Home / ವಾರ್ತೆಗಳು / ಅಂತಿಮವಾಗಿ ತಾಯಿಗೆ ನಮಸ್ಕರಿಸುತ್ತಿದ್ದಾನೆಂದು ಭಾವಿಸಿದ್ದೆವು ಆದರೆ, ಮಗ ಕಾಲ್ಗೆಜ್ಜೆಗಳನ್ನು ತೆಗದುಕೊಂಡು ದೂರ ನಿಂತನು: ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಿರತ ಕೊರೋನಾ ವಾರಿಯರ್ಸ್ ಬಿಚ್ಚಿಟ್ಟ ಕತೆಗಳು…

ಅಂತಿಮವಾಗಿ ತಾಯಿಗೆ ನಮಸ್ಕರಿಸುತ್ತಿದ್ದಾನೆಂದು ಭಾವಿಸಿದ್ದೆವು ಆದರೆ, ಮಗ ಕಾಲ್ಗೆಜ್ಜೆಗಳನ್ನು ತೆಗದುಕೊಂಡು ದೂರ ನಿಂತನು: ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಿರತ ಕೊರೋನಾ ವಾರಿಯರ್ಸ್ ಬಿಚ್ಚಿಟ್ಟ ಕತೆಗಳು…

ಇಂದೋರ್: ಲುನಿಯಾಪುರ ಕಬರಿಸ್ತಾನವನ್ನು ಪ್ರವೇಶಿಸಿದಾಗ, ರಫಿಕ್ ಷಾ ಎಂಬುವವರು ಕುಳಿತಿರುವುದು ಕಂಡು ಬಂತು. ಕೋವಿಡ್‌ನಿಂದ ಮರಣ ಹೊಂದಿದ ಜನರು ಕುರಿತು ಹೇಳಬೇಕೆಂದು ಕೇಳಿದಾಗ… “ನೋಡಿ ಸರ್, ಇವತ್ತು ಹುಟ್ಟಿದವರು ನಾಳೆ ಸಾಯಲೇಬೇಕು. ಸಾವು ಯಾರಿಗೂ ಪ್ರೀಯವಲ್ಲ, ಆದರೆ ಸಾವಿನ ವಿಷಯದಲ್ಲು ಇಂದು ನಾನಾದರೆ ಅದು ನಾಳೆ ನಿಮ್ಮ ಸರದಿ. ನಾನು 30 ವರ್ಷಗಳಿಂದ ಈ ಸ್ಮಶಾನದಲ್ಲಿದ್ದೇನೆ, ಆದರೆ ಈ ಎರಡು ತಿಂಗಳಲ್ಲಿ ಶವವನ್ನು ಇಷ್ಟು ಬೇಗ ಬೇಗನೆ ಬರುವುದನ್ನು ನಾನು ಕಂಡಿರಲಿಲ್ಲ.

ಇಟ್ಟಿಗೆ ಮತ್ತು ಸಿಮೆಂಟ್ ಸೇರಿಸಿ ಮನೆ ನಿರ್ಮಿಸುವವರಿಂದ ಸಮಾಧಿಗಳನ್ನು ಕಟ್ಟಿಸಲು ಇಂದು ತಯಾರಿ ನಡೆಸಬೇಕಾಗಿದೆ. ಮೃತದೇಹ ಬರುವ ನಾಲ್ಕು ಗಂಟೆಗಳ ಮೊದಲು ನನಗೆ ಹೇಳಲಾಗುತ್ತದೆ.

ಆದರೆ, ನಾನು 10 ಫೋನ್‌ಗಳನ್ನು ಮಾಡಿದ ನಂತರ ಸಮಾಧಿಯನ್ನು ಅಗೆಯಲು ನಾಲ್ಕು ಜನರು ಬರುತ್ತಾರೆ. ಈಗ ಅವರ ಮೊಬೈಲ್ ಸಂಖ್ಯೆಯೂ ಕೂಡ ನನಗೆ ಕಂಠಪಾಠವಾಗಿ ಬಿಟ್ಟಿದೆ. ನಾನು ಸಮಾಧಿಯನ್ನು ಅಗೆಯುತ್ತೇನೆ. ಕುಟುಂಬದ ಸದಸ್ಯರು ಮೃತ ದೇಹವನ್ನು ಖಬರಿನಲ್ಲಿಳಿಸುತ್ತಾರೆ. ಮಣ್ಣು ಮುಚ್ಚಿದ ನಂತರ ನಾನು ಹೂವುಗಳನ್ನು ಗೋರಿಗಳ ಮೇಲೆ ಹಾಕುತ್ತೇನೆ. ಇದು ಬೇಸಿಗೆಯ ಸಮಯ, ನಾನು ಎಲ್ಲಾ ಗೋರಿಗಳಿಗೆ ನೀರನ್ನು ಚುಮುಕಿಸುತ್ತೇನೆ. ಪುಣ್ಯದ ಕೆಲಸದಲ್ಲಿ ಭಾಗಿಯಾದ ಸಂತೃಪ್ತಿ ನನಗಿದೆ ಎಂದರು.

ಇಂದೋರ್‌ನ ರಾಮ್‌‌ಬಾಗ್ ಮುಕ್ತಿಧಾಮ್‌ನ ದಿಲೀಪ್ ಮಾನೆ, ಅವಿನಾಶ್ ಕರೋಸಿಯಾ ಮತ್ತು ಗಣೇಶ ಗೌರ್ ಕೊರೋನಾದಿಂದ ಮೃತಪಟ್ಟವರ ಶವಗಳನ್ನು ಶವಾಗಾರದಲ್ಲಿ ವಿದ್ಯುತ್ ಶವಾಗಾರದ ಮೂಲಕ ಸುಡಲಾಗುತ್ತಿದೆ. ಮೂವರ ಜೀವನದಲ್ಲಿ ಏನು ಬದಲಾಗಿದೆ, ಜನರು ಅವರನ್ನು ಹೇಗೆ ನೋಡುತ್ತಾರೆ ಮತ್ತು ಮನಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಅವರು ತಿಳಿಸಿದ್ದು ಹೀಗೆ…

ನಮಗೆ ದಿನಾಂಕ ನೆನಪಿಲ್ಲ. ಕರೋನಾದಿಂದ ಪ್ರಾಣ ಕಳೆದುಕೊಂಡ ವ್ಯಕ್ತಿಯ ದೇಹವು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ನಮಗೆ ಅರ್ಥವಾಗಲಿಲ್ಲ. ಲೋಡ್ ಮಾಡುವಲ್ಲಿ ಶವವನ್ನು ಸ್ಪರ್ಶಿಸಲು ಕುಟುಂಬ ಸದಸ್ಯರು ಸಿದ್ಧರಿಲ್ಲ. ಶವ ಬಂದ ಕೂಡಲೇ ದಹನ ಮಾಡಬೇಕೆಂದು ನಮಗೆ ಮೊದಲೇ ಆಜ್ಞಾಪಿಸಲಾಗಿತ್ತು. ಆಗ ಬಹಳ ದುಃಖವಾಯ್ತು…ಖೇದಕರವೆನ್ನಿಸಿತು. ಈ ಜನರು ಎಷ್ಟೊಂದು ಸ್ವಾರ್ಥಿಗಳು… ಮೃತರನ್ನು ತಲೆಯಿಂದ ಕಾಲಿನವರೆಗೆ ಪ್ಲಾಸ್ಟಿಕ್ ಚೀಲದಲ್ಲೇ ಮುಚ್ಚಿರುತ್ತಾರೆ, ಆದರೂ ತಮ್ಮ‌ಕುಟುಂಬ ಸದಸ್ಯರ ದೇಹವನ್ನು ತಾವಾಗಿಯೇ ಇಡಲು ಅವರು ಹೆದರುತ್ತಾರೆ… ಇಂತಹ ದೃಶ್ಯಗಳನ್ನು ನೋಡುವುದು ಈಗ ಅಭ್ಯಾಸವಾಗಿ ಮಾರ್ಪಟ್ಟಿದೆ.

ಅಂತಹ ಒಂದು ಘಟನೆಯೆಂದರೆ, ಮಗನು ತಾಯಿಯ ಮೃತ ದೇಹವನ್ನು ದೂರದಿಂದ ನೋಡುತ್ತಿದ್ದನು. ಆದರೆ, ಮನೆಯಿಂದ ಯಾರದೋ ಕರೆ ಬಂದಾಗ, ಅವನು ಮೃತ ದೇಹದ ಬಳಿ ಓಡಿ ಬಂದನು. ದೇಹದ ಕವರ್ ಕಾಲಿನ ಬದಿಯಿಂದ ತೆರೆಯಿತು. ಆತ ಅಂತಿಮವಾಗಿ ತಾಯಿಯ ಪಾದ ನಮಸ್ಕರಿಸುತ್ತಿದ್ದಾನೆ ಎಂದು ನಾವು ಭಾವಿಸಿದ್ದೆವು ಆದರೆ, ಮಗ ತಾಯಿಯ ಕಾಲುಗಳಲ್ಲಿದ್ದ ಗೆಜ್ಜೆಗಳನ್ನು ತೆಗೆದುಕೊಂಡು ದೂರ ಸರಿದು ನಿಂತನು.

ಕರೋನಾದ ಮೊದಲ ಅಂತ್ಯಕ್ರಿಯೆಯ ಸಮಯದಲ್ಲಿ ಅಂತಹ ಭಯಭೀತ ವಾತಾವರಣ ಇರಲಿಲ್ಲ ಎಂದು ಅವಿನಾಶ್ ಕರೋಸಿಯಾ ಹೇಳುತ್ತಾರೆ. ಈಗ ಮೃತ ದೇಹವು ಲೋಡ್ ಆಗುವಾಗ ಮೌನ ತುಂಬಿರುತ್ತದೆ. ಕೊನೆಯ ಬಾರಿಗಾದರೂ ಸತ್ತವರಿಗೆ ಭುಜ ಕೊಟ್ಟು ಅವರ ದೇಹವನ್ನು ವಿದ್ಯುತ್ ಶವಾಗಾರದವರೆಗೆ ಇರಿಸಿರಿ ಎಂದು ಕುಟುಂಬ ಸದಸ್ಯರಿಗೆ ವಿವರಿಸಬೇಕಾಗುತ್ತದೆ‌. ಆದರೆ ನಾಲ್ವರಲ್ಲಿ ಒಬ್ಬರು ಮಾತ್ರ ಹೆಗಲು ಕೊಡಲು ಸಿದ್ಧರಾಗಿದ್ದಾರೆ. ನಾವು ಇದನ್ನು ಸುಮಾರು 60 ಪ್ರಕರಣಗಳಲ್ಲಿ ನೋಡಿದ್ದೇವೆ ಎಂದು ಅವಿನಾಶ್ ಕರೋಸಿಯಾ ಹೇಳುತ್ತಾರೆ.

ಈ ಕೆಲಸವನ್ನು ಯಾರಾದರೂ ಮಾಡಲೇಬೇಕಲ್ಲವೇ ಎಂದು ದಿಲೀಪ್ ಮಾನೆ ಹೇಳುತ್ತಾರೆ. ಅನೇಕ ಬಾರಿ, ನಾಲ್ಕು ಜನರಲ್ಲಿ ಒಬ್ಬರೂ ಕೂಡ ಶವವನ್ನು ಎತ್ತಿ ಶವಾಗಾರದಲ್ಲಿ ಇಡಲು ಮುಂದೆ ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಸ್ಪತ್ರೆಯ ಸಿಬ್ಬಂದಿ ಅರಬಿಂದೋ ಮತ್ತು ನಾವು ದೇಹವನ್ನು ಎತ್ತಿಕೊಂಡು ಹೋಗಬೇಕಾಗುತ್ತದೆ. ಶವಸಂಸ್ಕಾರದ ಸಮಯದಲ್ಲಿ, ಕುಟುಂಬದವರು ತುಂಬಾ ದೂರ ಸರಿದು ನಿಲ್ಲುತ್ತಾರೆ, ಆದರೆ ನಮ್ಮ ಕಚೇರಿ ಸ್ಮಶಾನದ ಬಳಿಯೇ ಇದೆ. ಬಾಯಿಗೆ ಮುಖ ಕವಚವಿರುತ್ತೆ, ಆದರೆ ಹೊಗೆ ಆದರೂ ಒಳಗೆ ಸೇರುತ್ತದೆ. ಎಷ್ಟೋ ಶವಗಳ ಅಂತಿಮ ಕ್ರಿಯೆಯನ್ನು ನಾವು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ ಆದರೆ ಮೃತರನ್ನೆಲ್ಲ ನಮ್ಮದೇ ಕುಡುಂಬ ಎಂದು ಭಾವಿಸಿಯೇ ನಾವು ಆಹುತಿ ನೀಡುತ್ತೇವೆ ಎಂದು ದಿಲೀಪ್ ಮಾನೆ ಹೇಳಿದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …