Home / ಪ್ರವಾದಿ ವಚನಗಳು (page 2)

ಪ್ರವಾದಿ ವಚನಗಳು

ಸ್ಪಷ್ಟವಾದ ಈಮಾನ್(ಸತ್ಯವಿಶ್ವಾಸ)

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ)ವಯ೯ರ ಬಳಿಗೆ ಕೆಲವು ಸಹಾಬಿಗಳು ಬಂದು ಹೀಗೆ ವಿಚಾರಿಸಿದರು – ನಮ್ಮ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳಿರುತ್ತವೆ. ಅದನ್ನು ಹೇಳುವುದು ನಮ್ಮ ಪೈಕಿ ಪ್ರತಿಯೊಬ್ಬರಿಗೂ ಕೆಟ್ಟದೆನಿಸುತ್ತದೆ. ಪ್ರವಾದಿ(ಸ) ಕೇಳಿದರು – ನಿಜವಾಗಿಯೂ ನಿಮಗದು ಅನುಭವವಾಗುತ್ತದೆಯೇ? ನಾವು ಹೌದೆಂದಾಗ ಪ್ರವಾದಿ(ಸ) ಹೇಳಿದರು – ಇದು ಸ್ಪಷ್ಟವಾದ ಈಮಾನ್(ಸತ್ಯವಿಶ್ವಾಸ) ಆಗಿದೆ. (ಮುಸ್ಲಿಮ್)

Read More »

ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ’ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ.’ ಸಹಾಬಿಗಳು ವಿಚಾರಿಸಿದರು – ‘ಅವು ಯಾವುವು?’ ಪ್ರವಾದಿ(ಸ) ಹೇಳಿದರು – 1. ಅಲ್ಲಾಹನ ಜತೆ ಭಾಗೀದಾರರನ್ನು ಮಾಡುವುದು 2. ಮಾಟ ಮಾಡುವುದು 3. ಅಲ್ಲಾಹನು ನಿಷಿದ್ಧಗೊಳಿಸಿದ ಪ್ರಾಣವನ್ನು ಅನ್ಯಾಯವಾಗಿ ಹರಣ ಮಾಡುವುದು 4. ಬಡ್ಡಿ ತಿನ್ನುವುದು 5. ಅನಾಥನ ಸೊತ್ತು ಕಬಳಿಸುವುದು 6. ಯುದ್ಧದ ವೇಳೆ ಬೆನ್ನು ತಿರುಗಿಸಿ ಓಡುವುದು 7. ಸುಶೀಲೆಯರಾದ ನಿದೋ೯ಷಿ …

Read More »

ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಕೊನೆಯ ಕಾಲದಲ್ಲಿ ವಂಚನೆ ಮಾಡುವ ಸುಳ್ಳುಗಾರರಿರುವರು. ನಿಮ್ಮ ಬಳಿ ನೀವಾಗಲೀ ನಿಮ್ಮ ಪೂವ೯ಜರಾಗಲಿ ಕೇಳಿರದ ಹದೀಸ್’ಗಳನ್ನು ತರುವರು. ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ. ಅವರು ನಿಮ್ಮನ್ನು ದಾರಿಗೆಡಿಸದಿರಲಿ ಮತ್ತು ಗೊಂದಲದಲ್ಲಿ ಸಿಲುಕಿಸದಿರಲಿ. (ಮುಸ್ಲಿಮ್) ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಆದಮನ ಪುತ್ರ ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ …

Read More »

ಕಲಿಯಿರಿ ಕಲಿಸಿರಿ

ಇಬ್ನು ಮಸ್’ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೀಗೆ ಹೇಳಿದರು – ವಿದ್ಯೆ ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಕುರ್’ಆನನ್ನು ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಖಂಡಿತವಾಗಿಯೂ ನಾನು ಓವ೯ ವ್ಯಕ್ತಿಯಾಗಿದ್ದು ನನ್ನನ್ನು ವಶಪಡಿಸಲಾಗುವುದು. ವಿದ್ಯೆ ಕಡಿಮೆಯಾದರೆ ಕ್ಷೋಭೆ ಪ್ರತ್ಯಕ್ಷವಾಗುವುದು. ಎಲ್ಲಿಯವರೆಗೆಂದರೆ ಇಬ್ಬರು ಕಡ್ಡಾಯ ವಿಧಿಯೊಂದರ ಬಗ್ಗೆ ಜಗಳಾಡುವರು ಮತ್ತು ಅವರ ಮಧ್ಯೆ ತೀಮಾ೯ನ ಮಾಡುವವರು ಯಾರೂ ಇರಲಾರರು. (ದಾರಿಮೀ, ದಾರಕುತ್ನಿ)

Read More »

ವಿದ್ವಾಂಸರು ಯಾರು?’

ಸುಫ್ಯಾನ್(ರ) ಅವರಿಂದ ವರದಿಯಾಗಿದೆ. ಉಮರ್ ಬಿನ್ ಖತ್ತಾಬ್(ರ) ಕ’ಅಬ್(ರ)ರೊಂದಿಗೆ ಹೀಗೆ ಕೇಳಿದರು -‘ ವಿದ್ವಾಂಸರು ಯಾರು?’  ಅವರು ಹೇಳಿದರು – ತಾವು ಅರಿತಿರುವುದರ ಪ್ರಕಾರ ನಡೆದವರು.’ ‘ಯಾವ ವಸ್ತು ವಿದ್ವಾಂಸರ ಮನಸ್ಸಿನಿಂದ ವಿದ್ಯೆಯನ್ನು ಕಿತ್ತು ಕೊಳ್ಳುತ್ತದೆ?’ ಅವರು ಹೇಳಿದರು – ‘ಆಸೆ.’

Read More »

ಧಮ೯ಸಮ್ಮತ ಸಂಪತ್ತು

ಅಬೂಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಒಬ್ಬನು ಯಾರ ಮುಂದೆಯೂ ಕೈ ಚಾಚುವ ನಿಂದ್ಯತೆಯಿಂದ ರಕ್ಷಣೆ ಹೊಂದಲಿಕ್ಕೆ, ತನ್ನ ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸಲಿಕ್ಕೆ ಮತ್ತು ತನ್ನ ನೆರೆಯವರ ಜೊತೆ ಸೌಜನ್ಯದ ವತ೯ನೆ ಮಾಡಲಿಕ್ಕೆ ಧಮ೯ಸಮ್ಮತ ಮಾಗ೯ದಿಂದ ಲೋಕ(ಸಂಪತ್ತು)ವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಯಾಗುವಾಗ ಆತನ ಮುಖವು ಹುಣ್ಣಿಮೆಯ ಚಂದ್ರನಂತಿರುವುದು. ಒಬ್ಬನು ಸಂಪತ್ತಿನಲ್ಲಿ ಹೆಚ್ಚಳವಾಗಲಿಕ್ಕೆ, ಜನರ ಮೇಲೆ ಅಹಂಕಾರವನ್ನು ಮೆರೆಯಲಿಕ್ಕೆ ಮತ್ತು ಹೆಸರು, ಕೀತಿ೯ ಗಳಿಸಲಿಕ್ಕೆ …

Read More »

ಪ್ರವಾದಿ(ಸ) ರ ಪ್ರಾರ್ಥನೆ

ಪ್ರವಾದಿ ಮುಹಮ್ಮದ್(ಸ) ಸದಾ ಈ ರೀತಿ ಪ್ರಾಥಿ೯ಸುತ್ತಿದ್ದರು: “ಓ ಅಲ್ಲಾಹ್ ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರಿಸು. ತಾವೇನು ಮಾಡುತ್ತಿದ್ದೇವೆಂಬುದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿ ಬಿಡು.” ಪ್ರವಾದಿವಯ೯(ಸ)ರ ಈ ಸ್ಥಿತಿಯನ್ನು ಕಂಡು ಆ ಶತ್ರುಗಳನ್ನು ಶಪಿಸುವಂತೆ ಸಹಾಬಿಗಳು ವಿನಂತಿಸುತ್ತಾರೆ. ಆಗ ಪ್ರವಾದಿವಯ೯ರು ಹೀಗೆ ಹೇಳುತ್ತಾರೆ: ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಮತ್ತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ. ಓ ಅಲ್ಲಾಹ್! ನನ್ನ ಜನಾಂಗದವರನ್ನು ಕ್ಷಮಿಸಿಬಿಡು. ಏಕೆಂದರೆ ಈ …

Read More »

ಮರಣದ ಬಳಿಕವೂ ಪುಣ್ಯ

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಸತ್ಯವಿಶ್ವಾಸಿಗೆ ಮರಣದ ಬಳಿಕವೂ ಪುಣ್ಯ ತಲುಪುತ್ತಿರುವ ಕಮ೯ಗಳು ಮತ್ತು ಒಳಿತುಗಳ ಪೈಕಿ – ಅವನು ಕಲಿಸಿದ ಮತ್ತು ಪ್ರಸಾರಪಡಿಸಿದ ವಿದ್ಯೆ, ಅವನು ಬಿಟ್ಟುಹೋದ ಸಜ್ಜನ ಸಂತಾನ, ಅವನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋದ ಕುರ್’ಆನ್, ಅವನು ಕಟ್ಟಿಸಿದ ಮಸೀದಿ, ಅವನು ಪ್ರಯಾಣಿಕರಿಗಾಗಿ ಕಟ್ಟಿಸಿದ ಛತ್ರ, ಅವನು ತೋಡಿಸಿದ ಕಾಲುವೆ ಅಥವಾ ಅವನು ತನ್ನ ಸಂಪತ್ತಿನಿಂದ ತನ್ನ ಆರೋಗ್ಯದ ಮತ್ತು ಜೀವನದ …

Read More »

ಮೂರು ವಿಧದ ಕಮ೯ಗಳು

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಕಮ೯ಗಳ ಪ್ರತಿಫಲವು ಸ್ಥಗಿತವಾಗುತ್ತದೆ. ಆದರೆ ಮೂರು ವಿಧದ ಕಮ೯ಗಳ ಪ್ರತಿಫಲವು ನಿರಂತರವಾಗಿ ಜಾರಿಯಲ್ಲಿರುತ್ತದೆ – 1) ಶಾಶ್ವತವಾದ ದಾನ. 2) ಉಪಯುಕ್ತ ವಿದ್ಯೆ. 3) ಅವನಿಗಾಗಿ ಪ್ರಾಥಿ೯ಸುತ್ತಿರುವ ಸಜ್ಜನ ಸಂತತಿ. (ಮುಸ್ಲಿಮ್)  

Read More »

ಎರಡು ವಿಷಯಗಳಿಗೆ ಅಸೂಯೆ ಪಡಬಹುದು

ಇಬ್ನು ಮಸ್’ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರ ಅಸೂಯೆ ಪಡಬಹುದು. ಆ ಪೈಕಿ ಒಬ್ಬನಿಗೆ ಅಲ್ಲಾಹನು ಸಂಪತ್ತು ದಯಪಾಲಿಸಿದ್ದು, ಸತ್ಯದ ಮಾಗ೯ದಲ್ಲಿ ಅದನ್ನು ವ್ಯಯಿಸುವ ಸೌಭಾಗ್ಯ ನೀಡಿರುವನು. ಇನ್ನೊಬ್ಬನಿಗೆ ಅಲ್ಲಾಹನು ವಿವೇಕವನ್ನು ದಯಪಾಲಿಸಿದ್ದು, ಅವನು ಅದರಂತೆ ತೀಮಾ೯ನಿಸುತ್ತಾನೆ ಮತ್ತು ಇತರರಿಗೆ ಅದನ್ನು ಕಲಿಸುತ್ತಾನೆ. (ಮುತ್ತಫಕುನ್ ಅಲೈಹಿ)

Read More »