Home / editor (page 23)

editor

ಶೇಕ್ ಝಾಯಿದ್ ಗ್ರಾಂಡ್ ಮಸೀದಿಗೆ ಭೇಟಿ ಕೊಟ್ಟವರಲ್ಲಿ ಹೆಚ್ಚಿನವರು ಭಾರತೀಯರು: ಅಬುದಾಬಿಯ ಈ ಮಸೀದಿಯ ವಿಶೇಷತೆ ಏನು?

ಅಬುದಾಬಿಯ ಶೇಕ್ ಝಾಯಿದ್ ಗ್ರಾಂಡ್ ಮಸ್ಜಿದನ್ನು ನೋಡಲು ಬರುವವರಲ್ಲಿ ಅತ್ಯಧಿಕ ಮಂದಿ ಭಾರತೀಯರಾಗಿದ್ದಾರೆ ಎಂಬ ವಿವರ ಬಿಡುಗಡೆಯಾಗಿದೆ ಕಳೆದ ಆರು ತಿಂಗಳಲ್ಲಿ 33 ಲಕ್ಷ ಮಂದಿ ಮಸೀದಿಗೆ ಭೇಟಿ ನೀಡಿದ್ದು ಇವರಲ್ಲಿ 23 ಲಕ್ಷ ಮಂದಿ ಪ್ರವಾಸಿಗಳಾಗಿ ಭೇಟಿ ನೀಡಿದ್ದಾರೆ. ಜನವರಿಯಿಂದ ಜೂನ್ ವರೆಗೆ 9,14,000 ಮಂದಿ ಈ ಮಸೀದಿಗೆ ಪ್ರಾರ್ಥನೆಗಾಗಿ ಭೇಟಿ ನೀಡಿದ್ದಾರೆ. ಈ ಮಸೀದಿಯನ್ನು ಆಕರ್ಷಕವಾಗಿ ಕಟ್ಟಲಾಗಿದ್ದು ಅದನ್ನು ವೀಕ್ಷಿಸುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. …

Read More »

ಕುರ್‌ಆನ್‌ನ ಸಬ್ಜೆಕ್ಟ್ “ನಾನು”

✍️ ರೈಹಾನ್.ವಿ.ಕೆ. ಸಚೇರಿಪೇಟೆ. ಇವತ್ತು ನಾನು ಕುರ್‌ಆನ್‌ ಅಧ್ಯಯನಕ್ಕಾಗಿ ಆರಿಸಿ ಕೊಂಡ ಅಧ್ಯಾಯ , ” ಅಲ್ ಇಸ್ರಾ” ಅರ್ಥಾತ್ “ರಾತ್ರಿಯ ಪಯಣ”. ಕುರ್‌ಆನ್‌ ಅಧ್ಯಯನ ಮಾಡುವಾಗ ನಮ್ಮ ಭಾವನೆ ಹೇಗಿರಬೇಕೆಂದರೆ ಕುರ್‌ಆನ್‌ ನನಗಾಗಿ, ನನ್ನೊಂದಿಗೆ ಮತ್ತು ನನಗೆ ಎಚ್ಚರಿಕೆ ಹಾಗೂ ನನಗೆ ಶುಭವಾರ್ತೆ ನೀಡುತ್ತಾ ನನ್ನೊಂದಿಗೆ ಮಾತಾಡುತ್ತಿದೆ. ಅಂದರೆ ಕುರ್‌ಆನ್‌ ನ ಸಬ್ಜೆಕ್ಟ್ ಮನುಷ್ಯ; ಹಾಗಾಗಿ  ಕುಕುರ್‌ಆನ್‌ ಸಬ್ಜೆಕ್ಟ್ ನಾನು. ಅಧ್ಯಾಯ ಅಲ್ ಇಸ್ರಾ ಇದು ಮೊದಲ ಬಾರಿಯ …

Read More »

ನನ್ನನ್ನು ಕಾಡಿದ ಎರಡು ಘಟನೆಗಳು : ✍ ರೈಹಾನ ವಿ.ಕೆ

ಇತ್ತೀಚೆಗೆ ತಪಾಸಣೆಗೆಂದು ವೈದ್ಯರನ್ನು ಕಾಯುತ್ತಿದ್ದಾಗ ನಡೆದ ಎರಡು ಘಟನೆಗಳು. ಇಪ್ಪತ್ತು ಇಪ್ಪೈತದರ ಹರೆಯದ ಯುವಕ ಮತ್ತು ಐವತ್ತು ಮೀರಿದ ಆತನ ತಾಯಿ(ಇರಬೇಕು). ನಾವು ವೈದ್ಯರಿಗಾಗಿ ಕಾಯುತ್ತಿರಲು ತಪಾಸಣಾ ಕೋಣೆಯಿಂದ ಹೊರಬಂದ ತಾಯೊಬ್ಬರು ತನ್ನ ಮಗನೊಂದಿಗೆ ಪ್ರಶ್ನಿಸುತ್ತಾರೆ. ಮಗಾ ನೀರಿನ ಬಾಟಲಿ ಕೈಯಲ್ಲಿ ಇದೇ ತಾನೆ ಅಥವಾ ಒಳಗಡೆ ಬಿಟ್ಟು ಬಂದಿಯಾ? ಇದನ್ನು ಕೇಳಿದ ಆ ಯುವಕನ ಪ್ರತಿಕ್ರಿಯೆ ನೋಡಿ ನನ್ನ ಮನ ತುಂಬಾ ನೋಯಿತು. ಕಣ್ಣಲ್ಲಿ ನೀರು ಬರಿಸಿತು. ಆತನ …

Read More »

ಸ್ವೀಡನ್‌ನಲ್ಲಿ ಸ್ವೀಡಿಷ್ ಅನುವಾದದ 1 ಲಕ್ಷ ಕುರ್‌ಆನ್ ಪ್ರತಿಯನ್ನು ವಿತರಿಸುವುದಾಗಿ ಘೋಷಿಸಿದ ಕುವೈತ್ ಸರ್ಕಾರ

ಕುವೈಟ್: ಸ್ವೀಡಿಷ್ ಭಾಷೆಗೆ ಭಾಷಾಂತರಿಸಿದ ಪವಿತ್ರ ಕುರ್‌ಆನ್‌ನ 1 ಲಕ್ಷ ಪ್ರತಿಗಳನ್ನು ಮುದ್ರಿಸುವ ಯೋಜನೆಯನ್ನು ಕುವೈತ್ ಸರ್ಕಾರವು ಘೋಷಿಸಿದೆ ಎಂದು kuwaittimes.com ವರದಿ ಮಾಡಿದೆ. ಕಳೆದ ತಿಂಗಳು ಈದುಲ್ ಅಝ್ ಹಾ ಸಂದರ್ಭದಲ್ಲಿ ಸ್ವೀಡನ್‌ನಲ್ಲಿ ವ್ಯಕ್ತಿಯೊಬ್ಬ ಕುರ್‌ಆನನ್ನು ಸುಟ್ಟು ಹಾಕಿದ್ದ. ಕುರ್‌ಆನ್ ಗೆ ಬೆಂಕಿ ಹಚ್ಚಿದ ಪ್ರಕರಣವು ವಿಶ್ವದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕುವೈತ್ ಸರ್ಕಾರವು ಇದರ ಬೆನ್ನಲ್ಲೇ ಈ ಮಹತ್ವದ ಯೋಜನೆಗೆ ಕೈ ಹಾಕಿದೆ. ಕುವೈತ್ ವಿದೇಶಾಂಗ ಸಚಿವಾಲಯದ …

Read More »

ಇಬ್ರಾಹೀಮ್‌ರಿಗೆ(ಅ) ಎದುರಾದ ಪರೀಕ್ಷೆಗಳು

– ಅಕ್ಬರ್ ಅಲಿ, ಉಡುಪಿ (ಜ.ಇ. ಹಿಂದ್, ರಾಜ್ಯ ಕಾರ್ಯದರ್ಶಿ) ಸುಮಾರು 5 ಸಾವಿರ ವರ್ಷಗಳ ಹಿಂದೆ ಇರಾಕಿನ ಉರ್ ನಗರದಲ್ಲಿ ಪ್ರವಾದಿ ಇಬ್ರಾಹೀಮ್‌ರ(ಅ) ಜನನವಾಯಿತು. ಅಂದಾಜು 5 ಲಕ್ಷ ಜನ ಸಂಖ್ಯೆಯ ಈ ನಗರದಲ್ಲಿ ಆಡಂಬರದ ಬದುಕು, ಭೌತಿಕವಾದ, ಬಡ್ಡಿ, ಬಹುದೇವ ವಿಶ್ವಾಸ, ಸೂರ್ಯ, ಚಂದ್ರ, ನಕ್ಷತ್ರಗಳ ಆರಾಧನೆ, ಮೂರ್ತಿ ಪೂಜೆ ಉತ್ತುಂಗದಲ್ಲಿತ್ತು. ಸಮಾಜವು ಅಮಿಲೊ ಎಂಬ ಮೇಲ್ವರ್ಗವಾಗಿ ಮಶ್‌ಕಿಯೋ ಎಂಬ ಸಾಮಾನ್ಯ ವರ್ತಕ ಮತ್ತು ವ್ಯವಸಾಯ ವರ್ಗವಾಗಿ …

Read More »

ಪ್ರವಾದಿ ಇಬ್ರಾಹೀಮ್(ಅ) ಮತ್ತು ಇತಿಹಾಸ

ಜಿ.ಎಂ. ಶರೀಫ್ ಹೂಡೆ ಕಅಬಾ ಭವನದ ನಿರ್ಮಾಣ ಹಝ್ರತ್ ಇಬ್ರಾಹೀಮ್(ಅ) ವಾಸಿಸುತ್ತಿದ್ದ ಆ ಮಕ್ಕಾ ಪ್ರದೇಶ ಒಂದೊಮ್ಮೆ ನಿರ್ಜನವಾಗಿತ್ತು. ಆದರೆ ಅನಂತರದಲ್ಲಿ ಜನರು ಅಲ್ಲಿಗೆ ಬಂದು ವಾಸಿಸಲಾರಂಭಿಸಿದರು. ಹಾಗಾಗಿ ಅಲ್ಲಿ ಏಕೈಕ ಸೃಷ್ಟಿಕರ್ತನನ್ನು ಆರಾಧಿಸುವಂತಹ ಭವನದ ಅಗತ್ಯವಿತ್ತು. ಹಾಗೆ ಅಲ್ಲಾಹನ ಆಜ್ಞೆ ಸಿಕ್ಕಿದೊಡನೆ ಹಝ್ರತ್ ಇಬ್ರಾಹೀಮ್(ಅ) ಕಅಬಾ ಭವನ ನಿರ್ಮಾಣಕ್ಕೆ ಕೈ ಹಾಕಿದರು. ಆ ನಡುವೆ ಅವರು ಈ ರೀತಿ ಪ್ರಾರ್ಥಿಸುತ್ತಿದ್ದರು, “ಓ ನಮ್ಮ ಪ್ರಭೂ! ನಮ್ಮಿಂದ ಈ ಸೇವೆಯನ್ನು …

Read More »

ನಮ್ರೂದನ ಅಗ್ನಿ ಕುಂಡಗಳೇ ತುಂಬಿರುವ ಜಗತ್ತಿನಲ್ಲಿ…

ಡಾ| ಅಬ್ದುಲ್ ವಾಸಿಅ ಸುದೀರ್ಘವಾದ ಪ್ರವಾದಿಗಳ ಪರಂಪರೆಯಲ್ಲಿ ಪ್ರವಾದಿ ಇಬ್ರಾಹೀಮ್(ಅ)ರು ಒಂದು ಅಪರೂಪದ ವಿದ್ಯಮಾನವಾಗಿದ್ದರು. ಗ್ರಂಥ ನೀಡಲ್ಪಟ್ಟ ಸಮೂಹವೆಲ್ಲವೂ ಇಬ್ರಾಹೀಮ್ ಸಂಪ್ರದಾಯವನ್ನು ಪ್ರತಿಪಾದಿಸುತ್ತಿದ್ದಾಗ ಮತ್ತು ಅದರ ಬಗ್ಗೆ ಪರಸ್ಪರ ಜಗಳವಾಡುತ್ತಿರುವಾಗ ಪವಿತ್ರ ಕುರ್‌ಆನ್ ಮಧ್ಯೆ ಪ್ರವೇಶಿಸಿತು: “ಓ ಗ್ರಂಥದವರೇ, ತೌರಾತ್ ಮತ್ತು ಇಂಜೀಲ್ ಇಬ್ರಾಹೀಮರ ಅನಂತರವೇ ಅವತೀರ್ಣ ಗೊಂಡಿವೆಯಷ್ಟೆ. ಇನ್ನೇನು ನಿಮಗೆ ಇಷ್ಟೂ ತಿಳಿಯುವುದಿಲ್ಲವೇ? ನೀವು ನಿಮಗೆ ತಿಳಿದಿರುವ ವಿಷಯದಲ್ಲಿ ಸಾಕಷ್ಟು ವಾದಗಳನ್ನು ಮಾಡಿಲಾಯಿತು. ಈಗ ನಿಮಗೆ ತಿಳಿದಿಲ್ಲದ ವಿಷಯಗಳಲ್ಲಿ …

Read More »

ಹಬ್ಬದ ಶಿಷ್ಟಾಚಾರ ಮತ್ತು ನಿಯಮಗಳು

@ ಇಲ್ಯಾಸ್ ಮೌಲವಿ ಈದ್‌ನ ದಿನಗಳಲ್ಲಿ ತಕ್ಬೀರ್ ಹೇಳಲು ನಿಗದಿತ ಸಮಯವಿದೆ. ಈದುಲ್ ಫಿತ್ರ್ ಗೆ ಚಂದ್ರದರ್ಶನವಾದ ಗಳಿಗೆಯಿಂದ ಇಮಾಮ್ ನಮಾಝ್‌ಗೆ ಬರುವವರೆಗೆ ಈದುಲ್ ಅಝ್ಹಾಕ್ಕೆ ಸಂಬಂಧಿಸಿ ದುಲ್‌ಹಜ್ಜ್ ಒಂದರಿಂದ ದುಲ್‌ಹಜ್ಜ್ 13ರ ಸೂರ್ಯಾಸ್ತಮಾನವದ ವರೆಗೂ ತಕ್ಬೀರ್ ಹೇಳಬಹುದು. ಬಲಿ ಪೆರ್ನಾಲ್‌ಗೆ ಕಡ್ಡಾಯ ನಮಾಝ್‌ನ ಬಳಿಕ ಅರಫಾ ದಿನ ಫಜ್ರ‍್ ನಿಂದ ಅಯ್ಯಾಮುತ್ತಶ್ರೀಕ್‌ನ ಕೊನೆಯ ದಿನದ ಅಸರ್ ನಮಾಝ್‌ನ ವರೆಗೂ ಹೇಳಬಹುದು. ಸ್ನಾನ, ಸುಗಂಧ, ದ್ರವ್ಯ ಮತ್ತು ವಸ್ತ್ರಧಾರಣೆ ಈದ್‌ನ …

Read More »

ಸಮಾನತೆಯ ಸಂಭ್ರಮವೇ ಈದ್

ಎ.ಕೆ.ಕುಕ್ಕಿಲ ಪ್ರತಿ ಮನುಷ್ಯರೊಳಗೂ ಸ್ವಾಭಿಮಾನ ಜಾಗೃತವಾಗಿರುತ್ತದೆ. ಇತರರಿಗಿಂತ ಕೀಳಾಗಲು ಯಾರೂ ಬಯಸುವುದಿಲ್ಲ. ಧರ್ಮ-ಚರ್ಮ,  ಭಾಷೆ, ಉದ್ಯೋಗದ ಕಾರಣಕ್ಕಾಗಿ ಕೀಳಾಗಿ ಗುರುತಿಸಿಕೊಳ್ಳುವುದಕ್ಕೆ ಯಾವ ಮನುಷ್ಯರೂ ಸಿದ್ಧರಿರುವುದಿಲ್ಲ. ಆದರೆ, ಆರ್ಥಿಕವಾಗಿ ಬಲಾಢ್ಯವಾಗಿರುವ ಒಂದು ಗುಂಪು ಆರ್ಥಿಕ ದುರ್ಬಲವಾಗಿರುವ ಗುಂಪಿನ ಸ್ವಾಭಿಮಾನಕ್ಕೆ ಧಕ್ಕೆ ತರುವ ಮತ್ತು ಅವರ  ಬಣ್ಣ, ಬಡತನದ ಕಾರಣಕ್ಕಾಗಿಯೇ ಶೋಷಿಸುವ ಪ್ರಕ್ರಿಯೆಗಳು ನಿರಂತರ ನಡೆಯ ತೊಡಗಿದಾಗ ನಿಧಾನಕ್ಕೆ ಸ್ವಾಭಿಮಾನದ ಪ್ರಜ್ಞೆ ಶಕ್ತಿಯನ್ನು ಕಳಕೊಳ್ಳುತ್ತಾ ದುರ್ಬಲವಾಗ ತೊಡಗುತ್ತದೆ. ಮತ್ತು ಬರಬರುತ್ತಾ ಕೀಳರಿಮೆಯನ್ನೇ ಸ್ವಾಭಿಮಾನದಂತೆ …

Read More »

ಸಂಬಂಧಗಳ ಶಿಥಿಲತೆ ನಾಶಕ್ಕೆ ಹೇತು – ಪ್ರವಾದಿ ಮುಹಮ್ಮದ್(ಸ )

ಪತಿ ಪತ್ನಿಯರ ಮಧ್ಯೆ ವೈಮನಸ್ಸು ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀಳುವುದು. ನೆರೆಹೊರೆಯವರ ನಡುವೆ ವೈಮನಸ್ಸು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ಸಂಘಟನೆಗಳ ಮಧ್ಯೆ ವೈಮನಸ್ಸು ದೇಶದ ಮೇಲೆ ಕೆಟ್ಟ ಪ್ರಭಾವ ಬೀಳುವುದು. ರಾಷ್ಟ್ರ ನಾಯಕರ ನಡುವೆ ವೈಮನಸ್ಸು ಯುದ್ಧಗಳಿಗೆ ಪ್ರೇರಣೆಯಾಗುವುದು. ಒಟ್ಟಿನಲ್ಲಿ ಸಂಬಂಧಗಳು ದುರ್ಬಲವಾದರೆ ಭೂಮಿಯ ವ್ಯವಸ್ಥೆಯೇ ಕೆಟ್ಟು ಹೋಗುವುದು. ನಮಾಝ್, ಉಪವಾಸ, ದಾನ ಧರ್ಮಗಳಿಗಿಂತ ಶ್ರೇಷ್ಠ ಪುಣ್ಯ ಕಾರ್ಯ ಪರಸ್ಪರ ಸಂಬಂಧಗಳನ್ನು ಸರಿಪಡಿಸುವುದಾಗಿದೆ ಎಂದು ಪ್ರವಾದಿ …

Read More »