಹಾರವನ್ನು …
Read More »ಅಪಾಯಕಾರಿ ನಾಲಗೆ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಸುಫ್ಯಾನ್ ಇಬ್ನು ಅಬ್ದಿಲ್ಲಾಹಿ ಅಸ್ಸಖಫಿ(ರ) ಖಾಲ: ಕುಲ್ತು ಯಾ ರಸೂಲಲ್ಲಾಹಿ ಹದ್ದಿಸ್ನೀ, ಬಿಅಮ್ರಿನ್ ಅಅïತಸ್ಸಿಮು ಬಿಹೀ? ಖಾಲ ರಸೂಲುಲ್ಲಾಹಿ(ಸ) ಕುಲ್ ರಬ್ಬಿಯಲ್ಲಾಹು ಸುಮ್ಮಸ್ತಕಿಮ್ ಖಾಲ: ಕುಲ್ತು ಯಾ ರಸೂಲಲ್ಲಾಹಿ ಮಾ ಅಖ್ವಫು ಮಾ ತಖಾಫು ಅಲೈಯ್ಯ? ಫಅಖಝ ಬಿಲಿಸಾನಿ ನಿಫ್ಸಿಹೀ ಸುಮ್ಮ ಖಾಲ ಹಾಝಾ. (ತಿರ್ಮದಿ, ಇಬ್ನುಮಾಜ, ಹಾಕಿಮ) ಸುಫ್ಯಾನ್ ಇಬ್ನು ಅಬ್ದುಲ್ಲ ಅಸ್ಸಖಫಿ(ರ) ರಿಂದ ವರದಿಯಾಗಿದೆ. ನಾನು ಪ್ರವಾದಿ(ಸ)ರಲ್ಲಿ ಕೇಳಿದೆ: “ನಾನು ಪಾಪ …
Read More »ಮುಸ್ಲಿಮೇತರರ ಮಸೀದಿ ಪ್ರವೇಶ
ಪ್ರಶ್ನೆ: ಜಮಾಅತೆ ಇಸ್ಲಾಮೀಯ ವತಿಯಿಂದ `ಮಸೀದಿ ಸಂದರ್ಶನ’ ಎಂಬ ಹೆಸರಿನಲ್ಲಿ ಮುಸ್ಲಿಮೇತರ ಬಾಂಧವರನ್ನು ಮಸೀದಿಗಳಿಗೆ ಕರೆದು ಕಾರ್ಯಕ್ರಮ ಮಾಡುವ ಪ್ರಕ್ರಿಯೆ ನಡೆಯುತ್ತಾ ಇರುವುದು ನನ್ನ ಗಮನಕ್ಕೆ ಬಂದಿದೆ. ಅಶುದ್ದಾವಸ್ಥೆಯಲ್ಲಿರುವವರನ್ನು ಮಸೀದಿಯೊಳಗೆ ಪ್ರವೇಶಗೊಳಿಸುವುದು ನ್ಯಾಯ ಸಮ್ಮತವೇ? ಉತ್ತರ: “ಮಸೀದಿಗಳು ಭಯೋತ್ಪಾದನಾ ಕೇಂದ್ರಗಳಾಗಿವೆ. ಅಲ್ಲಿ ಆಯುಧಗಳನ್ನು ಶೇಖರಿಸಿಡಲಾಗುತ್ತದೆ. ಹಿಂದುಗಳ ವಿರುದ್ಧ ಅಲ್ಲಿ ದ್ವೇಷ ಹರಡುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲಿ ಮುಸಲ್ಮಾನರಲ್ಲದವರನ್ನು ಪ್ರವೇಶ ಮಾಡಗೊಡುವುದಿಲ್ಲ” ಎಂಬಿತ್ಯಾದಿ ವಿಷಯಗಳನ್ನು ದೇಶದ ಉದ್ದಗಲಗಳಲ್ಲಿ ಕೋಮುವಾದಿ ಶಕ್ತಿಗಳು ವ್ಯಾಪಕವಾಗಿ …
Read More »ಆ ಆಮೆಗೆ ಹುಟ್ಟಿದೂರಿಗೆ ದಾರಿ ಹೇಳಿಕೊಡುವವನಾರೋ?
@ ಏ.ಕೆ. ಕುಕ್ಕಿಲ ಜಗತ್ತು ಎಷ್ಟು ಅದ್ಭುತ ಅನಿಸ್ತು. ಮೊನ್ನೆ ಯೂಟ್ಯೂಬ್ ವೀಡಿಯೋಗಳ ಮೇಲೆ ಕಣ್ಣಾಡಿಸ್ತಾ ಇದ್ದಾಗ ಆ ಆಮೆ ಕಾಣಿಸಿಕೊಂಡ್ತು. ಆಮೆಯ ಬಗ್ಗೆ ವಿಪರೀತ ಕುತೂಹಲವೇನೂ ನನ್ನಲ್ಲಿ ಇರಲಿಲ್ಲ. ಆಮೆಗಳು ಸುಮಾರು 80 ವರ್ಷಗಳ ವರೆಗೆ ಬದುಕ್ತವೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚಿನ ವಿವರಗಳೂ ನನ್ನಲ್ಲಿರಲಿಲ್ಲ. ಕುತೂಹಲಕ್ಕೆಂದು ಆ ವೀಡಿಯೋವನ್ನು ವೀಕ್ಷಿಸುತ್ತಾ ಹೋದಂತೆ, ಕುತೂಹಲ ಇಮ್ಮಡಿ ಗೊಳ್ಳುತ್ತಾ ಹೋಯಿತು. ಅತ್ಯಂತ ನಿಧಾನಗತಿಯಿಂದ ಚಲಿಸುವ ಮತ್ತು ಒಂದು ರೀತಿಯಲ್ಲಿ ಅತ್ಯಂತ …
Read More »ಪುರುಷರ ಮನದಲ್ಲಿರುವ ನಾಲ್ಕು ಮಹಿಳೆಯರು
@ ಜಾಸಿಮುಲ್ ಮುತವ್ವ ಈ ಲೇಖನದ ತಲೆ ಬರಹ ನೋಡಿದಾಗ ನೀವು ಬಹುಪತ್ನಿತ್ವದ ಕುರಿತು ಬರೆದಿರಬಹುದು ಎಂದು ಭಾವಿಸಿರಬಹುದು, ವಾಸ್ತವದಲ್ಲಿ ಹಾಗಲ್ಲ. ಪುರುಷರ ಮನದಲ್ಲಿ ನೆಲೆ ಕಾಣುವ ಪ್ರಥಮ ಮಹಿಳೆ ಮಾತೆಯಾದರೆ, ಎರಡನೆ ಸ್ಥಾನ ಅವನ ಪತ್ನಿಗೆ, ಮೂರನೆಯದ್ದು ಸಹೋದರಿ, ನಾಲ್ಕನೆಯದ್ದು ಮಗಳಾಗಿದ್ದಾಳೆ. ಅದರಲ್ಲಿ ಮೊದಲನೆಯವಳದ್ದು ಅಲ್ಲಾಹನ ತೃಪ್ತಿಯ ಭಾಗವಾಗಿದೆ, ಎರಡನೆಯದ್ದು ಮಹಿಳೆಯನ್ನು ಗೌರವಿಸುವುದು ಪ್ರವಾದಿವರ್ಯರ(ಸ) ಸಂದೇಶವನ್ನು ಅನುಸರಿಸು ವುದಾಗಿದೆ. ಮೂರನೆಯದ್ದು ಉತ್ತಮ ಸಂಬಂಧ ಬೆಳೆಸಿದರೆ ಅದು ಅವರ ಪಾಲಿಗೆ …
Read More »ರಜಬ್: ನಮಾಝ್ ಸ್ಪಷ್ಟಪಡಿಸಲಾದ ತಿಂಗಳು
@ ಅಬೂ ಸಲ್ವಾನ್ ಇಂದು ಮುಸ್ಲಿಮ್ ಸಮಾಜದಲ್ಲಿ ರಜಬ್ ತಿಂಗಳಿಗೆ ಹೆಚ್ಚು ಮಹತ್ವ ನೀಡುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಕೆಲ ಮುಸ್ಲಿಮರು ಹೊಸ ಮನೆಯ ಗೃಹ ಪ್ರವೇಶ, ವಿವಾಹ ಮುಂತಾದ ಶುಭ ಸಮಾರಂಭಗಳನ್ನು ನಡೆಸಲು ಈ ತಿಂಗಳನ್ನೇ ಕಾಯುವವರಿದ್ದಾರೆ. ಆದರೆ ಇವೆಲ್ಲ ಯಾರೋ ಮಾಡಿದ್ದ ಸಂಪ್ರದಾಯವನ್ನು ನಮ್ಮ ಮೇಲೆ ನಾವೇ ಹೇರಿದ್ದಾಗಿದೆಯೇ ಹೊರತು ಇಸ್ಲಾಮಿನಲ್ಲಿ ಈ ಬಗ್ಗೆ ಯಾವುದೇ ಆಧಾರ ಪುರಾವೆ ಕಂಡು ಬರದು. ಇತಿಹಾಸದಲ್ಲಿ ಈ ಮಾಸಕ್ಕೆ ಗೌರವವಿದೆ. ಇತಿಹಾಸದ ಅಧ್ಯಯನದ ಮೂಲಕ …
Read More »ಕುರ್ಆನಿನ ಸಾಮಾಜಿಕ ಚಿಂತನೆಗಳು – ಮಾದಕ ವ್ಯಸನ: ಒಂದು ಸಾಮಾಜಿಕ ಪಿಡುಗು
@ ಅಶೀರುದ್ದೀನ್ ಆಲಿಯಾ ಮಂಜನಾಡಿ “ಮದ್ಯಪಾನ ಮತ್ತು ಜೂಜಾಟದ ಬಗ್ಗೆ ಏನು ಆದೇಶವಿದೆಯೆಂದು ಕೇಳುತ್ತಾರೆ. ಹೇಳಿರಿ! ಅವೆರಡರಲ್ಲೂ ಮಹತ್ತರವಾದ ಕೇಡಿದೆ. ಅವುಗಳಲ್ಲಿ ಜನರಿಗೆ ಕೆಲವು ಪ್ರಯೋಜನಗಳು ಇದ್ದರೂ ಅವುಗಳಿಂದಾಗುವ ಹಾನಿಯು ಪ್ರಯೋಜನಗಳಿಗಿಂತ ಬಹಳಷ್ಟು ಹೆಚ್ಚು. ನಾವು ದೇವ ಮಾರ್ಗದಲ್ಲಿ ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ. ನಿಮ್ಮ ಆವಶ್ಯಕತೆಗಿಂತ ಮಿಕ್ಕಿರುವುದನ್ನು ಎಂದು ಹೇಳಿರಿ.” (ಅಲ್ ಬಕರ: 219) ಮದ್ಯಪಾನ ಅಥವಾ ಮಾದಕ ವ್ಯಸನಗಳಿಗೆ ತುತ್ತಾಗುವುದರಿಂದ ಮಾನವನು ಸಮಾಜದಲ್ಲಿ ಎಲ್ಲ ರೀತಿಯ ಅಗೌರವ …
Read More »
IslamKannada News Portal