Home / ಲೇಖನಗಳು / ಇಸ್ಲಾಮೀ ನಾಗರಿಕತೆಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು

ಇಸ್ಲಾಮೀ ನಾಗರಿಕತೆಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು

ಡಾ. ರಾಗಿಬುಸ್ಸರ್ಜಾನಿ

ಮುಸ್ಲಿಮ್ ಸಮಾಜದಲ್ಲಿ ಮುಸ್ಲಿಮರಲ್ಲದ ಅಲ್ಪಸಂಖ್ಯಾತರಿಗೆ ಇಸ್ಲಾಮೀ ಶರೀಅತ್‍ನಡಿಯಲ್ಲಿ ಸಿಕ್ಕಿದಷ್ಟು ಅವಕಾಶ, ಹಕ್ಕು ಸೌಲಭ್ಯಗಳು ಜಗತ್ತಿನಲ್ಲಿ ಬೇರೆ ಯಾವುದೇ ಕಾನೂನಡಿಯಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡವರಿಗೆ ಸಿಕ್ಕಿಲ್ಲ. ಮುಸ್ಲಿಂ ಸಮುದಾಯ ಮತ್ತು ಅವರ ನಡುವೆ ಬದುಕುತ್ತಿರುವ ಮುಸ್ಲಿಮರಲ್ಲದ ಅಲ್ಪಸಂಖ್ಯಾತರ ನಡುವೆ ಸಂಬಂಧಗಳು ಹೇಗಿರಬೇಕೆಂದು ದೇವನ ನಿರ್ದೇಶನ ಇರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲಾಹನು ಹೇಳುತ್ತಾನೆ. ” ನೀವು ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿರುವ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರುವ ಮತ್ತು ನಿಮ್ಮನ್ನು ಹೊರ ಹಾಕುವ ವಿಷಯದಲ್ಲಿ ಪರಸ್ಪರ ಸಹಕರಿಸಿರುವ ಜನರೊಂದಿಗೆ ಸ್ನೇಹ ಬೆಳೆಸುವುದರಿಂದ ಮಾತ್ರ ಅಲ್ಲಾಹನು ನಿಮ್ಮನ್ನು ತಡೆಯುತ್ತಾನೆ. ಅವರೊಂದಿಗೆ ಸ್ನೇಹ ಬೆಳೆಸುವವರೇ ಅಕ್ರಮಿಗಳು.( ಅಲ್‍ಮುಮ್ತಹಿನಃ, 9)

ಈ ಸೂಕ್ತ ಮುಸ್ಲಿಮರು ಇತರರೊಡನೆ ಹೇಗೆ ವರ್ತಿಸಬೇಕು, ವ್ಯವಹರಿಸಬೇಕೆನ್ನುವ ನೈತಿಕ ಮತ್ತು ಕಾನೂನಾತ್ಮಕ ಅಡಿಪಾಯವನ್ನು ಹಾಕಿಕೊಡುತ್ತಿದೆ. ನಿಮ್ಮೊಡನೆ ಶತ್ರುತ್ವ ತೋರಿಸದವರೊಂದಿಗೆ ಒಳಿತು ಮತ್ತು ನ್ಯಾಯಯುತವಾಗಿ ವರ್ತಿಸಬೇಕು, ಇಸ್ಲಾಮಿಗಿಂತ ಮುಂಚಿನ ಸಮುದಾಯಗಳಿಗೆ ಗೊತ್ತೇ ಇಲ್ಲದ ಒಂದು ಅಡಿಪಾಯವಿದು. ಇಂದು ಈ ಅಡಿಪಾಯವೇ ನಷ್ಟ ಹೊಂದಿದುದರ ದೋಷಗಳು ಪ್ರಕಟವಾಗುತ್ತಿವೆ. ದೇಹೇಚ್ಛೆಗಳು , ಕುರುಡು ಗುಂಪುಗಾರಿಕೆಗಳು ಕೋಮುವಾದಗಳೆಲ್ಲದಕ್ಕೂ ಈ ಅಡಿಪಾಯ ತಡೆಯೊಡ್ಡುತ್ತದೆ.

ವಿಶ್ವಾಸ ಸ್ವಾತಂತ್ರ್ಯ:
ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಇಸ್ಲಾಮಿಕ್ ಶರೀಅತ್ ಹಲವಾರು ಹಕ್ಕುಗಳನ್ನು ಸೌಲಭ್ಯಗಳನ್ನು ಖಚಿತ ಪಡಿಸಿದೆ. ಈ ಹಕ್ಕು ಸೌಲಭ್ಯಗಳಲ್ಲಿ ನಂಬಿಕೆ ಸ್ವಾತಂತ್ರ್ಯ ಪ್ರಧಾನವಾಗಿದೆ ಇದಕ್ಕೆ ಪವಿತ್ರಕುರ್‍ಆನ್‍ನ ‘ ಧರ್ಮದಲ್ಲಿ ಬಲಾತ್ಕಾರವಿಲ್ಲ”(ಅಲ್‍ಬಕರ: 256) ಎನ್ನುವ ದೇವನ ವಚನ ತಳಹದಿಯಾಗಿದೆ. ಯಮನ್‍ನಲ್ಲಿನ ಗ್ರಂಥದವರನ್ನು ಇಸ್ಲಾಮಿಗೆ ಕರೆದ ಪ್ರವಾದಿವರ್ಯರ(ಸ) ಪತ್ರ ಅದಕ್ಕೆ ಪ್ರಾಯೋಗಿಕ ಮಾದರಿಯಾಗಿದೆ. “..,,ಯಹೂದಿಯೋ, ಕ್ರೈಸ್ತನೋ ಆದ ಒಬ್ಬನು ಇಸ್ಲಾಮ್ ಸ್ವೀಕರಿಸಿದರೆ ಅವನು ವಿಶ್ವಾಸಿಗಳ ಸಾಲಿಗೆ ಸೇರಿದನು. ಅವರಿಗಿರುವ (ಮುಸ್ಲಿಮರಿಗಿರುವ) ಎಲ್ಲ ಹಕ್ಕುಗಳು ಅವನಿಗೂ ಲಭಿಸುತ್ತದೆ. ಅವರ ಮೇಲಿರುವ ಎಲ್ಲ ಬಾಧ್ಯತೆಗಳು ಅವನಿಗೂ ಬಾಧಕವಾಗಿದೆ. ಓರ್ವನು ತನ್ನ ಯಹೂದಿ ಧರ್ಮ, ಅಥವಾ ಕ್ರೈಸ್ತ ಧರ್ಮ ವಿಶ್ವಾಸದಲ್ಲಿಯೇ ಮುಂದುವರಿದರೆ ಅದರ ಹೆಸರಿನಲ್ಲಿ ಅವರಿಗೆ ಯಾವುದೇ ಹಾನಿಮಾಡಲಾಗದು”{ಸೀರತ್ತು ಇಬ್ನು ಹಿಶಾಮ್)

ಮುಸ್ಲಿಮರಲ್ಲದವರ ವಿಶ್ವಾಸ ಸ್ವಾತಂತ್ರ್ಯ, ಅದರ ಪ್ರಕಾರ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಷ್ಠೆಗಳಿಗೆ ಇಸ್ಲಾಮಿಕ್ ಶರೀಅತ್ ಅಡ್ಡಿಯಾಗುವುದಿಲ್ಲ. ಮನುಷ್ಯರು ಎನ್ನುವ ನೆಲೆಯಲ್ಲಿ ಅವರಿಗೆ ಜೀವಿಸುವ ಎಲ್ಲ ಹಕ್ಕುಗಳು ಅವರಿಗೆ ಹಂಚಿ ನೀಡಲಾಗುವುದು. ಸಂಧಿ ಮಾಡಿಕೊಂಡವನನ್ನು ಕೊಂದವನಿಗೆ ಸ್ವರ್ಗದ ಸುಗಂಧ ಕೂಡಾ ಲಭಿಸದು ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆನ್ನುವುದು ಇಲ್ಲಿ ಗಮನಾರ್ಹವಾಗಿದೆ.

ಅಲ್ಪಸಂಖ್ಯಾತರ ವಿರುದ್ಧ ಅನ್ಯಾಯಗಳಿಗೆ ತಾಕೀತು:
ಅವರ ಹಕ್ಕುಗಳನ್ನು ಕಬಳಿಸುವುದು ಮತ್ತು ಅವರೊಂದಿಗೆ ಅನ್ಯಾಯದಿಂದ ವರ್ತಿಸುವುದನ್ನು ನಿಷೇಧಿಸಿ ಪ್ರವಾದಿವರ್ಯರು(ಸ) ಬಲವಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರವಾದಿ(ಸ) ಹೇಳುತ್ತಾರೆ: ಯಾರಾದರೂ ಸಂಧಿ ಮಾಡಿಕೊಂಡಿದ್ದರೆ, ಅವರೊಡನೆ ಅಕ್ರಮದಿಂದ ವರ್ತಿಸುವುದು ಮತ್ತು ಅವನ ಹಕ್ಕುಗಳನ್ನು ಕಬಳಿಸುವುದು, ಅವನ ಸಾಮಥ್ರ್ಯಕ್ಕಿಂತ ಹೆಚ್ಚಿನ ಭಾರವನ್ನು ಅವನ ಮೇಲೆ ಹೊರಿಸುವುದು, ಅವನ ಅನುಮತಿಯಲ್ಲದೆ ಅವನಿಂದ ಏನನ್ನಾದರೂ ತೆಗೆಯುವುದು ಅಂತ್ಯ ದಿನದಲ್ಲಿ ಅವನಿಗಾಗಿ ನಾನು ವಾದಿಸುತ್ತೇನೆ”(ಅಬೂದಾವೂದ್, ಬೈಹಕಿ)

ಅಬ್ದುಲ್ಲಾಹ್ ಬಿನ್ ಸಹ್ಲ್ ಎನ್ನುವ ಅನ್ಸಾರಿ ಕೈಬರ್‍ ನಲ್ಲಿ ಕೊಲ್ಲಲ್ಪಟ್ಟ ಘಟನೆ ಇದಕ್ಕೆ ಒಂದು ಉದಾಹರಣೆಯಾಗಿದೆ. ಯಹೂದಿಯರು ವಾಸಿಸುವ ಕ್ಷೇತ್ರದಲ್ಲಿ ಕೊಲೆ ಪಾತಕ ನಡೆದಿತ್ತು. ಕೊಲೆಗಾರ ಒಬ್ಬ ಯಹೂದಿ ಆಗಿರುತ್ತಾನೆ ಎನ್ನುವ ಎಲ್ಲ ಸಾಂಧರ್ಭಿಕ ಸಾಧ್ಯತೆಗಳಿದ್ದವು. ಆದರೆ ಇ ಊಹೆಗೆ ಯಾವ ಸಾಕ್ಷ್ಯವೂ ಇರಲಿಲ್ಲ. ಆದ್ದರಿಂದ ಪ್ರವಾದಿ(ಸ) ಯಾವನೆ ಯಹೂದಿಯ ವಿರುದ್ಧ ಶಿಕ್ಷೆಯ ಕ್ರಮ ಕೈಗೊಳ್ಳಲಿಲ್ಲ. ಈ ರೀತಿ ನಾವು ಯಾರು ಮಾಡಿಲ್ಲ ಎಂದು ಆಣೆ ಹಾಕಿಸುವ ಕೆಲಸವನ್ನು ಮಾತ್ರ ಪ್ರವಾದಿ ಮಾಡಿಸಿದ್ದರು. ಅದರ ಕುರಿತು ಸಹ್ಲ್ ಬಿನ್ ಅಬೀ ಫಹ್ಮ ವಿವರಿಸುತ್ತಾರೆ. ಪ್ರವಾದಿವರ್ಯರು(ಸ) ಘಟನೆಗೆ ಸಾಕ್ಷಿ ಇದೆಯೇ ಎಂದು ಕೇಳಿದರು. ಆದರೆ ನಮ್ಮ ಬಳಿ ಸಾಕ್ಷಿಯಿಲ್ಲ ಎಂದು ಹೇಳಿದೆವು. ಹಾಗಿದ್ದರೆ ಅವರು ಆಣೆ ಹಾಕಲಿ. ಅವರು ಆಣೆ ಹಾಕಿದರು. ಯಹೂದಿಯರ ಆಣೆ ನಮಗೆ ಇಷ್ಟವಿಲ್ಲ. ಆದರೆ ಆ ರಕ್ತಕ್ಕೆ ನಷ್ಟ ಪರಿಹಾರ ನೀಡದಿರಲು ಪ್ರವಾದಿ(ಸ) ಬಯಸದ್ದರಿಂದ ನೂರು ಒಂಟೆಗಳನ್ನು ನಷ್ಟ ಪರಿಹಾರ ನೀಡಿದರು. ಅಂದರೆ ಸರಕಾರದ ವತಿಯಿಂದ ನಷ್ಟ ಪರಿಹಾರ ನೀಡಿದರೆ ಹೊರತು. ಕೇವಲ ಸಂದೇಹದ ಆಧಾರದಲ್ಲಿ ಯಹೂದಿಯರನ್ನು ಶಿಕ್ಷಿಸಲಿಲ್ಲ.

