Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಪ್ರವಾದಿ ಮುಹಮ್ಮದ್(ಸ) ಅತ್ಯಂತ ಶ್ರೇಷ್ಠ ವ್ಯಕ್ತಿ – ಅಲ್ಫೋನ್ಸ್ ಡಿ ಲಾ ಮಾರ್ಟಿನ್

ಪ್ರವಾದಿ ಮುಹಮ್ಮದ್(ಸ) ಅತ್ಯಂತ ಶ್ರೇಷ್ಠ ವ್ಯಕ್ತಿ – ಅಲ್ಫೋನ್ಸ್ ಡಿ ಲಾ ಮಾರ್ಟಿನ್

  • ಅಲ್ಫೋನ್ಸ್ ಡಿ ಲಾ ಮಾರ್ಟಿನ್
    ಫ್ರೆಂಚ್ ಬರಹಗಾರ, ಕವಿ ಮತ್ತು ರಾಜನೀತಿ ತಜ್ಞ

ಉದ್ದೇಶದ ಶ್ರೇಷ್ಠತೆ, ಅತ್ಯಲ್ಪ ಅನುಕೂಲತೆಗಳು ಮತ್ತು ಆಶ್ಚರ್ಯಕರವಾದ ಫಲಿತಾಂಶ ಈ ಮೂರು ವಿಷಯಗಳು ಒಂದು ವೇಳೆ ಒಬ್ಬ ಮನುಷ್ಯನ ಮೇಧಾವಿತನದ ಮಾನದಂಡವಾಗಿದ್ದರೆ, ಈ ನಿಟ್ಟಿನಲ್ಲಿ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಮುಹಮ್ಮದ್ (ಸ) ರೊಂದಿಗೆ ತುಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಪ್ರಸಿದ್ಧ ವ್ಯಕ್ತಿಗಳಿಗೆ ಶಸ್ತ್ರಾಸ್ತ್ರಗಳು, ಕಾನೂನುಗಳು ಮತ್ತು ಸಾಮ್ರಾಜ್ಯಗಳನ್ನು ಮಾತ್ರ ರಚಿಸಲು ಸಾಧ್ಯವಾಯಿತು. ಅವರ ಕಣ್ಣ ಮುಂದೆಯೇ ಕುಸಿದುಬಿದ್ದಂತಹ ಭೌತಿಕ ಅಧಿಕಾರಗಳನ್ನು ಸ್ಥಾಪಿಸಲು ಮಾತ್ರ ಅವರು ಸಮರ್ಥರಾಗಿದ್ದರು. ಆದರೆ ಈ ವ್ಯಕ್ತಿ ಅಂದು ತನ್ನ ಪ್ರಭಾವವನ್ನು ಬೀರಿದ್ದು ಕೇವಲ ಸೈನ್ಯಗಳು, ಶಾಸನಗಳು, ಸಾಮ್ರಾಜ್ಯಗಳು, ಜನಸಮೂಹಗಳು ಮತ್ತು ರಾಜ ವಂಶಗಳ ಮೇಲೆ ಮಾತ್ರವಲ್ಲ ಬದಲಾಗಿ ಅಂದು ಜಗತ್ತಿನ ಮೂರನೇ ಒಂದು ಭಾಗದ ಲಕ್ಷಾಂತರ ಮಂದಿ ಮನುಷ್ಯರನ್ನು ಅವರು ಪ್ರಭಾವಿತಗೊಳಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವರು, ಜನರ ಪೂಜಾಸ್ಥಳಗಳನ್ನು, ಆರಾಧ್ಯರನ್ನು, ಧರ್ಮಗಳನ್ನು, ವಿಚಾರಗಳನ್ನು, ನಂಬಿಕೆಗಳನ್ನು ಮತ್ತು ಆತ್ಮಗಳನ್ನೇ ಅಲುಗಾಡಿಸಿಬಿಟ್ಟರು.

(Lamartine,Histoire DE La Turquie)

 

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …