Home / ವಾರ್ತೆಗಳು / ಮಾನವೀಯತೆ ಹೀಗೆ ಗೆಲ್ಲುತ್ತಲೇ ಇರಲಿ

ಮಾನವೀಯತೆ ಹೀಗೆ ಗೆಲ್ಲುತ್ತಲೇ ಇರಲಿ

ಅಬುಧಾಬಿಯ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ ಕೇರಳದ ತ್ರಿಶೂರಿನ ಬೈಕ್ಸ್ ಕೃಷ್ಣನ್ ಎಂಬಾತನ ಕಾರು ಸುಡಾನಿನ ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಬಾಲಕ ಮೃತಪಡುತ್ತಾನೆ. ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಏರಿ ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗುತ್ತದೆ. ಅಲ್ಲದೇ, ಬಾಲಕನ ಹೆತ್ತವರು ಅಪಘಾತವನ್ನು ಕಣ್ಣಾರೆ ಕಂಡಿದ್ದು ಕೋರ್ಟಿನಲ್ಲಿ ಸಾಕ್ಷ್ಯ ನುಡಿಯುತ್ತಾರೆ. ಈ ಅಪಘಾತ ನಡೆದದ್ದು 2012 ಸೆಪ್ಟೆಂಬರ್ 17ರಂದು. 2013ರಲ್ಲಿ ಅಬುದಾಬಿ ಕೋರ್ಟು ಕೃಷ್ಣನ್ ಗೆ ಗಲ್ಲು ಶಿಕ್ಷೆ ಘೋಷಿಸುತ್ತದೆ. ಆ ಬಳಿಕದಿಂದ ಆತನ ಬಿಡುಗಡೆಗಾಗಿ ಸರ್ವ ಪ್ರಯತ್ನ ನಡೆಸಿದ ಕುಟುಂಬ ಹತಾಶರಾಗಿ ಕೊನೆಗೆ ಖ್ಯಾತ ಅನಿವಾಸಿ ಉದ್ಯಮಿ ಯೂಸುಫಲಿಯವರಲ್ಲಿ ಮೊರೆಯಿಡುತ್ತದೆ. ಅವರು ಆ ಸುಡಾನಿ ಕುಟುಂಬವನ್ನು ಹಲವು ಬಾರಿ ಭೇಟಿಯಾಗಿ ಕೃಷ್ಣನ್ ರನ್ನು ಕ್ಷಮಿಸುವಂತೆ ಕೋರಿಕೊಳ್ಳುತ್ತಾರೆ. ಕುಟುಂಬ ಒಪ್ಪಿಕೊಳ್ಳುವುದಿಲ್ಲ. ಸುಡಾನಿನಲ್ಲಿರುವ ಆ ಕುಟುಂಬದ ಇತರ ಸದಸ್ಯರನ್ನು ಅಬುದಾಭಿಗೆ ಕರೆಸಿ ಅವರಿಗೆ ಉಳಕೊಳ್ಳುವ ವ್ಯವಸ್ಥೆ ಮಾಡಿ ಕೃಷ್ಣನ ಸ್ಥಿತಿಯನ್ನು ಮನವರಿಕೆ ಮಾಡಿಸುತ್ತಾರೆ. ಪ್ರಮಾದವಶಾತ್ ಆಗಿರುವ ತಪ್ಪಿಗಾಗಿ ಕ್ಷಮಿಸುವಂತೆ ಕೋರಿಕೊಳ್ಳುತ್ತಾರೆ. ಆ ಕುಟುಂಬ ಕ್ಷಮೆಗೆ ಪ್ರತಿಯಾಗಿ ಪರಿಹಾರವನ್ನು ಅಪೇಕ್ಷಿಸುತ್ತದೆ. ಕೊನೆಗೆ ಒಂದು ಕೋಟಿ ರೂಪಾಯಿಯನ್ನು ಪರಿಹಾರವಾಗಿ ಕೊಟ್ಟ ಯೂಸುಫ್ ಅಲಿಯವರು ಕೃಷ್ಣನ್ ರನ್ನು ಗಲ್ಲುಶಿಕ್ಷೆಯಿಂದ ಪಾರುಗೊಳಿಸುತ್ತಾರೆ ಮತ್ತು ಅವರ ಬಿಡುಗಡೆಗೆ ಕಾರಣರಾಗುತ್ತಾರೆ.
ಇದೀಗ ಕೃಷ್ಣನ್ ಗೆ ಜೈಲಿನಿಂದ ಬಿಡುಗಡೆಯಾಗುವ ಸಂಭ್ರಮ. ಅಬುದಾಬಿಯಲ್ಲಿರುವ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಕೃಷ್ಣನ್ ಇರುವ ಜೈಲಿಗೆ ಭೇಟಿಕೊಟ್ಟು ಆತನ ಬಿಡುಗಡೆಗೆ ಬೇಕಾದ ವ್ಯವಸ್ಥೆಯಲ್ಲಿ ಬಿಜಿಯಾಗಿದ್ದಾರೆ. ಅಷ್ಟಕ್ಕೂ, ಈ ಯೂಸುಫಲಿಯನ್ನು ಈ ಕೃಷ್ಣನ್ ಈವರೆಗೂ ಭೇಟಿಯಾಗಿಲ್ಲ. ಅಂದಹಾಗೆ,

ಮಾನವೀಯತೆಯ ಇಂತಹ ಸುದ್ದಿಗಳು ಮತ್ತೆ ಮತ್ತೆ ವೈರಲ್ ಆಗುತ್ತಿರಲಿ. ಧರ್ಮ ಜಾತಿ ಭಾಷೆ ರಾಜಕೀಯದ ಹೆಸರಲ್ಲಿ ಪರಸ್ಪರರನ್ನು ಅನ್ಯ ಗೊಳಿಸುತ್ತಾ ಮತ್ತು ದ್ವೇಷಿಸುತ್ತಾ ಬದುಕುತ್ತಿರುವ ಈ ದಿನಗಳಲ್ಲಿ ಇಂತಹ ಬೆಳವಣಿಗೆಗಳು ಎಲ್ಲರ ಹೃದಯವನ್ನೂ ತಟ್ಟಲಿ.

ಗಲ್ಲಿಗೇರಬೇಕಾದ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾದುದಕ್ಕೆ ಅಲ್ಲಾಹನಿಗೆ ಸ್ತುತಿ ಎಂದ ಯೂಸುಫಲಿ, ನಿಜಕ್ಕೂ ಗ್ರೇಟ್.

ಏ ಕೆ ಕುಕ್ಕಿಲ

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …