Home / ಲೇಖನಗಳು (page 33)

ಲೇಖನಗಳು

ಸುದೃಢ ಕುಟುಂಬ ಸುಭದ್ರ ಸಮಾಜ

“ನಿಮ್ಮನ್ನು ಒಂದು ವ್ಯಕ್ತಿಯಿಂದ ಸೃಷ್ಟಿಸಿದವನು ಅಲ್ಲಾಹನೇ ಆಗಿರುತ್ತಾನೆ. ಮತ್ತು ಅವನು ಅದೇ ವ್ಯಕ್ತಿಯಿಂದ ಅದರ ಜೋಡಿಯನ್ನು ಮಾಡಿದನು. ಅವಳಿಂದ ಮನಶಾಂತಿ ಪಡೆಯಲಿಕ್ಕಾಗಿ. ಅನಂತರ ಪುರುಷನು ಸ್ತ್ರೀಯೊಂದಿಗೆ ಸಂಯೋಗಿಸಿದಾಗ ಅವಳಿಗೆ ಒಂದು ಲಘುವಾದ ಗರ್ಭಧಾರಣೆಯಾಯಿತು. ಅವಳು ಅದನ್ನು ಹೊತ್ತುಕೊಂಡೇ ನಡೆಯುತ್ತಿದ್ದಳು. ಅದು ಭಾರವಾದಾಗ ಅವರಿಬ್ಬರೂ ಒಟ್ಟಾಗಿ ತಮ್ಮ ಪ್ರಭುವಾದ ಅಲ್ಲಾಹನೊಡನೆ ನೀನು ನಮಗೆ ಉತ್ತಮ ಮಗುವನ್ನು ನೀಡಿದರೆ ನಾವು ನಿನಗೆ ಕೃತಜ್ಞತೆ ಸಲ್ಲಿಸುವೆವು ಎಂದು ಪ್ರಾರ್ಥಿಸಿದರು.” (ಪವಿತ್ರಕುರ್ ಆನ್ 7:189) ದೇವಭಯ …

Read More »

ಧರ್ಮ ಮತ್ತು ಮಾನವೀಯ ಸಂಬಂಧಗಳು

ಜೀವನದ ಕಾರ್ಯರಂಗಗಳಿಂದ ದೂರ ಸರಿದು ಕೇವಲ ಆರಾಧನಾಲಯಗಳ ಮೂಲೆಗಳಲ್ಲಿ ಜಪತಪಗಳಿಂದ ಕಾಲ ಕಳೆಯುವವರು ಇಸ್ಲಾಮಿನ ದೃಷ್ಟಿಯಲ್ಲಿ ಪುಣ್ಯಾತ್ಮರಲ್ಲ. ಲೌಕಿಕ ಜೀವನದಿಂದ ವಿಮುಖರಾಗಿ ಆತ್ಮಶಾಂತಿಯನ್ನು ಹುಡುಕುವ ಕಪಟ ಸನ್ಯಾಸವು ಸತ್ಯ ಧರ್ಮಕ್ಕೆ ಭೂಷಣವಲ್ಲ. ಇಸ್ಲಾಮ್ ಧರ್ಮವು ಲೌಕಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಸಮಂಜಸವಾಗಿ ಸಮನ್ವಯಗೊಳಿಸುವ ವಿಶಿಷ್ಟ ಜೀವನ ವಿಧಾನವಾಗಿದೆ. ಆತ್ಮ ಸಂತೃಪ್ತಿಯಂತೆಯೇ ಪರರ ಸಂತೃಪ್ತಿಯನ್ನೂ ಸಾರ್ಥಕ್ಯವೆಂದು ಭಾವಿಸುವಾತನೇ ನೈಜ ಮುಸ್ಲಿಮ್. ಧರ್ಮವೆಂದರೆ ಮರದಡಿಯಲ್ಲಿ ಕುಳಿತು ಧ್ಯಾನಮಗ್ನವಾಗಿರುವುದಲ್ಲ. ಬದಲಾಗಿ ವೈಯಕ್ತಿಕ ಜೀವನದ ಖಾಸಗಿ ರಂಗದಲ್ಲಿಯೂ …

