Home / editor (page 43)

editor

‘ಹಲಾಲ್’ ಕೆಲವು ಮಾಹಿತಿಗಳು.

1. ಹಲಾಲ್ ಎಂದರೆ ಶುದ್ಧ, ಉಪಯೋಗಿಸಲು ಯೋಗ್ಯವಾದದ್ದು ಎಂದು ಅರ್ಥ. 2. ಹಲಾಲ್ ಎಂದರೆ ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವ ಒಂದು ಕ್ರಮ ಎಂಬ ನಂಬಿಕೆಯಿದೆ. ಅದು ಪೂರ್ತಿ ನಿಜ ಅಲ್ಲ.  ಹಲಾಲ್ ಮಾಂಸ ಎಂದರೆ ತಿನ್ನಲು ಯೋಗ್ಯವಾದ ಮಾಂಸ ಎಂದು ಅರ್ಥ. ಕೋಳಿ ಅಂಗಡಿಯ ಮಾಲಕರು ಇದನ್ನು ಹಲಾಲ್ ಕಟ್ ಎಂದು ಸೀಮಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ಅಷ್ಟೇ. ಮೀನನ್ನು ಯಾರೂ ಹಲಾಲ್ ಕಟ್ ಮಾಡಿ ತಿನ್ನುವುದಿಲ್ಲ. 3. ಹಲಾಲ್ ಮಾಂಸ ಎಂದರೆ, …

Read More »

ಹಲಾಲ್- ಹರಾಮ್

ಅವರು ಪ್ರತಿದಿನ ಪ್ರಭಾತ ನಮಾಝ್ ಮಾಡಿದ ಕೂಡಲೇ ಮಸೀದಿಯಿಂದ ಗಡಿಬಿಡಿಯಲ್ಲಿ ಓಡಿ ಹೋಗುತ್ತಿದ್ದರು.ಇದನ್ನು ಗಮನಿಸುತ್ತಿದ್ದ ಪ್ರವಾದಿ(ಸ)ಯವರು ಒಂದು ದಿನ ಕೇಳಿದ್ರು. ನೀವು ನಮಾಝ್ ಆದ ಕೂಡಲೇ ಇಷ್ಟು ಅರ್ಜಂಟ್ ನಲ್ಲಿ ಯಾಕೆ ಹೋಗುವುದು. ಅದಕ್ಕವರು ಪ್ರವಾದಿವರ್ಯರೇ ಈಗ ಪ್ರಕೃತಿ ಫಲ ಕೊಡುವ ಸಮಯ. ನನ್ನ ಮನೆ ಪಕ್ಕದ ಮನೆಯವರ ಹಣ್ಣಿನ ಮರದಿಂದ ಹಣ್ಣು ನನ್ನ ಮನೆಯ ಅಂಗಳಕ್ಕೆ ಬಿದ್ದಿರುತ್ತವೆ. ಅದನ್ನು ನನ್ನ ಮಕ್ಕಳು‌ ತಿನ್ನುತ್ತಾರೋ ಎಂಬ ಹೆದರಿಕೆಯಿದೆ. ಅದು ಹಲಾಲ್ …

Read More »

ದಿನೇಶ್ ಕುಕ್ಕುಜಡ್ಕರವರ ದೃಷ್ಟಿಯಲ್ಲಿ ಮುಸ್ಲಿಮರು

ನಾನು ಗಮನಿಸಿದ ಮಟ್ಟಿಗೆ ಮುಸ್ಲಿಂ ಗೆಳೆಯರು ಆತ್ಮಹತ್ಯೆಯಂಥ ತಮ್ಮನ್ನು ತಾವು ಕೊಂದುಕೊಳ್ಳುವ ಅಪಾಯಗಳಿಗೆ ತೊಡಗುವುದು ಬಹಳವೇ ಕಮ್ಮಿ. ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ಆತ್ಮಹತ್ಯೆ ಹರಾಮ್ ಎಂಬ ಪಾಠ ಅವರಿಗೆ ಬಾಲ್ಯದಿಂದಲೂ ಬೋಧೆಯಾಗಿರುವ ಜತೆಜತೆಗೇ, ತುಂಬ ಪ್ರಾಕ್ಟಿಕಲ್ ಆಗಿ ಬದುಕುವ ನಿಜವಾದ ಜೀವನ ಪ್ರೀತಿಯ ಜೀವಿಗಳಿವರು ಎಂಬುದನ್ನೂ ಗಮನಿಸಬೇಕು. ಎಂಥದೇ ಕಷ್ಟ ನಷ್ಟ ತೊಂದರೆ ತಾಪತ್ರಯಗಳೇ ಬರಲಿ, ಇವತ್ತು ಹಡಗಿನ ಮಾಲೀಕನಾಗಿದ್ದವ ನಾಳೆ ಗುಜರಿ ಹೆಕ್ಕಲಿಕ್ಕೂ ತಯ್ಯಾರು. ಹಾಗಾಗಿ …

Read More »

ಅಮ್ಮ ಎಂಬ ಕರುಣೆಯ ಸಾಗರ

@ ಶೈಖ್ ಮುಹಮ್ಮದ್ ಕಾರಕುನ್ನು ಮರೆಯಲಾಗದ ಮಾತೆಯ ಅಸಾಮಾನ್ಯವಾದ ತ್ಯಾಗದ ಕುರಿತು ಸುಪ್ರಸಿದ್ಧವಾದ ಕತೆಯೊಂದಿದೆ. ಒಂದು ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸವಾಗಿದ್ದರು. ದೇಹ ಎರಡಾದರೂ ಒಂದೇ ಜೀವ ಎಂಬಷ್ಟು ಪ್ರೀತಿ ಅನ್ಯೋನ್ಯತೆ  ಅವರಲ್ಲಿತ್ತು. ಅಂತಹ ಒಂದು ಪ್ರೀತಿ ವಾತ್ಸಲ್ಯದ ಬದುಕು ಅವರದ್ದಾಗಿತ್ತು. ಮಗನ ಮನದಲ್ಲಿ ಮಾತೆಯ ಚಿತ್ರ ಮಾತ್ರವಿತ್ತು. ಆ ತಾಯಿಯ  ಮನದಲ್ಲಿಯೂ ಆ ಏಕಮಾತ್ರ ಪುತ್ರನೇ ತುಂಬಿದ್ದನು. ಅವರು ಜೊತೆಯಾಗಿಯೇ ಆಹಾರ ಸೇವಿಸುತ್ತಿದ್ದರು. ಜೊತೆಯಾಗಿಯೇ ನಿದ್ದೆ …

Read More »

ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?

ಕುರ್‌ಆನ್‌ನ ಸೂಕ್ತಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ. 2ನೇ ಅಧ್ಯಾಯದ 190-191ನೇ ಸೂಕ್ತಗಳು ಹೀಗಿವೆ: ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ …

Read More »

ಹಾಗಾದರೆ ವರ್ಷದ ಬಳಿಕ ಬರುವ ಉಪವಾಸವನ್ನು ಹೇಗೆ ಕಾಣಬೇಕು?

ಸಿ.ಎಸ್. ಶಾಹಿನ್ ರಮಝಾನ್ ಒಂದು ಅದ್ಭುತವಾಗಿದೆ. ಹೀಗೆ ಆಲಂಕಾರಿಕವಾಗಿ ಹೇಳಿದ್ದಲ್ಲ. ನಿಜವಾಗಿಯೂ ಅದೊಂದು ಅದ್ಭುತವೇ ಆಗಿದೆ. ಅದಕ್ಕೆ ಹಲವು ಕಾರಣಗಳಿವೆ. ಒಂದು ಉದಾಹರಣೆ ಹೇಳುತ್ತೇನೆ, ಓರ್ವರು ಜೀವನವನ್ನು ಸಂಪೂರ್ಣ ಬದಲಾಯಿಸಲು ತೀರ್ಮಾನಿಸುತ್ತಾರೆ. ಹೊಸ ವ್ಯಕ್ತಿಯಾಗಲು ಬಯಸುತ್ತಾರೆ. ಇದು ಒಂದು ತಿಂಗಳಲ್ಲಿ ಸಾಧಿಸಲು ಸಾಧ್ಯವೇ? ಸಾಮಾನ್ಯವಾಗಿ ಯೋಚಿಸುವಾಗ ಅದರ ಸಾಧ್ಯತೆ ತೀರಾ ಕಡಿಮೆ. ಆ ವ್ಯಕ್ತಿ ಬದುಕಿರುವ ವಾತಾವರಣವು ಅದಕ್ಕೆ ಒಪ್ಪುವುದಿಲ್ಲ. ಮನಸ್ಸು ಕೂಡ ಅದಕ್ಕೆ ಬೇಗನೆ ಒಗ್ಗಬೇಕೆಂದಿಲ್ಲ. ಕೆಲವರು ಹೇಳುವುದನ್ನು …

Read More »

ಕಾರುಣ್ಯದ ಧರ್ಮ

ಕರುಣೆಯು ಮಾನವೀಯ ಸಂಬಂಧಗಳನ್ನು ಜೋಡಿಸುವ ಪ್ರಬಲ ಕೊಂಡಿಯಾಗಿದೆ. ಅದರ ಶಕ್ತಿಯು ಅಪಾರ ಮತ್ತು ಅಜೇಯವಾಗಿದೆ. ಕಠೋರ ಹೃದಯಿಗಳನ್ನೂ ಕರುಣೆಯಿಂದ ಮಣಿಸಲು ಸಾಧ್ಯವಿದೆ. ಮಾನವನ ಮುಚ್ಚಿದ ಬಾಗಿಲುಗಳನ್ನು ಅದು ದೂಡಿ ತೆರೆಯುತ್ತದೆ. ಅಗಲಿದವರನ್ನು ಪರಸ್ಪರ ಆಪ್ತರಾಗಿ, ವೈರಿಗಳನ್ನು ಪರಸ್ಪರ ಮಿತ್ರರಾಗಿ ಮಾಡುತ್ತದೆ. ಸಹಾನುಭೂತಿಯ ಮನಸ್ಸುಗಳೇ ನಿಸ್ವಾರ್ಥ ಕರ್ಮಗಳಿಗೆ ಪ್ರೇರಕವಾಗುತ್ತದೆ. ಅಂತರಿಕ ಪ್ರೇರಣೆಯಿಂದಲೇ ನಿಸ್ವಾರ್ಥ ಸೇವೆಗಳು ಚಿಗುರುತ್ತವೆ. ಅದು ಕರುಣೆಯಿಂದ ಹುಟ್ಟುತ್ತದೆ. ಆದ್ದರಿಂದಲೇ ಮನಸ್ಸನ್ನು ಕಾರುಣ್ಯಮಯಗೊಳಿಸಬೇಕೆಂದು ಧರ್ಮವು ಆಜ್ಞಾಪಿಸಿದೆ. ಅಲ್ಲಾಹನು ದಯಾಮಯನು, ಆತನ …

Read More »

ಸಂದೇಶ ಪ್ರಚಾರ ಮತ್ತು ಬಲಾತ್ಕಾರದ ಮತಾಂತರ

ಇಸ್ಲಾಮ್, ಮಾನವರ ಹಸ್ತಕ್ಷೇಪಗಳಿಂದ ವಿರೂಪಗೊಳ್ಳದ ಏಕೈಕ ದೇವದತ್ತ ಜೀವನ ಪದ್ಧತಿಯಾಗಿದೆ. ಅದು ಮಾನವನ ಉಭಯ ಲೋಕ ವಿಜಯವನ್ನು ಖಚಿತ ಪಡಿಸುತ್ತದೆ. ಪರಲೋಕ ಮೋಕ್ಷದ ವಾಗ್ದಾನ ನೀಡುವುದರೊಂದಿಗೆ ಭೂಮಿಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನವನ್ನೂ ನೀಡುತ್ತದೆ. ಗಾಳಿ, ನೀರು, ಸೂರ್ಯ, ಚಂದ್ರ ಎಲ್ಲವೂ ದೇವನದ್ದಾಗಿದೆ. ಸೃಷ್ಟಿಗಳು ಅವುಗಳ ಸಮಾನ ಹಕ್ಕುದಾರರಾಗಿದ್ದಾರೆ. ಇಸ್ಲಾಮ್ ಕೂಡಾ ಹಾಗೆಯೇ. ಅದು ಕೇವಲ ಮುಸ್ಲಿಮರದ್ದಲ್ಲ, ಎಲ್ಲ ಮಾನವರಿಗಾಗಿ ದೇವನು ಅವತೀರ್ಣಗೊಳಿಸಿದ್ದಾಗಿದೆ. ಪ್ರವಾದಿ ಮುಹಮ್ಮದ್(ಸ) ರನ್ನು ಇಡೀ …

Read More »

ಶೆಲ್‌ ದಾಳಿಗಳ ಮಧ್ಯೆ 2,500 ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ ಮೂಲಕ ಸ್ಥಳಾಂತರಿಸಿದ ಪಾಕಿಸ್ತಾನದ ಮುಅಝ್ಝಂ ಖಾನ್

ಹೊಸದಿಲ್ಲಿ: ಟೀಮ್‌ ಎಸ್‌ಒಎಸ್‌ ಇಂಡಿಯಾದ ಸ್ಥಾಪಕ ನಿತೇಶ್‌ ಸಿಂಗ್‌ ಅವರಿಗೆ ಉಕ್ರೇನಿನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘರ್ಷಮಯ ನೆಲದಿಂದ ಹೊರಕ್ಕೆ ಹೇಗಾದರೂ ದಾಟಿಸಬೇಕೆಂದು ಚಿಂತೆ. ಆದರೆ, ಯುದ್ಧಗ್ರಸ್ತ ಭೂಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರ ಕರೆದುಕೊಂಡು ಬರುವುದು ಸುಲಭದ ಮಾತಾಗಿರಲಿಲ್ಲ. ವಿದ್ಯಾರ್ಥಿಗಳನ್ನು ರೊಮಾನಿಯಾ, ಪೊಲೆಂಡ್‌, ಸ್ಲೊವಾಕಿಯಾ ಮೊದಲಾದ ಸುರಕ್ಷಿತ ಸ್ಥಳಗಳಿಗೆ ಕರೆತರಲು ಬೇಕಾದ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇಲ್ಲದ್ದರಿಂದ, ನಿತೇಶ್‌ ಸಿಂಗ್‌, ಟೂರ್‌ ಆಪರೇಟರ್‌ಗಳನ್ನು ಸಂಪರ್ಕಿಸುತ್ತಾರೆ. ಸುರಿಯುತ್ತಿದ್ದ ಮದ್ದು ಗುಂಡುಗಳ ನಡುವೆ …

Read More »

ಸಮಾನತೆಯ ಕೂಗು: ಮಹಿಳೆಯನ್ನು ಸಬಲೀಕರಣಗೊಳಿಸುವುದೇ ಅಥವಾ ಅಪಾಯಕ್ಕೆ ಸಿಲುಕಿಸುವುದೇ?

 ರಹ್ಮತುನ್ನಿಸಾ ರಾಷ್ಟ್ರೀಯ ಕಾರ್ಯದರ್ಶಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್ ಮತ್ತೊಮ್ಮೆ ಮಹಿಳಾ ದಿನಾಚರಣೆಯ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಚರ್ಚೆಗಳು, ಘೋಷಣೆಗಳು, ಭರವಸೆಗಳು… ಇತ್ಯಾದಿಗಳು ಸಾಮಾನ್ಯ. ವಿಶ್ವಸಂಸ್ಥೆಯು ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲು ನಿಗದಿಪಡಿಸಿದೆ. ಪ್ರತೀ ವರ್ಷದಂತೆ 2021ರಲ್ಲಿ ‘ವಿಮೆನ್ ಇನ್ ಲೀಡರ್ ಶಿಪ್: ಎಚೀವಿಂಗ್ ಆ್ಯನ್ ಈಕ್ವಲ್ ಫ್ಯೂಚರ್ ಇನ್ ಎ ಕೋವಿಡ್- 19′ ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷ “ಸುಸ್ಥಿರ ನಾಳೆಗಾಗಿ …

Read More »