Home / ಲೇಖನಗಳು (page 34)

ಲೇಖನಗಳು

ಪದ್ಮಶ್ರೀ ಪುರಸ್ಕಾರಕ್ಕೆ ಮೆರುಗು ನೀಡಿದ ಅಲಿ ಮನಿಕ್ ಫಾನ್

ಇವರ ಬಗ್ಗೆ ನಿಮಗೆಷ್ಟು ತಿಳಿದಿದೆ. ಇವರೇ ಅಲಿ ಮಾನಿಕ್ ಫಾನ್. ವಿದ್ವಾಂಸ, ಭಾಷಾ ಪರಿಣಿತ, ಖಗೋಳ ಶಾಸ್ತ್ರಜ್ಞ, ಶಿಕ್ಷಣತಜ್ಞ, ಪರಿಸರ ಪ್ರೇಮಿ ಒಂದೇ ಮಾತಲ್ಲಿ ಹೇಳುವುದಾದರೆ ಇವರು ಮುಸ್ಲಿಂ ಜಗತ್ತು ಕಂಡ ಮಹಾನ್ ಪಂಡಿರಲ್ಲೊಬ್ಬರು. ಇಮಾಮ್ ಗಝ್ಝಾಲಿ, ಶಾ ವಲಿಯುಲ್ಲಾ ದಹ್ಲವಿ ಮುಂತಾದವರನ್ನು ಜಗತ್ತು ಶೈಖುಲ್ ಇಸ್ಲಾಂ, ಹುಜ್ಜತುಲ್ಲಾ ಎಂಬ ಅಂಕಿತನಾಮದಿಂದ ಗುರುತಿಸುವಾಗ ಇವರನ್ನು ನಾವು ಬಹ್ರುಲ್ ಉಲಮಾ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಇವರು ಒಮ್ಮೆ ಮಂಗಳೂರಿಗೆ ಬಂದಿದ್ದರು. ಆಗ …

Read More »

ಸಾಯಿಬಾಬ ಮತ್ತು ಮುಸ್ಲಿಮ್ ಬಾಬಾಗಳು?

ಪ್ರಶ್ನೆ: ದೇವನು ಮಾನವ ರೂಪದಲ್ಲಿ ಅವತರಿಸುವುದಿಲ್ಲವೆಂದು ನೀವು ಹೇಳುತ್ತೀರಿ? ಹಾಗಾದರೆ ಭಗವಾನ್ ಸಾಯಿಬಾಬ ದೇವರ ಅವತಾರವಲ್ಲವೇ? ಬಾಬಾರ ಅದ್ಭುತ ಪವಾಡಕ್ಕೆ ಸಾವಿರಾರು ಮುಸ್ಲಿಮರೂ ಮಾರು ಹೋಗಿದ್ದಾರಲ್ಲಾ? ಅವರ ಕುರಿತು ನೀವೇನು ಹೇಳುವಿರಿ? ದೇವರಿಗೆ ಅವತಾರವಿಲ್ಲವೆಂದು ನಾನು ಮಾತ್ರವಲ್ಲ ಪ್ರಖ್ಯಾತ ಹಿಂದೂ ವಿದ್ವಾಂಸರೂ ಆಧಾರ ಸಹಿತವಾಗಿ ಸಮರ್ಥಿಸಿದ್ದಾರೆ. ಮೊದಲೇ ಈ ಪ್ರಶ್ನೆಗೆ ಬಹಳ ವಿವರವಾಗಿ ವಿವರಿಸಿದ್ದೇನೆ. ಸತ್ಯ ಸಾಯಿಬಾಬ ಕೇವಲ ಓರ್ವ ಮನುಷ್ಯ ಮಾತ್ರ. 1926 ನವೆಂಬರ್ 23ಕ್ಕೆ ಅವರು ಜನಿಸಿದರು. …

Read More »

ನೀವು ಚಿಂತಿಸುವುದಿಲ್ಲವೇ?!!

ಇಂದು ಭೂಮಿಯಲ್ಲಿ ಸುಮಾರು 750 ಕೋಟಿ ಮನುಷ್ಯರು ವಾಸಿಸುತ್ತಿದ್ದಾರೆ, ಈ ಎಲ್ಲಾ ಮನುಷ್ಯರ ಆಕಾರ ಒಂದೇ ರೀತಿಯಲ್ಲಿಯಾಗಿದೆ. ಎರಡು ಕಾಲುಗಳು, ಎರಡು ಕೈಗಳು, ಅತ್ಯಂತ ಮೇಲ್ಬಾಗದಲ್ಲಿ ಮುಖಗಳು. ಇದಾಗಿದೆ ಮನುಷ್ಯ ರೂಪ.ಮಾನವನ ಮುಖದ ಗಾತ್ರ ಸುಮಾರು ಮುಕ್ಕಾಲು ಚದುರ ಅಡಿ ಆಗಿದೆ, ಈ ಮುಕ್ಕಾಲು ಚದುರ ಅಡಿ ವಿಸ್ತೀರ್ಣದಲ್ಲಿ ಸರಿಯಾದ ಸ್ಥಳದಲ್ಲಿ ಎರಡು ಕಣ್ಣುಗಳು ಒಂದು ಮೂಗು ಎರಡು ತುಟಿಗಳು ಮತ್ತು ಎರಡು ಬದಿಗಳಲ್ಲಿ ಕಿವಿಗಳನ್ನು ಹೊಂದಿದೆ. ಆದರೆ ಕೇವಲ …

Read More »

ಕುಟುಂಬ ಜೀವನವೇ ಪ್ರಧಾನ

@ ಎಂ.ಎಸ್.ಎ. ರಝಾಕ್ ಕುಟುಂಬವು ಸಮಾಜದ ಆಧಾರ ಸ್ತಂಭ. ಭದ್ರವಾದ ತಳಹದಿಯಿಂದ ನಿರ್ಮಿಸಲ್ಪಟ್ಟ ಕುಟುಂಬದಲ್ಲಿ ಜನಿಸುವ ಸಂತಾನಗಳು  ಸುಸಂಸ್ಕ್ರತರೂ ಸಜ್ಜನರೂ ಆಗಿರುತ್ತಾರೆ. ಕುಟುಂಬವೆಂಬುದು ಸಂಸ್ಕಾರದ ತೊಟ್ಟಿಲು. ಪ್ರಶಾಂತವಾದ ಕುಟುಂಬದ ವಾತಾವರಣದಲ್ಲಿ  ಬೆಳೆದು ಬರುವ ಮಕ್ಕಳು ಉನ್ನತ ವ್ಯಕ್ತಿತ್ವದ ಒಡೆಯರಾಗಿರುತ್ತಾರೆ. ಸಮಾಜದ ಅತ್ಯಂತ ಸಣ್ಣ ಘಟಕವಾದ ಕುಟುಂಬದಿಂದ ಸಂತಾನಗಳು ಪಡೆಯುವ ಶಿಕ್ಷಣವು ಅವರ ಭಾವೀ ಜೀವನ ಉಜ್ವಲಗೊಳ್ಳಲು ಪರ್ಯಾಪ್ತವಿರಬೇಕು. ಯುವಜನಾಂಗ ದಾರಿ ತಪ್ಪುವುದರ ಮುಖ್ಯ ಕಾರಣ, ಮುಖ್ಯ ಜವಾಬ್ದಾರಿ ಕುಟುಂಬವಾಗಿದೆ. ಆದ್ದರಿಂದ ತತ್ವ …

Read More »

ಕೊರೋನಾ ಕಲಿಸಿದ ಪಾಠ

@ ಮೌ| ವಲಿಯುಲ್ಲಾಹ್ ಸಈದಿ ಫಲಾಹಿ ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವ ಹಾನಿ ಮತ್ತು ಉತ್ಪನ್ನಗಳ ನಾಶಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸಂದರ್ಭಗಳಲ್ಲಿ ತಾಳ್ಮೆ ವಹಿಸಿ ದವರಿಗೆ ಸುವಾರ್ತೆ ನೀಡಿರಿ. (ಪವಿತ್ರ ಕುರ್‍ಆನ್: 2-155) ಕೋವಿಡ್- 19 ಎಂಬ ಮಹಾ ಪಿಡುಗು ಪವಿತ್ರ ಕುರ್‍ಆನಿನ ಮೇಲಿನ ಸೂಕ್ತದಲ್ಲಿ ತಿಳಿಸಿರುವ ಎಲ್ಲಾ ಪರೀಕ್ಷೆಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಎದುರಿಸುತ್ತಿವೆ. ನಾನು ಇವತ್ತು ಭಯ ಮತ್ತು ಹಸಿವು ಈ ಎರಡು …

Read More »

ಇಸ್ಲಾವಿೂ ಸೇನೆಯು ಜನ ಸಾಮಾನ್ಯರ ಮೇಲೆ ದಾಳಿ ನಡೆಸಬಹುದೇ?

ಪ್ರಶ್ನೆ: ಎರಡು ರಾಷ್ಟ್ರಗಳ ವಿರುದ್ಧ ಯುದ್ಧ ನಡೆದಾಗ ಒಂದು ಇಸ್ಲಾವಿೂ ರಾಷ್ಟ್ರ ಕೇವಲ ಆ ರಾಷ್ಟ್ರದ ಸೇನೆಯ ವಿರುದ್ಧ ಹೋರಾಡಬೇಕೇ? ಅಥವಾ ಒಂದು ರಾಷ್ಟ್ರ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡಿದರೆ ಇಸ್ಲಾವಿೂ ರಾಷ್ಟ್ರ ಕೂಡ ಅವರ ಸಮಾಜದ ಮೇಲೆ ಆಕ್ರಮಣ ಮಾಡಬಹುದೇ? ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ …

Read More »

ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ?

ಕುಫ್ರ್ ಮತ್ತು ಕಾಫಿರ್ ಎಂಬುದು ಇಸ್ಲಾಮಿನ ಕೆಲವು ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಎರಡು ಶಬ್ದವಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಖೇದವೇನೆಂದರೆ ಬೇರೆ ಬೇರೆ ಪಾರಿಭಾಷಿಕ ಶಬ್ದಗಳಂತೆಯೇ ಈ ಶಬ್ದಗಳಿಗೂ ತಪ್ಪು ಅರ್ಥ ನೀಡಿ ಅದರ ನಿಜವಾದ ಅರ್ಥವನ್ನು ಅಪಾರ್ಥಗೊಳಿಸುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಕಾಫಿರ್ ಶಬ್ದಕ್ಕೆ ಮುಸ್ಲಿಮೇತರ ಸಹೋದರರನ್ನು ದ್ವೇಷಿಸುವುದು ತಿರಸ್ಕರಿಸುವುದು ಮತ್ತು ಅಸಮಾನತೆ ತೋರಿಸುವುದೆಂಬ ಅರ್ಥವನ್ನು ಹೇಳಲಾಗುತ್ತಿದೆ ಮತ್ತು ಕಾಫಿರ್ ಅಂತ ಹೇಳಿ ಮುಸ್ಲಿಮೇತರ ಸಹೋದರರನ್ನೇ ಅವರ …

Read More »

