Home / ವಾರ್ತೆಗಳು (page 5)

ವಾರ್ತೆಗಳು

ಉಮ್ರಾ: ರಮಝಾನ್ ಮೊದಲ 20 ದಿನಗಳಿಗೆ ವೀಸಾ ಅನುಮತಿ

ಸೌದಿ ಅರೇಬಿಯಾ: ರಮಝಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಬಯಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಪರವಾನಿಗೆ ನೀಡಿದೆ. ನುಸುಕ್ ಮತ್ತು ತವಕಲ್‌ನಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಉಮ್ರಾ ಬುಕಿಂಗ್ ಮಾಡಬೇಕಾಗಿದೆ. ರಮಝಾನಿನ ಮೊದಲ 20 ದಿವಸಗಳಿಗೆ ಬುಕಿಂಗ್ ಸೌಲಭ್ಯವನ್ನು ಇದೀಗ ಆರಂಭಿಸಲಾಗಿದೆ. ಕೊನೆಯ 10 ದಿನಗಳಿಗೆ ಬುಕಿಂಗ್ ಸೌಲಭ್ಯವನ್ನು ನಂತರ ಆರಂಭಿಸಲಾಗುವುದು. ಉಮ್ರಾ ವೀಸಾಗಳ ಜೊತೆಗೆ ಇತರ ವೀಸಾಗಳ ಮೂಲಕ ಸೌದಿಗೆ ಆಗಮಿಸುವವರಿಗೂ ಉಮ್ರಾ ನಿರ್ವಹಿಸುವುದಕ್ಕೆ ಈ ಬಾರಿ …

Read More »

ವ್ಯವಸ್ಥೆಯನ್ನು ಬಲಗೊಳಿಸುವುದು ರಾಜಕೀಯ ಪಕ್ಷಗಳ ಆದ್ಯತೆಯಾಗಲಿ: ಎಸ್.ಐ.ಓ

ಮಂಗಳೂರು: 2023ರ ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕೊತ್ತಾಯಗಳೇ ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಮೂಡಿಸಲು ಎಸ್.ಐ.ಓ ಕರ್ನಾಟಕವು ಶಿಕ್ಷಣದ ಮೂಲಭಾಗಿದಾರರೊಂದಿಗೆ ಸಮಾಲೋಚಿಸಿ “ವಿದ್ಯಾರ್ಥಿ ಪ್ರಣಾಳಿಕೆ”ಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಎಸ್.ಐ.ಓ ದಕ್ಷಿಣ ಕನ್ನಡ ಆಗ್ರಹಿಸಿದೆ. ಶಾಲಾ ಪೂರ್ವ ಶಿಕ್ಷಣದ …

Read More »

550 ಗಂಟೆ ಯಶಸ್ವಿಯಾಗಿ ವಿಮಾನ ಹಾರಿಸಿದ ಹಿಜಾಬ್‌ ಧಾರಿ ಸಯೀದಾ ಸಲ್ವಾ ಫಾತಿಮಾ

ಹಳೆ ಹೈದರಾಬಾದ್ ನಲ್ಲಿ ಶಿಕ್ಷಣಕ್ಕಾಗಿ ಹೋರಾಟದಿಂದ ಏರ್‌ಬಸ್-320 ಹಾರಾಟದ ವರೆಗಿನ ಯಶೋಗಾಥೆ ಹೈದರಾಬಾದ್: ಕೆಲ ತಿಂಗಳ ಹಿಂದೆ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗುವುದು ದೇಶಾದ್ಯಂತ ವಿವಾದದ ಸ್ವರೂಪ ಪಡೆದಿತ್ತು. ಆದರೆ, ಇಲ್ಲೊಬ್ಬ ಹಿಜಾಬ್‌ಧಾರಿ ಮಹಿಳೆಯು ಎರಡು ಸೀಟುಗಳ ಸೆಸ್ನಾದಿಂದ ಪ್ರಾರಂಭಿಸಿ, ಇದೀಗ ಏರ್‌ಬಸ್-320 ವಿಮಾನವನ್ನು 550 ಗಂಟೆಗಳ ಕಾಲ ಯಶಸ್ವಿಯಾಗಿ ಹಾರಿಸಿರುವ ಸಾಧನೆ ಹೈದರಾಬಾದ್‌ನಿಂದ ವರದಿಯಾಗಿದೆ. 2015-16ರಲ್ಲೇ ಸಲ್ವಾ ಪೈಲಟ್‌ ಆಗಿ ಆಯ್ಕೆಯಾಗಿದ್ದರು. 34 ವರ್ಷದ ಸೈಯೀದಾ ಸಲ್ವಾ ಫಾತಿಮಾರ …

Read More »

ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನಿಷೇಧಿಸಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಎಐಎಂಪಿಎಲ್‌ಬಿ

ಹೊಸದಿಲ್ಲಿ, ಫೆ.8: ಮುಸ್ಲಿಮ್ ಮಹಿಳೆಯರು ಮಸೀದಿಗಳನ್ನು ಪ್ರವೇಶಿಸುವುದನ್ನು ಮತ್ತು ನಮಾಝ್ ಅಥವಾ ಸಾಮೂಹಿಕ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ನಿಷೇಧಿಸಲಾಗಿಲ್ಲ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ. ಆದರೂ, ಒಂದೇ ಸಾಲಿನಲ್ಲಿ ಅಥವಾ ಸಾಮಾನ್ಯ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರು ಮುಕ್ತವಾಗಿ ಬೆರೆಯುವುದು ಇಸ್ಲಾಮ್‌ನಲ್ಲಿ ಸೂಚಿಸಲಾಗಿರುವ ನಿಲುವಿಗೆ ಅನುಗುಣವಾಗಿಲ್ಲ. ಸಾಧ್ಯವಾದರೆ ಮಸೀದಿ ಆಡಳಿತ ಸಮಿತಿಯು ಆವರಣದಲ್ಲಿ ಮಹಿಳೆರಿಗಾಗಿ ಪ್ರತ್ಯೇಕ ಜಾಗವನ್ನು ಸೃಷ್ಟಿಸುವುದು ಅಗತ್ಯವಾಗುತ್ತದೆ …

Read More »

ಫತ್ಮ ಅಲ್ ನುಹೈಮಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ

ದೋಹಾ; ಕತಾರಿನ ಫತ್ಮ ಅಲ್ ನುಹೈಮಿ ಅವರಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ ಲಭಿಸಿದೆ. ಇವರು ಕತಾರ್ ನ ಸುಪ್ರೀಂ ಕಮಿಟಿ ಫಾರ್ ಡೆಲಿವರಿ ಅಂಡ್ ಲೆಗಸಿ ಕಮ್ಯುನಿಕೇಷನ್ ಅಂಡ್ ಮೀಡಿಯಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿದ್ದಾರೆ. ದಾವೋಸಿನಲ್ಲಿ ವರ್ಲ್ಡ್ ವುಮೆನ್ ಫೌಂಡೇಶನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪತ್ಮ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಈ ಸಭೆಯಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಯಶಸ್ಸಿನಲ್ಲಿ ಮಹಿಳೆಯರು ನಿರ್ವಹಿಸಿದ ಪಾತ್ರವನ್ನು ಪ್ರಶಂಶಿಸಲಾಗಿದೆ. ಈ …

Read More »

ಶಾಂತಿ ಪ್ರಕಾಶನದಿಂದ ನೂತನ ಕೃತಿ ‘ಮಾರ್ಗದರ್ಶಿ-ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು’ ಬಿಡುಗಡೆ

ಶಾಂತಿ ಪ್ರಕಾಶನದಿಂದ ನೂತನ ಕೃತಿ ಶಾಂತಿ ಪ್ರಕಾಶನದ 269ನೇ ಪುಸ್ತಕ ‘ಮಾರ್ಗದರ್ಶಿ-ಆತ್ಮ ಸಂಸ್ಕರಣೆಯ ಪ್ರವಾದಿ(ಸ) ಬೋಧನೆಗಳು’ ಗ್ರಂಥವನ್ನು ಜಮಾಅತ್ ರಾಷ್ಟ್ರಾಧ್ಯಕ್ಷರಾದ ಸೈಯ್ಯದ್ ಸಾದಾತುಲ್ಲಾ ಹುಸೈನಿ ಬಿಡುಗಡೆಗೊಳಿಸಿದರು. ಮೂಲ ಮಲಯಾಳಂದಲ್ಲಿರುವ ವಝಿವೆಲಿಚ್ಚಂ ಬಹು ಪ್ರಸಿದ್ದಿ ಪುಸ್ತಕವಾಗಿದೆ. ಇದರ ಲೇಖಕ ಜ‌ಅ‌್‌ಫರ್ ಎಳಂಬಿಲಕ್ಕೋಡ್ ಆಗಿದ್ದು, ಕನ್ನಡಕ್ಕೆ ಸಬೀಹಾ ಫಾತಿಮರವರು ಅನುವಾದಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ, ಕಾರ್ಯದರ್ಶಿಗಳಾದ ಮೌಲಾನಾ ವಲೀಯುಲ್ಲಾಹ್ ಸಯೀದಿ ಫಲಾಹಿ, ಮೌಲಾನಾ ಇಕ್ಬಾಲ್ ಮುಲ್ಲಾ, …

Read More »

ದುಬೈ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆ

ಅಬುಧಾಬಿ: ದುಬೈಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ವರ್ಷಗಳು ಉರುಳಿದಂತೆ ಅಪರಾಧ ಕೃತ್ಯಗಳಲ್ಲಿ ಹೆಚ್ಚಳವಾಗುವ ಸುದ್ದಿಗಳು ಸಾಮಾನ್ಯವಾಗಿರುತ್ತವೆ. ಆದರೆ ದುಬೈ ಇದಕ್ಕಿಂತ ಭಿನ್ನವಾಗಿದೆ. 2021ಕ್ಕೆ ಹೋಲಿಸಿದರೆ 2022 ರಲ್ಲಿ ಅಪರಾಧ ಪ್ರಕರಣಗಳಲ್ಲಿ 63 ಶೇಕಡಾ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಪೊಲೀಸ್ ವ್ಯವಸ್ಥೆ ಅತ್ಯಂತ ಸಮಗ್ರವಾಗಿ ಮತ್ತು ಬದ್ಧತೆಯಿಂದ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಅಪರಾಧಿಗಳ ಪತ್ತೆ ಕೂಡ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎಂದು ದುಬೈ ಪೊಲೀಸರು …

Read More »

ಮತ್ತೆ ಸಹಜ ಸ್ಥಿತಿಯತ್ತ ಹಜ್ಜ್ ಯಾತ್ರೆ!

ಜಿದ್ದಾ: ಸೌದಿಯ ಮಕ್ಕಾಕ್ಕೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹುದೊಡ್ಡ ಕನಸು ಮತ್ತು ಬಯಕೆ. ಈ ಬಾರಿ 20 ಲಕ್ಷ ಯಾತ್ರಿಕರು ಹಜ್ಜ್ ನಿರ್ವಹಿಸಲಿದ್ದಾರೆ ಎಂದು ಸೌದಿ ಘೋಷಿಸಿದೆ. ಸೌದಿ ಅರೇಬಿಯಾದ ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹು ದೊಡ್ಡ ಬಯಕೆ. ಕೊರೋನಾ ಕಾರಣಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಕುಂಠಿತ ಗೊಂಡಿತ್ತು. ಕೊರೋನಾಕ್ಕಿಂತ ಮೊದಲಿನ ಅದೇ ಸ್ಥಿತಿಗೆ ಈ ಬಾರಿ ಹಜ್ಜ್ ತನ್ನ ವೈಭವದೊಂದಿಗೆ ಮರಳಲಿದೆ. ಅರೇಬಿಯಾದ ಮಕ್ಕಾಗೆ …

Read More »

ಬ್ರಿಟಿಷ್‌ ಏರ್‌ವೇಸ್‌ ನ ನೂತನ ಸಮವಸ್ತ್ರದಲ್ಲಿ ಹಿಜಾಬ್‌ ಗೆ ಅವಕಾಶ

ಲಂಡನ್: ಬ್ರಿಟಿಷ್ ಏರ್‌ವೇಸ್ ಸುಮಾರು ಎರಡು ದಶಕಗಳಲ್ಲಿ ತನ್ನ ಮೊದಲ ಹೊಸ ಸಮವಸ್ತ್ರದ ಸಂಗ್ರಹವನ್ನು ಅನಾವರಣಗೊಳಿಸಿದ್ದು, ಮಹಿಳೆಯರಿಗಾಗಿ ಟ್ಯೂನಿಕ್ ಮತ್ತು ಹಿಜಾಬ್ ಆಯ್ಕೆಗಳನ್ನೂ ಅಳವಡಿಸಲಾಗಿದೆ. ಬ್ರಿಟಿಷ್ ಫ್ಯಾಶನ್ ಡಿಸೈನರ್ ಮತ್ತು ಟೈಲರ್ ಓಜ್ವಾಲ್ಡ್ ಬೋಟೆಂಗ್ ರಚಿಸಿದ ಸಂಗ್ರಹವು ಪುರುಷರಿಗೆ ಸೂಕ್ತವಾದ ತ್ರೀಪೀಸ್ ಸೂಟ್ ಮತ್ತು ಮಹಿಳೆಯರಿಗೆ ಉಡುಗೆಯಾಗಿ ಸ್ಕರ್ಟ್, ಟ್ರೌಸರ್ ಮತ್ತು ಜಂಪ್‌ಸೂಟ್ ಮತ್ತು ಹಿಜಾಬ್ ಆಯ್ಕೆಗಳನ್ನು ಸಹ ಒಳಗೊಂಡಿದೆ. ಏರ್‌ಲೈನ್‌ನ 30,000 ಕ್ಕೂ ಹೆಚ್ಚು ಎಂಜಿನಿಯರ್‌ಗಳು, ಕ್ಯಾಬಿನ್ ಸಿಬ್ಬಂದಿ, …

Read More »

ಅಂತಾರಾಷ್ಟ್ರೀಯ ಮಟ್ಟದ ಕು‌ರ್ ಆನ್ ಪಾರಾಯಣ ಸ್ಪರ್ಧೆ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಆರಂಭ

ಜಿದ್ದಾ: ಇಲ್ಲಿನ ಸಾಂಸ್ಕೃತಿಕ ಅಥಾರಿಟಿಯು ಸಂಘಟಿಸುತ್ತಿರುವ ಎರಡನೇಯ ಅಂತಾರಾಷ್ಟ್ರೀಯ ಕುರ್‌ಆನ್ ಪಾರಾಯಣ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಪ್ರಾರಂಭವಾಗಿದೆ. ಅಥಾರಿಟಿ ಚೇರ್‌ಮೇನ್ ತುರ್ಕಿ ಬಿನ್ ಅಬ್ದುಲ್ ಮುಲ್ಸನ್ ಆಲುಶೈಖ್ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ಈ ಸ್ಪರ್ಧೆಗೆ “ಅತ್ತರುಲ್ ಕಲಾಮ್” ಎಂದು ಹೆಸರಿಸಲಾಗಿದೆ. ಕುರ್ ಆನ್ ಪಾರಾಯಣ ಮತ್ತು ಅದಾನ್ ಜೊತೆಯಾಗಿ ಮೊದಲ ಬಾರಿಗೆ ನಡೆಸುವ ವಿಶ್ವದ ಅತೀ ದೊಡ್ಡ ಸ್ಪರ್ದೆಯಾಗಿದ್ದು, ವಿಜೇತರಿಗೆ 1.2 ಕೋಟಿ ರಿಯಾಲ್‌ಗಿಂತಲೂ ಅಧಿಕ ಬಹುಮಾನ ಘೋಷಿಸಲಾಗಿದೆ. …

Read More »