Home / ಪ್ರವಾದಿ ವಚನಗಳು

ಪ್ರವಾದಿ ವಚನಗಳು

ಅಧಿಕಾರ ಮತ್ತು ವಿಚಾರಣೆ

ಇಬ್ನು ಉಮರ್(ರ) ಹೇಳುತ್ತಾರೆ – ಪ್ರವಾದಿ(ಸ) ಹೇಳಿದರು: “ಅಲ್ಲಾಹನು ಒಬ್ಬ ದಾಸನಿಗೆ ಕೆಲವರ ಮೇಲೆ ಅಧಿಕಾರ ಕೊಟ್ಟರೆ – ಅವನ ಅಧಿಕಾರಕ್ಕೆ ಅಧೀನವಾಗಿರುವವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚಿದ್ದರೂ – ಅವನು ಅವರ ಮೇಲೆ ಅಲ್ಲಾಹನ ಆದೇಶಗಳನ್ನು ಜಾರಿಗೊಳಿಸಿದ್ದನೋ ಅಥವಾ ನಿಲ೯ಕ್ಷ ತೋರಿದ್ದನೋ ಎಂದು ಪರಲೋಕದಲ್ಲಿ ಅಲ್ಲಾಹನು ಅವನೊಡನೆ ವಿಚಾರಣೆ ಮಾಡದೆ ಇರಲಾರನು. ವಿಶೇಷವಾಗಿ ಅಲ್ಲಾಹನು ಅವನೊಡನೆ ಅವನ ಸ್ವಂತ ಕುಟುಂಬದ(ಪತ್ನಿ,ಮಕ್ಕಳು ಮತ್ತು ಆತನಿಂದ ಪೋಷಿಸಲ್ಪಡುವ ಇತರರ)ಕುರಿತು ವಿಚಾರಣೆ ನಡೆಸುವನು.” (ಮುಸ್ನದ್ …

Read More »

ಉಡುಗೊರೆ

ಪ್ರವಾದಿ ಮುಹಮ್ಮದ್(ಸ) ಹೇಳಿದರು: ಉಡುಗೊರೆಯನ್ನು ಯಾರೂ ಮರಳಿ ಪಡೆಯಬಾರದು. ತಂದೆಯು ತನ್ನ ಮಗನಿಗೆ ನೀಡಿದ ಉಡುಗೊರೆಯನ್ನು ಮರಳಿ ಪಡೆಯುವುದು ಮಾತ್ರ ಧಮ೯ಸಮ್ಮತವಾಗಿದೆ. (ವರದಿ:ಹಝ್ರತ್ ಅಬ್ದುಲ್ಲಾ ಬಿನ್ ಅಮ್ರ್(ರ) – ನಸಾಈ,ಇಬ್ನುಮಾಜಃ)

Read More »

ಬಡ್ಡಿಯ ಬಾಗಿಲು

ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಬ್ಬನ ಪರವಾಗಿ ಶಿಫಾರಸು ಮಾಡಿದ ವ್ಯಕ್ತಿಗೆ ಶಿಫಾರಸು ಮಾಡಲ್ಪಟ್ಟವ ಒಂದು ಉಡುಗೊರೆ ಕಳುಹಿಸಿ ಕೊಟ್ಟಿದ್ದು ಅವನು ಅದನ್ನು ಸ್ವೀಕರಿಸಿದರೆ ಅವನು ಬಡ್ಡಿಯ ಬಾಗಿಲುಗಳಲ್ಲಿ ಒಂದು ದೊಡ್ಡ ಬಾಗಿಲಲ್ಲಿ ಪ್ರವೇಶಿಸಿದನು. (ವರದಿ:ಹಝ್ರತ್ ಅಬೂ ಉಮಾಮ(ರ) – ಅಬೂದಾವೂದ್)

Read More »

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು ಮತ್ತು ಒಬ್ಬ ವ್ಯಕ್ತಿಯು ಮಾಡಿದ ಪಾಪಕಾಯ೯ದಿಂದಾಗಿ ಅವನನ್ನು ಉಪಜೀವನದಿಂದ ವಂಚಿತಗೊಳಿಸಲಾಗುತ್ತದೆ. (ವರದಿ:ಹಝ್ರತ್ ಸೌಬಾನ್(ರ) – ಇಬ್ನುಮಾಜಃ)

Read More »

ಅಮೀರ್(ಆಡಳಿತಾಧಿಕಾರಿ)

ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಂದು ವೇಳೆ ಮೂಗು,ಕಿವಿ ತುಂಡಾದ ಒಬ್ಬ ಗುಲಾಮನನ್ನು ನಿಮ್ಮ ಅಮೀರ್(ಆಡಳಿತಾಧಿಕಾರಿ)ಆಗಿ ನೇಮಕ ಮಾಡಿದರೆ ಮತ್ತು ಅವನು ಅಲ್ಲಾಹನ ಗ್ರಂಥದ ಪ್ರಕಾರ ನಿಮ್ಮ ಮೇಲೆ ಆಢಳಿತ ನಡೆಸಿದರೆ ನೀವು ಅವನ ಮಾತು ಆಲಿಸಬೇಕು ಮತ್ತು ಅವನನ್ನು ಅನುಸರಿಸಬೇಕು. (ವರದಿ:ಹಝ್ರತ್ ಉಮ್ಮುಲ್ ಹುಸೈನ್(ರ) – ಮುಸ್ಲಿಮ್)

Read More »

ಐದು ವಿಷಯಗಳ ಬಗ್ಗೆ ವಿಚಾರಣೆ

ಪ್ರವಾದಿವರ್ಯರು(ಸ) ಹೀಗೆಂದಿರುವರು, “ಐದು ವಿಷಯಗಳ ಬಗ್ಗೆ ವಿಚಾರಣೆ ನಡೆಸದೆ ಆದಮರ ಸಂತತಿಯ ಕಾಲುಗಳು ಪ್ರಭುವಿನ ಸನ್ನಿಧಿಯಿಂದ ಕದಲಲಾರವು. (1) ಅವನು ತನ್ನ ಜೀವನವನ್ನು ಎಲ್ಲಿ ಕಳೆದಿದ್ದಾನೆ. (2) ತನ್ನ ಯೌವನವನ್ನು ಯಾವ ಕಾರ್ಯದಲ್ಲಿ ವ್ಯಯಿಸಿದ್ದಾನೆ. (3) ಸಂಪತ್ತನ್ನು ಎಲ್ಲಿಂದ ಗಳಿಸಿದ (4) ಯಾವುದಲ್ಲಿ ತೊಡಗಿಸಿದ. (5) ತನ್ನ ಜ್ಞಾನದಿಂದ ಎಷ್ಟು ಕರ್ಮವೆಸಗಿದ? ಎಂಬುದಾಗಿದೆ. (ವರದಿ: ಹ.ಇಬ್ನು ಮಸ್‍ಊದ್(ರ))

Read More »

ಪ್ರತಿಯೊಬ್ಬರೂ ಹೊಣೆಗಾರರು

ಪ್ರವಾದಿ(ಸ) ಹೇಳಿದರು – ತಿಳಿಯಿರಿ! ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ. ಪ್ರತಿಯೊಬ್ಬರಿಂದಲೂ ಅವರ ಹೊಣೆಯಲ್ಲಿರುವವರ ಕುರಿತು ವಿಚಾರಿಸಲಾಗುವುದು. ಅಧಿಪತಿಯು ಪ್ರಜೆಗಳ ಹೊಣೆಗಾರನಾಗಿದ್ದು ಅವನಲ್ಲಿ ಅವನ ಪ್ರಜೆಗಳ ಕುರಿತು ವಿಚಾರಿಸಲಾಗುವುದು. ಪುರುಷನು ತನ್ನ ಮನೆ ಮಂದಿಯ ಹೊಣೆಗಾರನಾಗಿದ್ದು ಅವನಲ್ಲಿ ಅವರ ಕುರಿತು ವಿಚಾರಿಸಲಾಗುವುದು. ಮಹಿಳೆಯು ತನ್ನ ಪತಿ ಗೃಹದ ಮತ್ತು ಅವನ ಮಕ್ಕಳ ಹೊಣೆಗಾರಳಾಗಿದ್ದು ಅವಳಲ್ಲಿ ಅವರ ಕುರಿತು ವಿಚಾರಿಸಲಾಗುವುದು. ಸೇವಕನು ತನ್ನೊಡೆಯನ ಸೊತ್ತಿನ ಹೊಣೆಗಾರನಾಗಿದ್ದೂ ಅವನಲ್ಲಿ ಅದರ ಬಗ್ಗೆ ವಿಚಾರಿಸಲಾಗುವುದು. ಎಚ್ಚರಿಕೆ! …

Read More »

ರೋಗಿಯ ಸಂದರ್ಶನ

ಆಯಿಶಾ(ರ) ಅವರಿಂದ ವರದಿಯಾಗಿದೆ. ನಮ್ಮ ಪೈಕಿ ಯಾರಾದರೂ ಕಾಯಿಲೆ ಬಿದ್ದರೆ ಪ್ರವಾದಿ(ಸ) ಅವನ ಮೇಲೆ ತಮ್ಮ ಬಲಗೈಯನ್ನು ಸವರುತ್ತಿದ್ದರು ಮತ್ತು ಹೀಗೆ ಪ್ರಾಥಿ೯ಸುತ್ತಿದ್ದರು: ‘ಅದ್’ಹಬಿಲ್ ಬ’ಅ್’ಸ ರಬ್ಬನ್ನಾಸಿ ವಶ್ಫಿ ಅಂತ ಶಾಫೀ ಲಾ ಶಿಫಾಅ ಇಲ್ಲಾ ಶಿಫಾಉಕ ಶಿಫಾಅನ್ ಲಾ ಯುಗಾದಿರು ಸಕಮಾಃ (ಓ ಜನರ ಪ್ರಭುವೇ! ಕಾಯಿಲೆಯನ್ನು ನಿವಾರಿಸು. ಉಪಶಮನ ನೀಡು. ನೀನೇ ಉಪಶಮನ ನೀಡುವವನು. ನಿನ್ನ ಉಪಶಮನದ ಹೊರತು ಬೇರೆ ಉಪಶಮನವಿಲ್ಲ. ಕಾಯಿಲೆಯ ಯಾವುದೇ ಕುರುಹನ್ನು ಉಳಿಸದಂತಹ …

Read More »

‘ಮುಹ್ಕಮಾತ್’ ‘ಮುತಶಾಬಿಹಾತ್’

ಆಯಿಶಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಈ ಆಯತನ್ನು ಪಠಿಸಿದರು – ಅವನೇ ನಿಮ್ಮ ಮೇಲೆ ಈ ಗ್ರಂಥವನ್ನು ಅವತೀಣ೯ಗೊಳಿಸಿದನು. ಈ ಗ್ರಂಥದಲ್ಲಿ ಎರಡು ಬಗೆಯ ಆಯತ್’ಗಳಿವೆ. ಒಂದು ಗ್ರಂಥದ ಮೂಲಾಧಾರವಾಗಿರುವ ‘ಮುಹ್ಕಮಾತ್’ ಇನ್ನೊಂದು ‘ಮುತಶಾಬಿಹಾತ್.’ ಹೃದಯಗಳಲ್ಲಿ ಕೊಂಕುಳ್ಳವರು ಕ್ಷೋಭೆ ಎಬ್ಬಿಸಲಿಕ್ಕಾಗಿ ಮುತಶಾಬಿಹಾತ್’ಗಳ ಬೆನ್ನು ಹತ್ತುತ್ತಾರೆ ಮತ್ತು ಅವುಗಳ ದುವ್ಯಾ೯ಖ್ಯಾನ ಮಾಡಲು ಪ್ರಯತ್ನಿಸುತ್ತಾರೆ. ವಸ್ತುತಃ ಅವುಗಳ ನಿಜಾಥ೯ವನ್ನು ಅಲ್ಲಾಹನ ಹೊರತು ಇನ್ನಾರೂ ಬಲ್ಲವರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನದಲ್ಲಿ ಪರಿಪಕ್ವತೆ ಹೊಂದಿದವರು ” …

Read More »

ಅಲ್ಲಾಹನನ್ನು ಸೃಷ್ಟಿಸಿದವರು ಯಾರು?

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಜನರು ಪರಸ್ಪರರಲ್ಲಿ ಪ್ರಶ್ನಿಸುತ್ತಲೇ ಇರುವರು. ಎಲ್ಲಿಯವರೆಗೆಂದರೆ – ಇದು ಅಲ್ಲಾಹನು ಸೃಷ್ಟಿಸಿದ ಸೃಷ್ಟಿಯಾಗಿದೆ. ಆದರೆ ಅಲ್ಲಾಹನನ್ನು ಸೃಷ್ಟಿಸಿದವರು ಯಾರು? ಎಂದು ಅವರು ಕೇಳುವರು. ಅವರು ಹೀಗೆ ಹೇಳತೊಡಗಿದಾಗ ಹೇಳಿರಿ – ಅಲ್ಲಾಹನು ಏಕೈಕನಾಗಿದ್ದಾನೆ. ಅಲ್ಲಾಹನು ನಿರಪೇಕ್ಷನಾಗಿದ್ದಾನೆ. ಅವನು ಯಾರ ತಂದೆಯೂ ಅಲ್ಲ, ಪುತ್ರನೂ ಅಲ್ಲ ಮತ್ತು ಅವನಿಗೆ ಸರಿಸಮಾನರಾದವರು ಯಾರೂ ಇಲ್ಲ. ಅನಂತರ ಮೂರು ಸಲ ತನ್ನ ಎಡಭಾಗಕ್ಕೆ ಉಗುಳಲಿ …

Read More »