Home / ಪ್ರವಾದಿ ವಚನಗಳು / ಇಂತಹ ಬಿಕ್ಕಟ್ಟು ಈ ಸಮುದಾಯದ ಮೇಲೆ ಯಾವಾಗ ಬರುತ್ತದೆ?

ಇಂತಹ ಬಿಕ್ಕಟ್ಟು ಈ ಸಮುದಾಯದ ಮೇಲೆ ಯಾವಾಗ ಬರುತ್ತದೆ?

ಅನುವಾದ : ಹ. ಅಬ್ದುಲ್ಲಾ ಬಿನ್ ಮಸ್ ಊದ್ ರಿಂದ ವರದಿಯಾಗಿದೆ. ಪ್ರವಾದಿ ಸ ಹೇಳಿದರು, “ಹೇ ಜನರೇ, ನಿಮ್ಮ ಮೇಲೆ ಆ ಕ್ಷೋಭೆ ಹೇರಲ್ಪಡುವಾಗ, ಅದರಲ್ಲಿ ನಿಮ್ಮ ಚಿಕ್ಕ ಮಕ್ಕಳು(ಯುವಕರು) ಬೆಳೆಯುತ್ತಾರೆ ಮತ್ತು ನಿಮ್ಮ ಹಿರಿಯರು ತಮ್ಮ ವೃದ್ಧಾಪ್ಯದ ಅಂತ್ಯವನ್ನು ತಲುಪುತ್ತಾರೆ ಮತ್ತು ಕ್ಷೋಭೆಯನ್ನು(ದಾರಿಗೇಡಿತನವನ್ನು) ಸುನ್ನತ್(ಚರ್ಯೆ) ಎಂದು ಪರಿಗಣಿಸಲಾಗುವಾಗ ನಿಮ್ಮ ಅವಸ್ಥೆ ಏನಾಗಿರಬಹುದು? ಆಗ ಯಾವುದಾದರೂ ವ್ಯಕ್ತಿ ಈ ಫಿತ್ನದ (ಕ್ಷೋಭೆ/ಈ ನಾವೀನ್ಯತೆ ) ವಿರುದ್ಧ ಹೋರಾಡಲು ಎದ್ದರೆ, ಆಗ ಜನರು ಹೇಳುತ್ತಾರೆ, ಈ ವ್ಯಕ್ತಿ ಅಸಹ್ಯ ಮತ್ತು ಕೆಟ್ಟ ಕೆಲಸ ಮಾಡುತ್ತಿದ್ದಾನೆ. ಆಗ ಯಾರೋ ಕೇಳಿದರು, “ಇಂತಹ ಬಿಕ್ಕಟ್ಟು ಈ ಸಮುದಾಯದ ಮೇಲೆ ಯಾವಾಗ ಬರುತ್ತದೆ?” ಆಗ ಪ್ರವಾದಿ ಸ ಹೇಳಿದರು, “ಯಾವಾಗ ನಿಮ್ಮಲ್ಲಿ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಜನರ ಸಂಖ್ಯೆ ಕುಸಿಯುತ್ತದೆ ಮತ್ತು ಅಧಿಕಾರದ ಅತ್ಯಾಶೆ ಬಯಸುವವರ ಸಂಖ್ಯೆ ಹೆಚ್ಚಾಗುತ್ತದೆ. ದೀನ್‌ನ(ಧರ್ಮದ) ನೈಜ ವಿದ್ವಾಂಸರು ಕಡಿಮೆಯಾಗುತ್ತಾರೆ ಮತ್ತು ದೀನ್ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಧರ್ಮವನ್ನು ಲೌಕಿಕ ಲಾಭಗಳನ್ನು ಗಳಿಸುವುದಕ್ಕಾಗಿ ಕಲಿಯಲಾಗುವುದು. ಜನರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ, ಆದರೆ ಅದು ಲೋಕದ ಲಾಭ ಗಳಿಸಲಿಕ್ಕಾಗಿ ಆಗಿರುತ್ತದೆ. [ಅಲ್-ತರ್ಗೀಬ್ ಅಲ್-ತರ್ಹೀಬ್]

ವಿವರಣಾ ಟಿಪ್ಪಣಿಗಳು: ಇಲ್ಲಿ ಫಿತ್ನ ಅಥವಾ ಕ್ಷೋಭೆಯ ಅರ್ಥ, ಧಾರ್ಮಿಕ ಅಲ್ಪತನ ಮತ್ತು ಅವನತಿಯ ಸ್ಥಿತಿಯನ್ನು ಸೂಚಿಸುತ್ತದೆ. ಇದೇ ಅವಸ್ಥೆಯಲ್ಲಿ ಪೀಳಿಗೆಯಿಂದ ಮುಂದೆ ತಲೆಮಾರುಗಳವರೆಗೆ ಮುಂದುವರಿಯುತ್ತದೆ. ಎಲ್ಲಿಯವರೆಗೆಂದರೆ ಧಾರ್ಮಿಕ ಅಲ್ಪತನ ಮತ್ತು ದಾರಿಗೇಡಿತನವನ್ನು ಜನರು ಸರಿ ಎಂದು ಪರಿಗಣಿಸಲು ತೊಡಗುತ್ತಾರೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುವವರನ್ನು ಅಸಹ್ಯವಾಗಿ ಪರಿಗಣಿಸಿ, ಅವರ ವಿರುದ್ಧ ಅಪಪ್ರಚಾರ ನಡೆಸಿ ಅವರನ್ನು ಪ್ರತ್ಯೇಕವಾಗಿಟ್ಟು ದೂರ ನಿಲ್ಲುವಂತೆ ಮಾಡಲಾಗುವುದು. ಮಾತ್ರವಲ್ಲ, ಇದರ ವಿರುದ್ಧ ಸುಧಾರಣೆಯ ಆಂದೋಲನವನ್ನು ಪ್ರಾರಂಭಿಸಿದವರು ತಪ್ಪು ದಾರಿಯಲ್ಲಿದ್ದಾರೆ ಮತ್ತು ಅವರ ಹೋರಾಟವು ಸಂಪೂರ್ಣ ಅನಿಸ್ಲಾಮಿಕವಾಗಿದೆ ಎಂದು ಜನರು ಹೇಳುತ್ತಾರೆ. ಆ ಕಾಲದಲ್ಲಿ ಧರ್ಮದ ಜ್ಞಾನವನ್ನು ಕಲಿಯುವ ಉಲೇಮಾಗಳ(ವಿದ್ವಾಂಸರು), ಫುಕಹಾ(ಕರ್ಮಶಾಸ್ತ್ರಜ್ಞರು)ಗಳ ಸಂಖ್ಯೆ ಹೆಚ್ಚು ಇರುತ್ತದೆ, ಆದರೆ ಅವರ ಉದ್ದೇಶ ಶುದ್ಧವಾಗಿರುವುದಿಲ್ಲ. ಅವರು ವೃತ್ತಿಪರ (ಕಸುಬುದಾರ) ವಿದ್ವಾಂಸರಾಗಿರುವರು. ಬಾಹ್ಯವಾಗಿ ಅವರು ಪರಲೋಕಕ್ಕಾಗಿ ಕೆಲಸ ಮಾಡುವರು, ಆದರೆ ವಾಸ್ತವವಾಗಿ ಅವರ ಅಂತರ್ಗತ ಉದ್ದೇಶವು ಲೌಕಿಕ ಪ್ರಯೋಜನಗಳನ್ನು ಗಳಿಸುವುದಾಗಿರುತ್ತದೆ. ಭೌತಿಕ ಲಾಭಗಳ ದುರಾಸೆ ಮತ್ತು ಅಧಿಕಾರ ಲಾಲಸೆ ದುರಾಸೆಯು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ.

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …