Home / ವಾರ್ತೆಗಳು / ಬಾಬರಿ ಮರುಪರಿಶೀಲನೆ ಅರ್ಜಿ ದೇಶದ ಒಗ್ಗಟ್ಟಿನ ವಿರುದ್ಧವಲ್ಲ: ಜಮ್‍ಇಯ್ಯತ್ತುಲ್ ಉಲಮಾ

ಬಾಬರಿ ಮರುಪರಿಶೀಲನೆ ಅರ್ಜಿ ದೇಶದ ಒಗ್ಗಟ್ಟಿನ ವಿರುದ್ಧವಲ್ಲ: ಜಮ್‍ಇಯ್ಯತ್ತುಲ್ ಉಲಮಾ

ಹೊಸದಿಲ್ಲಿ, ನ.29: ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ತೀರ್ಪಿನ ಮರು ಪರಿಶೀಲನಾ ಅರ್ಜಿ ದೇಶದ ಐಕ್ಯ, ಕಾನೂನು ವ್ಯವಸ್ಥೆಗೆ ಸವಾಲೊಡ್ಡಲು ಕಾರಣವಾಗಬಹುದು ಎಂಬ ವಾದವನ್ನು ಜಮ್‍ಇಯ್ಯತ್ತುಲ್ ಉಲಮಾ ಹಿಂದ್ ಅಧ್ಯಕ್ಷ ಮೌಲಾನಾ ಸಯ್ಯಿದ್ ಅರ್ಷದ್ ಮದನಿ ತಳ್ಳಿ ಹಾಕಿದ್ದಾರೆ.

ನಮ್ಮ ದೇಶದ ಲಕ್ಷಾಂತರ ಜನರು ಅವರಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಕಾನೂನು ತಜ್ಞರು ಈ ತೀರ್ಪನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ರಿವ್ಯೂ ಅರ್ಜಿ ಮರುಪರಿಶೀಲನಾ ಅರ್ಜಿ ಡಿಸೆಂಬರ್ ಮೂರಕ್ಕೆ ಅಥವಾ ನಾಲ್ಕಕ್ಕೆ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗುವುದು ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ನವೆಂಬರ್ ಹದಿನಾಲ್ಕರ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಜಮ್‍ಇಯ್ಯತ್ತುಲ್ ಉಲಮಾ ಸಂಘಟನೆ ಮತ್ತು ಇತರ ಸಂಘಟನೆಗಳು ಸೇರಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ರಿವ್ಯೂ ಅರ್ಜಿ ಸಲ್ಲಿಸಲು ತೀರ್ಮಾನಿಸಿವೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …