Home / ಸಾಮಾಜಿಕ ಭದ್ರತೆ

ಸಾಮಾಜಿಕ ಭದ್ರತೆ

ಜೀವನದ ಅಗತ್ಯ ವಸ್ತುಗಳಿಂದ ವಂಚಿತರಾದವರಿಗೆ ಸಹಾಯ ಮಾಡಬೇಕಾದುದು ಮುಸ್ಲಿಮರ ವೈಯಕ್ತಿಕ ಹಾಗೂ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಕಡ್ಡಾಯ ವಿಧಿಗಳಾದ ಝಕಾತ್ ಮತ್ತು ಇತರ ಐಚ್ಛಿಕ ದಾನಗಳನ್ನು ನೀಡಲು ಪ್ರೇರೇಪಿಸುವ ಮೂಲಕ ನಿರ್ಗತಿಕರಿಗೆ ಹಾಗೂ ಬಡವರಿಗೆ ಸಹಾಯವನ್ನು ಒದಗಿಸಲಾಗುತ್ತದೆ. ಜನರ ಬಳಿ ಇರುವ ಸಿರಿ ಸಂಪತ್ತುಗಳ ನೈಜ ಮಾಲಿಕ ಅಲ್ಲಾಹನಾಗಿದ್ದು, ಜನರು ಕೇವಲ ಅವುಗಳ ಮೇಲ್ವಿಚಾರಕರು ಮಾತ್ರವೆಂದು ಕುರ್‍ಆನ್ ತಿಳಿಸುತ್ತದೆ. ಜನರ ಬಳಿ ಇರುವ ಸಂಪತ್ತು ಅಲ್ಲಾಹನ ವಿಶ್ವಸ್ಥ ನಿಧಿಯಾಗಿವೆ. ಆದುದರಿಂದ ಅಲ್ಲಾಹನ ಸಂಪತ್ತನ್ನು ಅಲ್ಲಾಹನು ಇಚ್ಛಿಸುವ ರೀತಿಯಲ್ಲಿ ಖರ್ಚು ಮಾಡಬೇಕಾಗಿರುವುದು ಜನರ ಕರ್ತವ್ಯವಾಗಿದೆ.

ಇಸ್ಲಾಮ್ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಇಸ್ಲಾವಿೂ ರಾಷ್ಟ್ರದ ಪ್ರಜೆಗಳು ದುರ್ಬಲರಿಗೆ, ದೀನ ದಲಿತರಿಗೆ ಸಹಾಯ ಹಸ್ತವನ್ನು ಚಾಚಬೇಕು. ಈ ರೀತಿ ಸಹಾಯ ಮಾಡುವವರನ್ನು ಕುರ್‍ಆನ್ ಮುಕ್ತ ಕಂಠದಿಂದ ಶ್ಲಾಘಿಸುತ್ತದೆ.
“ನಾವು ದೇವ ಮಾರ್ಗದಲ್ಲಿ ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ. ‘ನಿಮ್ಮ ಆವಶ್ಯಕತೆಗಿಂತ ಮಿಕ್ಕಿರುವುದನ್ನು’ ಎಂದು ಹೇಳಿರಿ. ನೀವು ಇಹಪರಗಳೆರಡರ ಬಗ್ಗೆಯೂ ಚಿಂತೆಯುಳ್ಳವರಾಗಬಹುದೆಂದು ನಿರೀಕ್ಷಿಸಿ, ಅಲ್ಲಾಹ್ ನಿಮಗೆ ಈ ರೀತಿಯಲ್ಲಿ ಆದೇಶಗಳನ್ನು ಸುಸ್ಪಷ್ಟವಾಗಿ ವಿವರಿಸುತ್ತಾನೆ.” (ಕುರ್‍ಆನ್, 2:219)

“ನೀವು ನಿಮ್ಮ ಮುಖಗಳನ್ನು ಪೂರ್ವ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿ ಕೊಳ್ಳುವುದು ಧರ್ಮ ಶೀಲತೆಯಲ್ಲ. ನಿಜವಾಗಿ ಒಬ್ಬನು ಅಲ್ಲಾಹನನ್ನೂ ನಿರ್ಣಾಯಕ ದಿನವನ್ನೂ ದೇವಚರರನ್ನೂ ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನೂ ಅವನ ಸಂದೇಶವಾಹಕರನ್ನೂ ಹೃತ್ಪೂರ್ವಕ ಒಪ್ಪಿಕೊಳ್ಳುವುದೂ ಅಲ್ಲಾಹನ ಸಂಪ್ರೀತಿಗಾಗಿ ತನ್ನ ಮನಮೆಚ್ಚುಗೆಯ ಸಂಪತ್ತನ್ನು ಬಂಧುಗಳಿಗೂ ಅನಾಥರಿಗೂ ನಿರ್ಗತಿಕರಿಗೂ ಪ್ರಯಾಣಿಕರಿಗೂ ಸಹಾಯಾರ್ಥಿಗಳಿಗೂ ದಾಸ್ಯ ವಿಮೋಚನೆಗಾಗಿಯೂ ವ್ಯಯಿಸುವುದೂ ನಮಾಝನ್ನು ಸಂಸ್ಥಾಪಿಸುವುದೂ ಝಕಾತನ್ನು(ಕಡ್ಡಾಯ ದಾನವನ್ನು) ನೀಡುವುದೂ ವಾಗ್ದಾನ ಮಾಡಿದರೆ ಪೂರೈಸುವುದೂ ಕಷ್ಟ ಕಾರ್ಪಣ್ಯಗಳಲ್ಲಿಯೂ ಸತ್ಯಾಸತ್ಯಗಳ ಸಮರವಾಗುತ್ತಿರುವಾಗಲೂ ಸಹನೆಯಿಂದಿರುವುದೂ ಧರ್ಮಶೀಲತೆಯಾಗಿರುತ್ತದೆ. ಇವರೇ ಸತ್ಯಸಂಧರು ಮತ್ತು ಇವರೇ ಧರ್ಮನಿಷ್ಠರು.” (ಕುರ್‍ಆನ್ 2:177)

ಇಸ್ಲಾವಿೂ ಕಾನೂನಿನನ್ವಯ, ಕಷ್ಟ ಕಾರ್ಪಣ್ಯದಲ್ಲಿರುವವರಿಗೆ ಹಾಗೂ ನಿರ್ಗತಿಕರಿಗೆ ಅವರು ಯಾವುದೇ ದೇಶದವರಾಗಿದ್ದರೂ ಮುಸ್ಲಿಮರ ಆಸ್ತಿ ಮತ್ತು ಸಂಪತ್ತಿನಲ್ಲಿ ಹಕ್ಕಿರುತ್ತದೆ. ಅಲ್ ಮರ್ವಾದಿ(991-1೦31) ತಮ್ಮ ‘ಅಲ್ ಅಹ್‍ಕಾಮುಲ್ ಸುಲ್ತಾನಿಯಾ’ ಎಂಬ ಪುಸ್ತಕದಲ್ಲಿ ಜನರಿಗೆ ಜೀವನೋಪಾಯ ಒದಗಿಸುವುದು ಮತ್ತು ನಿರ್ಗತಿಕರಿಗೆ ಧನ ಸಹಾಯ ಮಾಡುವುದು ಇಸ್ಲಾವಿೂ ಸರ್ಕಾರದ ಆದ್ಯ ಕರ್ತವ್ಯ ಎಂದಿದ್ದಾರೆ.

ಪ್ರವಾದಿ ಮುಹಮ್ಮದ್‍ರು(ಸ) ‘ರಕ್ಷಕರಿಲ್ಲದ ಜನರಿಗೆ ಸರ್ಕಾರವೇ ರಕ್ಷಕ’ ಎಂದು ಹೇಳಿದ್ದಾರೆ. ಇನ್ನೊಂದು ವಚನದಲ್ಲಿ ‘ಮುಸ್ಲಿಮರಿಗೆ ಅವರಿಗಿಂತ ನಾನೇ ಸವಿೂಪವಾಗಿದ್ದೇನೆ, ಯಾವನೇ ಮುಸ್ಲಿಮನು ಸಾಲ ಬಾಕಿ ಉಳಿಸಿಕೊಂಡು ನಿಧನ ಹೊಂದಿದರೆ, ಆತನ ಸಾಲ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ. ಸೊತ್ತು ವಿತ್ತವನ್ನು ಹೊಂದಿರುವವರು ನಿಧನ ಹೊಂದಿದರೆ ಅದು ಆತನ ವಾರಸುದಾರರಿಗೆ ಹೋಗುವುದು’ ಎಂದಿರುವರು.

ಹ. ಅಬೂಬಕರ್(ರ) ಖಿಲಾಫತ್‍ನಲ್ಲಿ ‘ಹಿರಾ’ ವಶಪಡಿಸಿಕೊಂಡ ಸಂದರ್ಭದಲ್ಲಿ ಹ.ಖಾಲಿದ್ ಬಿನ್ ವಲೀದ್(ರ) ಈ ರೀತಿ ಕರಾರು ಮಾಡಿಕೊಂಡಿದ್ದರು:
‘ವ್ಯಕ್ತಿ ವೃದ್ಧಾಪ್ಯದಿಂದ ದುಡಿಯಲು ಅನರ್ಹನಾಗಿದ್ದರೆ ಅಥವಾ ಯಾವುದಾದರೂ ತೊಂದರೆಯ ಕಾರಣದಿಂದ ಬಡತನದ ಸುಳಿಗೆ ಸಿಲುಕಿದರೆ ಆತನ ಜಿಝಿಯಾವನ್ನು ಮನ್ನಾ ಮಾಡಲಾಗುವುದು ಮತ್ತು ಆತನ ಮಕ್ಕಳೂ ಒಳಗೊಂಡಂತೆ ಕುಟುಂಬದ ನಿರ್ವಹಣಾ ವೆಚ್ಚವನ್ನು ಸರಕಾರದ ಬೊಕ್ಕಸದಿಂದ ನೀಡಲಾಗುವುದು.

SHARE THIS POST VIA