Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಪ್ರವಾದಿ ಮುಹಮ್ಮದ್ ಮನುಕುಲದ ನೈಜ ಉದ್ಧಾರಕ- ಸರ್ ಜಾರ್ಜ್ ಬರ್ನಾಡ್ ಷಾ

ಪ್ರವಾದಿ ಮುಹಮ್ಮದ್ ಮನುಕುಲದ ನೈಜ ಉದ್ಧಾರಕ- ಸರ್ ಜಾರ್ಜ್ ಬರ್ನಾಡ್ ಷಾ

ಪ್ರಸಕ್ತ ಜಗತ್ತಿಗೆ ಮುಹಮ್ಮದ್ (ಸ) ರಂತಹ ಮನಸ್ಸಿರುವ ವ್ಯಕ್ತಿಯ ಅಗತ್ಯ ಬಹಳಷ್ಟಿದೆ. ಮಧ್ಯಯುಗದ ಜನರು ಅವರನ್ನು ಕ್ರೈಸ್ತ ಧರ್ಮದ ಶತ್ರು ಎಂದು ತಿಳಿದು, ತಮ್ಮ ಅಜ್ಞಾನ ಮತ್ತು ಪೂರ್ವಾಗ್ರಹದಿಂದಾಗಿ ಅವರ ಅತಿ ನಿಕೃಷ್ಟ ಚಿತ್ರಣವನ್ನು ಲೋಕಕ್ಕೆ ನೀಡಿದ್ದಾರೆ. ಆದರೆ ಈ ವ್ಯಕ್ತಿಯ ಜೀವನವನ್ನು ನೋಡಿದಾಗ ನನಗದು ಅತ್ಯಂತ ಅದ್ಭುತವಾದ ಪವಾಡ ಸದೃಶ್ಯ ಜೀವನವಾಗಿ ತೋರಿತು. ಅವರು ಕ್ರೈಸ್ತ ಧರ್ಮದ ಶತ್ರುವಲ್ಲ ಬದಲಾಗಿ ಮನುಕುಲದ ವಿಮೋಚಕರಾಗಿದ್ದಾರೆ ಎಂದು ನಾನಾಗ ತೀರ್ಮಾನಿಸಿ ಬಿಟ್ಟೆ.

ನನ್ನ ಅಭಿಪ್ರಾಯದಲ್ಲಿ ಇಂದು ಅವರಿಗೆ ಈ ಲೋಕದ ಮೇಲೆ ನಿಯಂತ್ರಣ ನೀಡಿದ್ದರೆ, ನಮ್ಮ ಸಮಸ್ಯೆಗಳನ್ನೆಲ್ಲಾ ಪರಿಹರಿಸಿ ಇಂದು ಜಗತ್ತು ನಿರೀಕ್ಷಿಸುತ್ತಿರುವ ಸುಖ ಶಾಂತಿಯನ್ನು ಅವರು ತಂದೊದಗಿಸುತ್ತಿದ್ದರು.

ನಾನು ಮುಹಮ್ಮದ್ (ಸ)ರ ಧರ್ಮವನ್ನು ಅದರಲ್ಲಿರುವ ಅದ್ಭುತವಾದ ಸ್ಫೂರ್ತಿಯ ಗುಣಗಳಿಗಾಗಿ ಅತಿ ಹೆಚ್ಚು ಗೌರವಿಸುತ್ತೇನೆ. ಮನುಷ್ಯಾಸ್ತಿತ್ವದ ಬದಲಾವಣೆಯ ವಿವಿಧ ಹಂತಗಳನ್ನು ಸುಂದರವಾಗಿ ಸಮೀಕರಿಸುವ ಸಾಮರ್ಥ್ಯ ಅದಕ್ಕಿದ್ದು, ಎಲ್ಲಾ ಕಾಲದ ಜನರಿಗೂ ಆಕರ್ಷಿತವಾಗುವ ಏಕೈಕ ಧರ್ಮವದು ಎಂದು ನನಗೆ ತೋರುತ್ತದೆ. ನಾನು ಆ ಅದ್ಭುತ ವ್ಯಕ್ತಿತ್ವದ ಅಧ್ಯಯನ ಮಾಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಅವರು ಯಾವ ರೀತಿಯಲ್ಲೂ ಕ್ರೈಸ್ತ ವಿರೋಧಿಯಲ್ಲ ಬದಲಾಗಿ ಅವರೇ ಮನುಕುಲದ ನೈಜ ಉದ್ಧಾರಕರು.

The Genuine Islam

ಜಾರ್ಜ್ ಬರ್ನಾಡ್ ಶಾ

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …