Home / ವಾರ್ತೆಗಳು / ಬಾಬರಿ ಮಸೀದಿ ತೀರ್ಪು: ಮರು ಪರಿಶೀಲನೆಯಾಗಬೇಕು- ಕಾಂತಪುರಂ

ಬಾಬರಿ ಮಸೀದಿ ತೀರ್ಪು: ಮರು ಪರಿಶೀಲನೆಯಾಗಬೇಕು- ಕಾಂತಪುರಂ

ಕಲ್ಲಿಕೋಟೆ, ನ. 28: ಬಾಬರಿ ಮಸೀದಿ ಜಮೀನು ಪ್ರಕರಣದ ಸುಪ್ರೀಂಕೋರ್ಟು ತೀರ್ಪು ಮರು ಪರಿಶೀಲನೆಗೊಳಗಾಗಬೇಕಾಗಿದೆ ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಬಾಬರಿ ತೀರ್ಪಿನಲ್ಲಿ ಅಲ್ಪಸಂಖ್ಯಾತರು ನಿರಾಶೆಯಲ್ಲಿದ್ದಾರೆ ಎಂದು ಕಾಂತಪುರಂ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1949ರಲ್ಲಿ ಮಸೀದಿಯೊಳಗೆ ಮೂರ್ತಿ ತಂದು ಇಟ್ಟದ್ದು ತಪ್ಪೆಂದು ಕೋರ್ಟು ಹೇಳಿದೆ. 1992ರಲ್ಲಿ ಬಾಬರಿ ಮಸೀದಿ ಕೆಡವಿದ್ದು ತಪ್ಪೆಂದು ಮತ್ತು ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದಕ್ಕೆ ಪುರಾವೆಯಿಲ್ಲ ಎಂದು ಕೋರ್ಟು ತಿಳಿಸಿದೆ. ಮತ್ತೆ ತೀರ್ಪು ಹೇಗೆ ಬಂದು ಎಂದು ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಸುಪ್ರೀಂಕೋರ್ಟು ತೀರ್ಪು ನಿರಾಶಜನಕವಾಗಿದೆ ಎಂದು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಬಾಬರಿ ಮಸೀದಿ ಪ್ರಕರಣದ ತೀರ್ಪಿನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿಲ್ಲ ಎಂದು ಸುನ್ನಿ ವಕ್ಫ್ ಬೋಡು ತೀರ್ಮಾನಿಸಿದೆ. ಆದರೆ, ಪ್ರಕರಣದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಮರುಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …