Home / editor (page 35)

editor

ಅಂತಾರಾಷ್ಟ್ರೀಯ ಮಟ್ಟದ ಕು‌ರ್ ಆನ್ ಪಾರಾಯಣ ಸ್ಪರ್ಧೆ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಆರಂಭ

ಜಿದ್ದಾ: ಇಲ್ಲಿನ ಸಾಂಸ್ಕೃತಿಕ ಅಥಾರಿಟಿಯು ಸಂಘಟಿಸುತ್ತಿರುವ ಎರಡನೇಯ ಅಂತಾರಾಷ್ಟ್ರೀಯ ಕುರ್‌ಆನ್ ಪಾರಾಯಣ ಮತ್ತು ಅದಾನ್ ಸ್ಪರ್ಧೆಗೆ ದಾಖಲಾತಿ ಪ್ರಾರಂಭವಾಗಿದೆ. ಅಥಾರಿಟಿ ಚೇರ್‌ಮೇನ್ ತುರ್ಕಿ ಬಿನ್ ಅಬ್ದುಲ್ ಮುಲ್ಸನ್ ಆಲುಶೈಖ್ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ಈ ಸ್ಪರ್ಧೆಗೆ “ಅತ್ತರುಲ್ ಕಲಾಮ್” ಎಂದು ಹೆಸರಿಸಲಾಗಿದೆ. ಕುರ್ ಆನ್ ಪಾರಾಯಣ ಮತ್ತು ಅದಾನ್ ಜೊತೆಯಾಗಿ ಮೊದಲ ಬಾರಿಗೆ ನಡೆಸುವ ವಿಶ್ವದ ಅತೀ ದೊಡ್ಡ ಸ್ಪರ್ದೆಯಾಗಿದ್ದು, ವಿಜೇತರಿಗೆ 1.2 ಕೋಟಿ ರಿಯಾಲ್‌ಗಿಂತಲೂ ಅಧಿಕ ಬಹುಮಾನ ಘೋಷಿಸಲಾಗಿದೆ. …

Read More »

ಇಸ್ಲಾಮ್‌ ಪುರುಷ ಪ್ರಧಾನ ಧರ್ಮವೇ?

ಇಸ್ಲಾಮ್ ಪುರುಷ ಪ್ರಧಾನ ಧರ್ಮವಲ್ಲವೇ? ಕುರ್‌ಆನ್ ನ 4ನೇ ಅಧ್ಯಾಯದ 34ನೇ ಸೂಕ್ತವು ಇದಕ್ಕೆ ಆಧಾರವಲ್ಲವೇ? ಪವಿತ್ರ ಕುರ್‌ಆನ್ ನ ನಾಲ್ಕನೇ ಅಧ್ಯಾಯದ 34ನೇ ವಾಕ್ಯವು ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ ದೇವಾದೇಶವಾಗಿದೆ. ಅದು ಹೀಗಿದೆ: ‘ಪುರುಷರು ಸ್ತ್ರೀಯರ ಮೇಲೆ ‘ಮೇಲ್ವಿಚಾರಕ’ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ ಆಗಿದೆ.’ ಇಲ್ಲಿ ಪುರುಷರಿಗೆ ಕುರ್‌ಆನ್ ‘ಕವ್ವಾಮ್’ ಎಂಬ …

Read More »

ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ?

ಮನುಷ್ಯರು ಹಲವು ರೀತಿಯಲ್ಲಿದ್ದಾರೆ. ಮಾನವನ ಗತಿಗನುಗುಣವಾಗಿ ಅವರ ಸ್ಥಾನಮಾನಗಳಲ್ಲೂ, ಹಕ್ಕುಬಾಧ್ಯತೆಯಲ್ಲೂ ವ್ಯತ್ಯಾಸವಿರಿಸುವುದು ಸ್ವಾಭಾವಿಕ ಮಾತ್ರವಲ್ಲ ಅನಿವಾರ್ಯವೂ ಹೌದು. ಅದೇ ರೀತಿ ಸ್ತ್ರೀ-ಪುರುಷರ ನಡುವೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಅಂತರವಿದೆ. ಪುರುಷರು ಎಷ್ಟೇ ಶ್ರಮಿಸಿದರೂ ಗರ್ಭಧರಿಸಲು, ಹೆರಲು, ಎದೆ ಹಾಲುಣಿಸಲು ಸಾಧ್ಯವಿಲ್ಲವಲ್ಲಾ? ಮಹಿಳೆ ಪುರುಷರಿಗಿಂತ ಭಿನ್ನವಾಗಿ ತಿಂಗಳ ನಿಶ್ಚಿತ ದಿನಗಳಲ್ಲಿ ಆರ್ತವ ಹಾಗೂ ಅದರ ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಪುರುಷನು ಸ್ತ್ರೀಗಿಂತ ಬಲಶಾಲಿಯೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದು ಕಷ್ಟಕರ ಕೆಲಸಗಳನ್ನು …

Read More »

ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ

ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ? ಮನುಷ್ಯರು ಹಲವು ರೀತಿಯಲ್ಲಿದ್ದಾರೆ. ಮಾನವನ ಗತಿಗನುಗುಣವಾಗಿ ಅವರ ಸ್ಥಾನಮಾನಗಳಲ್ಲೂ, ಹಕ್ಕುಬಾಧ್ಯತೆಯಲ್ಲೂ ವ್ಯತ್ಯಾಸವಿರಿಸುವುದು ಸ್ವಾಭಾವಿಕ ಮಾತ್ರವಲ್ಲ ಅನಿವಾರ್ಯವೂ ಹೌದು. ಅದೇ ರೀತಿ ಸ್ತ್ರೀ-ಪುರುಷರ ನಡುವೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಅಂತರವಿದೆ. ಪುರುಷರು ಎಷ್ಟೇ ಶ್ರಮಿಸಿದರೂ ಗರ್ಭಧರಿಸಲು, ಹೆರಲು, ಎದೆ ಹಾಲುಣಿಸಲು ಸಾಧ್ಯವಿಲ್ಲವಲ್ಲಾ? ಮಹಿಳೆ ಪುರುಷರಿಗಿಂತ ಭಿನ್ನವಾಗಿ ತಿಂಗಳ ನಿಶ್ಚಿತ ದಿನಗಳಲ್ಲಿ ಆರ್ತವ ಹಾಗೂ ಅದರ ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾಳೆ. …

Read More »

ಒಬ್ಬನೇ ದೇವ- ಕುರ್‌ಆನ್ ಮತ್ತು ಗುರು ವಚನದಲ್ಲಿ

“ಹೇಳಿರಿ, ಅವನು ಅಲ್ಲಾಹನು ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್‌ಆನ್: 112) ಕುರ್‌ಆನ್‌ನಲ್ಲಿ ಏಕದೇವ ಸಿದ್ಧಾಂತದ ಸಮಗ್ರ ಪರಿಕಲ್ಪನೆಯ ಸಂಕ್ಷಿಪ್ತ ರೂಪವಾಗಿದೆ ಈ ಅಧ್ಯಾಯ. `ಅಲ್ಲಾಹ್’ ಎಂಬುದು ಅರಬಿಕ್ ಪದವೇ ಹೊರತು ಅದು ಮುಸ್ಲಿಮರ ದೇವರಲ್ಲ. ಸೃಷ್ಟಿಕರ್ತ, ಒಡೆಯ, ಅನ್ನದಾತ, ಆರಾಧ್ಯ ದೇವ, ವ್ಯವಸ್ಥಾಪಕ ಇತ್ಯಾದಿ …

Read More »

ಮೈಸೂರಿನ ಶಿವಮ್ಮ, ಇಂಗ್ಲೆಂಡಿನ ಬಟ್ಲರ್ ಮತ್ತು ಸಂದೇಶ

ಎರಡು ಘಟನೆಗಳು ನಡೆದುವು. 1. ಮೈಸೂರಿನ ಮಂಡಿ ಮೊಹಲ್ಲಾದ ಸುನ್ನಿ ಚೌಕ್‌ನಲ್ಲಿ ಶಿವಮ್ಮಾ ಎಂಬವರು ಮೃತಪಟ್ಟರು. 30 ವರ್ಷದಿಂದ ಅದೇ ಪರಿಸರದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಒಂಟಿಯಾಗಿದ್ದರು. ಇಬ್ಬರು ಮಕ್ಕಳಿದ್ದು, ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಅವರಿಗೆ ಮಾಹಿತಿ ತಿಳಿಸಿದರೂ ಮೃತದೇಹವನ್ನು ಕೊಂಡೊಯ್ಯಲೋ ಸಂಸ್ಕಾರ ನಡೆಸಲೋ ಮುಂದಾಗಲಿಲ್ಲ. ಆಗ ಅಲ್ಲಿನ ಇಸ್ಲಾಮಿಯಾ ನೌಜವಾನ್ ಸಮಿತಿ ಸದಸ್ಯರು ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ 2,500 ರೂಪಾಯಿ …

Read More »

ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ

ನನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಗಮನಿಸಿದಂತೆ ಜಗತ್ತಿನ ಹಲವು ಧರ್ಮಗಳು ಮತ್ತು ಸಿದ್ಧಾಂತಗಳು ಕಿರಿಯರಿಗೆ ದೊಡ್ಡವರನ್ನು ಹೇಗೆ ಗೌರವಿಸಬೇಕೆಂದು ಹೇಳಿಕೊಡುತ್ತದೆ. ಆದರೆ ಇಸ್ಲಾಮ್ ಮಕ್ಕಳನ್ನು ಹೇಗೆ ಗೌರವಿಸಬೇಕು, ಅವರನ್ನು ಹೆಂಗೆ ನಡೆಸಿಕೊಳ್ಳಬೇಕು ಎಂದು ಸೂಕ್ಷ್ಮತೆಗಳನ್ನು ತಿಳಿಸುತ್ತದೆ. ಹಾಗಾಗಿ ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳನ್ನು ಗೌರವಿಸುವ ಇಸ್ಲಾಮಿನ ಸೂಕ್ಷ್ಮತೆಗಳನ್ನು ಸಾರ್ವತ್ರಿಕವಾಗಿ ಅರಿಯುವ ಅಗತ್ಯವಿದೆ. ಅದಕ್ಕಾಗಿ ಈ ಲೇಖನ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ತೈತ್ತಿರೀಯೋಪನಿಷತ್‍ನ ಶಿಕ್ಷಾವಲ್ಲಿಯಲ್ಲಿ …

Read More »

ಟಿ 20 ವಿಶ್ವಕಪ್ ಸಂಭ್ರಮಾಚರಣೆಯಿಂದ ಮೋಹಿನ್ ಅಲಿ ಮತ್ತು ಆದಿಲ್ ರಶೀದ್ ರನ್ನು ದೂರ ಸರಿಯುವಂತೆ ಇಂಗ್ಲೆಂಡ್ ನಾಯಕ ಬಟ್ಲರ್ ಸೂಚಿಸಿದ್ದೇಕೆ?

8ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ಭಾನುವಾರ ತೆರೆಬಿದ್ದಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್‌, 2ನೇ ಬಾರಿಗೆ ಟಿ20 ಚಾಂಪಿಯನ್‌ ಗದ್ದುಗೆ ಏರಿದೆ. ಬೌಲಿಂಗ್‌ನಲ್ಲಿ 137 ರನ್‌ಗಳಿಗೆ ಪಾಕಿಸ್ತಾನವನ್ನು ನಿಯಂತ್ರಿಸಿದ್ದ ಜಾಸ್‌ ಬಟ್ಲರ್‌ ಬಳಗ, ಆ ಬಳಿಕ ಇನ್ನೂ 1 ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನೊಂದಿಗೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಕಕಾಲಕ್ಕೆ ಚಾಂಪಿಯನ್‌ ಆದ ಮೊದಲನೇ …

Read More »

ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳಿಗೆ ‘ಸಂಸ್ಕೃತ’ ಪಾಠ

ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ‘ಮುತಅಲ್ಲಿಮ್'(ಧಾರ್ಮಿಕ ವಿದ್ಯಾಭ್ಯಾಸ ಕಲಿಯುವ ಮುಸ್ಲಿಂ ವಿದ್ಯಾರ್ಥಿ)ಗಳು ‘ಸಂಸ್ಕೃತ’ ಅಭ್ಯಾಸ ಮಾಡುತ್ತಿದ್ದು, ಶ್ಲೋಕಗಳು ಮತ್ತು ಮಂತ್ರಗಳನ್ನು ಪಠಿಸುತ್ತಿದ್ದಾರೆ. ಹಿಂದೂ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಂಸ್ಕೃತ ಪಾಠ ನಡೆಯುತ್ತಿದೆ. ತ್ರಿಶೂರ್ ಜಿಲ್ಲೆಯ ಸಕ್ತನ್ ನಗರದಲ್ಲಿರುವ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗುರುಗಳು ಕೇಳುವ ವಿಭಿನ್ನ ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಶಿಕ್ಷಕರ ಜತೆ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡುವ ಪ್ರಯತ್ನ ಕೂಡ ಮಾಡುತ್ತಾರೆ. ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ …

Read More »

2023ಕ್ಕೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಪೂರ್ಣ; ಇಂಡೊ ಕಲ್ಚರ್ ಫೌಂಡೇಷನ್‌ ಟ್ರಸ್ಟ್‌

ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ ಕಾಮಗಾರಿ ಮುಂದಿನ ವರ್ಷದ ಡಿಸೆಂಬರ್‌ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮಸೀದಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಇಂಡೊ ಕಲ್ಚರ್ ಫೌಂಡೇಷನ್‌ ಟ್ರಸ್ಟ್‌ ತಿಳಿಸಿದೆ. 2019ರಲ್ಲಿ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ಅನುಸಾರವಾಗಿ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಪ್ರತ್ಯೇಕವಾಗಿ ಐದು ಎಕರೆ ಜಾಗವನ್ನು ನೀಡಲಾಗಿತ್ತು. ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗುತ್ತಿದ್ದು, ಅದರ ಕಾಮಗಾರಿ 2023ರ ಡಿಸೆಂಬರ್‌ಗೆ ಪೂರ್ಣಗೊಳ್ಳುವ …

Read More »