Read More »

ಪ್ರವಾದಿ ಮುಹಮ್ಮದ್ (ಸ) ಎಂಬ ಶ್ರೇಷ್ಠ ಆಡಳಿತಗಾರ ; ಅವರು ಕೈಗೊಂಡ ಅಂತರ್ ಧರ್ಮೀಯ ಒಪ್ಪಂದಗಳು

ಲೇಖಕರು: ಸಯ್ಯದ್ ಕಾಝಿಮ್, ಬೆಂಗಳೂರು ಅನುವಾದ : ಅಬೂ ಕುತುಬ್ ಸಾಮಾನ್ಯವಾಗಿ ಓರ್ವ ಆಡಳಿತಗಾರ ಸ್ವತಃ ರಾಜಕಾರಣಿ ಹಾಗೂ ರಾಜತಾಂತ್ರಿಕನಾಗಿರುತ್ತಾನೆ ಅಥವಾ ಗಮನಾರ್ಹ ಸಾರ್ವಜನಿಕ ವ್ಯಕ್ತಿಯಾಗಿರುತ್ತಾನೆ. ಅವರು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಗೌರವಾನ್ವಿತ ವೃತ್ತಿ ಜೀವನವನ್ನು ಹೊಂದಿರುತ್ತಾರೆ. ರಾಜ್ಯವನ್ನು ಮುನ್ನಡೆಸುವುದು ಭೂಮಿಯ ಮೇಲೆ ಅತ್ಯಂತ ಕಷ್ಟಕರ ಕೆಲಸಗಳಲ್ಲಿ ಒಂದು. ಈ ಕಾರ್ಯವನ್ನು ಪ್ರವಾದಿ ಮುಹಮ್ಮದ್ (ಸ) ಅವರು ಅತ್ಯಂತ ಕರಾರುವಾಕ್ಕಾಗಿ ಕಾರ್ಯಗತಗೊಳಿಸಿದರು. ಪ್ರವಾದಿ (ಸ) ರವರು ಕೇವಲ …

Read More »

ಹಲಾಲ್ ಕೋಳಿಯ ಆರೋಗ್ಯಕರ ಪ್ರಯೋಜನಗಳು ; ಸ್ಕಾರ್ಲೆಟ್ ಬೇಕರ್ ರವರ ಲೇಖನದಿಂದ

ಹಲಾಲ್ ಕೋಳಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಲಾಲ್ ಎಂಬ ಪದವು ಅರೇಬಿಕ್‌ನಿಂದ ಬಂದಿದೆ, ಇದರರ್ಥ ಅನುಮತಿ. ಇದು ಇಸ್ಲಾಂ ಧರ್ಮದಲ್ಲಿ ಬಳಕೆಯಾಗುವ ಪದ. ಇದರರ್ಥ ಮಾಂಸವು ಅತ್ಯಂತ ಶುದ್ಧವಾಗಿರಬೇಕು. ಹಲಾಲ್ ಚಿಕನ್ ಮತ್ತು ಹಲಾಲ್ ಇತರ ಉತ್ಪನ್ನಗಳು ನಿಮ್ಮ ದೇಹಕ್ಕೆ ಏಕೆ ಉತ್ತಮವೆಂದು ತಿಳಿದುಕೊಳ್ಳಿ. ಹಲಾಲ್ ಉದ್ಯಮವು ಪ್ರಪಂಚದಾದ್ಯಂತ ಹೇಗೆ ಜನಪ್ರಿಯವಾಗುತ್ತಿದೆ. ಹಲಾಲ್ ಕೋಳಿಯ ಪ್ರಾಮುಖ್ಯತೆ ಹಲಾಲ್ ಮಾಂಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇಸ್ಲಾಮಿಕ್ ಮಾನದಂಡಕ್ಕೆ ತಕ್ಕಂತೆ, ಮಾಂಸವು ಕುರಿಮರಿ, …

Read More »

ಕಅಬಾದ ಕಪ್ಪುಕಲ್ಲು ಮತ್ತು ಶಿಲಾ ಪೂಜೆ?

ವಿಗ್ರಹಾರಾಧನೆಯನ್ನು ಪ್ರಬಲವಾಗಿ ಇಸ್ಲಾಮ್ ಧರ್ಮವು ಖಂಡಿಸುತ್ತದೆ. ಹೀಗಿರುವಾಗ ಕಅಬಾದಲ್ಲಿ ಒಂದು ಕಪ್ಪು ಕಲ್ಲನ್ನು ಪ್ರತಿಷ್ಠಾಪಿಸಲು ಕಾರಣವೇನು? ಎಲ್ಲಾ ವಿಗ್ರಹಗಳನ್ನು ಅಲ್ಲಿಂದ ತೆರವುಗೊಳಿಸಿದಾಗಲೂ ಅದೊಂದನ್ನು ಮಾತ್ರ ಉಳಿಸಲಾಯಿತು. ಇದು ಶಿಲಾ ಪೂಜೆ ಇಸ್ಲಾಮ್‌ನಲ್ಲಿದೆಯೆಂಬುದನ್ನು ಸೂಚಿಸುತ್ತದೆಯಲ್ಲವೇ? ಈ ಪ್ರಶ್ನೆಯು ಸಮಾಜದಲ್ಲಿ ವ್ಯಾಪಕವಾಗಿರುವ ತಪ್ಪುಕಲ್ಪನೆಯ ಕಡೆಗೆ ಬೆರಳು ತೋರಿಸುತ್ತದೆ. ಆದ್ದರಿಂದ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. 1. ಕಅಬಾದ ಕಪ್ಪುಶಿಲೆ (ಹಜರುಲ್ ಅಸ್ವದ್) ಇತಿಹಾಸದಲ್ಲಿ ಒಮ್ಮೆಯೂ ಯಾರಿಂದಲೂ ಆರಾಧಿಸಲ್ಪಟ್ಟಿಲ್ಲ, 360ಕ್ಕಿಂತಲೂ ಹೆಚ್ಚು ವಿಗ್ರಹಗಳು ಪೂಜಿಸಲ್ಪಟ್ಟಾಗಲೂ …

Read More »

ಸುಮಧುರ ದಾಂಪತ್ಯ: ಹೆಣ್ಣಿನ ಪಾತ್ರ ಏನು?

ಇರ್ಷಾದ್, ಬೈರಿಕಟ್ಟೆ ದಾಂಪತ್ಯದ ಬುನಾದಿ ಗಂಡು ಹೆಣ್ಣಿನ ಕೂಡುವಿಕೆಯಿಂದ; ಸುಖ ದಾಂಪತ್ಯ ಜೀವನವನ್ನು ಬಯಸದವರಾರು? ಮಾತಿನಲ್ಲಿ-  ಲೇಖನದಲ್ಲಿ ದಾಂಪತ್ಯ ಬದುಕಿನ ಬಗೆಗೆ ಮಧುರವಾದ ಅಕ್ಷರಗಳನ್ನು ಪೋಣಿಸುವುದು ಬಲು ಸುಲಭ. ಆದರೆ ನಿಜ ಜೀವನದ ಪ್ರಯೋಗಾಲಯದಲ್ಲಿ ನಡೆಸುವ ಪ್ರಯೋಗಗಳು ಸೂಕ್ಷ್ಮವಾಗಿರಬೇಕು, ಕೆಲವೊಮ್ಮೆ ಸಂಭವಿಸುವ ಕ್ಷುಲ್ಲಕ ತಪ್ಪುಗಳೂ ಮಧುರತೆಯ ಹಾದಿಯಲ್ಲಿ ಮುಳ್ಳಾಗಿ ಕಾಡಬಹುದು. ಪವಿತ್ರ ಕುರ್‌ಆನ್ ದಂಪತಿಗಳನ್ನು ನೀವು ಪರಸ್ಪರ ಉಡುಪಿನಂತಿರಬೇಕು ಎಂದಿದೆ.  (ಸೂರಾ ಬಕರಾ: 187) ಇನ್ನೊಂದು ಕಡೆ “ಹಾಗೆಯೇ ಅವನು …

Read More »

ಮೀನು ತಿನ್ನುವುದರಲ್ಲಿ ಯಾಕೋ ಮುಂದೆ!! ಮೀನಿನ ಅಧ್ಯಯನದಲ್ಲಿ ಯಾಕೆ ಹಿಂದೆ!!

ರಫೀಕ್ ಮಾಸ್ಟರ್ ನಾವು ಮೀನು ಪ್ರಿಯರು. ಬಗೆ ಬಗೆಯ ಮೀನುಗಳನ್ನು ತಿನ್ನುವುದೆಂದರೆ ನಮಗೆ ಬಹಳ ಇಷ್ಟ. ಮೀನು ವ್ಯಾಪಾರದಲ್ಲೂ ನಮ್ಮದು ಎತ್ತಿದ ಕೈ. ದೊಡ್ಡ ದೊಡ್ಡ ಮೀನಿನ ಫ್ಯಾಕ್ಟರಿಗಳು ನಮ್ಮವರಿಗಿದೆ. ಮೀನನ್ನು ರಫ್ತು ಮಾಡುವ ಹೆಸರಾಂತ ಯಶಸ್ವಿ ಉದ್ಯಮಿಗಳು ನಮ್ಮವರಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಆದರೆ ಮೀನಿನ ಬಗ್ಗೆ ಎಷ್ಟು ಅಧ್ಯಯನ, ಸಂಶೋಧನೆ ನಾವು ಮಾಡುತ್ತೇವೆ ಎಂದು ತಿಳಿಯಬೇಕಾದರೆ ನಮ್ಮ ಪಕ್ಕದಲ್ಲೇ ಇರುವ ಮೀನುಗಾರಿಕಾ ಕಾಲೇಜಿಗೆ ಭೇಟಿ ಕೊಡಬೇಕು. ಇಡೀ ಕರ್ನಾಟಕಕ್ಕೆ …

Read More »

ಲವ್ ಮ್ಯಾರೇಜ್ ಮತ್ತು ಅರೇಂಜ್ ಮ್ಯಾರೇಜ್ – ಸುದೃಢ ಕುಟುಂಬ ಸುಭದ್ರ ಸಮಾಜ

ಲೇಖಕರು : ಅಬ್ದುಲ್ ಹಫೀದ್ ನದ್ವಿ ಒಂದು ಸೂಫಿ ಕಥೆಯಿದೆ! ಪ್ರೀತಿ ಮತ್ತು ವಾತ್ಸಲ್ಯದ ನಡುವಿನ ವ್ಯತ್ಯಾಸವೇನು? ಅವರು ಉತ್ತರಿಸಿದರು: ನೀವು ಹೂವನ್ನು ಪ್ರೀತಿಸುತ್ತಿದ್ದರೆ, ನೀವು ಅದರ ಎಲೆಗಳು, ಕೊಂಬುಗಳು ಮತ್ತು ಮುಳ್ಳುಗಳನ್ನು ತೆಗೆಯಬಹುದು. ಆದರೆ ಪ್ರೀತಿಯನ್ನು ಅನುಭವಿಸಿದಾಗ, ನೀರು ಮತ್ತು ಗೊಬ್ಬರದಿಂದ ಅದನ್ನು ರಕ್ಷಿಸಲಾಗುತ್ತದೆ. ವಿಷಯಲೋಲುಪತೆಯ ಪ್ರೀತಿ ಮತ್ತು ಹೃತ್ಪೂರ್ವಕ ಪ್ರೀತಿಯ ನಡುವೆ ವ್ಯತ್ಯಾಸವನ್ನು ತೋರಿಸಲು ಈ ಒಂದು ಸಣ್ಣ ಕಥೆ ಸಾಕು. ರೋಮ್ ಚಕ್ರವರ್ತಿ ಕ್ಲಾಡಿಯಸ್ ಆಳ್ವಿಕೆಯಲ್ಲಿ …

Read More »

ಪ್ರವಾದಿ ಮುಹಮ್ಮದ್ (ಸ) ಎಂಬ ಆಡಳಿತಗಾರ ; ನಾಯಕತ್ವ ಗುಣಗಳು

ನಾಯಕ ಪರಿಚಯ ಪ್ರವಾದಿ ಮುಹಮ್ಮದ್ (ಸ) ರವರು ಓರ್ವ ಸಮಗ್ರ ನಾಯಕ. ಪ್ರವಾದಿ ಮುಹಮ್ಮದ್ (ಸ) ರವರ ನಾಯಕತ್ವದ ಗುಣಗಳನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು. ವೈಯಕ್ತಿಕ/ವ್ಯಕ್ತಿ ಆಧಾರಿತ, ಜನ ಸಮೂಹ ಆಧಾರಿತ ಮತ್ತು ಕಾರ್ಯಭಾರ ಆಧಾರಿತ ಎಂದು ವಿಂಗಡಿಸಬಹುದು. ಈ ಎಲ್ಲಾ ವಿಭಾಗಗಳನ್ನು ಕೆಳಗೆ ಚರ್ಚಿಸಲಾಗಿದೆ: 1. ವೈಯಕ್ತಿಕ/ವ್ಯಕ್ತಿ ಆಧಾರಿತ ಗುಣಗಳು ಪ್ರವಾದಿ (ಸ) ಮೃದುವಾಗಿ ಮಾತನಾಡಿದರು, ವಿನಮ್ರವಾಗಿ ನಡೆದಾಡಿದರು, ಪ್ರಜ್ಞಾವಂತಿಕೆಯಿಂದ ಆಹಾರ ಸೇವಿಸಿದರು, ಸಭ್ಯವಾಗಿ ವಸ್ತ್ರ ಧರಿಸಿದರು, ನಯವಾಗಿ …

Read More »

ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ?

ಮುಸ್ಲಿಮರು ಭಾವಿಸುವಂತೆ ನಾವು ಬಹುದೇವ ವಿಶ್ವಾಸಿಗಳೋ ಅಥವಾ ಬಹುದೇವಾರಾಧಕರೋ ಅಲ್ಲ, ದೇವನು ಒಬ್ಬನೆಂದು ವಿಶ್ವಾಸವಿರಿಸಿ ಆತನನ್ನು ಆರಾಧಿಸುತ್ತಿದ್ದೇವೆ. ವಿಗ್ರಹಗಳನ್ನು ದೇವರನ್ನು ನೆನಪಿಸಲು ಹಾಗೂ ದೇವರಲ್ಲಿ ಶ್ರದ್ಧೆ ಮೂಡಲು ಪ್ರತಿಷ್ಠಾಪಿಸುತ್ತೇವೆ. ಹಾಗಿದ್ದರೂ ನೀವು ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ.? ಇಸ್ಲಾಮ್ ಏಕದೇವತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಅವನನ್ನು ಮಾತ್ರ ಆರಾಧಿಸಲು, ಪ್ರಾರ್ಥಿಸಲು ತಾಕೀತು ಮಾಡುತ್ತದೆ. ದೇವನ ಗುಣ ವಿಶೇಷಗಳು ಹಾಗೂ ಅಧಿಕಾರದಲ್ಲಿ ಸಾರ್ವಭೌಮತೆಯಲ್ಲಿ ಭಾಗಿಗಳನ್ನು ಮಾಡುವುದು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ. ಆದ್ದರಿಂದಲೇ ವಿವಿಧ ಕಾರಣಗಳಿಂದ ವಿಗ್ರಹಾರಾಧನೆಯನ್ನು …

Read More »