ಮಂಗಳೂರು: ” ಸಮಾಜದ ಕುಟುಂಬದ ಸಮಸ್ಯೆಗಳನ್ನು ಬಹಳ ಯಥಾವತ್ತಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ. ಇಸ್ಲಾಮಿನಲ್ಲಿ ಮದುವೆಯು ಸರಳ ವಿಧಾನವಾಗಿದೆ. ಮದುವೆಯ ಪ್ರಾರಂಭದಿಂದ ಹಿಡಿದು ಹನಿಮೂನ್ ಸಹಿತ ಎಲ್ಲಾ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ದಾಂಪತ್ಯ ಬದುಕಿನ ಆಗು ಹೋಗುಗಳ ಬಗೆಗಿನ ಈ ವಿಮರ್ಶಾತ್ಮಕ ಕೃತಿ ಪ್ರತಿಯೊಂದು ಮನೆಗೂ ಪ್ರಯೋಜನಕಾರಿಯಾಗಲಿದೆ ಎಂದು ಫಾರ್ವರ್ಡ್ ಕೌನ್ಸಿಲಿಂಗ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ರಹ್ಮತ್ ಮನ್ಸೂರ್ ಹೇಳಿದರು. ಅವರು ಇಲ್ಲಿನ ಫಾರ್ವರ್ಡ್ ಕೌನ್ಸಿಲಿಂಗ್ ಕಚೇರಿಯಲ್ಲಿ …
Read More »ಹಿಜಾಬ್ ಧರಿಸಿದ ಮಹಿಳೆಯರ ಸಂಭ್ರಮದ ಸ್ಮರಣೆಗೆ ಇಂಗ್ಲೆಂಡಿನಲ್ಲಿ ‘ಸ್ಟೆಂತ್ ಆಫ್ ದಿ ಹಿಜಾಬ್ ಪ್ರತಿಮೆ!
ಸೆಥ್‌ವಿಕ್, ಇಂಗ್ಲೆಂಡ್: ಹಿಜಾಬ್ ಧರಿಸುವ ಮಹಿಳೆಯರ ಸಂಭ್ರಮವನ್ನು ಜಾಗತಿಕವಾಗಿ ನೆನಪಿನಲ್ಲುಳಿಯುವಂತೆ ಮಾಡಲು ಸೆಥ್‌ವಿಕ್‌ನ ಬೀದಿಯಲ್ಲಿ ಈ ವರ್ಷದ ಕೊನೆಯಲ್ಲಿ ‘ಹಿಜಾಬ್‌ನ ಶಕ್ತಿ’ ಶೀರ್ಷಿಕೆಯ ವಿಶಿಷ್ಟವಾದ ಶಿಲ್ಪಕಲೆ ಸಿದ್ಧವಾಗಿದೆ. ಈ ಸ್ಮಾರಕ ಕಲಾಕೃತಿಯು ವಿಶ್ವದಲ್ಲೇ ಇದು ಮೊದಲನೆಯದು ಎನ್ನಲಾಗಿದೆ. ಹಿಜಾಬ್ ಧರಿಸುವ ಮಹಿಳೆಯರಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲದೇ ಅವರ ಉಡುಗೆಯನ್ನು ಪರಿಗಣಿಸದೇ ಪ್ರೀತಿಸುವ ಮತ್ತು ಗೌರವಿಸುವ ಅವರ ಹಕ್ಕನ್ನು ಈ ಪ್ರತಿಮೆ ಸಂಕೇತಿಸುತ್ತದೆ. ‘ಹಿಜಾಬ್‌ನ ಶಕ್ತಿ’ ಪ್ರತಿಮೆ ಐದು ಮೀಟರ್ ಎತ್ತರವನ್ನು …
Read More »ಮಕ್ಕಾ: ಕುರ್‌ಆನ್ ಸ್ಪರ್ಧೆಯಲ್ಲಿ 117 ರಾಷ್ಟ್ರಗಳು ಭಾಗಿ
ಮಕ್ಕಾದಲ್ಲಿ 43ನೇ ಅಂತಾರಾಷ್ಟ್ರೀಯ ಕುರ್‌ಆನ್ ಸ್ಪರ್ಧೆ ಆರಂಭವಾಗಿದೆ. ಭಾರತ ಸೇರಿದಂತೆ 117 ರಾಷ್ಟ್ರಗಳಿಂದ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಎಂಟು ಕೋಟಿ 90 ಲಕ್ಷ ರೂಪಾಯಿ ಮೊತ್ತದ ಬಹುಮಾನವನ್ನು ಸ್ಪರ್ಧೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಸೌದಿ ಇಸ್ಲಾಮಿಕ್ ವ್ಯವಹಾರ ಸಚಿವಾಲಯ ತಿಳಿಸಿದೆ. ಈ ಸ್ಪರ್ಧೆ ಮಸ್ಜಿದುಲ್ ಹರಾಂನಲ್ಲಿ ನಡೆಯುತ್ತಿದೆ. 11 ದಿನಗಳ ಕಾಲ ನಡೆಯುವ ಫೈನಲ್ ರೌಂಡ್ ಸ್ಪರ್ಧೆಯು ಈಗಾಗಲೇ ಆರಂಭವಾಗಿದೆ. ಒಟ್ಟು 166 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಆನ್‌ಲೈನ್ ಮೂಲಕ …
Read More »ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮರಳಿದ ನಟಿ ರಾಕಿ ಸಾವಂತ್ ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ
ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮರಳಿದ ನಟಿ ರಾಕಿ ಸಾವಂತ್ ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಇಸ್ಲಾಂ ಸ್ವೀಕರಿಸಿದ ಬಳಿಕ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿರುವ ರಾಕಿ ಸಾವಾಂತ್ ಇದೀಗ ಮಕ್ಕ ಮತ್ತು ಮದೀನಾಕ್ಕೆ ತೆರಳಿ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಿ ಮರಳಿದ್ದಾರೆ. ರಾಕಿ ಸಾವಂತ್ ಅವರ ಉಮ್ರಾ ಯಾತ್ರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಇದೇ ವೇಳೆ ಉಮ್ರಾ ಯಾತ್ರೆಯ ವಿವಿಧ ಚಿತ್ರ …
Read More »ಮುಸ್ಲಿಮರು ಇನ್ನು ಆತಂಕ ಪಡಬೇಕಾಗಿಲ್ಲ, ಅಝಾನ್ ಗೆ ಅನುಮತಿಬೇಕಿಲ್ಲ: ನ್ಯೂ ಯಾರ್ಕ್ ಮೇಯರ್ ಹೊಸ ಗೈಡ್ ಲೈನ್ಸ್
ನ್ಯೂಯಾರ್ಕ್ ನಗರದಲ್ಲಿ ಇನ್ನು ಮುಂದೆ ಸಾರ್ವಜನಿಕವಾಗಿ ಅಝಾನ್ ಅಥವಾ ಬಾಂಗ್ ಕೊಡಲು ಪರ್ಮಿಷನ್ ಪಡೆದುಕೊಳ್ಳಬೇಕಾದ ಅಗತ್ಯ ಇಲ್ಲ. ನ್ಯೂಯಾರ್ಕ್ ನಗರದ ಮೇಯರ್ ಏರಿಕ್ ಆದಮ್ ಅವರು ಹೊಸ ಗೈಡ್ ಲೈನ್ ಅನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಈ ವಿವರ ನೀಡಲಾಗಿದೆ. ಮುಸ್ಲಿಮರು ಆತಂಕದಿಂದ ಬದುಕ ಬೇಕಿಲ್ಲ. ಶುಕ್ರವಾರ ಮತ್ತು ರಮಝಾನ್ ನ ಸಂಜೆಯ ವೇಳೆ ತಮ್ಮ ಅಝಾನ್ ಕರೆಯನ್ನು ಕೊಡುವುದಕ್ಕೆ ಅವರು ಮುಕ್ತರಾಗಿದ್ದಾರೆ. ಆದರೆ ನಿಗದಿತ ಡೆಸಿಬಿಲ್ ನಲ್ಲಿ ಈ ಅಝಾನ್ …
Read More »ನೆದರ್ಲ್ಯಾಂಡ್ ನಲ್ಲಿ ಮತ್ತೆ ಕುರ್ ಆನ್ ಗೆ ಅವಮಾನ: ಟರ್ಕಿ ರಾಯಭಾರ ಕಚೇರಿಯ ಎದುರು ಕುರ್ ಆನ್ ಹರಿದು ಹಾಕಿದ್ರು
