Home / ವಾರ್ತೆಗಳು / ಅಸ್ಸಾಮಿನ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆ ಮುಚ್ಚಲು ಸರಕಾರದ ನಿರ್ಧಾರ

ಅಸ್ಸಾಮಿನ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆ ಮುಚ್ಚಲು ಸರಕಾರದ ನಿರ್ಧಾರ

ಗುವಾಹಟಿ, ಫೆ. 13: ಸರಕಾರ ನಡೆಸುವ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆಗಳನ್ನು ಬಿಜೆಪಿ ನೇತೃತ್ವದ ಅಸಾಮ್ ಸರಕಾರ ಮುಚ್ಚಲು ನಿರ್ಧರಿಸಿದ್ದು ಈ ಸಂಸ್ಥೆಗಳನ್ನು ಆರು ತಿಂಗಳಲ್ಲಿ ಶಾಲೆಗಳನ್ನಾಗಿ ಪರಿವರ್ತಿಸಲು ಸರಕಾರ ನಿರ್ಧರಿಸಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಾ೦ತ್ ಬಿಶ್ವ ಶರ್ಮ ತಿಳಿಸಿದ್ದಾರೆ.

ಧರ್ಮ, ವೇದ, ಅರಬಿಯಂತಹ ಭಾಷೆಯನ್ನು ಕಲಿಸುವುದು ಜಾತ್ಯತೀತ ಸರಕಾರದ ಕೆಲಸವಲ್ಲ ಎಂದು ಶಿಕ್ಷಣ ಸಚಿವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಸಂಘಟನೆಗಳು ಎನ್‍ಜಿಒಗಳು ನಡೆಸುವ ಮದ್ರಸಗಳು, ಸಂಸ್ಕೃತ ಪಾಠ ಶಾಲೆಗಳೂ ಕಠಿಣ ನಿಯಂತ್ರಣದಲ್ಲಿ ಮುಂದುವರಿಯಲಿದೆ ಎಂದು ಅವರು ಹೇಳಿದರು.

12000 ಮದ್ರಸಾಗಳು ಮತ್ತು 200 ಸಂಸ್ಕೃತ ಪಾಠಶಾಲೆಗಳು ಅಸ್ಸಾಮಿನಲ್ಲಿವೆ. 2017ರಲ್ಲಿ ಅಸ್ಸಾಮಿನ ಮದ್ರಸಾ, ಸಂಸ್ಕೃತ ಪಾಠ ಶಾಲೆಗಳನ್ನು ಸೆಕೆಂಡರಿ ಬೋರ್ಡ್ ಆಫ್ ಎಜುಕೇಶನ್‍ನ ಅಧೀನಕ್ಕೆ ತರಲಾಗಿತ್ತು. ಈಗ ಅವುಗಳನ್ನು ಪೂರ್ಣವಾಗಿ ಸರಕಾರ ಮುಚ್ಚುತ್ತಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …