Home / ವಾರ್ತೆಗಳು / ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಸ್ವೀಕರಿಸಿದ ಮುಸ್ಲಿಮ್ ವಿರೋಧಿ ದಲಿತ ಹೋರಾಟಗಾರ

ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಸ್ವೀಕರಿಸಿದ ಮುಸ್ಲಿಮ್ ವಿರೋಧಿ ದಲಿತ ಹೋರಾಟಗಾರ

ಚೆನ್ನೈ – ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿರುವುದಾಗಿ ಯೂಟ್ಯೂಬರ್ ದಲಿತ ಆಕ್ಟಿವಿಸ್ಟ್ ರವಿಚಂದ್ರನ್ ಹೇಳಿದ್ದಾರೆ. ಇದೀಗ ಅವರ ಹೊಸ ಹೆಸರು ಮುಹಮ್ಮದ್ ರಾಯೀಸ್ ಎಂದು ಬದಲಾಯಿಸಿದ್ದು, ಈ ಜನವರಿಯಲ್ಲಿ ಅವರು ಮತಾಂತರ ಗೊಂಡಿದ್ದಾರೆ. ಸ್ವಾಭಿಮಾನ ಮತ್ತು ಸಮಾನತೆಯ ಹುಡುಕಾಟದಲ್ಲಿದ್ದ ನನಗೆ ಇಸ್ಲಾಮ್ ನಲ್ಲಿ ಅದು ಕಂಡಿದೆ ಎಂದು ಅವರು ಹೇಳಿದ್ದಾರೆ.

ಅವರ ಈ ಹೆಜ್ಜೆಯ ಬಗ್ಗೆ ದಲಿತ ಸಮುದಾಯದ ಪ್ರತಿಕ್ರಿಯೆಯ ಹೇಗಿದೆ ಎಂದು ಕಾರವಾನ್ ಡೈಲಿಯೊಂದಿಗೆ ಮಾತನಾಡಿದ ರವಿಚಂದ್ರನ್, ಸಮುದಾಯ ನನ್ನನ್ನು ವಿರೋಧಿಸುತ್ತಿಲ್ಲ ಯಾಕೆಂದರೆ ನಾನು ಗೌರವ ಮತ್ತು ಸ್ವಾಭಿಮಾನಕ್ಕಾಗಿ ಮತಾಂತರ ಆಗಿದ್ದರಿಂದ ಇಂತಹ ಕ್ರಮವನ್ನು ಅವರು ಬೆಂಬಲಿಸುತ್ತಾರೆ ಎಂದು ಹೇಳಿದರು.

ಸಾಮಾನ್ಯವಾಗಿ ದಲಿತ ಸಮುದಾಯ ಮುಸ್ಲಿಮ್ ವಿರೋಧಿ, ಈ ಹಿಂದೆ ನಾನೂ ಮುಸ್ಲಿಮ್ ವಿರೋಧಿಯಾಗಿದ್ದೆ. ಮುಸ್ಲಿಮರು ಕೊಳಕು ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ ಎಂದು ನಾನೂ ನಂಬುತ್ತಿದ್ದೆ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ವಿದೇಶಿ ಭಾಷಾ ವಿಶ್ವವಿದ್ಯಾಲಯದ (ಇಎಫ್‌ಎಲ್‌ಯು) ವಿದ್ಯಾರ್ಥಿ ಇಸ್ಲಾಮಿಕ್ ಸಂಘಟನೆಯ ಕೆಲವು ಸದಸ್ಯರೊಂದಿಗಿನ ಒಡನಾಟದ ಬಳಿಕ ಮುಸ್ಲಿಮರ ಬಗ್ಗೆ ಅವರ ಅಭಿಪ್ರಾಯಗಳು ಬದಲಾದವು.