ನೆದರ್ಲ್ಯಾಂಡ್ ನಲ್ಲಿ ಕುರ್ ಆನ್ ನ ವಿರುದ್ಧ ಮತ್ತೆ ಪ್ರತಿಭಟನೆ ನಡೆದಿದ್ದು ತುರ್ಕಿ ರಾಯಭಾರ ಕಚೇರಿಯ ಮುಂದೆ ವ್ಯಕ್ತಿಯೋರ್ವ ಕುರಾನ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬಲಪಂಥೀಯ ಗುಂಪಿನ ನೇತೃತ್ವ ವಹಿಸಿರುವ ಎಡ್ವಿನ್ ಎಂಬಾತ ಈ ಕೃತ್ಯ ಎಸೆಗಿದ್ದು ಈತನಿಗೆ ಇಬ್ಬರು ಸಾತ್ ನೀಡಿದ್ದಾರೆ . ನೆದರ್ ಲ್ಯಾಂಡ್ ಸರಕಾರ ಇಂತಹ ಪ್ರತಿಭಟನೆಯನ್ನು ಖಂಡಿಸಿದೆಯಾದರೂ ಇದನ್ನು ತಡೆಯುವುದಕ್ಕೆ ಕಾನೂನಾತ್ಮಕವಾಗಿ ಯಾವುದೇ ಶಕ್ತಿ ತನಗೆ ಇಲ್ಲ ಎಂದು ಹೇಳಿದೆ. ಇದೇ …
Read More »ವಿಶ್ವ ಕಪ್ ಮಹಿಳಾ ಫುಟ್ಬಾಲ್ : ಹಿಜಾಬ್ ಧಾರಣಿಯ ಆಟಕ್ಕೆ ಎಲ್ಲರೂ ಫಿದಾ
ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಮೊರಕೋದ ನೌಹಿಲ ಬೆಂಜಿನ ಜಾಗತಿಕವಾಗಿ ಸುದ್ದಿಗೀಡಾಗಿದ್ದಾರೆ. ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿಯೇ ಮೊಟ್ಟ ಮೊದಲ ಬಾರಿ ಹಿಜಾಬ್ ಧರಿಸಿ ಆಟವಾಡಿದ ಹೆಗ್ಗಳಿಕೆ ಇವರ ಪಾಲಾಗಿದ್ದು ಇವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಜರ್ಮನಿಯ ವಿರುದ್ಧ 6- 0 ಗೋಲುಗಳಿಂದ ಸೋಲನ್ನಪ್ಪಿದ ಮೊದಲ ಪಂದ್ಯದಲ್ಲಿ ನೌಹೀಲಾ ಆಡಿರಲಿಲ್ಲ. ಆದರೆ ದಕ್ಷಿಣ ಕೊರಿಯಾದ ವಿರುದ್ಧ ಆಡಲಾದ ಎರಡನೇ ಪಂದ್ಯದಲ್ಲಿ ನೌಹೀಲಾ ಪಂದ್ಯದ ಉದ್ದಕ್ಕೂ ಆಡಿದ್ದಾರೆ ಮತ್ತು ಗೋಲು …
Read More »ಶಾಂತಿ ಮತ್ತು ಸೌಹಾರ್ದ ಉತ್ತೇಜಿಸುವಲ್ಲಿ ಇಸ್ಲಾಮ್ ಧರ್ಮವನ್ನು ಪ್ರಮುಖ ಧರ್ಮವಾಗಿ ಗುರುತಿಸಿದ ಅಮೆರಿಕನ್ ಕಾಂಗ್ರೆಸ್
ಶಾಂತಿ ಮತ್ತು ಸೌಹಾರ್ದ ಉತ್ತೇಜಿಸುವಲ್ಲಿ ಇಸ್ಲಾಂ ಧರ್ಮವನ್ನು ಪ್ರಮುಖ ಧರ್ಮವಾಗಿ ಅಮೆರಿಕನ್ ಕಾಂಗ್ರೆಸ್ ಗುರುತಿಸಿದೆ. ಯುನೈಟೆಡ್ ಸ್ಟೇಟ್ ನಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 3.5 ಮಿಲಿಯನ್ ಎಂದು ಅಂದಾಜಿಸಿದೆ, ಟೆಕ್ಸಾಸ್‌ನ ಪ್ರತಿನಿಧಿ ಅಲ್ ಗ್ರೀನ್ ಮಂಡಿಸಿದ ಈ ನಿರ್ಣಯವು ಅಮೆರಿಕನ್ ಸಮಾಜದೊಳಗೆ ಇಸ್ಲಾಮಿಕ್ ನಂಬಿಕೆಯ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇಲ್ಹಾನ್ ಒಮರ್, ರಶೀದಾ ತ್ಲೈಬ್ ಮತ್ತು ಆಂಡ್ರೆ ಕಾರ್ಸನ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ …
Read More »ಕಾಬಾಕ್ಕೆ ಹೊಸ ಬಟ್ಟೆಯ ಹೊದಿಕೆ : ಕಿಸ್ವಾದ ಹಿನ್ನೆಲೆ?
ಮುಹರಂ ಒಂದರಂದು ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆ ದುಲ್ಹಜ್ 9ರಂದು ಹಾಜಿಗಳು ಅರಫಾದಲ್ಲಿ ಸೇರುವ ವೇಳೆ ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಕ್ರಮವನ್ನು ಬದಲಾಯಿಸಲಾಗಿದ್ದು ಮುಹರಂ ಒಂದರಂದು ಹೊಸ ಬಟ್ಟೆಯನ್ನು ಹೊದಿಸುವ ಕ್ರಮ ಜಾರಿಗೆ ಬಂದಿದೆ. ಈ ಬಟ್ಟೆಗೆ ಕಿಸ್ವ ಎಂದು ಹೆಸರು. ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಕಾಂಪ್ಲೆಕ್ಸ್ ನಲ್ಲಿ 200 ಕ್ಕಿಂತಲೂ ಅಧಿಕ ತಜ್ಞ ಕಾರ್ಮಿಕರು 10 …
Read More »ಶೇಕ್ ಝಾಯಿದ್ ಗ್ರಾಂಡ್ ಮಸೀದಿಗೆ ಭೇಟಿ ಕೊಟ್ಟವರಲ್ಲಿ ಹೆಚ್ಚಿನವರು ಭಾರತೀಯರು: ಅಬುದಾಬಿಯ ಈ ಮಸೀದಿಯ ವಿಶೇಷತೆ ಏನು?
ಅಬುದಾಬಿಯ ಶೇಕ್ ಝಾಯಿದ್ ಗ್ರಾಂಡ್ ಮಸ್ಜಿದನ್ನು ನೋಡಲು ಬರುವವರಲ್ಲಿ ಅತ್ಯಧಿಕ ಮಂದಿ ಭಾರತೀಯರಾಗಿದ್ದಾರೆ ಎಂಬ ವಿವರ ಬಿಡುಗಡೆಯಾಗಿದೆ ಕಳೆದ ಆರು ತಿಂಗಳಲ್ಲಿ 33 ಲಕ್ಷ ಮಂದಿ ಮಸೀದಿಗೆ ಭೇಟಿ ನೀಡಿದ್ದು ಇವರಲ್ಲಿ 23 ಲಕ್ಷ ಮಂದಿ ಪ್ರವಾಸಿಗಳಾಗಿ ಭೇಟಿ ನೀಡಿದ್ದಾರೆ. ಜನವರಿಯಿಂದ ಜೂನ್ ವರೆಗೆ 9,14,000 ಮಂದಿ ಈ ಮಸೀದಿಗೆ ಪ್ರಾರ್ಥನೆಗಾಗಿ ಭೇಟಿ ನೀಡಿದ್ದಾರೆ. ಈ ಮಸೀದಿಯನ್ನು ಆಕರ್ಷಕವಾಗಿ ಕಟ್ಟಲಾಗಿದ್ದು ಅದನ್ನು ವೀಕ್ಷಿಸುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. …
Read More »
IslamKannada News Portal