ಕೃಷಿಯ ಮಹತ್ವ ಇಸ್ಲಾಮಿನಲ್ಲಿ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅನಸ್(ರ) ಕಾಲ: ಕಾಲ ರಸೂಲುಲ್ಲಾಹಿ(ಸ): ಮಾ ಮಿನ್ ಮುಸ್ಲಿಮಿ, ಯಫ್‍ರಿಸು ಘರ್‍ಸನ್ ಅವ್ ಯಝ್‍ರಊ ಝರ್‍ಅನ್ ಫಯಅïಕುಲು ಮಿನ್‍ಹು ತೈರುನ್ ಅವ್ ಇನ್‍ಸಾನುನ್ ಅವ್  ಬಹೀಮತುನ್ ಇಲ್ಲಾ ಕಾನ ಲಹು ಬಿಹಿ ಸದಕತುನ್. (ಬುಖಾರಿ) ಅನಸ್(ರ)ರಿಂದ ವರದಿಯಾಗಿದೆ. ಪ್ರವಾದಿಯವರು(ಸ) ಹೇಳಿದರು: “ಓರ್ವ ಮುಸ್ಲಿಮ್ ಗಿಡ ನೆಡುತ್ತಾನೆ ಅಥವಾ ಕೃಷಿ ಮಾಡುತ್ತಾನೆ. ನಂತರ ಅದರ ಬೆಳೆಯನ್ನು ಹಕ್ಕಿ, ಮನುಷ್ಯ ಅಥವಾ ಪ್ರಾಣಿಗಳು ತಿನ್ನುತ್ತವೆ. ಆಗ ಫಸಲನ್ನು …

Read More »

ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರವಾದಿವರ್ಯರ ಮಾದರಿ

@ ಡಾ| ಕೆ.ಎಂ. ಬಹಾವುದ್ದೀನ್ ಹುದವಿ ಪ್ರವಾದಿ(ಸ)ರು ತಮ್ಮ ಜೀವನದ ಸಿಂಹಪಾಲು ಮಕ್ಕಾದಲ್ಲಿ ಕಳೆದರು. ಮಕ್ಕಾದ 53 ವರ್ಷಗಳ ಜೀವನವೂ ಮದೀನಾದ ಹತ್ತು ವರ್ಷಗಳ ಜೀವನವೂ ಅಸ್ವಸ್ಥತೆ ತುಂಬಿಕೊಂಡದ್ದಾಗಿತ್ತು. ಐಹಿಕ ಜೀವನವೆಂಬುದು ಸ್ವಸ್ಥವಾಗಿ ಜೀವಿಸಲು ಇರುವ ಅವಕಾಶವಲ್ಲವೆಂದೂ ನಿರಂತರ ಪರೀಕ್ಷೆಗಳ ಸಂಗಮ ಭೂಮಿಯೆಂಬ ಸಂದೇಶವನ್ನು ಇದು ನಮಗೆ ನೀಡುತ್ತದೆ. ಅಂತಹ ಸಂದರ್ಭಗಳನ್ನು ಯಾವ ರೀತಿ ಯುಕ್ತಿಯುತವಾಗಿ ಎದುರಿಸಬಹುದು ಎಂಬುದನ್ನು ನಾವು ಅದರಿಂದ ಕಲಿಯಬೇಕು. ಪ್ರವಾದಿತ್ವದ ಬಳಿಕದ 13 ವರ್ಷ ಮಕ್ಕಾ …

Read More »

ಮಹಿಳಾ ಪರ ಪ್ರವಾದಿ(ಸ)…

@ ಲುಬ್ನ ಝಕೀಯ್ಯ ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್(ಸ). ಇವರ  ಕಾರ್ಯವೈಖರಿ ಮತ್ತು ಪ್ರಭಾವ ವ್ಯಾಪಿಸಲು ಮೂಲ ಕಾರಣ ಇವರ ಸುಧಾರಣಾ ತಂತ್ರ ಕೇವಲ ಒಂದು ರಂಗಕ್ಕಷ್ಟೇ  ಸೀಮಿತವಾಗದಿರುವುದು. ಉತ್ತಮ ಕೌಟುಂಬಿಕ ವ್ಯಕ್ತಿಯಾಗುವಲ್ಲಿಂದ ಹಿಡಿದು ಅತ್ಯುತ್ತಮ ಸೇನಾಧಿಪತಿ, ರಾಷ್ಟ್ರ ನಿರ್ಮಾತೃ ಆಗುವಲ್ಲಿಯವರೆಗಿನ  ವಿವಿಧ ರಂಗಗಳ ಉನ್ನತ …

Read More »