ಆರ್ಥಿಕ ಸಂರಕ್ಷಣೆ:
ಮುಸ್ಲಿಂ ಸಮಾಜದಲ್ಲಿ ಮುಸ್ಲಿಮೇತರರ ಆಸ್ತಿಗೆ ಸಂರಕ್ಷಣೆ ಒದಗಿಸುವ ಹೊಣೆಯನ್ನು ಇಸ್ಲಾಮೀ ಶರಿಅತ್ ನಿಗದಿಗೊಳಿಸಿದೆ. ಅನ್ಯಾಯವಾಗಿ ಕಬಳಿಸುವುದು ಅದರ ಮೇಲೆ ಆಧಿಪತ್ಯವನ್ನು ಸ್ಥಾಪಿಸುವುದು ನಿಷಿದ್ಧವಾಗಿದೆ. ಕದಿಯುವುದು, ದರೋಡೆ ಮಾಡಬಾರದು. ಇವೆಲ್ಲವೂ ಅಕ್ರಮವಾಗಿದೆ. ಇಸ್ಲಾಮೀ ರಾಷ್ಟ್ರದ ಪ್ರಜೆಗಳು ಬಡತನ, ವೃದ್ಧಾಪ್ಯದ ಕಾರಣದಿಂದ ಕಷ್ಟಪಡುತ್ತಿದ್ದರೆ ರಾಷ್ಟ್ರದ ಖಜಾನೆಯಿಂದ ಅವರಿಗೆ ನೆರವು ನೀಡಬೇಕು. ಮುಸ್ಲಿಮ್ ಮುಸ್ಲಿಮೇತರ ಎನ್ನುವ ಭೇದವಿಲ್ಲದೆ ಎಲ್ಲ ಪ್ರಜೆಗಳಿಗೂ ಸಂರಕ್ಷಣೆಯನ್ನು ಮುಸ್ಲಿಮ್ ಆಡಳಿತಗಾರರು ನೀಡಬೇಕು ಎಂದು ಇಸ್ಲಾಮ್ ಕಲಿಸುತ್ತದೆ. ಇದಕ್ಕೆ ಪ್ರವಾದಿವರ್ಯರು(ಸ) ಮಾದರಿಯಾಗಿದ್ದಾರೆ. ಇತ್ತ ಕಡೆ ಅನ್ಯಾಯ ಮಾಡದಿರುವ ಕಾಲದವರೆಗೂ ಸಕಲ ಮನುಷ್ಯರನ್ನು ಗೌರವಿಸಿ ಆದರಿಸುವುದು ಇಸ್ಲಾಮೀ ನಾಗರಿಕತೆಯ ಅಡಿಪಾಯವಾಗಿದೆ. ಈ ಆಧಾರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಜಾರಿಗೊಳ್ಳುತ್ತಿವೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …