Home / ವೀಡಿಯೊ / ಹಜ್ಜ್ ಯಾತ್ರೆ: ಮಕ್ಕಾಗೆ ವಿದಾಯ ಹೇಳಿದ ಭಾರತೀಯರು

ಹಜ್ಜ್ ಯಾತ್ರೆ: ಮಕ್ಕಾಗೆ ವಿದಾಯ ಹೇಳಿದ ಭಾರತೀಯರು

ಹಜ್ ನಿರ್ವಹಿಸುವುದಕ್ಕಾಗಿ ಮಕ್ಕಾಕ್ಕೆ ತೆರಳಿರುವ ಎಲ್ಲ ಭಾರತೀಯರೂ ಇದೀಗ ಮಕ್ಕಾಕ್ಕೆ ವಿದಾಯ ಕೋರಿದ್ದಾರೆ ಎಂದು ವರದಿಯಾಗಿದೆ.

ಬಹುತೇಕ ಎಲ್ಲಾ ಭಾರತೀಯರೂ ಭಾರತಕ್ಕೆ ಮರಳಿದ್ದಾರೆ. ಕೆಲವರು ಮದೀನಾ ಸಂದರ್ಶನಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿಂದಲೇ ಭಾರತಕ್ಕೆ ಮರಳಲ್ಲಿದ್ದಾರೆ. ಆದರೆ ಹಜ್ ಗಾಗಿ ತೆರಳಿರುವ ಯಾವ ಭಾರತೀಯರೂ ಈಗ ಮಕ್ಕಾದಲ್ಲಿ ಉಳಿದುಕೊಂಡಿಲ್ಲ ಎಂದು ವರದಿಯಾಗಿದೆ.

ಹಜ್ ಮುಗಿದ ತಕ್ಷಣ ಜೂನ್ 22 ರಿಂದಲೇ ಜಿದ್ದಾದ ಮೂಲಕ ಹಾಜಿಗಳು ಭಾರತಕ್ಕೆ ಮರಳಲು ಪ್ರಾರಂಭಿಸಿದ್ದರು. ಜುಲೈ ಒಂದರಿಂದ ಮದೀನಾದ ಮೂಲಕವೂ ಹಾಜಿಗಳು ಭಾರತಕ್ಕೆ ಮರಳಲು ಪ್ರಾರಂಭಿಸಿದರು. ಈವರೆಗೆ ಒಂದು ಲಕ್ಷಕ್ಕಿಂತಲೂ ಅಧಿಕ ಹಾಜಿಗಳು ಭಾರತಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ.

ಜಿದ್ದಾದ ಮೂಲಕ ಭಾರತಕ್ಕೆ ಮರಳಬೇಕಿದ್ದ ಹಾಜಿಗಳ ಕೊನೆಯ ತಂಡ ಜುಲೈ 13ರಂದು ಭಾರತಕ್ಕೆ ತಲುಪಿದೆ. ಜುಲೈ 13 ರಂದು 160 ಮಂದಿ ಹಾಜಿಗಳಿದ್ದ ಕೊನೆಯ ಭಾರತೀಯ ವಿಮಾನವು ಗಯಾಕೆ ತಲುಪಿದೆ. ಇನ್ನು ಮದೀನದಲ್ಲಿರುವ ಕೆಲವೇ ಕೆಲವು ಹಾಜಿಗಳು ಭಾರತಕ್ಕೆ ಮರಳ ಬೇಕಾಗಿದೆ.

SHARE THIS POST VIA

About editor