Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಪ್ರತಿಯೊಂದು ರಂಗದಲ್ಲೂ ಅದ್ಭುತವಾದ ನಾಯಕ ಮುಹಮ್ಮದ್(ಸ) – ಫ್ರೊಪೆಸರ್ ರಾಮಕೃಷ್ಣ ರಾವ್

ಪ್ರತಿಯೊಂದು ರಂಗದಲ್ಲೂ ಅದ್ಭುತವಾದ ನಾಯಕ ಮುಹಮ್ಮದ್(ಸ) – ಫ್ರೊಪೆಸರ್ ರಾಮಕೃಷ್ಣ ರಾವ್

ಪ್ರೋ.ಕೆ.ಎಸ್. ರಾಮಕೃಷ್ಣ ರಾವ್
ತತ್ವಶಾಸ್ತ್ರ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ

ಪ್ರಾಮಾಣಿಕನಾದ ಓರ್ವ ಮಾನವನು ದೇವನ ಅತ್ಯುತ್ಕ್ರಷ್ಟ ಸೃಷ್ಟಿ. ಮುಹಮ್ಮದ್ ಕೇವಲ ಪ್ರಾಮಾಣಿಕರಾಗಿರಲಿಲ್ಲ, ಅವರು ಅಡಿಯಿಂದ ಮುಡಿ ತನಕ ಮಾನವೀಯ ಅನುಕಂಪ ಉಳ್ಳವರಾಗಿದ್ದರು. ಸಹಜೀವಿಗಳ ಪ್ರೀತಿ ಮತ್ತು ಸಹಾನುಭೂತಿಗಳು ಅವರ ಹೃದಯದ ಸಂಗೀತವಾಗಿತ್ತು. ಮಾನವರ ಸೇವೆಗೈಯುವುದು, ಅವರನ್ನು ಉನ್ನತಗೊಳಿಸುವುದು, ಸಂಸ್ಕರಿಸುವುದು, ಅವರಿಗೆ ಜ್ಞಾನ ನೀಡುವುದು – ಒಂದೇ ಮಾತಿನಲ್ಲಿ ಹೇಳುವುದಾದರೆ, ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವುದು – ಇದು ಅವರ ಕಾರ್ಯಭಾರವಾಗಿತ್ತು. ಜೀವನದ ಸರ್ವಸ್ವವಾಗಿತ್ತು. ವಿಚಾರ, ಮಾತು ಮತ್ತು ಕೃತಿಗಳಲ್ಲಿ ಮಾನವಕುಲದ ಒಳಿತೇ ಅವರ ಏಕೈಕ ಗುರಿ! ಏಕೈಕ ಮಾರ್ಗದರ್ಶನ!

ಮುಹಮ್ಮದ್‍ರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಗ್ರಹಿಸಲು ಕಷ್ಟಸಾಧ್ಯ. ಅದರ ಒಂದು ಸಣ್ಣ ಅಂಶವನ್ನಷ್ಟೇ ಗ್ರಹಿಸಲು ನನಗೆ ಸಾಧ್ಯವಾಗಿದೆ. ಎಂತಹ ಹೃದಯಂಗಮ ಬಹುಮುಖ ಪ್ರತಿಭೆ! ಎಂತಹ ಅನುಪಮ ರಂಗಗಳು! ಮುಹಮ್ಮದ್ ಎಂಬ ಪ್ರವಾದಿ, ಮುಹಮ್ಮದ್ ಎಂಬ ಆಡಳಿತಗಾರ, ಮುಹಮ್ಮದ್ ಎಂಬ ವ್ಯಾಪಾರಿ, ಮುಹಮ್ಮದ್ ಎಂಬ ಉಪದೇಶಕ, ಮುಹಮ್ಮದ್ ಎಂಬ ತತ್ವಜ್ಞಾನಿ, ಮುಹಮ್ಮದ್ ಎಂಬ ರಾಜಕಾರಣಿ, ಮುಹಮ್ಮದ್ ಎಂಬ ವಾಗ್ಮಿ, ಮುಹಮ್ಮದ್ ಎಂಬ ಸುಧಾರಕ, ಮುಹಮ್ಮದ್ ಎಂಬ ಅನಾಥ ಸಂರಕ್ಪಕ, ಮುಹಮ್ಮದ್ ಎಂಬ ಗುಲಾಮ ವಿಮೋಚಕ, ಮುಹಮ್ಮದ್ ಎಂಬ ಸ್ತ್ರೀ ವಿಮೋಚಕ, ಮುಹಮ್ಮದ್ ಎಂಬ ಕಾನೂನು ತಜ್ಞ, ಮುಹಮ್ಮದ್ ಎಂಬ ನ್ಯಾಯಾಧೀಶ, ಮುಹಮ್ಮದ್ ಎಂಬ ಪುಣ್ಯಾತ್ಮ, ಉಜ್ವಲವಾದ ಈ ಎಲ್ಲ ರೂಪಗಳಲ್ಲಿ ಮಾನವ ಜೀವನದ ಈ ಎಲ್ಲ ರಂಗಗಳಲ್ಲಿ ಅವರೋರ್ವ ಹೀರೋ ಆಗಿದ್ದರು.

 

 

SHARE THIS POST VIA

About admin

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …