✍️ಶಾ ನವಾಝ್ ಕೊಡುವಳ್ಳಿ ಮಿತ್ರನ ಆರು ವರ್ಷದ ಪುಟ್ಟ ಮಗುವೊಂದು ಇತ್ತೀಚೆಗೆ ಮರಣ ಹೊಂದಿತು. ಹುಟ್ಟಿದಾಗಲೇ ಆ ಮಗುವಿಗೆ ಹಲವಾರು ದೈಹಿಕ ತೊಂದರೆಗಳಿದ್ದುವು. ಒಂದು ಸಾಮಾನ್ಯ ಕುಟುಂಬವೊಂದಕ್ಕೆ ಯೋಚಿಸಲೂ ಸಾಧ್ಯವಿರದಷ್ಟು ಮೊತ್ತವನ್ನು ಕಳೆದ ಒಂದು ವರ್ಷದಲ್ಲಿ ಆ ಮಗುವಿನ ಚಿಕಿತ್ಸೆಗೆ ವ್ಯಯಿಸಲಾಗಿತ್ತು. ಮಗುವಿನ ಭವಿಷ್ಯವನ್ನು ಸ್ಮರಿಸಿಕೊಂಡು ಶುಭ ನಿರೀಕ್ಷೆಯಿರಿಸಿ ಚಿಕಿತ್ಸೆ ಮಾಡುತ್ತಿರುವಾಗ ಆರೋಗ್ಯ ಸ್ಥಿತಿ ಮತ್ತಷ್ಟು ಹದೆಗೆಟ್ಟು ಆ ಮಗು ವೆಂಟಿಲೇಟರ್ನಲ್ಲಿ ಒಂದು ತಿಂಗಳ ಕಾಲ ಕಳೆದು ಕೊನೆಗೆ ಅಲ್ಲಾಹನತ್ತ …
Read More »ಒಂದು ನೊಣವನ್ನೂ ಸೃಷ್ಟಿಸಲಾರದವರು
✍️ ಎನ್.ಎಂ. ಪಡೀಲ್ ಅಬ್ದುಲ್ಲಾಹಿಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು: “ಬೇಡುವುದಿದ್ದರೆ ಅಲ್ಲಾಹನೊಂದಿಗೆ ಪ್ರಾರ್ಥಿಸಿ. ಸಹಾಯ ಯಾಚಿಸುವುದಾದರೆ ಅಲ್ಲಾಹನೊಂದಿಗೆ ಸಹಾಯ ಯಾಚಿಸಿ.” (ತಿರ್ಮಿದಿ) ಈ ಹದೀಸ್ನ ಕೆಲವು ವರದಿಗಳಲ್ಲಿ ಪಿತೃ ಸಹೋದರನ ಪುತ್ರನಿಗೆ ಉಪದೇಶವಾಗಿ ಇನ್ನು ಕೆಲವು ವಿಷಯಗಳನ್ನು ಸೇರಿಸುತ್ತಾರೆ: “ನಿನಗೆ ತಿಳಿದಿರಲಿ, ಇಡೀ ಮಾನವಕುಲವು ಒಟ್ಟಾಗಿ ನಿನಗೆ ಉಪಕಾರ ಮಾಡಬಯಸಿದರೂ ಅಲ್ಲಾಹನು ವಿಧಿಸಿದ್ದನ್ನು ಹೊರತುಪಡಿಸಿ ಬೇರೇನನ್ನೂ ಅವರಿಂದ ಮಾಡಲು ಸಾಧ್ಯವಿಲ್ಲ. ಮಾನವರೆಲ್ಲ ಒಟ್ಟಾಗಿ ನಿನಗೆ ಹಾನಿ ಮಾಡಬಯಸಿದರೆ, ಅಲ್ಲಾಹನು …
Read More »ಸ್ತ್ರೀ-ಪುರುಷ ಸಮಾನತೆ ಮತ್ತು ನ್ಯಾಯ; ಇಸ್ಲಾಮೀ ಶಿಕ್ಷಣದ ಬೆಳಕಿನಲ್ಲಿ
ಲೇಖಕರು : ಅಬ್ದುಲ್ ಹಫೀದ್ ನದ್ವಿ ಮೂಲ: ಇಸ್ಲಾಂ ಆನ್ಲೈವ್ ಅನುವಾದ: ಮರ್ಯಮ್ ಶಹೀರ ಇಸ್ಲಾಂ ಪುರುಷರು ಮತ್ತು ಮಹಿಳೆಯರಿಗೆ ಸಮಾನ ನ್ಯಾಯವನ್ನು ಖಾತ್ರಿಪಡಿಸುತ್ತದೆ. ನ್ಯಾಯ ಎಂದರೆ ಪ್ರತಿಯೊಬ್ಬರಿಗೂ ಅವರಿಗೆ ಅರ್ಹವಾದದ್ದನ್ನು ನೀಡುವುದು. ಸಮಾನತೆ ಎಂಬ ಅರ್ಥದಲ್ಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರದಾನ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಕೇವಲ ಗಂಜಿಯ ಮೇಲೆ ಬದುಕುತ್ತಿರುವ ವ್ಯಕ್ತಿಗೆ ಬಿರಿಯಾನಿ ತಿನ್ನಿಸುವುದು ಅಥವಾ ಹೊಟ್ಟೆ ತುಂಬಿದವನಿಗೆ ಬಲವಂತವಾಗಿ ತಿನ್ನಿಸುವುದು ಸಮಾನತೆ ಎನ್ನಬಹುದಾದರೂ, ಅದು ನ್ಯಾಯವಾಗುವುದಿಲ್ಲ. …
Read More »ಕುರ್ಆನಿನ ವಿಶೇಷತೆ
✍️ ರೈಹಾನ್ ವಿ.ಕೆ., ಸಚೇರಿಪೇಟೆ ಮನುಷ್ಯನು ತನ್ನ ಅಸ್ತಿತ್ವವನ್ನು ಅರಿಯಬೇಕಾದರೆ ತನ್ನ ಸೃಷ್ಟಿಕರ್ತನನ್ನು ಅರಿಯುವುದು ಅನಿವಾರ್ಯ. ಮನುಷ್ಯ ತಾನು ಯಾರು, ನನ್ನ ಸೃಷ್ಟಿ ಹೇಗಾಯಿತು? ಸೃಷ್ಟಿಯ ಉದ್ದೇಶವೇನು? ಅವನ ಇಹಲೋಕ ಜೀವನದ ನಂತರ ಏನಾಗಲಿದೆ? ಪರಲೋಕದ ಅಗತ್ಯ ಏನಿದೆ? ಎಂಬಿತ್ಯಾದಿ ಪ್ರಶ್ನೆಗಳಿಗಿರುವ ಉತ್ತರ ತಿಳಿದಿದ್ದರೆ ಅದುವೇ ಅವನ ಯಶಸ್ಸು. ಒಬ್ಬ ಮನುಷ್ಯ ತನ್ನ ಬಗ್ಗೆ ಚಿಂತಿಸುತ್ತಾನೆಂದಾದರೆ ಖಂಡಿತ ಅವನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಈ ಪ್ರಶ್ನೆಗಳಿಗೆಲ್ಲ ಉತ್ತರ ಮನುಷ್ಯನನ್ನು ಅವನಿಗೆ ವಾಸಯೋಗ್ಯವಾದ …
Read More »ಪ್ರವಾದಿ(ಸ) ಕುಟುಂಬ ಜೀವನದ ಕನ್ನಡಿಯಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಂಡರೆ…
✍️ ಶಮೀಮ ಝಕೀರ್ ಕುಟುಂಬ ಜೀವನದಲ್ಲಿ ಪ್ರವಾದಿ ಪತ್ನಿಯರು ಅತ್ಯುನ್ನತ ಮಾದರಿಯಾಗಿದ್ದಾರೆ. ಪವಿತ್ರ ಕುರ್ಆನ್ನ ನೆರಳಿನಲ್ಲಿ ಪ್ರವಾದಿಯವರು(ಸ) ಬೆಳೆಸಿದ ಆ ಪತ್ನಿಯರು ಇಸ್ಲಾಮೀ ಲೋಕಕ್ಕೆ ಮತ್ತು ಮುಸ್ಲಿಂ ಮಹಿಳೆಯರಿಗೆ ಜೀವನದ ಪಾಠವಾಗಿದ್ದಾರೆ. ಪ್ರವಾದಿಯ(ಸ) ಜೀವನವು ಬದುಕಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಹೊಂದಿರಬೇಕಾದ ಮೌಲ್ಯಗಳು ಹಾಗೂ ಮಾದರಿ ಯಾವುದೆಂದು ಕಲಿಸಿಕೊಡುತ್ತದೆ. ಪ್ರವಾದಿ(ಸ) ಅವರಿಂದ ದೇವ ಸಂದೇಶವನ್ನು ಆಲಿಸಿ, ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಇಸ್ಲಾಂ ಸ್ವೀಕರಿಸಿದ ಪ್ರಥಮ ವ್ಯಕ್ತಿ ಖತೀಜತುಲ್ …
Read More »ಇತಿಹಾಸ, ವರ್ತಮಾನ ಮತ್ತು ಭಾರತೀಯ ಮುಸ್ಲಿಮರು
✍️ ಏ.ಕೆ. ಕುಕ್ಕಿಲ 1. ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು, ದೇಶದ ಸಂಪತ್ತಿನಲ್ಲಿ ಮೊದಲ ಆದ್ಯತೆ ಪಡೆದವರು, ಧರ್ಮದ ಆಧಾರದಲ್ಲಿ ಮೀಸಲಾತಿ ಪಡೆದವರು, ಅಯೋಧ್ಯೆಗೆ ಬಾಬರಿ ಬೀಗ, ಮುಲ್ಲಾಗಳು, ಮುಜ್ರಾಗಳು, ಜಿಹಾದಿಗಳು.. 2. ಕಾಶ್ಮೀರದ 370ನೇ ವಿಧಿ ರದ್ದು, ತ್ರಿವಳಿ ತಲಾಕ್ ರದ್ದು, ಮುಸ್ಲಿಮ್ ಓಲೈಕೆ, ಸಮಾನ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ, ಉತ್ತರ ಪ್ರದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವುದನ್ನು ನಿಲ್ಲಿಸಿದ್ದೇವೆ, ಬಹುಪತ್ನಿತ್ವವನ್ನು ರದ್ದು ಮಾಡುತ್ತೇವೆ, ಇಷ್ಟು ಮದ್ರಸಾಗಳನ್ನು ಸ್ಥಗಿತಗೊಳಿಸಿದ್ದೇವೆ, …
Read More »ದೇವನಿದ್ದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲವೇ ಎಂಬ ಪ್ರಶ್ನೆ ಕೇಳುವವರು ಇದ್ದಾರೆ..
ದೇವವಚನದ ಆಧಾರದಲ್ಲಿ ಹೇಳುವುದಾದರೆ.. ಅಧ್ಯಾಯ 6: ಅಲ್ ಅನ್ಆಮ್ “ದೃಷ್ಟಿಗಳು ಅವನನ್ನು ಕಾಣಲಾರವು. ಆದರೆ ಅವನು ದೃಷ್ಟಿಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೂಕ್ಷ್ಮದರ್ಶಿಯೂ ಸೂಕ್ಷ್ಮಜ್ಞನೂ ಆಗಿರುತ್ತಾನೆ”.(ದೇವವಚನ) ದೇವನನ್ನು ಕಾಣುವಂತಹ ದೃಷ್ಟಿ ಶಕ್ತಿ ಮನುಷ್ಯನಿಗೆ ಇಹಜೀವನದಲ್ಲಿ ನೀಡಲಾಗಿಲ್ಲ. ಮರಣಾನಂತರ ಪ್ರತಿಯೊಬ್ಬನ ದೃಷ್ಟಿಯು ತೀಕ್ಷ್ಣವಾಗುವುದು. ದೇವನನ್ನು ಕಣ್ಣಾರೆ ಕಾಣಲು ಸಾಧ್ಯವಾಗುವುದು. ಆದ್ದರಿಂದ ದೇವನು ಇದ್ದಾನೆ. ಅವನು ಆದಿ,ಅನಂತ. ಮನುಷ್ಯನ ದೃಷ್ಟಿ ಶಕ್ತಿಯಲ್ಲಿ ಮಾತ್ರ ವ್ಯತ್ಯಾಸವಾಗಲಿರುವುದು. ಪ್ರವಾದಿ ಮೂಸಾ(ಅ) ರು ಪವಿತ್ರವಾದ ತೂರ್ ಪರ್ವತದಲ್ಲಿ …
Read More »ಅಂಥ ಅಬೂಲಹಬನೇ ಪ್ರವಾದಿಗೆ(ಸ) ಆಶ್ರಯ ನೀಡಿದ್ದ…
✍️ ಏ.ಕೆ. ಕುಕ್ಕಿಲ 1.ಅಬೂಲಹಬ್ 2.ಉತ್ಬಾ ಬಿನ್ ರಬೀಅ 3.ಮುತ್ಇಮ್ ಬಿನ್ ಅದಿಯ್ಯ್ 4.ಸುಹೈಲ್ ಪ್ರವಾದಿ ಮುಹಮ್ಮದ್(ಸ) ಒಂದು ಕಡೆಯಾದರೆ, ಈ ನಾಲ್ವರು ಇನ್ನೊಂದು ಕಡೆ. ಪ್ರವಾದಿ(ಸ) ಉತ್ತರವಾದರೆ ಇವರು ದಕ್ಷಿಣ. ಪ್ರವಾದಿಯ(ಸ) ವಿಚಾರಧಾರೆಯೊಂದಿಗೆ ಕಟು ವೈರತ್ವವನ್ನು ಹೊಂದಿದ ವ್ಯಕ್ತಿಗಳಾಗಿ ಇವರು 6ನೇ ಶತಮಾನದಿಂದ ಈವರೆಗೂ ಗುರುತಿಸಿಕೊಂಡೇ ಬಂದಿದ್ದಾರೆ. ಆದರೆ, ಇವರು ತಮ್ಮ ಜೀವಿತ ಕಾಲದಲ್ಲಿ ನಡಕೊಂಡ ರೀತಿಯಲ್ಲಿ ಅನೇಕ ಪಾಠಗಳಿವೆ. ಪ್ರವಾದಿಯೊಂದಿಗೆ(ಸ) ಇವರು ಸಾಧಿಸಿಕೊಂಡು ಬಂದ ವೈರತ್ವದ ಕಾರಣದಿಂದಾಗಿ …
Read More »ಪ್ರವಾದಿ(ಸ) ಹೀಗಿದ್ದರು…
✍️ ಇರ್ಶಾದ್ ಮೂಡಬಿದ್ರೆ ಮಕ್ಕಾ ನಗರದಲ್ಲಿ ಪ್ರವಾದಿ(ಸ) ಜನಿಸಿದಾಗ ಅವರ ನಾಡಿನಲ್ಲಿ ಕೆಡುಕುಗಳು ಅಗಾಧವಾಗಿತ್ತು. ದರೋಡೆ, ಸುಲಿಗೆ, ಕೊಲೆ, ಕುಡಿತ, ಅಶ್ಲೀಲತೆ, ಹೆಣ್ಣು ಮಕ್ಕಳ ಹತ್ಯೆ, ಜೂಜಾಟ, ಕರಿಯ-ಬಿಳಿಯ ಅನ್ನುವ ದ್ವೇಷ, ಬಡ್ಡಿಗೆ ಹಣ, ಮಾಟ-ಮಂತ್ರಗಳಲ್ಲಿ ಅಂಧವಿಶ್ವಾಸ, ಸಣ್ಣ ಜಗಳಕ್ಕೂ ವರ್ಷಗಟ್ಟಲೆಯ ಹಗೆತನ, ವ್ಯಾಪಾರದಲ್ಲಿ ಮೋಸ, ನಗ್ನ ದೇಹದಲ್ಲಿ ಕಅಬಾ ಮಂದಿರದ ಪ್ರದಕ್ಷಿಣೆ ಇತ್ಯಾದಿ ಇತ್ಯಾದಿ. ಪ್ರವಾದಿ ಮುಹಮ್ಮದ್(ಸ) ಈ ಎಲ್ಲಾ ಕೆಡುಕುಗಳನ್ನು ಅಳಿಸಿ ಹಾಕಿದರು. ಆ ನಾಡಿಗೆ ಸಭ್ಯತೆ, …
Read More »ಮದ್ಯ ವಿರೋಧಿ ಪ್ರವಾದಿ(ಸ)
ಯುದ್ಧ, ಹೆಣ್ಣು, ಮದ್ಯಗಳಲ್ಲಿ ಮುಳುಗಿರುವ ಅರಬೀ ಪ್ರದೇಶವು ಬದಲಾವಣೆಗೆ ತೆರೆದುಕೊಂಡ ಮಹಾ ಕ್ರಾಂತಿಯು ವಿಶ್ವದಾದ್ಯಂತ ಮಾದರಿಯಾಗಿದೆ. ಮಾನವೀಯತೆಯ ಸಂದೇಶಗಳನ್ನು ಒಳಗೊಂಡ ಈ ಕ್ರಾಂತಿಯು ದಿಢೀರನೆ ಪ್ರತ್ಯಕ್ಷವಾದುದಲ್ಲ. ಮಾತು, ನಡತೆಯಲ್ಲಿ ಮಾನವೀಯತೆಯನ್ನು ಜಿನುಗಿಸಿದ, ತನ್ನ ವೈಚಾರಿಕತೆಯಲ್ಲಿ ಅಂತರಂಗ, ಬಹಿರಂಗವನ್ನು ಶೋಧಿಸಿದ ಲೋಕನಾಯಕ ಪ್ರವಾದಿ ಮುಹಮ್ಮದರು(ಸ) ದೇವಾಜ್ಞೆಯನುಸಾರ ನಡೆಸಿದ ಈ ಕ್ರಾಂತಿಯು ಲೋಕಾಂತ್ಯದವರೆಗೂ ನೆಲೆ ನಿಲ್ಲುವಂತೆ ರೂಪಿಸಿದ ವೈಖರಿ ಮಹಾದ್ಭುತ. ಇಸ್ಲಾಮಿನ ಆದೇಶಗಳು, ನಿಯಮ ನಿರ್ದೇಶನಗಳು ತಾತ್ಕಾಲಿಕವಾದುದಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುವಂತದಲ್ಲ. ಕಾಲಕ್ಕೆ …
Read More »
IslamKannada News Portal