ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಜನರು ಪರಸ್ಪರರಲ್ಲಿ ಪ್ರಶ್ನಿಸುತ್ತಲೇ ಇರುವರು. ಎಲ್ಲಿಯವರೆಗೆಂದರೆ – ಇದು ಅಲ್ಲಾಹನು ಸೃಷ್ಟಿಸಿದ ಸೃಷ್ಟಿಯಾಗಿದೆ. ಆದರೆ ಅಲ್ಲಾಹನನ್ನು ಸೃಷ್ಟಿಸಿದವರು ಯಾರು? ಎಂದು ಅವರು ಕೇಳುವರು. ಅವರು ಹೀಗೆ ಹೇಳತೊಡಗಿದಾಗ ಹೇಳಿರಿ – ಅಲ್ಲಾಹನು ಏಕೈಕನಾಗಿದ್ದಾನೆ. ಅಲ್ಲಾಹನು ನಿರಪೇಕ್ಷನಾಗಿದ್ದಾನೆ. ಅವನು ಯಾರ ತಂದೆಯೂ ಅಲ್ಲ, ಪುತ್ರನೂ ಅಲ್ಲ ಮತ್ತು ಅವನಿಗೆ ಸರಿಸಮಾನರಾದವರು ಯಾರೂ ಇಲ್ಲ. ಅನಂತರ ಮೂರು ಸಲ ತನ್ನ ಎಡಭಾಗಕ್ಕೆ ಉಗುಳಲಿ ಮತ್ತು ಶಪಿತ ಶೈತಾನನಿಂದ ಅಲ್ಲಾಹನ ಅಭಯ ಯಾಚಿಸಲಿ. (ಅಬೂ ದಾವೂದ್)
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …