Home / editor (page 21)

editor

ಕಾಲವೇ ಜೀವನ, ಕಾಲವೇ ಮರಣ

ಒಂದರ್ಥದಲ್ಲಿ ಯೋಚಿಸುವಾಗ ಸಮಯವೇ ಜೀವನ. ಆದ್ದರಿಂದಲೇ ಯಾರಾದರೂ ಮರಣಹೊಂದಿದವರ ಬಗ್ಗೆ ಮಾತಾಡುವಾಗ ‘ಏನೂ ಮಾಡಲಾಗದು, ಅವನ ಸಮಯ ಬಂದು ಬಿಟ್ಟಿತು’ ಅನ್ನುವುದು ಮತ್ತು ‘ಅವನ ಸಮಯ ಮುಗಿಯಿತು’ ಎಂದು ಮಾತಾಡುವುದು ಸಹಜ. ಹಾಗಾಗಿ ಸಮಯ ವ್ಯರ್ಥ ಮಾಡುವುದೆಂದರೆ ಜೀವನವನ್ನು ವ್ಯರ್ಥ ಮಾಡುವುದು ಎಂದೇ ಅರ್ಥ. ಸಮಯದ ಬಗ್ಗೆ ಪ್ರವಾದಿ ವಚನ ಒಂದಿದೆ. “ನೀವು ಪ್ರತಿಯೊಬ್ಬರೂ ಸಮಯದ ಬಗ್ಗೆ ಪ್ರಶ್ನಿಸಲ್ಪಡುವಿರಿ.” ಆದ್ದರಿಂದ ನಿರರ್ಥಕ ಕಾರ್ಯಗಳಿಂದ ನಾವು ಮುಕ್ತರಾಗಬೇಕು. ಇಲ್ಲಿ ಪ್ರತಿಯೊಂದು ಶ್ವಾಸ …

Read More »

ಇಸ್ಲಾಮ್ ಸ್ವೀಕಾರ ಮತ್ತು ವಿರೋಧ

✍️ಜಿ.ಕೆ. ಎಡನಾಟಕರ ಮತಾಂತರವು ಇಂದು ದೊಡ್ಡ ಚರ್ಚಾ ವಿಷಯವಾಗಿದೆ. ಮತಾಂತರ ಎಲ್ಲಾ ಸಮುದಾಯಗಳಲ್ಲೂ ಎಲ್ಲಾ ಕಾಲದಲ್ಲಿಯೂ ನಡೆದಿದೆ. ಇಂದೂ ನಡೆಯುತ್ತಲೇ ಇದೆ. ಅದರಲ್ಲಿ ಇಸ್ಲಾಮ್ ಸ್ವೀಕಾರವೆಂಬುದು ಎಲ್ಲಾ ಕಾಲದಲ್ಲೂ ಕಾವೇರಿದ ಚರ್ಚೆಗಳಿಗೆ ಕಾರಣವಾಗುತ್ತದೆ. ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಸ್ವೀಕರಿಸಿದರು. ತನ್ನ ಬದುಕಿನ ಅನುಭವವು ಅವರನ್ನು ಅದಕ್ಕೆ ಪ್ರೇರೇಪಿಸಿತ್ತು. ಆದರೆ ಡಾ| ಸತ್ಯನಾಥ್ ಡಾ| ಸಾದಿಕ್ ಆದಾಗ ಮತ್ತು …

Read More »

ಇಬ್ನು ತೈಮೀಯರಿಗೆ ಲಭಿಸಿದ ಆತ್ಮ ಸಂತೃಪ್ತಿ .

ಒಮ್ಮೆ ಇಬ್ನು ತೈಮೀಯ(ರ) ಹೀಗೆಂದರು: ಒಂದು ವೇಳೆ ಈ ಜೈಲಿನಲ್ಲಿ ನಾನು ಅನುಭವಿಸುವ ಮಾನಸಿಕ ನೆಮ್ಮದಿಯನ್ನು ನನ್ನನ್ನು ಜೈಲಿಗಟ್ಟಿಸಿದವರು ತಿಳಿದಿರುತ್ತಿದ್ದರೆ ನನ್ನ ಹೃದಯವನ್ನು ತೆರೆದು ಆ ಸಮಾಧಾನಕ್ಕಾಗಿ ಅವರು ಜಗಳವಾಡುತ್ತಿದ್ದರು. ಆತ್ಮೀಯರೇ… ಇದು ಬಹಳ ಅರ್ಥಗರ್ಭಿತವಾದ ಮಾತು. ಈ ಮಾತಿನಲ್ಲಿ ಎರಡು ವಿಷಯಗಳನ್ನು ನಮಗೆ ಅರ್ಥೈಸಬಹುದು. ಒಬ್ಬ ವಿಶ್ವಾಸಿಯ ಜೀವನದ ಸೌಭಾಗ್ಯ ಅವನ ವಿಶ್ವಾಸದ ಮೇಲೆ ಅಡಕವಾಗಿದೆ. ಅವನ ಅಚಲವಾದ ವಿಶ್ವಾಸ ಅವನಿಗೆ ಎಲ್ಲಾ ಪರಿಸ್ಥಿತಿಯಲ್ಲೂ ಸಮಾಧಾನವನ್ನು ನೀಡುತ್ತದೆ. ಕುರ್’ಆನ್ …

Read More »

ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?

ಪ್ರಶ್ನೆ: ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ವಿಷಯಗಳು ಚರ್ಚಿಸಲ್ಪಟ್ಟಿದೆ. ಕಾಬಾದಲ್ಲಿ  ಮೊದಲೇ ವಿಗ್ರಹಗಳಿದ್ದಾಗ ಮುಹಮ್ಮದರ ಅಜ್ಜ, ತಂದೆ ಅವರ ಧರ್ಮ ಯಾವುದು ಎಂಬ ಬಗ್ಗೆ ಕೆಲವರಲ್ಲಿ ಪ್ರಶ್ನೆ ಮೂಡಿದೆ. ಉತ್ತರಿಸಬಹುದೇ?  ಪ್ರಥಮ ಮಾನವ, ಪ್ರಥಮ ಪ್ರವಾದಿ ಆದಮ್(ಅ)ರ ಬಳಿಕ ಭೂಮುಖದ ಪ್ರಥಮ ಐತಿಹಾಸಿಕ ಜನಾಂಗ ನೂಹರ ಜನಾಂಗವಾಗಿತ್ತು. ಮಹಾ ಪುರುಷರನ್ನು, ಸಜ್ಜನರನ್ನು ದೇವರ ಸ್ಥಾನಕ್ಕೇರಿಸಿ ಪ್ರತಿಮೆಗಳನ್ನು ಸ್ಥಾಪಿಸಿದ ಮೊದಲ ಜನಾಂಗ ನೂಹರ ಜನಾಂಗ. ಸಮಾಜದಲ್ಲಿ ಅತಿಕ್ರಮವನ್ನು ಅನುಸರಿಸಿದ ಈ …

Read More »

ನೆದರ್ಲ್ಯಾಂಡ್ ನಲ್ಲಿ ಮತ್ತೆ ಕುರ್ ಆನ್ ಗೆ ಅವಮಾನ: ಟರ್ಕಿ ರಾಯಭಾರ ಕಚೇರಿಯ ಎದುರು ಕುರ್ ಆನ್ ಹರಿದು ಹಾಕಿದ್ರು

ನೆದರ್ಲ್ಯಾಂಡ್ ನಲ್ಲಿ ಕುರ್ ಆನ್ ನ ವಿರುದ್ಧ ಮತ್ತೆ ಪ್ರತಿಭಟನೆ ನಡೆದಿದ್ದು ತುರ್ಕಿ ರಾಯಭಾರ ಕಚೇರಿಯ ಮುಂದೆ ವ್ಯಕ್ತಿಯೋರ್ವ ಕುರಾನ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬಲಪಂಥೀಯ ಗುಂಪಿನ ನೇತೃತ್ವ ವಹಿಸಿರುವ ಎಡ್ವಿನ್ ಎಂಬಾತ ಈ ಕೃತ್ಯ ಎಸೆಗಿದ್ದು ಈತನಿಗೆ ಇಬ್ಬರು ಸಾತ್ ನೀಡಿದ್ದಾರೆ . ನೆದರ್ ಲ್ಯಾಂಡ್ ಸರಕಾರ ಇಂತಹ ಪ್ರತಿಭಟನೆಯನ್ನು ಖಂಡಿಸಿದೆಯಾದರೂ ಇದನ್ನು ತಡೆಯುವುದಕ್ಕೆ ಕಾನೂನಾತ್ಮಕವಾಗಿ ಯಾವುದೇ ಶಕ್ತಿ ತನಗೆ ಇಲ್ಲ ಎಂದು ಹೇಳಿದೆ. ಇದೇ …

Read More »

ವಿಶ್ವ ಕಪ್ ಮಹಿಳಾ ಫುಟ್ಬಾಲ್ : ಹಿಜಾಬ್ ಧಾರಣಿಯ ಆಟಕ್ಕೆ ಎಲ್ಲರೂ ಫಿದಾ

ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಮೊರಕೋದ ನೌಹಿಲ ಬೆಂಜಿನ ಜಾಗತಿಕವಾಗಿ ಸುದ್ದಿಗೀಡಾಗಿದ್ದಾರೆ. ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿಯೇ ಮೊಟ್ಟ ಮೊದಲ ಬಾರಿ ಹಿಜಾಬ್ ಧರಿಸಿ ಆಟವಾಡಿದ ಹೆಗ್ಗಳಿಕೆ ಇವರ ಪಾಲಾಗಿದ್ದು ಇವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಜರ್ಮನಿಯ ವಿರುದ್ಧ 6- 0 ಗೋಲುಗಳಿಂದ ಸೋಲನ್ನಪ್ಪಿದ ಮೊದಲ ಪಂದ್ಯದಲ್ಲಿ ನೌಹೀಲಾ ಆಡಿರಲಿಲ್ಲ. ಆದರೆ ದಕ್ಷಿಣ ಕೊರಿಯಾದ ವಿರುದ್ಧ ಆಡಲಾದ ಎರಡನೇ ಪಂದ್ಯದಲ್ಲಿ ನೌಹೀಲಾ ಪಂದ್ಯದ ಉದ್ದಕ್ಕೂ ಆಡಿದ್ದಾರೆ ಮತ್ತು ಗೋಲು …

Read More »

ಏನಿದು ತಲಾಕ್‌? ಒಂದು ವಿಶ್ಲೇಷಣೆ..

ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ. ➡️ ಘಟನೆ 1. ಆಕೆಗೆ ಮದುವೆ ಆಗಿ ನಾಲ್ಕು ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ. ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ ಚಾರಿತ್ರ್ಯದಿಂದಾಗಿ ಆಕೆ ರೋಸಿ …

Read More »

ನಿಖಾ ಹಲಾಲ ಸುತ್ತಲಿನ ವಿಕೃತ ವಿಶ್ಲೇಷಣೆ ಮತ್ತು ವಾಸ್ತವ..

✍️ಮುಷ್ತಾಕ್ ಹೆನ್ನಾಬೈಲ್ ನಿಖಾ ಹಲಾಲ ಎಂಬುದು ಮದುವೆಯಾದ ಸ್ತ್ರೀಯರ ಶೋಷಣೆ ತಪ್ಪಿಸಲು ಇರುವ ಅನುಗ್ರಹ ಸ್ವರೂಪದ ಒಂದು ದೇವ ನಿಯಮ. ಸ್ತ್ರೀಗೆ ಇಸ್ಲಾಮ್, ಮದುವೆ ಮತ್ತು ದಾಂಪತ್ಯದ ವಿಚಾರಗಳಲ್ಲಿ ಪುರುಷನಿಗಿಂತ ಹೆಚ್ಚಿನ ಅಧಿಕಾರ ಮತ್ತು ಸವಲತ್ತು ನೀಡಿದೆ. ಜಗತ್ತಿನ ಎಲ್ಲ ಸಮುದಾಯಗಳಲ್ಲಿ ವರದಕ್ಷಿಣೆ ನೀಡಿ ಹೆಣ್ಣು ಮಕ್ಕಳು ಮದುವೆಯಾಗಬೇಕು. ಆದರೆ ಇಸ್ಲಾಮಿನಲ್ಲಿ ಮಾತ್ರ ಮಹಿಳೆಯರು ವಧುಧನ ಪಡೆದು ಮದುವೆಯಾಗುತ್ತಾರೆ. ಮದುವೆಯ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸಂದರ್ಭದಲ್ಲಿ ಇಬ್ಬರು ಸಮಾಜ ಸಾಕ್ಷಿಗಳ …

Read More »

ಯುದ್ಧ ವಿರೋಧಿ ಪ್ರವಾದಿ(ಸ); ಪ್ರತೀಕಾರವೆಸಗುವೆ ಎಂದ ದಂಡನಾಯಕನನ್ನೇ ಬದಲಾಯಿಸಿದ ಪ್ರವಾದಿ

✍️ ಶೈಖ್ ಮುಹಮ್ಮದ್ ಕಾರಕ್ಕುನ್ನು ಮಕ್ಕಾವನ್ನು ವಿಮೋಚನೆಗೊಳಿಸಲು ಹೊರಟ ಹತ್ತು ಸಾವಿರಕ್ಕೂ ಅಧಿಕ ಸೈನಿಕರನ್ನು ಪ್ರವಾದಿ(ಸ)ರು ನಾಲ್ಕು ಗುಂಪುಗಳಾಗಿ ವಿಂಗಡಿಸಿದರು. ಅವುಗಳಿಗೆ ನೇತೃತ್ವ ನೀಡಿದ ಝುಬೈರ್ ಬಿನ್ ಅವ್ವಾಮ್, ಖಾಲಿದ್ ಬಿನ್ ವಲೀದ್, ಅಬೂ ಉಬೈದ, ಸಅದ್ ಇಬ್ನು ಉಬಾದರೊಂದಿಗೆ ಯುದ್ಧ ಮಾಡಬಾರದೆಂದು ವಿಶೇಷವಾಗಿ ಸೂಚನೆ ನೀಡಿದರು. ಆದರೆ ಸಅದ್ ಇಬ್ನು ಉಬಾದ ಇದನ್ನು ಪರಿಗಣಿಸದೆ ಅತ್ಯಂತ ಆವೇಶದಿಂದ ಹೇಳಿದರು, “ಇಂದು ಕಅಬಾದ ಪಾವಿತ್ರ್ಯ ಪರಿಗಣಿಸಲ್ಪಡುವುದಿಲ್ಲ.” ವಿಷಯವನ್ನು ತಿಳಿದ ಪ್ರವಾದಿಯವರು(ಸ) …

Read More »

ನ್ಯಾಯಸಮ್ಮತ ಶರೀಅತ್; ದುರುದ್ಧೇಶಪೂರಿತ ಸಿವಿಲ್ ಕೋಡ್

✍️ ಎ.ಆರ್ ಸೂಕ್ಮವಾಗಿ ಕಲಿತು, ನಿಷ್ಪಕ್ಷವಾಗಿ ಮತ್ತು ಸತ್ಯಸಂಧವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರತಿಯೊಬ್ಬರಿಗೂ ಇಸ್ಲಾಮೀ ಶರೀಅತ್‌ನ  ಕೌಟುಂಬಿಕ ಕಾನೂನುಗಳು ಅತ್ಯಂತ ಸರಳ ಮತ್ತು ನ್ಯಾಯಪರ ಹಾಗೂ ನೆಮ್ಮದಿದಾಯಕ ಕುಟುಂಬ ಜೀವನವನ್ನು ಖಾತ್ರಿ ಪಡಿಸುತ್ತದೆಂದು ತಿಳಿದು ಕೊಳ್ಳಲು ಕಷ್ಟವೇನಿಲ್ಲ. ಇಸ್ಲಾಮಿನಲ್ಲಿ ವಿವಾಹವೆಂದರೆ, ಪ್ರಾಯಪೂರ್ತಿಯಾದ ಗಂಡೂ ಹೆಣ್ಣೂ ಪರಸ್ಪರ ಅರಿತು, ಇಷ್ಟಪಟ್ಟು, ತಿಳಿದುಕೊಂಡು ಇಬ್ಬರು ಸಾಕ್ಷಿಗಳ ಮುಖಾಂತರ ನಿರ್ವಹಿಸಲ್ಪಡುವ ಅತ್ಯಂತ ಸರಳ ಕರ್ಮವಾಗಿದೆ. ಹೆಣ್ಣಿನ ಪೋಷಕರಾಗಿ ಅವಳ ತಂದೆಯೋ ಸಹೋದರರೋ, ಅವರಿಲ್ಲದಿದ್ದರೆ ಪಿತೃ …

Read More »