ಕುರ್ಆನಿನ ಸಾಮಾಜಿಕ ಚಿಂತನೆಗಳು @ ಅಶೀರುದ್ದೀನ್ ಆಲಿಯಾ, ಮಂಜನಾಡಿ “ಹೇಳಿರಿ. ಅವನು ಅಲ್ಲಾಹನು, ಏಕೈಕನು, ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ ಅವನು, ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರು ಇಲ್ಲ.” (ಪವಿತ್ರ ಕುರ್ಆನ್: 1-4) ಜಗತ್ತು ತನ್ನಿಂತಾನೇ ಹುಟ್ಟಿಕೊಂಡಿದೆ, ಮಾತ್ರವಲ್ಲದೆ ಸಕಲ ಜೀವಜಾಲಗಳೂ ಪ್ರಾಕೃತಿಕ ಸೃಷ್ಟಿ, ಅವುಗಳನ್ನು ಸೃಷ್ಟಿಸಿದವನಾರೂ ಇಲ್ಲ, ಪಾರತ್ರಿಕ ಜೀವನವಿಲ್ಲ ಎಂಬ ನಕಾರಾತ್ಮಕ ಚಿಂತನೆಗಳು ಇವೆಯಾದರೂ ಪ್ರತಿಯೊಬ್ಬ …
Read More »ದುಲ್ಖೈರ್ನೈನ್ ಮತ್ತು ಮುಸ್ಲಿಮ್ ಸಮುದಾಯ
-ಸೈಯದ್ ಸಆದತುಲ್ಲಾ ಹುಸೈನಿ ಜುಮಾ ಖುತ್ಬಾ: ಕೋವಿಡ್-19 ಎಂಬ ಪಿಡುಗು ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತನ್ನು ನಲುಗಿಸಿ ಬಿಟ್ಟಿದೆ. ಪ್ರಪಂಚದ ಆರ್ಥಿಕ ಸ್ಥಿತಿಯನ್ನೇ ಬುಡ ಮೇಲುಗೊಳಿಸಿದೆ. ಅದರಲ್ಲೂ ನಮ್ಮ ದೇಶದ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇತ್ತೀಚೆಗಿನ ವರದಿಯಂತೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಅದರೊಂದಿಗೆ ಹಸಿವು, ದಾರಿದ್ರ್ಯ ಹಾಗೂ ಕೌಟುಂಬಿಕ ಸ್ಥಿತಿಯೂ ಹದಗೆಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಈ ದೇಶದ ಮುಸಲ್ಮಾನರ ಮೇಲೆ ಗುರುತರವಾದ ಹೊಣೆಗಾರಿಕೆಯಿದೆ. ಈ …
Read More »ನಿದ್ದೆ ಮತ್ತು ಎಚ್ಚರ
@ ಮುಹಮ್ಮದ್ ಯೂಸುಫ್ ಇಸ್ಲಾಹಿ ಆಕಾಶದಲ್ಲಿ ಕತ್ತಲು ಆವರಿಸತೊಡಗುವಾಗ ಮಕ್ಕಳನ್ನು ಮನೆಯೊಳಗೆ ಸೇರಿಸಬೇಕು. ಆ ಸಮಯದಲ್ಲಿ ಹೊರಗೆ ಆಡಲು ಬಿಡಬಾರದು. ರಾತ್ರಿಯ ಮೊದಲ ಭಾಗ ಸ್ವಲ್ಪ ಕಳೆದರೆ ಅತ್ಯಗತ್ಯಕ್ಕೆ ಅವರನ್ನು ಹೊರಗೆ ಬಿಡಬಹುದು. ಬಹಳ ಅತ್ಯಗತ್ಯವಿದೆಯೆಂದಾದರೆ ಮಾತ್ರ. ಪ್ರವಾದಿ(ಸ)ರು ಹೇಳಿರುವರು: ರಾತ್ರಿಯಾದಾಗ ಸಣ್ಣ ಮಕ್ಕಳನ್ನು ಹೊರಗೆ ಬಿಡಬಾರದು. ಅದು ಪಿಶಾಚಿಯು ಭೂಮಿಯಲ್ಲಿ ವಿಹರಿಸುವ ಸಮಯವಾಗಿದೆ. ಆದರೂ ರಾತ್ರಿಯ ಮೊದಲ ಭಾಗ ಕಳೆದರೆ (ಅನಿವಾರ್ಯವಿದ್ದರೆ) ಅವರನ್ನು ಹೊರಗೆ ಕಳಿಸಬಹುದು. [ಸಿಹಾಹುಸ್ಸಿತ್ತ] ರಾತ್ರಿಯಾದಾಗ …
Read More »ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?
ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ? ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ …
Read More »ಪ್ರವಾದಿ ನಿಂದನೆ: ನಮ್ಮ ನಿಲುವು- ಕುರ್ಆನಿನ ಬೆಳಕಿನಲ್ಲಿ
ಎಸ್. ಅಮೀನುಲ್ ಹಸನ್ರ ಜುಮಾ ಖುತ್ಬಾದ ಅನುವಾದ ಪ್ರವಾದಿಯವರನ್ನು(ಸ) ಹಾಗೂ ಕುರ್ ಆನನ್ನು ಅವಹೇಳನ ಮಾಡಿದಾಗ ಮುಸ್ಲಿಮ್ ಸಮುದಾಯ ಆಕ್ರೋಶಗೊಂಡು ಬೀದಿಗಿಳಿಯುತ್ತದೆ. ಆ ಮೂಲಕ ಮುಸ್ಲಿಮರನ್ನು ಸದೆಬಡಿಯಲು ಸಂಚು ರೂಪಿಸಿದವರ ಉದ್ದೇಶವು ಈಡೇರುತ್ತದೆ. ಇತ್ತೀಚೆಗೆ ಪ್ಯಾರಿಸ್ನಲ್ಲಿ ಒಬ್ಬ ಮುಸ್ಲಿಮ್ ಮತಾಂಧನಿಂದ ಕಾಲೇಜಿನ ಓರ್ವ ಇತಿಹಾಸ ಅಧ್ಯಾಪಕರ ಕೊಲೆ ನಡೆಯಿತು. ಅವರು ತರಗತಿಯಲ್ಲಿ ಪ್ರವಾದಿ(ಸ) ಬಗ್ಗೆ ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿದಂತೆ. ಇದನ್ನು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೂಲಕ ಅವರು …
Read More »ನಮ್ಮನ್ನು ಈ ಸಮಾಜದಲ್ಲಿ ಹೀಗೆ ಬದುಕಲು ಬಿಡಿ.
ನಾನು ಕುಟುಂಬ ಸಮೇತ ಅಪರೂಪಕ್ಕೆ ಬಸ್ಸಲ್ಲಿ ಪ್ರಯಾಣಿಸುವ ಸಂದರ್ಭ ಒದಗಿ ಬಂದಿತ್ತು. ನನ್ನ ಕೈಯಲ್ಲಿ ನನ್ನ ಹೆಣ್ಣು ಮಗು ಮತ್ತು ನನ್ನ ಬಾಳಸಂಗಾತಿಯ ಕೈಯಲ್ಲಿ ನನ್ನ ಚಿಕ್ಕ ಗಂಡು ಮಗುವಿತ್ತು. ಎಡಪದವು ನಿಂದ ಮೂಡಬಿದ್ರಿ ಕಡೆಗೆ ಪ್ರಯಾಣಿಸಲು ಎಡಪದವಿನ ಬಸ್ ನಿಲ್ದಾಣದಲ್ಲಿ ರೇಷ್ಮ ಬಸ್ ಗೆ ಹತ್ತಿದಾಗ ಬಸ್ ಚಲಾಯಿಸುತ್ತಿದ್ದ ಡ್ರೈವರ್ ರವರು ಬೊಬ್ಬೆಹಾಕಿ ಎರಡುಸಲ ಕೂಗಿ, ಮಗುವಿದೆ, ಸೀಟು ಬಿಟ್ಟುಕೊಡಿ ಎಂದು ಹೇಳಿದರು. ಅದನ್ನು ಕೇಳಿದ ಓರ್ವ ಹಿಂದೂ …
Read More »ಆ ಮೂರು ಸಂದರ್ಭಗಳನ್ನು ಎದುರಿಟ್ಟುಕೊಂಡು…
@ ಏ.ಕೆ. ಕುಕ್ಕಿಲ ಆ ಮಾತುಕತೆ ಹೀಗೆ ಸಾಗಿತ್ತು- ಅಬೂಜಹಲ್: ಅಲ್ಲಾಹನಾಣೆ, ಆತ ಸತ್ಯಸಂಧನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ವಲೀದ್ ಬಿನ್ ಮುಗೀರಾ: ಹೌದೇ, ಯಾವ ಆಧಾರದಲ್ಲಿ ನೀನು ಹೀಗೆ ಹೇಳುತ್ತೀ? ಅಬೂಜಹಲ್: ಓ ಅಬೂ ಅಬ್ದುಶ್ಶಮ್ಸ್, ಚಿಕ್ಕಂದಿನಲ್ಲಿ ನಾವು ಆತನನ್ನು ಅಸ್ಸಾದಿಖುಲ್ ಅಮೀನ್ (ವಿಶ್ವಾಸಾರ್ಹ ಸತ್ಯವಂತ) ಎಂದೇ ಕರೆಯುತ್ತಿದ್ದೆವು. ಆದರೂ ಆತ ಬೌದ್ಧಿಕವಾಗಿ ಬೆಳವಣಿಗೆ ಹೊಂದಿದ ಬಳಿಕ ನಾವು ಆತನನ್ನು ಸುಳ್ಳ ಮತ್ತು ವಂಚಕನೆಂದು ಕರೆಯುತ್ತಿದ್ದೇವೆ. ಆದರೆ ಆತ …
Read More »ಅಮೇರಿಕನ್ ಸಂಸತ್ತು ಪ್ರವೇಶಿಸಿದ ಹಿಜಾಬ್ ಧಾರಿಣಿ ಇಲ್ಹಾನ್ ಉಮರ್
@ ಶೈಖ್ ಮುಹಮ್ಮದ್ ಕಾರಕುನ್ನು ಅಮೇರಿಕನ್ ಕಾಂಗ್ರೆಸ್ನ ಡೆಮಾಕ್ರಟಿಕ್ ನಾಲ್ವರು ಮಹಿಳಾ ಅಭ್ಯರ್ಥಿಗಳ ವಿರುದ್ಧ, ಅವರ ಧರ್ಮದ ವಿರುದ್ಧ ಡೊನಾಲ್ಡ್ ಟ್ರಂಪ್ ಮಾತಾಡಿದ್ದು ಅಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮಿನಸೋಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಇಲ್ಹಾನ್ ಉಮರ್, ಮಿಶಿಗನ್ನ ಅಭ್ಯರ್ಥಿ ರಾಶಿದಾ ತಾಲಿಬ್, ನ್ಯೂಯಾರ್ಕ್ ಅಭ್ಯರ್ಥಿ ಅಲೆಗ್ಸಾಂಡ್ರಿಯಾ ಮತ್ತು ಮೆಸ್ಸಾಚುಸೆಟ್ಸ್ ಅಭ್ಯರ್ಥಿ ಅಯಾನಾ ಪ್ರೆಸ್ಲಿಯವರು ಟ್ರಂಪ್ ನಡೆಸುತ್ತಿದ್ದ ಈ ಕೋಮು ಆಧಾರಿತ ದಾಳಿಗೆ ತುತ್ತಾಗಿದ್ದ ನಾಲ್ವರು ಮಹಿಳೆಯರು. ಸಾಮಾಜಿಕ ಜಾಲತಾಣದಲ್ಲಿ ದ …
Read More »ಇಸ್ಲಾಮ್ ಮತ್ತು ಶಾಂತಿ: ಇರಿಯುವ ಪ್ರಶ್ನೆಗಳ ಜೊತೆ…
ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ 1. ಇಸ್ಲಾಮ್ ಎಂಬುದು ಪರಮಾಧಿಕಾರವನ್ನು ಪ್ರತಿಪಾದಿಸುವ ಧರ್ಮ. ರಾಜಕೀಯ, ಆರ್ಥಿಕ, ಸಾಮಾಜಿಕ, ಸೈನಿಕ ಸಹಿತ ಪ್ರತಿಯೊಂದನ್ನೂ ಧರ್ಮದ ಚೌಕಟ್ಟಿನೊಳಗೆ ತಂದು ವಿಶ್ಲೇಷಿಸುವ ಅಂಧ ಮನಸ್ಥಿತಿಯನ್ನು ಅದು ಪ್ರತಿಪಾದಿಸುತ್ತದೆ. 2. ಇಸ್ಲಾಮ್ ಇತರೆಲ್ಲ ಧರ್ಮಗಳನ್ನು ಮತ್ತು ಸಿದ್ಧಾಂತಗಳನ್ನು ಅಧಮ(ಕೀಳು)ವಾಗಿ ಕಾಣುತ್ತದೆ. ಅದು ಒಮ್ಮೆ ಒಂದು ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಿದರೆ ಬಳಿಕ ತನ್ನ ಸಿದ್ಧಾಂತವನ್ನು ಒಪ್ಪದ ಯಾರನ್ನೂ ಅದು ಸಹಿಸುವುದಿಲ್ಲ. 3. ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ …
Read More »ಇಸ್ಲಾಮ್ ಪ್ರೇರಿತ ಪರಿಸರ ಕಾಳಜಿ
ನಾಗೇಶ್ ಹೆಗಡೆ ಖ್ಯಾತ ಪರಿಸರ ಮತ್ತು ವಿಜ್ಞಾನ ಲೇಖಕರು ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿರುವ ಬದ್ರಿಯಾ ಮಸೀದಿಯ ಬಗ್ಗೆ ಕೇಳಿದ್ದೀರಾ? ಇದು ಜಗತ್ತಿನ ಮೊತ್ತಮೊದಲ ‘ಹಸಿರು ಮಸೀದಿ’ ಎಂದೇ ಪ್ರಖ್ಯಾತವಾಗಿದೆ. ಹಸಿರು ಎಂದರೆ ಬಣ್ಣದ ಹಸಿರಲ್ಲ. ಈ ಮಸೀದಿ ಅಚ್ಚ ಬಿಳಿ ಬಣ್ಣದಲ್ಲಿದೆ. ಆದರೆ ಮಸೀದಿಯೊಳಗೆ ಮರಗಳಿವೆ. ಪರಿಸರ ರಕ್ಷಣೆಯ ಅನೇಕ ತತ್ವಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಮಸೀದಿ ತನಗೆ ಬೇಕಾದ ವಿದ್ಯುತ್ ಶಕ್ತಿಯನ್ನು ಗಾಳಿಯಂತ್ರ ಮತ್ತು ಸೋಲಾರ್ ಫಲಕಗಳ …
Read More »
IslamKannada News Portal