ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರು ತಮ್ಮ ತಂಡದ ಸಹ ಆಟಗಾರರಾದ ಅಫ್ಗಾನಿಸ್ತಾನದ ರಶೀದ್ ಖಾನ್, ಮುಹಮ್ಮದ್ ನಬಿ ಹಾಗೂ ಮುಜೀಬುರ್ರಹ್ಮಾನ್ ಜತೆಗೂಡಿ ತಮ್ಮ ಮೊದಲ ರಮಝಾನ್ ಉಪವಾಸ ಆಚರಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ರಶೀದ್ ಖಾನ್, ವಾರ್ನರ್ ಹಾಗೂ ವಿಲಿಯಮ್ಸನ್ ಅವರು ತಮ್ಮೊಂದಿಗೆ ಹೇಗೆ ಉಪವಾಸ ಆಚರಿಸಿದ್ದಾರೆಂದು ವಿವರಿಸಿದ್ದಾರೆ. ಉಪವಾಸದ ಅನುಭವ ಹೇಗಿತ್ತು ಎಂದು ರಶೀದ್ ಖಾನ್ …
Read More »ಪವಿತ್ರ ಕುರ್ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?
ಉತ್ತರ: ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್ಆನನ್ನು ಪ್ರವಾದಿ ಮುಹಮ್ಮದ್ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್ಆನ್ ಅನೇಕ ಕಡೆ …
Read More »ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ?
ಪ್ರಶ್ನೆ: ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ? ಉತ್ತರ: ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್ಆನ್ ಹಿಡಿದುಕೊಂಡು ಒಂದೋ ಕುರ್ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು …
Read More »ಇಸ್ಲಾಮಿನಲ್ಲಿ ಪೌರೋಹಿತ್ಯವಿದೆಯೇ?
ಉತ್ತರ: ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ. ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಯಾವುದೇ ವಿಶಿಷ್ಟ ವರ್ಗದ ಅಗತ್ಯವಿಲ್ಲ. ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಧರ್ಮದ ಜ್ಞಾನ, ಕುರ್ಆನಿನ ವಿದ್ಯೆ, ದೇವಭಕ್ತಿ ಮತ್ತು ಧರ್ಮನಿಷ್ಠೆ ಇವುಗಳೇ ಇಮಾಮತ್ಗೆ(ನೇತೃತ್ವ) ಬೇಕಾದ ಗುಣಗಳು. ಈ ಗುಣಗಳಿರುವ ಯಾವ ವ್ಯಕ್ತಿಯೂ ಇಮಾಮತ್(ನೇತೃತ್ವ) ಮಾಡಬಹುದು. ಅವನ ಕುಲಗೋತ್ರಗಳಿಗಾಗಲೀ ವರ್ಣ, ವರ್ಗಗಳಿಗಾಗಲೀ ಯಾವುದೇ ಮಹತ್ವವಿಲ್ಲ. ಇಮಾಮತ್ಗೆ ನೇಮಿಸಲ್ಪಟ್ಟ ವ್ಯಕ್ತಿ ಕಾರಣಾಂತರದಿಂದ ಯಾವುದಾದರೂ ನಮಾಝ್ಗೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರ ಸ್ಥಾನದಲ್ಲಿ ನಮಾಝ್ಗೆ ಸೇರಿದವರ ಪೈಕಿ ಕುರ್ಆನ್ …
Read More »ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?
ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ? ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ ಹೊರತಳ್ಳಿ …
Read More »ಜೊಲ್ಲುರಸ ನುಂಗಿದರೆ ಉಪವಾಸ ಮುರಿಯುವುದೇ?
ಪ್ರಶ್ನೆ: ಜೊಲ್ಲುರಸ ನುಂಗಿದರೆ ಉಪವಾಸ ಮುರಿಯುವುದೇ? ಉತ್ತರ: ಶರೀಅತ್ನ ವಿಧಿಗಳು ಜನರಿಗೆ ಸಂಕಷ್ಟವನ್ನುಂಟು ಮಾಡಲು ಬಯಸಿಲ್ಲ. ಬದಲಾಗಿ ಅದನ್ನು ಸುಲಭಗೊಳಿಸುವುದೂ, ಇಕ್ಕಟ್ಟನ್ನು ಇಲ್ಲವಾಗಿಸುವುದೂ ಅದರ ಮೌಲ್ಯಗಳಲ್ಲಿ ಸೇರಿದೆ. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನು ನಿಮಗೆ ಸೌಲಭ್ಯ ವನ್ನು ನೀಡಬಯಸುತ್ತಾನೆ. ಸಂಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ.” (ಅಲ್ಬಕರ: 185) ಇನ್ನೊಂದೆಡೆ ಹೇಳಲಾಗಿದೆ: ಅಲ್ಲಾಹನು ನಿಮ್ಮ ಮೇಲಿನ ಬಾಧ್ಯತೆಗಳನ್ನು ಹಗುರಗೊಳಿಸಬೇಕೆಂದು ಇಚ್ಛಿಸುತ್ತಾನೆ. ಏಕೆಂದರೆ ಮನುಷ್ಯನನ್ನು ದುರ್ಬಲನಾಗಿ ಸೃಷ್ಟಿಸಲಾಗಿದೆ. (ಅನ್ನಿಸಾ: 26-28) ಇನ್ನೊಂದೆಡೆ ಹೀಗೆ ಹೇಳಲಾಗಿದೆ, “ಧರ್ಮದಲ್ಲಿ …
Read More »ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ?
ಪ್ರಶ್ನೆ: ಉಪವಾಸಕ್ಕೆ ನಿಯ್ಯತ್ ಇರಿಸುವುದು ಹೇಗೆ? ಏನಾದರೂ ಹೇಳಿಯೇ ಉಪವಾಸ ಆರಂಭಿಸಬೇಕೇ? ಉಪವಾಸದ ನಿಯ್ಯತ್ ಬಾಯಿಯಿಂದ ಹೇಳುವುದು ಕಡ್ಡಾಯವೇ? ಹಾಗಾದರೆ ಅದರ ಸಮಯ ಯಾವುದು? ಪ್ರತಿಯೊಂದು ದಿನದ ಉಪವಾಸಕ್ಕೂ ಬೇರೆ ಬೇರೆ ನಿಯ್ಯತ್ ಬೇಕೇ? ಉತ್ತರ: ನಿಯ್ಯತ್ ಎಂಬ ಪದದ ಅರ್ಥ ಸಂಕಲ್ಪ ಎಂದಾಗಿದೆ. ಸಂಕಲ್ಪವನ್ನು ಸಾಮಾನ್ಯವಾಗಿ ಮಾಡುವುದು ಹೃದಯ. ಅಂದರೆ ಸಂಕಲ್ಪದ ಸ್ಥಳ ಮನಸ್ಸು ಆಗಿದೆ. ಆದ್ದರಿಂದ ನಾವು ಹೃದಯದಿಂದಲೇ ಸಂಕಲ್ಪ ಮಾಡಬೇಕು. ಬಾಯಿಯಲ್ಲಿ ಕೇವಲ ನಿರ್ಲಕ್ಷ್ಯದಿಂದ ಉಚ್ಚರಿಸಿದರೆ …
Read More »ಉಪವಾಸ ಹೇಗೆ?
– ಇಸ್ಲಾಮಿನ ಬುನಾದಿಯಲ್ಲಿ ಪ್ರಮುಖವಾದ ಒಂದು ಆರಾಧನಾ ಕರ್ಮವಾಗಿದೆ ‘ಉಪವಾಸ’ – ಇಚ್ಛಾ ನಿಯಂತ್ರಣ ಎಂದಾಗಿದೆ. ಉಪವಾಸದ ಅರ್ಥ. – ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ತನ್ನ ಬಯಕೆಗಳನ್ನು ತಡೆದಿರಿಸುವುದು ಇಚ್ಛೆಗಳನ್ನು ನಿಯಂತ್ರಿಸುವುದು ಇದರ ಉದ್ದೇಶ. – ಉಪವಾಸದಲ್ಲಿ ಎರಡು ವಿಧವಿದೆ. ಕಡ್ಡಾಯ ವ್ರತ:- ರಮಝಾನ್ನ ವ್ರತ, ಹರಕೆಯ ವ್ರತ ಐಚ್ಛಿಕ ವ್ರತ:- ಅರಫಾ ದಿನದ ವ್ರತ ಆಶುರಾ, ಶವ್ವಾಲ್, 2 ರಿಂದ 7ರ ತನಕ ಹಾಗೂ ವಾರದಲ್ಲೂ ತಿಂಗಳಲ್ಲೂ ಹಿಡಿಯುವ …
Read More »ಉಪವಾಸ ವ್ರತ ಮತ್ತು ಆತ್ಮಸಂಸ್ಕರಣೆ
ಮೌ| ಮುಹಮ್ಮದ್ ಫಾರೂಕ್ ಖಾನ್ ಅನು: ಮುಹಮ್ಮದ್ ಅಶ್ರಫ್ ರಮಝಾನ್ ತಿಂಗಳು ಬಹಳ ಸಮೃದ್ಧವಾದ ತಿಂಗಳಾಗಿದೆ. ಈ ತಿಂಗಳಲ್ಲಿಯೇ ಪವಿತ್ರ ಕುರ್ಆನ್ನ ಅವತೀರ್ಣಗೊಳ್ಳಲು ಆರಂಭವಾಗಿತ್ತು. ಅದಾದರೋ ಮಾನವರಿಗೆ ಸಾದ್ಯಂತ ಮಾರ್ಗದರ್ಶಕ ಗ್ರಂಥವಾಗಿದೆ. ಅದರ ಬೆಳಕಿನಲ್ಲಿ ಮಾನವನು ನೇರ ಮಾರ್ಗವನ್ನು ಅಂದರೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬಲ್ಲನು. ಅದನ್ನು ಅನುಸರಿಸಿ ಮಾನವನು ಯಶಸ್ಸಿನ ಪಯಣವನ್ನು ದಾಟಬಲ್ಲನು. ಅದೇ ರೀತಿ ವೈಚಾರಿಕ ಮತ್ತು ತಾತ್ವಿಕ ಪಥಭ್ರಷ್ಠತೆ, ಪ್ರಾಯೋಗಿಕ ಪಥಭ್ರಷ್ಠತೆ ಮುಂತಾದವುಗಳನ್ನು ಅರಿತು ಅವುಗಳಿಂದ ಸುರಕ್ಷಿತವಾಗಿರಬಲ್ಲನು. …
Read More »ರಮಝಾನ್: ನಾವು ಮಾಡಬೇಕಿರುವುದೇನು?
@ ಅಬೂ ಮಾಝ್, ಕಾರ್ಕಳ ರಮಝಾನ್ ತಿಂಗಳು ಮತ್ತೊಮ್ಮೆ ನಮ್ಮ ಜೀವನದಲ್ಲಿ ಲಭಿಸಿದೆ. ಅದೆಷ್ಟೋ ನಮ್ಮ ಸಹೋದರ ಸಹೋದರಿಯರಿಗೆ ಗತಿಸಿ ಹೋದ ರಮಝಾನ್ ತಿಂಗಳೇ ಜೀವನದ ಕೊನೆಯ ರಮಝಾನ್ ಆಗಿತ್ತು. ಆದರೆ ಅವರಿಗೆ ತಿಳಿದಿರಲಿಲ್ಲ. ಅದೇ ರೀತಿ ಈ ಬರುವ ರಮಝಾನ್ ನಮ್ಮ ಕೊನೆಯ ರಮಝಾನ್ ಕೂಡಾ ಆಗಿರಲಿಕ್ಕೆ ಸಾಧ್ಯತೆ ಇದೆ. ಅದನ್ನು ಮುಂದಿಟ್ಟು ಈ ರಮಝಾನ್ ತಿಂಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಬೇಕಾದುದು ನಮ್ಮ ಮುಂದಿರುವ ಜವಾಬ್ದಾರಿ. ಈ …
Read More »
IslamKannada News Portal