” ಕಳೆದ 15 ವರ್ಷಗಳಿಂದ ನನ್ನ ಜೀವನ 24X7 ಜಾತಿಯ ಬಗ್ಗೆ ಆಲೋಚನೆ ಆಗಿತ್ತು. ಈ ಹಂತ ತಲುಪಲು ನನಗೆ ಬಹಳ ಸಮಯ ಹಿಡಿಯಿತು. ನಾನು ತುಂಬಾ ಮುಸ್ಲಿಮ್ ವಿರೋಧಿ. ನಾನು ಮುಸ್ಲಿಮರ ಬಗ್ಗೆ ಪೂರ್ವಗ್ರಹ ಪೀಡಿತನಾಗಿದ್ದೆ. ನನ್ನ ಎಸ್‌ಐಒ ಸ್ನೇಹಿತರೊಂದಿಗೆ 4-5 ವರ್ಷಗಳ ಸುದೀರ್ಘ ಸಂಬಂಧದ ನಂತರ ನಾನು ನನ್ನ ಆಲೋಚನೆಯನ್ನು ಬದಲಾಯಿಸಿದೆ ” ಎಂದು ರಯೀಸ್ ಹೇಳಿದರು.

ಜನವರಿ 30 ರಂದು ದಲಿತ ಕ್ಯಾಮೆರಾದ ಫೇಸ್‌ಬುಕ್ ಪುಟದಲ್ಲಿ ಅವರ ಮತಾಂತರವನ್ನು ಲೈವ್-ಸ್ಟ್ರೀಮಿಂಗ್ ಮಾಡುತ್ತಾ, ರಯೀಸ್ ಹೀಗೆ ಹೇಳಿದರು, “(ನಾನು) ಸ್ವಾಭಿಮಾನ ಮತ್ತು ಘನತೆಗಾಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ. ಕಳೆದ 38 ವರ್ಷಗಳ ಕಾಲ ಅನುಭವಿಸಿದ ತಾರತಮ್ಯ ಮತ್ತು ಅಸಮಾನತೆಗೆ ವಿದಾಯ ಹೇಳುತ್ತಿದ್ದೇನೆ. ಮಾತ್ರವಲ್ಲ ಸ್ವಾಭಿಮಾನ ಮತ್ತು ಘನತೆಯ ಜೀವನಕ್ಕೆ ಬಾಗಿಲು ಕಂಡುಕೊಂಡೆ. ಅಸ್ಸಲಾಮು ಅಲೈಕುಮ್ ” ಎಂದು ಅವರು ಹೇಳಿದರು.

ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಿಂದ ಸ್ನಾತಕೋತ್ತರ ಪದವಿ ಪಡೆದ ರಯೀಸ್, ತಮಿಳುನಾಡಿನ ಊಟಿಯ ಚಕ್ಕಿಲಿಯನ್ ಸಮುದಾಯದವರು. ದಲಿತ ಸಮುದಾಯದ ಬಗ್ಗೆ ಮಾತನಾಡಿದ ಅವರು, ಸಾಮಾಜಿಕ ಜೀವನದಲ್ಲಿ ದಲಿತ ಸಮುದಾಯ ತಾರತಮ್ಯವನ್ನು ಎದುರಿಸುತ್ತಿದ್ದು ಅವರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತದೆ.

“ನಾವು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಮೇಲ್ಜಾತಿಯವರು ಬೆಟ್ಟಗಳ ಪ್ರದೇಶದಲ್ಲಿ ವಾಸಿಸುತ್ತಾರೆ. ಕೆಳ ಜಾತಿಯವರು ಬೆಟ್ಟಗಳ ಕೆಳಗೆ ವಾಸಿಸುತ್ತಾರೆ. ನನ್ನ ಸಮುದಾಯವು ಸ್ಕ್ಯಾವೆಂಜಿಂಗ್ (ಮಲ ಸ್ವಚ್ಛಗೊಳಿಸುವ) ಸಮುದಾಯವಾಗಿದೆ. ಸ್ಕ್ಯಾವೆಂಜರ್ಸ್ ಸರ್ಕಾರಿ ಸಿಬ್ಬಂದಿ ಆದರೆ ಅವರನ್ನು ಇತರ ಸರ್ಕಾರಿ ಸಿಬ್ಬಂದಿಗೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ. ಅವರಿಗೆ ಯಾವುದೇ ನಿಯಮವಿಲ್ಲ. ನಿಯಮಗಳು ಮೇಲ್ಜಾತಿಯವರಿಗೆ ಮಾತ್ರ. ನಮ್ಮ ಜನರಿಗೆ ಕಚೇರಿಗಳಿಗೆ ಪ್ರವೇಶಿಸಲು ಅಥವಾ ಕುಳಿತುಕೊಳ್ಳಲು ಅವಕಾಶವಿಲ್ಲ. ಅವರಿಗೆ ಕಚೇರಿಯ ಮುಂದೆ ನಿಲ್ಲಲು ಮಾತ್ರ ಅವಕಾಶ ಇದೆ ”ಎಂದು ರಯೀಸ್ ಹೇಳಿದರು.

“ಇದು ನಿಯಮಗಳನ್ನು ಹೊಂದಿರದ ಒಂದು ಇಲಾಖೆ. ಸ್ಕ್ಯಾವೆಂಜರ್‌ಗಳಿಗೆ ಕೆಲಸದ ಸಮಯವಿಲ್ಲ. ಅವರಿಗೆ ರಜಾ ದಿನಗಳಿಲ್ಲ. ಅವರಿಗೆ ನೀತಿಗಳಿಲ್ಲ. ಈಗ ಗುತ್ತಿಗೆ ಕೆಲಸದಲ್ಲಿ ಇರಿಸಿ, ಸಂಪೂರ್ಣವಾಗಿ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಈಗ ಪರಿಸ್ಥಿತಿ ಹದಗೆಟ್ಟಿದೆ. ಅವರ ಕೆಲಸದ ಸ್ಥಳದಲ್ಲಿ ಅವರಿಗೆ ಕನಿಷ್ಠ ಮಟ್ಟದ ಸ್ವಾಭಿಮಾನವೂ ಕಾಣೆಯಾಗಿದೆ, ”ಎಂದವರು ಹೇಳಿದರು.

ಚಕ್ಕಿಲಿಯನ್, ವಾಲ್ಮೀಕಿ ಮತ್ತು ಇತರ ಸಮುದಾಯಗಳಿಗೆ ಸೇರಿದ ಸ್ಕ್ಯಾವೆಂಜರ್ ಗಳು ವಿಭಿನ್ನ ಉಪ ಭಾಷೆಗಳನ್ನು ಮಾತನಾಡುತ್ತಿದ್ದು, ಅವರನ್ನು ಭಾರತದಾದ್ಯಂತ ವಲಸಿಗರು ಎಂದು ಪರಿಗಣಿಸಲಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ರವಿಚಂದ್ರನ್ ಹೇಳಿದ್ದಾರೆ. “ಬಂಗಾಳದಲ್ಲಿ, ಸ್ಕ್ಯಾವೆಂಜರ್ಸ್ ಬಿಹಾರ ಮೂಲದವರು ಎಂದು ಹೇಳಲಾಗುತ್ತದೆ. ಕೇರಳದಲ್ಲಿ, ಈ ಜನರು ತಮಿಳುನಾಡಿನಿಂದ ಬಂದವರು ಎಂದು ಹೇಳುತ್ತಾರೆ. ಹೆಚ್ಚಿನ ರಾಜ್ಯಗಳಲ್ಲಿ, ಅವರನ್ನು ಹೊರಗಿನವರು ಎಂದು ಪರಿಗಣಿಸಲಾಗುತ್ತದೆ. ”

ಇಸ್ಲಾಂ ಧರ್ಮದಲ್ಲಿ ಎರಡು ವಿಷಯಗಳು ತನಗೆ ಬಹಳ ಮುಖ್ಯ ಎಂದು ಅವರು ಹೇಳಿದರು. ಒಂದು ಮಸೀದಿಯಲ್ಲಿನ ಶೌಚಾಲಯ ಮತ್ತು ಎರಡನೆಯದು ಸ್ಮಶಾನ. ಯಾವುದೇ ದೇವಾಲಯ ಅಥವಾ ಚರ್ಚ್‌ನಲ್ಲಿ ಶೌಚಾಲಯ ಸಿಗಲಿಲ್ಲ ಎಂದು ಹೇಳಿದರು. ಮಸೀದಿಯಲ್ಲಿ ಶೌಚಾಲಯವನ್ನು ಕಂಡು ಕೊಂಡೆ. ದಲಿತರಿಗೆ ಮಸೀದಿಗಳಿಗೆ ಪ್ರವೇಶಿಸಲು ಅವಕಾಶವಿದೆ.

ರವಿಚಂದ್ರನ್ 2008 ರಿಂದ ದಲಿತ ಕ್ಯಾಮೆರಾವನ್ನು ನಡೆಸುತ್ತಿದ್ದಾರೆ, ಇದು ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಕೆಲಸ ಮಾಡುತ್ತಿದೆ.

ಕೃಪೆ- ಕಾರವಾನ್

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …