Home / ಪ್ರವಾದಿ ವಚನಗಳು / ಪರಲೋಕ ವಿಶ್ವಾಸ

ಪರಲೋಕ ವಿಶ್ವಾಸ

ಪರಲೋಕದ ಮೇಲೆ ವಿಶ್ವಾಸವಿರಿಸುವುದೆಂದರೆ, ಮಾನವನು ಈ ಕೆಳಗಿನ ವಾಸ್ತವಿಕತೆ ಗಳನ್ನು ನಂಬುವುದಾಗಿದೆ- ಒಂದು ದಿನ ಬರಲಿದೆ, ಅಂದು ಎಲ್ಲ ಮಾನವರ ಜೀವನದ ಕಡತಗಳ ವಿಚಾರಣೆ ನಡೆಯುವುದು. ಯಾರ ಕರ್ಮಗಳು ತೃಪ್ತಿಕರವಾಗಿರುವುವೋ ಅವರು ಪುರಸ್ಕಾರ ಪಡೆಯುವರು. ಯಾರ ಕರ್ಮಗಳು ಹಾಳಾಗಿರುವುವೋ ಅವರು ಶಿಕ್ಷೆ ಪಡೆಯುವರು. ಶಿಕ್ಷೆಯೂ ಅನಂತ, ಪುರಸ್ಕಾರವೂ ಶಾಶ್ವತ ಹಾಗೂ ಸುಖ-ಸಂತೋಷವೂ ಶಾಶ್ವತ, ಕಷ್ಟಕಾರ್ಪಣ್ಯವೂ ಶಾಶ್ವತ. ಪರಲೋಕದ ಕುರಿತು ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡ ಲಾಗಿದೆ. ಅದರಿಂದ ಪರಲೋಕದ ಕುರಿತು ಸ್ಪಷ್ಟವಾಗುತ್ತದೆ-

ಇಬ್ನು ಉಮರ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಯಾರಾದರೂ ಈ ಲೋಕದಲ್ಲಿದ್ದುಕೊಂಡೇ ನಿರ್ಣಾಯಕ ದಿನವನ್ನು ಕಣ್ಣಾರೆ ನೋಡ ಬಯಸುವುದಾದರೆ ‘ಇದಶ್ಶಂಸು ಕುವ್ವಿರತ್, ಇದಸ್ಸಮಾಉಂ ಫತರತ್ ಮತ್ತು ಇದಸ್ಸಮಾಉಂಶಕ್ಕತ್’ ಎಂಬ ಮೂರು ಸೂರಃಗಳನ್ನು ಪಠಿಸಲಿ. (ಈ ಮೂರು ಅಧ್ಯಾಯಗಳಲ್ಲಿ ನಿರ್ಣಾಯಕ ದಿನದ ಚಿತ್ರಣವನ್ನು ಅತ್ಯಂತ ಪ್ರಭಾವಕಾರಿ ಶೈಲಿಯಲ್ಲಿ ಮಾಡಲಾಗಿದೆ) [ತಿರ್ಮಿದಿ]

ಅಬೂ ಹುರೈರಾ(ರ) ಹೇಳುತ್ತಾರೆ: ಪ್ರವಾದಿಯವರು(ಸ) ‘ಯೌಮಇದಿನ್ ತುಹದ್ದಿಸು ಅಖ್ಬಾರಹಾ’ ಅಂದು ಭೂಮಿಯು ತನ್ನ ವೃತ್ತಾಂತವನ್ನು ವಿವರಿಸುವುದು ಸೂರಃ ಝಿಲ್‍ಝಾಲ್ ಎಂಬ ವಚನವನ್ನು ಪಠಿಸಿದರು. ತರುವಾಯ, ಅದರ ಅರ್ಥವೇನೆಂದು ಬಲ್ಲಿರಾ? ಎಂದು ಕೇಳಿದರು. ಜನರು ಹೇಳಿದರು- ಅಲ್ಲಾಹ್ ಮತ್ತು ಆತನ ಸಂದೇಶವಾಹಕರೇ ಚೆನ್ನಾಗಿಬಲ್ಲರು. ಆಗ ಪ್ರವಾದಿ(ಸ) ಹೇಳಿದರು- ನಿರ್ಣಾಯಕ ದಿನದಂದು ಭೂಮಿಯು, ಈ ನಿನ್ನ ದಾಸ ಮತ್ತು ದಾಸಿ ಇಂತಹ ದಿನ ಮತ್ತು ಇಂತಹ ಘಳಿಗೆಯಲ್ಲಿ ನನ್ನ ಬೆನ್ನ ಮೇಲೆ ಇಂತಿಂತಿಹ ಕೆಟ್ಟ ಅಥವಾ ಉತ್ತಮ ಕೆಲಸ ಮಾಡಿದನು(ಳು) ಎಂದು ಸಾಕ್ಷಿ ನುಡಿಯುವುದು. [ತಿರ್ಮಿದಿ]

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …