Home / editor (page 52)

editor

ಅದ್ವೈತವನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲವೇಕೆ?

ಅದ್ವೈತ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲವೆಂದಾದರೆ ಏಕೆ? ಶ್ರೀ ಶಂಕರಾಚಾರ್ಯರು ಒಂದು ಸಿದ್ಧಾಂತದ ರೂಪದಲ್ಲಿ ಅದ್ವೈತವನ್ನು ಪರಿಚಯಸಿದವರು. ಅವರು ಏಳನೇ ಶತಮಾನದ ಅಂತ್ಯ ಹಾಗೂ 8ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದರೆಂದು ಸಾಮಾನ್ಯ ನಂಬಿಕೆ. 8ನೇ ಶತಮಾನದ ಅಂತ್ಯದಲ್ಲೆಂದೂ, ಒಂಬತ್ತನೇ ಶತಮಾನದ ಆದಿಯಲ್ಲೆಂದೂ ಬದುಕಿದ್ದರೆಂದು ಹೇಳುವವರೂ ಇದ್ದಾರೆ. ಅವರ ಜನ್ಮಸ್ಥಳ ಕೇರಳದ ಕಾಲದಿಯಲ್ಲೆಂದು ಊಹಿಸಲಾಗಿದೆ. ಶಂಕರಾಚಾರ್ಯರು ತನ್ನ ಗುರು ಗೋವಿಂದ ಎಂಬವರ ಆಚಾರ್ಯರಾದ ಗೌಡಪಾದರಿಂದ ಅದ್ವೈತ ಸಿದ್ಧಾಂತವನ್ನು ಸ್ವೀಕರಿಸಿದರು. ಆದರೂ ಬಾದರಾಯಣನ …

Read More »

ಉರ್‍ ನಿಂದ ಹೊರಟು ಮಕ್ಕಾದವರೆಗೆ ಸಾಗಿದ ಪಯಣ

ಪಿ.ಟಿ. ಕುಂಞಲಿ ಪ್ರವಾದಿ ಇಬ್ರಾಹೀಮ್(ಅ)ರ ಜೀವನ ವಿಶ್ವಮಾನವೀಯತೆಯ ಪ್ರತೀಕವಾಗಿತ್ತು. ಸೃಷ್ಟಿಕರ್ತನ ಆಪ್ತ ಮಿತ್ರ ಮತ್ತು ಸೃಷ್ಟಿಗಳ ಪ್ರೀತಿಯ ನಾಯಕರಾಗಿದ್ದರು. ಇಂತಹ ಅದೃಷ್ಟ ಶಾಲಿ ಸುದೀರ್ಘ ಮಾನವ ಇತಿಹಾಸದಲ್ಲಿ ಹಿಂದೆಯೋ ಮುಂದೆಯೋ ಆಗಿಲ್ಲ. ಮುಂದೆ ನಡೆದದ್ದೆಲ್ಲವೂ ಇಬ್ರಾಹೀವಿೂ ಚಟುವಟಿಕೆಗಳಿಗೆ ದಾರಿ ಸುಗಮಗೊಳಿಸಿಕೊಡುವುದಾಗಿತ್ತು. ನಂತರದ ಕಾಲವು ಆ ಮಹಾ ನಿಯೋಗವನ್ನು ಪುನಃ ಅವತರಿಸುವ ಧೀರವಾದ ಉತ್ಸಾಹವಾಗಿದೆ. ಅಲೆಮಾರಿ ಜೀವನದ ಕಾಲವು ಕೊನೆಗೊಂಡು ನದೀ ತೀರದ ನಾಗರಿಕತೆಯು ಆರಂಭವಾದ ಒಂದು ಸಂದರ್ಭದಲ್ಲಿ ಪ್ರಾಚೀನ ಮೆಸಪಟೋಮಿಯಾದ …

Read More »

ಕಾಲವು ಹಾಜಿರಾರನ್ನು ಹುಡುಕುತ್ತಿದೆ

ನೀರಿಲ್ಲದ ಬರಡಾದ ಮರುಭೂಮಿ ಮಕ್ಕಾ ನಗರ. ಆದ್ದರಿಂದ ಅದು ನಿರ್ಜನ ಪ್ರದೇಶ. ಪ್ರವಾದಿ ಇಬ್ರಾಹೀಮ್(ಅ) ದೇವನ ಕರೆಯಂತೆ ತನ್ನ ಪತ್ನಿ ಮತ್ತು ಪುಟ್ಟ ಮಗನನ್ನು ಮರುಭೂಮಿಯಲ್ಲಿ ಬಿಟ್ಟು ಬರಲು ಅನುವಾದರು. ಕೂಡಲೇ ಪತ್ನಿ ಕೇಳಿದರು, “ಓ ಇಬ್ರಾಹೀಮ್,  ಮರುಭೂಮಿಯಲ್ಲಿ ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತಿರುವಿರಿ. ಮನೆಯವರಿಲ್ಲ. ಸಂಗಡಿಗರಿಲ್ಲದ ಈ ಮರುಭೂಮಿಯಲ್ಲಿ ನಮ್ಮನ್ನು  ಒಬ್ಬಂಟಿಗರನ್ನಾಗಿ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ?” ಪತ್ನಿ ಹಾಜಿರಾರ ಪ್ರಶ್ನೆಗೆ ಅವರು ಮೆತ್ತಗಾಗಲಿಲ್ಲ. ಯಾಕೆಂದರೆ ಅಲ್ಲಾಹನ ಆದೇಶವನ್ನು …

Read More »

ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್(ಸ)

@ ಅಬ್ದುಸ್ಸಲಾಮ್ ಪುತ್ತಿಗೆ (ಪ್ರಧಾನ ಸಂಪಾದಕರು, ವಾರ್ತಾಭಾರತಿ) ನಿರೂಪಣೆ: ರಿಯಾಝ್ ರೋಣ ಪ್ರವಾದಿ ಮುಹಮ್ಮದ್(ಸ) ಅವರಿಗೆ ಭಕ್ತರು ಇಲ್ಲ. ಯಾರೂ ಅವರನ್ನು ಪೂಜಿಸುವುದಿಲ್ಲ. ಅವರು ಯಾರದೇ ದೇವರಲ್ಲ. ಆದರೆ ಅವರಿಗೆ  ಈ ಜಗತ್ತಿನಲ್ಲಿ ನೂರು ಕೋಟಿಗಿಂತ ಹೆಚ್ಚು ಅನುಯಾಯಿಗಳು ಹಾಗೂ ಅಭಿಮಾನಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳಿರುವ ಮಾತ್ರವಲ್ಲ ಬಹಳ ಭಾವುಕ ಅನುಯಾಯಿಗಳಿರುವಂತಹ ಆ ವ್ಯಕ್ತಿ ಇವತ್ತಿನ ಜಗತ್ತಿನಲ್ಲಿ ಹೆಚ್ಚಿನವರ ಪಾಲಿಗೆ ಅಪರಿಚಿತರಾಗಿದ್ದಾರೆ ಅನ್ನುವುದು ಬಹಳ ದುರುಂತದ ವಿಷಯ. ಸ್ವತಃ …

Read More »

ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ

ಪ್ರವಾದಿ ಮುಹಮ್ಮದ್ (ಸ) ರವರು ಮದೀನಾದಲ್ಲಿ ಮಾಡಿದ ಘೋಷಣೆ “ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.” ಹಾಗೆಯೇ ದ್ವಿತೀಯ ಖಲೀಫಾ ಉಮರ್ ರ ಪತ್ರ.. “ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ …

Read More »

ಮಾನವೀಯತೆ ಹೀಗೆ ಗೆಲ್ಲುತ್ತಲೇ ಇರಲಿ

ಅಬುಧಾಬಿಯ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ ಕೇರಳದ ತ್ರಿಶೂರಿನ ಬೈಕ್ಸ್ ಕೃಷ್ಣನ್ ಎಂಬಾತನ ಕಾರು ಸುಡಾನಿನ ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಬಾಲಕ ಮೃತಪಡುತ್ತಾನೆ. ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಏರಿ ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗುತ್ತದೆ. ಅಲ್ಲದೇ, ಬಾಲಕನ ಹೆತ್ತವರು ಅಪಘಾತವನ್ನು ಕಣ್ಣಾರೆ ಕಂಡಿದ್ದು ಕೋರ್ಟಿನಲ್ಲಿ ಸಾಕ್ಷ್ಯ ನುಡಿಯುತ್ತಾರೆ. ಈ ಅಪಘಾತ ನಡೆದದ್ದು 2012 ಸೆಪ್ಟೆಂಬರ್ 17ರಂದು. 2013ರಲ್ಲಿ ಅಬುದಾಬಿ ಕೋರ್ಟು ಕೃಷ್ಣನ್ ಗೆ ಗಲ್ಲು ಶಿಕ್ಷೆ ಘೋಷಿಸುತ್ತದೆ. ಆ ಬಳಿಕದಿಂದ …

Read More »

ಹೆಣ್ಣು – ಗಂಡು ಸಮಾನರೇ???!!!

ಹೆಣ್ಣೊಬ್ಬಳು `ತಾಯಿ’, ಗಂಡೊಬ್ಬ `ತಂದೆ’ ಎಂಬ ಸ್ಥಾನಕ್ಕೇರುವಾಗ ಗಂಡು-ಹೆಣ್ಣಿನ ಪರಿಕಲ್ಪನೆ ಯಿಂದ ಹೊರಬಂದು ಹೊಸ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ, ಜವಾಬ್ದಾರಿಯನ್ನು ಪಡೆದು ಕೊಳ್ಳುತ್ತಾರೆ. ಇಬ್ಬರೂ ಸೇರಿ ಕುಟುಂಬ ಎಂಬ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಮನೆ ಮತ್ತು ಕುಟುಂಬ ನಿರ್ವಹಣೆಯಲ್ಲಿ ಎರಡು ರೀತಿಯ ಪಾತ್ರಗಳಿರುತ್ತವೆ. ಒಂದು ನಾವು ಪ್ರಸಕ್ತ ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆಯಲ್ಲಿ ಎರಡು ರೀತಿಯ ಅಧಿಕಾರವನ್ನು ಹೊಂದಿದವರನ್ನು ಕಾಣುತ್ತೇವೆ. ಒಂದು ರಾಷ್ಟ್ರದ ಅಧ್ಯಕ್ಷ, ಇನ್ನೊಂದು …

Read More »

ರಾಜಸ್ಥಾನದ ಕುಗ್ರಾಮದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಸಜ್ಜಾದ ಮದ್ರಸ

ಜೈಪುರ,ಮೇ 22: ರಾಜಸ್ಥಾನದ ಸಿಕರ್ ಜಿಲ್ಲೆಯ ಕುಗ್ರಾಮ ಖೀರವಾದಲ್ಲಿಯ ಮದರಸವು ಕೋವಿಡ್ ರೋಗಿಗಳಿಗಾಗಿ ತನ್ನ ಬಾಗಿಲುಗಳನ್ನು ತೆರೆದಿದೆ. ಮೇ 2ರ ಸುಮಾರಿಗೆ ಇಲ್ಲಿ ಆರಂಭಗೊಂಡಿರುವ ಕೋವಿಡ್-19 ಕಾಳಜಿ ಕೇಂದ್ರದಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈವರೆಗೆ ಈ ಕೇಂದ್ರದಲ್ಲಿ ಸುಮಾರು 30 ಕೋವಿಡ್ ರೋಗಿಗಳು ದಾಖಲಾಗಿದ್ದು, 10-12 ರೋಗಿಗಳು ಚೇತರಿಸಿಕೊಂಡು ತಮ್ಮ ಮನೆಗಳಿಗೆ ಮರಳಿದ್ದಾರೆ. ಜಾಮಿಯಾ ಅರೆಬಿಯ ಬರ್ಕತುಲ್ ಇಸ್ಲಾಂ ಮದರಸದಲ್ಲಿಯ ಈ ಕೋವಿಡ್ ಕಾಳಜಿ ಕೇಂದ್ರವು …

Read More »

ಶಹಾದತ್ ಕಲಿಮ ಹೇಳಿಕೊಟ್ಟ ಡಾ.ರೇಖಾ ಕೃಷ್ಣನ್; ಶೇಮ ಯಿಸರಾಯೇಲ್ ಹೇಳಿಕೊಟ್ಟ ಫೆಲಸ್ತೀನಿನ ಇಬ್ರಾಹೀಂ ಮಾಹಿರ್: ಕೊರೋನ ಸಾವಿನ ಕೊನೆಯ ಕ್ಷಣಗಳು

ಪರಧರ್ಮ ದ್ವೇಷ ತಾರಕಕ್ಕೇರಿರುವ ಈ ಕಾಲದಲ್ಲ ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೋನ ಮಹಾರೋಗ ತೋರಿಸಿಕೊಟ್ಟಿದೆ. ಯಾರೂ ಪರಿಚಾರಕರಿಲ್ಲದೇ ಅಂತರ ಕಾಯ್ದುಕೊಳ್ಳುವ ಅಸಹಾಯಕ ಸನ್ನಿವೇಶಗಳಿವೆ. ರೋಗದಲ್ಲಿ ಸಾವು ಕೂಡ ವೇದನಾಜನಕ. ಎಲ್ಲ ಸಾವುಗಳು ನೋವು ತರುವುದೇ ಆದರೂ ಕೊರೋನ ಪೀಡಿತರ ಸಾವು ಅವರ ಕೊನೆಯ ಕ್ಷಣಗಳು ಎಂತಹ ನೋವಿನದ್ದೆಂದು ನಮಗೆ ಗೊತ್ತಿಲ್ಲ. ಸಂಬಂಧಿಕರು ಹತ್ತಿರವಿಲ್ಲದೆ ವೆಂಟಿಲೇಟರ್ ಕೋಣೆಯ ಶೀತ ವಾತಾವರಣದಲ್ಲಿ ಮಲಗಿ ಅವರು ಇಹಲೋಕ ತ್ಯಜಿಸುತ್ತಾರೆ. ಧಾರ್ಮಿಕ ಕೊನೆಯ ಕರ್ಮಗಳು …

Read More »

ಜಮ್ಮುಕಾಶ್ಮೀರದಲ್ಲಿನ ಕರ್ತವ್ಯದ ವೇಳೆ ರಮಝಾನ್‌ ಉಪವಾಸ ಕೈಗೊಂಡ ಅನುಭವ ಹಂಚಿಕೊಂಡ ಸೇನಾಧಿಕಾರಿ ಮೇ.ಜ. ಯಶ್‌ ಮೋರ್

“ಪ್ರಥಮ ಉಪವಾಸ ಕೈಗೊಂಡ ದಿನದ ಅನುಭೂತಿ ಮರೆಯಲು ಯಾವತ್ತೂ ಸಾಧ್ಯವಿಲ್ಲ” ಜಮ್ಮು ಕಾಶ್ಮೀರದಲ್ಲಿ ನೇಮಕವಾದ ಬಳಿಕ ತನ್ನ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಿತು? ಉಪವಾಸ ವೃತ ಕೈಗೊಂಡ ಕುರಿತಾದಂತೆ ತನ್ನ ಅನುಭವಗಳನ್ನು ಭಾರತೀಯ ಸೇನೆಯ ಮೇಜರ್‌ ಜನರಲ್‌ ಆಗಿದ್ದ ಡಾ. ಯಶ್‌ ಮೋರ್‌ ರವರು scroll.in ನಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯ ಸೇನೆಯು 2001ರಲ್ಲಿ ನನ್ನನ್ನು ಕಾಶ್ಮೀರದಲ್ಲಿ ನೇಮಕಾತಿ ಮಾಡಿದ್ದು ನನ್ನ ಜೀವನವನ್ನೇ ಬದಲಾಯಿಸಿತು. ಅದಕ್ಕೂ ಮೊದಲು ನನ್ನ 17 …

Read More »