Home / ವಾರ್ತೆಗಳು (page 4)

ವಾರ್ತೆಗಳು

ಮಕ್ಕಾದಲ್ಲಿ ಹಜ್ಜ್ ಗೆ ಸಿದ್ಧತೆ: ಪ್ರವೇಶ ದ್ವಾರದ ಬಳಿ 50,000 ವಾಹನ ನಿಲುಗಡೆಗೆ ವ್ಯವಸ್ಥೆ

ಮಕ್ಕಾದ ಪ್ರವೇಶ ದ್ವಾರಗಳಲ್ಲಿ 5 ಪಾರ್ಕಿಂಗ್ ಕೇಂದ್ರಗಳನ್ನು ತಯಾರಿಸಲಾಗಿದೆ. ಖಾಸಗಿಯಾಗಿ ಹಜ್ ಕರ್ಮ ನಿರ್ವಹಿಸಲು ಬರುವ ಯಾತ್ರಿಕರು ಈ ಪಾರ್ಕಿಂಗ್ ಕೇಂದ್ರಗಳಲ್ಲಿ ತಮ್ಮ ವಾಹನವನ್ನು ನಿಲುಗಡೆಗೊಳಿಸಬೇಕು. ಇಲ್ಲಿಂದ ಹೊರಗೆ ಹೋಗುವುದಕ್ಕೆ ಬಸ್ ವ್ಯವಸ್ಥೆ ಇದೆ. ಹಜ್ ಸಂದರ್ಭದಲ್ಲಿ ಇಲ್ಲಿಗೆ ಬರುವ ಇತರ ವಾಹನಗಳನ್ನು ಕೂಡ ಇಲ್ಲಿಯೇ ಪಾರ್ಕಿಂಗ್ ಮಾಡಬೇಕು. ಈ ಪಾರ್ಕಿಂಗ್ ಸ್ಥಳದಲ್ಲಿ ವಿವಿಧ ಸೌಲಭ್ಯಗಳಿದ್ದು ಟಾಯ್ಲೆಟ್ ಗಳು, ಯಾತ್ರಿಕರಿಗೆ ಆರಾಮ ಮಾಡುವುದಕ್ಕೆ ಮತ್ತು ಕಾಯುವುದಕ್ಕೆ ಬೇಕಾದ ವ್ಯವಸ್ಥೆಗಳು, ಮಸೀದಿಗಳು …

Read More »

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2022ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳ ಗೊಂಡಿರುತ್ತದೆ. ಆಸಕ್ತ ಮುಸ್ಲಿಮ್ ಬರಹಗಾರರು ಕನ್ನಡದಲ್ಲಿ ಪ್ರಕಟಿತ 2022ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ಜೂನ್ 20ರ …

Read More »

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷರಾಗಿ ಖ್ಯಾತ ವಿದ್ವಾಂಸ ಎಂ ಐ ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆ

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಅಧ್ಯಕ್ಷರಾಗಿ ಮಧ್ಯಪ್ರದೇಶದ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಚಿಂತಕ ಹಾಗೂ ಮಂಡಳಿಯ ಹಿರಿಯ ಸದಸ್ಯ ಎಂ ಐ ಖಾಲಿದ್ ಸೈಫುಲ್ಲಾ ರಹ್ಮಾನಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಮಾಹುದ ಎಂಬಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಾ ಸಭೆಯಲ್ಲಿ ಐದನೇ ಅಧ್ಯಕ್ಷರಾಗಿ ಖಾಲಿದ್ ಸೈಫುಲ್ಲಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮಂಡಳಿ ಅಧ್ಯಕ್ಷರಾಗಿದ್ದ ಮೌಲಾನ ಮೊಹಮ್ಮದ್ ರಬಿ ಹಸನಿ ನದ್ವಿಯವರ ನಿಧನದ ಹಿನ್ನೆಲೆಯಲ್ಲಿ …

Read More »

ಮಸಾಲೆ ಬೆರೆಸಿದ ಸ್ಟೋರಿ ಅಲ್ಲ, ಕಟ್ಟು ಕಥೆಯೂ ಅಲ್ಲ; ಇದು ನೈಜ ಕೇರಳ ಸ್ಟೋರಿ

ಕೇರಳದಲ್ಲಿ ಅದೊಂದು ಪ್ರಖ್ಯಾತ ಮನೆತನವಿದೆ. ಕೇರಳ ಬಿಡಿ, ರಾಷ್ಟ್ರ ರಾಜಕಾರಣಿಗಳೂ ಸಹ ಗೌರವ ಕೊಡುವ ಮನೆತನವದು. ಪ್ರಮುಖವಾಗಿ ಕೇರಳದಲ್ಲಿ ಜನರು ವಿಪರೀತ ಸಂಕಷ್ಟಕ್ಕೊಳಗಾದಾಗ ತಮ್ಮ ಜಾತಿ ಧರ್ಮವನ್ನು ಬದಿಗಿಟ್ಟು ಸಹಾಯ ಕೇಳಿಕೊಂಡು ಕದ ತಟ್ಟುವ ಮನೆತನವದು. ಅದುವೇ ಪಾಣಕ್ಕಾಡ್ ತಂಗಳ್ ಮನೆತನ. ಕೇರಳ ಮುಸ್ಲಿಮ್ ಲೀಗ್ ಪಕ್ಷದ ಪ್ರಮುಖ ನೇತಾರರ ಮನೆತನವೂ ಹೌದು. ಕಳೆದ ಜನವರಿ ತಿಂಗಳಿನಲ್ಲಿ ಕತಾರ್ ನಲ್ಲಿ ಕೇರಳದ ದಿವೇಶ ಲಾಲ್ ಎಂಬ ಯುವಕ ದೀರ್ಘ ಜೈಲು …

Read More »

ಹಜ್ಜ್ ಮತ್ತು ಉಮ್ರಾ ಗೈಡ್

ಆರೋಗ್ಯ ಮತ್ತು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ಜೀವನದಲ್ಲೂಂದು ಬಾರಿ ಹಜ್ಜ್ ನಿರ್ವಹಿವುದನ್ನು ಇಸ್ಲಾಂ ಕಡ್ಡಾಯಗೊಳಿಸಿದೆ. ಈ ದೇವಾಜ್ಞೆಯನ್ನು ಧಿಕ್ಕರಿಸುವವನ ಬಗ್ಗೆ ಅಲ್ಲಾಹನ ಅಭಿಶಾಪವಿದೆ ಎಂದು ಪವಿತ್ರ ಕುರ್’ಆನ್’ನಲ್ಲಿ ಸಾರಿ ಹೇಳಲಾಗಿದೆ. ಹಜ್ಜ್ ನಿರ್ಬಂಧವಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಆ ಬಗ್ಗೆ ಅವಶ್ಯಕವಾದ ಜ್ಞಾನವನ್ನು ಗಳಿಸುವುದು ಕಡ್ಡಾಯವಾಗಿದೆ. ಇಸ್ಲಾಮಿನ ಎಲ್ಲ ಆರಾಧನಾ ಕರ್ಮಗಳಂತೆ ಹಜ್ಜ್’ಗೆ ಕೂಡಾ ಕೆಲವು ನಿಯಮ-ನಿಬಂಧನೆಗಳು ಮತ್ತು ಆಚಾರ ಸಂಪ್ರದಾಯಗಳಿವೆ. ಅದನ್ನು ಹಜ್ಜ್ ನಿರ್ವಹಿಸುವ ಯಾತ್ರಾರ್ಥಿಗಳು ಸರಿಯಾಗಿ ಅರಿತಿರುವುದು …

Read More »

ಅಂಗ ರಕ್ಷಕರಾಗಲಿ, ಸದ್ದುಗದ್ದಲವಾಗಲಿ, ರಸ್ತೆ ತಡೆಯಾಗಲಿ ಇಲ್ಲ: ಇದು ಯುಎಇ ಅಧ್ಯಕ್ಷರ ‘ನಡೆ’

ಅಬುಧಾಬಿ: ಯುಎಇ ಅಧ್ಯಕ್ಷರು ಅಂಗರಕ್ಷಕರಿಲ್ಲದೆ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದಾ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯಾವುದೇ ಭದ್ರತಾ ಪಡೆಗಳು ಇಲ್ಲದೆ ದೇಶದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹಸನ್ ಸಜ್ವಾನಿ ಎಂಬ ಟ್ವಿಟ್ಟರ್ ಬಳಕೆದಾರ ಯುಎಇ ಅಧ್ಯಕ್ಷರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವ ವೀಡಿಯೋ ತುಣುಕನ್ನು ಟ್ವೀಟ್ ಮಾಡಿದ್ದು, “ ಅಂಗರಕ್ಷಕರಿಲ್ಲ, …

Read More »

ಕಾಶ್ಮೀರದ ವಾಸಿಂ ಅಹಮದ್ ಭಟ್ ಗೆ ದೇಶವೇ ಸೆಲ್ಯೂಟ್: ಅಷ್ಟಕ್ಕೂ ಆತನ ಸಾಧನೆ ಏನು?

ಯಾವಾಗಲೂ ದೊಡ್ಡ ಮಟ್ಟದಲ್ಲಿ ಆಲೋಚಿಸಬೇಕು ಎಂದು ದೊಡ್ಡಪ್ಪ ಹೇಳುತ್ತಿದ್ದರು. ನಾನೀಗ ಸಂತೋಷವಾಗಿದ್ದೇನೆ. ಆದರೆ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಸಮಾಜಕ್ಕೆ ಏನಾದರೂ ಸೇವೆ ನಡೆಸಲು ಅವಕಾಶ ಸಿಕ್ಕಾಗ ಮಾತ್ರ ಪೂರ್ಣ ರೀತಿಯ ಸಂತೋಷ ಸಿಗಬಲ್ಲದು ಎಂದು ಈ ಬಾರಿಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 7ನೇ ರ್‍ಯಾಂಕ್ ಪಡೆದಿರುವ ಕಾಶ್ಮೀರದ ವಾಸಿಂ ಅಹಮದ್ ಭಟ್ ಹೇಳಿದ್ದಾರೆ. ಇದಕ್ಕಾಗಿ ಐದು ವರ್ಷಗಳವರೆಗೆ ಕಠಿಣ ಅಧ್ಯಯನ ನಡೆಸಿರುವೆ ಎಂದು ಕೂಡ ಅವರು ಹೇಳಿದ್ದಾರೆ. ಎರಡು ವರ್ಷಗಳ …

Read More »

ಸಿರಿಯಾದಲ್ಲಿಯ ಕರುಣಾಜನಕ ಕಥೆ: ಬದುಕಿಗೆ ಹೆದರಿ ಶಿಶುಗಳನ್ನು ಮಸೀದಿಗಳ ಎದುರು ಬಿಟ್ಟು ಹೋಗುತ್ತಿರುವ ಪೋಷಕರು

ದಶಕದಿಂದ ಆಂತರಿಕ ಘರ್ಷಣೆಗೆ ನಲುಗಿ ಹೋಗಿರುವ ಸಿರಿಯಾದಲ್ಲಿ ಪುಟ್ಟ ಮಕ್ಕಳ ಬದುಕಂತೂ ಕರುಣಾಜನಕವಾಗಿದೆ. ಪುಟ್ಟ ಮಕ್ಕಳನ್ನು ಸಾಕಲಾಗದೆ ಅಥವಾ ತಮ್ಮ ಜೊತೆ ಈ ಮಕ್ಕಳೂ ಸಾಯಬಾರದು ಎಂದು ಬಯಸಿದ ತಂದೆ ತಾಯಂದಿರು ಮಕ್ಕಳನ್ನು ಮಸೀದಿಯ ಮುಂದೆ ಮತ್ತು ಇನ್ನಿತರ ಕಡೆ ಬಿಟ್ಟು ಹೋಗುತ್ತಿರುವ ಕರುಣಾಜನಕ ಕಥೆಯನ್ನು ಮಾಧ್ಯಮಗಳು ವರದಿ ಮಾಡಿವೆ. ಇಬ್ರಾಹಿಂ ಉಸ್ಮಾನ್ ಎಂಬವರು ಮಸೀದಿಯ ಪಕ್ಕದಲ್ಲಿ ಅನಾಥವಾಗಿದ್ದ ಹೆಣ್ಣು ಮಗುವನ್ನು ಮನೆಗೆ ಕರಕೊಂಡು ಹೋಗಿ ಆ ಮಗುವಿಗೆ ಹಿಬಾದತುಲ್ಲಾ …

Read More »

200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸುವ ಮೂಲಕ 21ನೇ ವಯಸ್ಸಿನಲ್ಲಿ ಪೈಲೆಟ್ ಆದ ಹನಿಯಾ ಹನೀಫ್

ಮಂಗಳೂರು: ಕರಾವಳಿಯ ಯುವತಿಯೋರ್ವಳು 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಸುದ್ದಿಯಾಗಿದ್ದಾರೆ. ಮಂಗಳೂರು ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತ್ರಿಯಾದ ಹನಿಯಾ ಹನೀಫ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ. ಹನಿಯಾ 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಆನಂತರ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು. …

Read More »

ಇದು ಬರೇ ಮದ್ರಸ ಅಲ್ಲ… ಆಸ್ಪತ್ರೆ ನಡೆಸುತ್ತಿರುವ ಮದ್ರಸದ ಕತೆ

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಊಂಟ್ರ ಎಂಬ ಗ್ರಾಮದಲ್ಲಿ ಒಂದು ಮದ್ರಸ ಇದೆ. ಇದು ಬರೇ ಮದ್ರಸ ಅಲ್ಲ. ಈ ಮದ್ರಸದ ಆವರಣದಲ್ಲಿ 40 ಹಾಸಿಗೆಗಳುಳ್ಳ ಆಸ್ಪತ್ರೆಯೊಂದನ್ನು ಕಟ್ಟಲಾಗಿದೆ. ಝಕಾತ್ ಮತ್ತಿತರ ಹಣದ ನೆರವಿನಿಂದ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಈಗಾಗಲೇ 200 ಕ್ಕಿಂತಲೂ ಅಧಿಕ ಪ್ರಸವಗಳನ್ನು ನಡೆಸಲಾಗಿದೆ. ಸಿಜೇರಿಯನ್ ಪ್ರಸವವನ್ನು ನಡೆಸುವಷ್ಟು ಸೌಲಭ್ಯಗಳಿರುವ ಈ ಆಸ್ಪತ್ರೆಯನ್ನು 2021 ಡಿಸೆಂಬರ್‌ನಲ್ಲಿ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆಯೆತ್ತಿರುವ ಈ ಆಸ್ಪತ್ರೆ ಸಮಾಜದ ಎಲ್ಲರೂ ಲಾಭ …

Read More »