Home / ಲೇಖನಗಳು / ನೆರೆಯವರೊಂದಿಗೆ ವರ್ತನೆ ಪ್ರವಾದಿ ಮುಹಮ್ಮದ್ (ಸ) ರ ಮಾತಿನಲ್ಲಿ…

ನೆರೆಯವರೊಂದಿಗೆ ವರ್ತನೆ ಪ್ರವಾದಿ ಮುಹಮ್ಮದ್ (ಸ) ರ ಮಾತಿನಲ್ಲಿ…

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”,

“ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.” – ಪ್ರವಾದಿ ಮುಹಮ್ಮದ್(ಸ)

“ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ ಬಡವರಿಗೆ ನೋವಾಗಬಾರದು.” – ಪ್ರವಾದಿ ಮುಹಮ್ಮದ್(ಸ)

ಒಮ್ಮೆ ಯಾರೋ ಪ್ರವಾದಿ ಮುಹಮ್ಮದ್(ಸ)ರೊಡನೆ ಹೇಳಿದರು: “ಒಬ್ಬ ಹೆಂಗಸು ಬಹಳಷ್ಟು ನಮಾಜ್ (ಆರಾಧನೆ) ಮಾಡುತ್ತಾಳೆ, ಆಗಾಗ ಉಪವಾಸ ವ್ರತ ಆಚರಿಸುತ್ತಾಳೆ, ಸಾಕಷ್ಟು ದಾನ ಧರ್ಮ ಮಾಡುತ್ತಾಳೆ, ಆದರೆ ಅವಳ ಜಗಳಗಂಟಿ ಸ್ವಭಾವದಿಂದಾಗಿ ಅವಳ ನೆರೆಯವರೆಲ್ಲಾ ಬೇಸತ್ತಿದ್ದಾರೆ.” ಆಗ ಪ್ರವಾದಿ(ಸ) ಹೇಳಿದರು: “ಆಕೆ ನರಕಕ್ಕೆ ಯೋಗ್ಯಳು.” ಇನ್ನೊಬ್ಬರು “ಇನ್ನೊಬ್ಬ ಹೆಂಗಸಿದ್ದಾಳೆ. ಅವಳಲ್ಲಿ ಪ್ರಸ್ತುತ ವೈಶಿಷ್ಟೃಗಳೇನೂ ಇಲ್ಲ. ಆದರೆ ಅವಳು ತನ್ನ ನೆರೆಯವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.” ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಆಕೆ ಸ್ವರ್ಗ ಪಡೆಯುವಳು.”

ಇನ್ನೊಂದು ಸಂದರ್ಭದಲ್ಲಿ ಪ್ರವಾದಿ(ಸ) ಹೇಳಿದರು: “ನಿನ್ನ ಅಕ್ಕಪಕ್ಕದವರು ನಿನ್ನನ್ನು ಒಳ್ಳೆಯವನೆಂದು ಭಾವಿಸುತ್ತಾರೆಂದಾದರೆ ನೀನು ನಿಜಕ್ಕೂ ಒಳ್ಳೆಯವನು, ಅವರ ದೃಷ್ಟಿಯಲ್ಲಿ ನೀನು ಕೆಟ್ಟವನಾಗಿದ್ದರೆ ನೀನು ನಿಜಕ್ಕೂ ಕೆಟ್ಟವನು.”

SHARE THIS POST VIA

About editor

Check Also

ಅಂಥ ಅಬೂಲಹಬನೇ ಪ್ರವಾದಿಗೆ(ಸ) ಆಶ್ರಯ ನೀಡಿದ್ದ…

✍️ ಏ.ಕೆ. ಕುಕ್ಕಿಲ 1.ಅಬೂಲಹಬ್ 2.ಉತ್ಬಾ ಬಿನ್ ರಬೀಅ 3.ಮುತ್‌ಇಮ್ ಬಿನ್ ಅದಿಯ್ಯ್ 4.ಸುಹೈಲ್ ಪ್ರವಾದಿ ಮುಹಮ್ಮದ್(ಸ) ಒಂದು ಕಡೆಯಾದರೆ, …