Home / ಲೇಖನಗಳು (page 37)

ಲೇಖನಗಳು

ದೊಡ್ಡ ಹಕ್ಕಿಯ ಯೋಚನೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ತೀವ್ರ ಬಿರುಗಾಳಿ ಬೀಸಿದಾಗ ದುರ್ಬಲ ರೆಕ್ಕೆಯ ಸಣ್ಣ ಹಕ್ಕಿಗಳು ಆ ಬಿರುಗಾಳಿಗೆ ಸಿಲುಕುತ್ತವೆ. ಆದರೆ ದೊಡ್ಡ ಹಕ್ಕಿಗಳು ತಮ್ಮ ಬಲವಾದ ರೆಕ್ಕೆಗಳಿಂದ ಮೇಲೆ ಮೇಲೆ ಹಾರಿ ಅಪಾಯದಿಂದ ಪಾರಾಗುತ್ತವೆ. ಈ ಘಟನೆಯ ಬೆಳಕಿನಲ್ಲಿ ಆಂಗ್ಲ ಭಾಷೆಯಲ್ಲಿ ಒಂದು ಉಪಮೆ ಹುಟ್ಟಿಕೊಂಡಿದೆ. The big bird of the Storm(ಬಿರುಗಾಳಿಯ ದೊಡ್ಡ ಹಕ್ಕಿ). ಕಠಿಣ ಪರಿಸ್ಥಿತಿಯ ಸುಳಿಯನ್ನು ಗೆದ್ದು ಹೊರಬರುವಲ್ಲಿ ಯಶಸ್ವಿಯಾದವರಿಗೆ ಈ ಉಪಮೆಯನ್ನು …

Read More »

ಯಾರೂ ಕೆಡವದ ಮಸೀದಿ?

ಪ್ರಮೋದ್ ಪಿ. (ಲೇಖಕರು, ಸುಪ್ರೀಂ ಕೋರ್ಟಿನ ವಕೀಲರು) ಬಾಬರಿ ಮಸೀದಿ ಕೆಡವಿದ್ದರಲ್ಲಿ ಕ್ರಿಮಿನಲ್ ಸಂಚು ಇಲ್ಲ, ಅದಕ್ಕೆ ಸಾಕ್ಷಿಗಳು ಕೂಡ ಇಲ್ಲ ಎಂದು  ಕೋರ್ಟು ಆ ಪ್ರಕರಣದ ಎಲ್ಲ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದೆ. ಅದೊಂದು ಅಪರಾಧಿ ಕೃತ್ಯವಾಗಿ ಕಾನೂನು ವ್ಯವಸ್ಥೆ ಮತ್ತು ಸರಕಾರ ಪರಿಗಣಿಸಿಲ್ಲ. ಇಷ್ಟು ಸಹಜವಾದುದು ಆಗಿ  ಭಾರತದ ಪೌರ-ರಾಜಕೀಯ ಸಮೂಹದಲ್ಲಿ ರಾಜಕೀಯ ಮತ್ತು ಸಿದ್ಧಾಂತ ಬದಲಾಗಿ ಬಿಟ್ಟಿದೆ. 1992 ಡಿಸೆಂಬರ್ 6ಕ್ಕೆ ಬಾಬರಿ ಮಸೀದಿ ಕೆಡವಲ್ಪಟ್ಟಾಗ ಅದರೆಡೆಗೆ …

Read More »

ಹಲೋ ದೇವನೆಲ್ಲಿದ್ದಾನೆ?

@ ಟಿ.ಎಂ.ವಿ. ಪ್ರತಿಯೊಂದು ಪ್ರಕೃತಿ ದುರಂತಗಳು ಸಂಭವಿಸುವಾಗಲೂ `ಹಲೋ, ದೇವನೆಲ್ಲಿದ್ದಾನೆ?’ ಎಂದು ನಾಸ್ತಿಕವಾದಿಗಳು ಕೇಳುವುದಿದೆ. ಇಲ್ಲದಿದ್ದರೆ ನೀವು ಹೇಳುವಂತಹ ಈ ದೇವ ಎಷ್ಟೊಂದು ಕ್ರೂರಿ ಎಂಬ ರೀತಿಯ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಕೋವಿಡ್- 19 ಆಗಮನದಿಂದ ಆರಾಧನಾಲಯಗಳು ಮುಚ್ಚಲ್ಪಟ್ಟಾಗ ದೇವನು ಪರಾಜಯಗೊಂಡ ಎಂದು ಒಪ್ಪಿಕೊಂಡು ವಿಜ್ಞಾನದ ವಿಜಯ ಪತಾಕೆ ಹಾರಿಸಲ್ಪಟ್ಟಿತು ಎಂದೂ ನಾಸ್ತಿಕವಾದಿಗಳು ಹೇಳುತ್ತಾರೆ. ಪ್ರಕೃತಿಯನ್ನು ವಿಶ್ವಾಸಿಗಳು ದೇವನೆಂದು ಬದಲಾಯಿಸಿ ಕರೆಯುತ್ತಾರೆ ಎಂಬ ವಿಚಾರಗಳಿಂದ ಈ ರೀತಿಯ ವಾದವು ಉಂಟಾಗುತ್ತದೆ. ಪ್ರಕೃತಿಯಲ್ಲಿ …

Read More »

ಸಿರಿವಂತಿಕೆ

-ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಜಗದ್ವಿಖ್ಯಾತ ಉದ್ಯಮಿಯಾದ ಅರಿಸ್ಟಾಟಲ್ ಓನಾಸೀಸ್‍ನ ಏಕೈಕ ಪುತ್ರಿ ಕ್ರಿಸ್ಟೀನಾ. ತಂದೆ ಮತ್ತು ಸೋದರ ಅಲೆಕ್ಸಾಂಡರ್ ತೀರಿಕೊಂಡ ಬಳಿಕ ಆಕೆ ಶತಕೋಟಿ ಡಾಲರ್‍ ಗೆ ಏಕೈಕ ವಾರಸುದಾರಳಾದಳು. ಆಕೆ ನಾಲ್ಕು ಸಲ ವಿವಾಹವಾದಳು. ಎಲ್ಲವೂ ವಿಚ್ಛೇದನದಲ್ಲಿ ಕೊನೆಗೊಂಡವು. ತಿಯರಿ ರೂಸಲ್‍ನ ದಾಂಪತ್ಯದಲ್ಲಿ ಏಕೈಕ ಪುತ್ರ ಅಧೀನ ಜನಿಸಿದನು. ಅಂದು ಆಕೆ ತನ್ನ ಗರ್ಭ ರಕ್ಷಣೆಗೆ 17ಲಕ್ಷ ವ್ಯಯಿಸಿದ್ದಳು. ಆದರೂ ಮಗು ಹುಟ್ಟಿದಾಗಲೇ ಕಾಮಾಲೆ ರೋಗ ಪೀಡಿತವಾಗಿತ್ತು. ಅಗಾಧ …

Read More »

ಕುಫ್ರ್, ಕಾಫಿರ್ ಮತ್ತು ಜಿಹಾದ್

ಇವು ಅತ್ಯಧಿಕ ಅಪಾರ್ಥಕ್ಕೆ ಗುರಿಯಾದ ಪದಗಳಾಗಿವೆ. ಕಾಫಿರ್ ಎಂಬ ಪದವು ಕುಫ್ರ್ ಎಂಬ ಮೂಲ ಪದದಿಂದ ಹುಟ್ಟಿದೆ. ‘ಕುಫ್ರ್’ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ನಿಘಂಟಿನ ಪ್ರಕಾರ ಆ ಅರಬಿ ಪದದ ಅರ್ಥ ‘ಬಚ್ಚಿಡುವುದು’ ಎಂದಾಗಿದೆ. ರಾತ್ರಿಯನ್ನು ‘ಕಾಫಿರ್’ ಎನ್ನುತ್ತಾರೆ. ಏಕೆಂದರೆ ಅದು ಎಲ್ಲವನ್ನೂ ಮರೆಸುತ್ತದೆ. ದಟ್ಟ ಮೋಡವನ್ನೂ ‘ಕಾಫಿರ್’ ಎನ್ನಲಾಗುತ್ತದೆ. ರೈತನು ಬೀಜವನ್ನು ನೆಲದಲ್ಲಿ ಬಚ್ಚಿಡುವುದರಿಂದ ಅವನನ್ನು ‘ಕಾಫಿರ್’ ಎನ್ನಲಾಗುತ್ತದೆ. ‘ಕುಫ್ರ್’ನ ಇನ್ನೊಂದು ಅರ್ಥ ಕೃತಘ್ನತೆಯಾಗಿದೆ. ಏಕೆಂದರೆ ಕೃತಘ್ನನಾದವನು …

Read More »

ಇಸ್ಲಾಮ್ ಮತ್ತು ಪರೋಕ್ಷ ಜ್ಞಾನ

ಲೋಕದಲ್ಲಿ ಯಾರಿಗೂ ತಮ್ಮ ಭಾವೀ ಜೀವನದ ಕುರಿತು ಜ್ಞಾನವಿಲ್ಲವೆಂದು ಪೀಠಿಕೆಯಲ್ಲಿ ತಿಳಿಸಿದ್ದೀರಿ. ಆದರೆ ಜನನ ವೇಳೆಯ ನಕ್ಷತ್ರಗಳ ಆಧಾರದಲ್ಲಿ ಜಾತಕ ಫಲಗಳು ಹೇಳಲಾಗುತ್ತದೆ. ಪ್ರಮುಖ ಜ್ಯೋತಿಷಿಗಳ ಜಾತಕಗಳು ಹಲವೊಮ್ಮೆ ಸತ್ಯವಾಗುತ್ತದೆ. ಇದರ ಕುರಿತು ನೀವೇನು ಹೇಳುವಿರಿ? ನಮ್ಮ ಜನ್ಮ ದಿನಾಂಕ, ವೇಳೆ, ರಾಶಿ ಹಾಗೂ ನಕ್ಷತ್ರಗಳ ಆಧಾರದಲ್ಲಿ ಭವಿಷ್ಯದ ವಿವರಗಳನ್ನು ತಿಳಿಯಬಹುದೆಂಬ ಭಾವನೆ ನಮ್ಮ ಸಮಾಜದಲ್ಲಿದೆ. ನಮ್ಮಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಗಳಲ್ಲಿ ಮಾರಾಟವಾಗುವ ಹಲವು ಪತ್ರಿಕೆಗಳು ಈ ವಾರ ನಮಗೇನು …

Read More »

ಇಸ್ಲಾಮಿನ ಶಿಕ್ಷಾ ಪದ್ಧತಿ

ಈಗ ಇಸ್ಲಾಮಿನ ಬಗ್ಗೆ ಪ್ರಚಾರಗೊಂಡಿರುವ ಸಂಶಯಗಳ ಪೈಕಿ ಒಂದು ಅದರ ಶಿಕ್ಷಾ ಪದ್ಧತಿಯ ಕುರಿತಾಗಿದೆ. ಇಂದಿನ ಪ್ರಗತಿಪರ ಯುಗದಲ್ಲಿ ಇಸ್ಲಾಮಿನ ‘ಪಾಶವೀ ಶಿಕ್ಷಾ ಪದ್ಧತಿ’ಯನ್ನು ಜಾರಿಗೊಳಿಸುವುದು ಸಮಂಜಸವೇ? ಅದು ಕಾಲದ ಬೇಡಿಕೆಗಳಿಗೆ ಪೂರಕವಾಗಿದೆಯೇ? ಕೆಲವು ರೂಪಾಯಿಗಳ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆ, ಕಾಮೋನ್ಮಾದದ ಒಂದು ವಿಷ ಘಳಿಗೆಯಲ್ಲಿ ನಡೆದ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ, ಕೋಪೋದ್ರೇಕದಿಂದ ಮತಿಗೆಟ್ಟು ಮಾಡಿದ ಒಂದು ಕೊಲೆಗೆ ಮರಣ ದಂಡನೆ ಇತ್ಯಾದಿಗಳು ವೈಚಾರಿಕ ಮತ್ತು …

Read More »

ದೇವನನ್ನು ಸೃಷ್ಟಿಸಿದವರು ಯಾರು?

-ಪ್ರಪಂಚದ ಸೃಷ್ಟಿಕರ್ತನು ಓರ್ವನೆಂದೂ, ಅವನೇ ಅದನ್ನು ಸೃಷ್ಟಿಸಿದನೆಂದೂ ಧರ್ಮ ವಿಶ್ವಾಸಿಗಳಾದ ನೀವು ಹೇಳುತ್ತೀರಿ. ಹಾಗಾದರೆ ನಿಮ್ಮ ದೇವನನ್ನು ಸೃಷ್ಟಿಸಿದವರು ಯಾರು? ದೇವ ಹಾಗೂ ಧರ್ಮವು ವಿಶ್ವಾಸ ಕಾರ್ಯವೆಂದೂ, ಅದರ ಹೊರತು ಬುದ್ದಿಗೆ ಇದರಲ್ಲಿ ಪ್ರಾಮುಖ್ಯತೆ ಇಲ್ಲವೆಂಬ ವಾಡಿಕೆಯ ಉತ್ತರಕ್ಕಿಂತ ಬೇರೇನಾದರೂ ಹೇಳಲಿಕ್ಕಿದೆಯೇ? ವಿಶ್ವದ ಕುರಿತು ಎರಡು ರೀತಿಯ ದೃಷ್ಟಿಕೋನವಿರುವವರು ಇದ್ದಾರೆ. ಒಂದನೇಯದಾಗಿ ಧರ್ಮದಲ್ಲಿ ನಂಬಿಕೆ ಇರಿಸುವವರು. ಅವರು ನಂಬಿಕೆಯಂತೆ ಪ್ರಪಂಚವನ್ನು ಸೃಷ್ಟಿಸಲಾಗಿದೆ. ದೇವನು ಅದರ ಸೃಷ್ಟಿಕರ್ತ. ಎರಡನೇಯ ವರ್ಗವನ್ನು ನಾಸ್ತಿಕರು …

Read More »

ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ

ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ವ್ಯಾಪಕಗೊಳಿಸಲಾಗುತ್ತಿರುವ ಇನ್ನೊಂದು ಸಂಶಯ ಇಸ್ಲಾಮ್ ಪರಧರ್ಮ ಸಹಿಷ್ಣುತೆಯ ಧರ್ಮವಲ್ಲವೆಂಬುದೂ ಮುಸ್ಲಿಮರು ಅತ್ಯಧಿಕ ಅಸಹಿಷ್ಣುಗಳೆಂಬುದೂ ಆಗಿದೆ. ವಾಸ್ತವದಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಯು ಭಾರತದಲ್ಲಿ ತನ್ನ ಆಡಳಿತವನ್ನು ಭದ್ರಪಡಿಸಲು ಸೃಷ್ಟಿಸಿ ಪ್ರಚಾರ ಪಡಿಸಿದ ಮಿಥ್ಯ ಹಾಗೂ ಒಡೆದು ಆಳುವ ಕುಟಿಲ ತಂತ್ರವಾಗಿದೆ. ಬ್ರಿಟಿಷ್ ಆಧಿಪತ್ಯವು ಭಾರತದಲ್ಲಿ ಸ್ಥಾಪಿತವಾಗುವುದಕ್ಕೆ ಮುಂಚೆ ಸುಮಾರು ಒಂದು ಸಹಸ್ರ ವರ್ಷಗಳ ಕಾಲ ಇಲ್ಲಿನ ಬಹುದೊಡ್ಡ ಭಾಗದಲ್ಲಿ ಮುಸ್ಲಿಮ್ ಅರಸರ ಆಳ್ವಿಕೆ ಇತ್ತೆಂಬುದು …

Read More »

ಸಮಯದ ಬೆಲೆ

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ 1163ರಲ್ಲಿ ಸ್ಥಾಪನೆಗೊಂಡಿತು. ಅದರ ಹಚ್ಚ ಹಸುರಾದ ಹುಲ್ಲುಗಾವಲು ಜಗತ್ಪ್ರಸಿದ್ಧವಾಗಿದೆ. ಅಮೇರಿಕಾದ ಓರ್ವ ಕೋಟ್ಯಾಧೀಶ ಆ ಹುಲ್ಲುಗಾವಲನ್ನು ನೋಡಿ ಬಹಳ ಮೆಚ್ಚಿಕೊಂಡ. ತನ್ನ ಬಂಗಲೆಯಲ್ಲಿಯೂ ಇಂತಹದೇ ಒಂದು ಹುಲ್ಲುಗಾವಲಿರಬೇಕೆಂದು ಆತ ಬಯಸಿದ. “ಇಂತಹ ಹುಲ್ಲುಗಾವಲು ಎಷ್ಟು ಡಾಲರ್‍ ಗಳಲ್ಲಿ ಸಿದ್ಧವಾದೀತು?”ಆತ ಆಕ್ಸ್ ಫರ್ಡ್‍ನ ತೋಟಗಾರನಲ್ಲಿ ವಿಚಾರಿಸಿದ. ತೋಟಗಾರ ಗಂಭೀರವಾಗಿಯೇ ಹೇಳಿದ, “ಉಚಿತವಾಗಿ.” “ಅದು ಹೇಗೆ?” “ನೀವು ನಿಮ್ಮ ಜವಿೂನನ್ನು ಸಮತಟ್ಟುಗೊಳಿಸಿ ಅದರಲ್ಲಿ ಹುಲ್ಲು ನೆಡಿರಿ. ಹುಲ್ಲು ಬೆಳೆದು …

Read More »